ಮಂಗಳೂರು ಸೆಂಟ್ರಲ್ ಮಾರ್ಕೆಟ್ ಮತ್ತೆ ಬಂದ್ ಮಾಡಲು ಜಿಲ್ಲಾಧಿಕಾರಿ ಆದೇಶ..!
ಮಂಗಳೂರು : ಆಗಸ್ಟ್ 13 ರಂದು ಬಾಗಿಲು ತೆರೆದಿದ್ದ ಮಂಗಳೂರು ಸೆಂಟ್ರಲ್ ಮಾರ್ಕೆಟ್ ಮತ್ತೆ ಬಂದ ಮಾಡಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಆದೇಶ ಹೊರಡಿಸಿದ್ದಾರೆ.
ಕೊರೊನಾ ಪಿಡುಗಿನ ಹಿನ್ನೆಲೆ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕೇಂದ್ರ ಮಾರುಕಟ್ಟೆಯನ್ನು ಬಂದ್ ಮಾಡಿ ಆದೇಶ ಹೊರಡಿಸಿದ್ದಾರೆ.
ಕೇಂದ್ರ ಮಾರುಕಟ್ಟೆಯಲ್ಲಿ ವ್ಯಾಪಾರದಲ್ಲಿ ತೊಡಗಿಕೊಂಡವರು ಬೈಕಂಪಾಡಿಯ ಎಪಿಎಂಸಿಯಲ್ಲಿ ವ್ಯಾಪಾರ-ವಹಿವಾಟು ಮುಂದುವರಿಸಲು ಜಿಲ್ಲಾಧಿಕಾರಿ ನಿರ್ದೇಶನ ನೀಡಿದ್ದಾರೆ.
ಆದೇಶ ಪಾಲಿಸದೇ ವ್ಯತಿರಿಕ್ತವಾಗಿ ವರ್ತಿಸಿದ್ದಲ್ಲಿ ಅಂತಹವರ ವಿರುದ್ಧ ಭಾರತೀಯ ದಂಡ ಸಂಹಿತೆ 1860ರ ಕಲಂ 188ರ ಅನ್ವಯ ಹಾಗೂ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಕೇಂದ್ರ ಮಾರುಕಟ್ಟೆಯಲ್ಲಿ ಪ್ರಸ್ತುತ ವರ್ತಕರು ತಮ್ಮ ಅಂಗಡಿಯಲ್ಲಿ ವ್ಯವಹಾರ ಮುಂದುವರಿಸುತ್ತಿರುವುದು ಗಮನಕ್ಕೆ ಬಂದಿದೆ.
ಮಾರುಕಟ್ಟೆ ಯಲ್ಲಿ ಮುಂದಿನ ದಿನಗಳಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಸಾಧ್ಯತೆಯಿದೆ.
ಕೋವಿಡ್ ಸಂಬಂಧ ಸುರಕ್ಷಿತ ಅಂತರ ಕಾಯ್ದು ಕೊಳ್ಳಲು ತೆಗೆದುಕೊಳ್ಳಬೇಕಾದ ಅಗತ್ಯ ಮುನ್ನೆಚ್ಚರಿಕಾ ಕ್ರಮದ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಲಾಗಿದೆ.
ಮಾರುಕಟ್ಟೆಯ ರಸ್ತೆಗಳು ಇಕ್ಕಟ್ಟಿನಿಂದ ಕೂಡಿದ್ದು, ವಾಹನ-ಜನ ದಟ್ಟಣೆಯಿಂದ ಸುರಕ್ಷಿತ ಅಂತರ ಕಾಪಾಡುವುದು ಕಷ್ಟಸಾಧ್ಯ. ಟ್ರಾಫಿಕ್ ಸಂಚಾರ ಕೂಡ ಕಷ್ಟಕರ.
ಸುರಕ್ಷಿತ ಅಂತರ ಕಾಪಾಡುವ ಹಿನ್ನೆಲೆಯಲ್ಲಿ ಸ್ಥಳದ ಕೊರತೆಯಿಂದಾಗಿ ವಾಹನ ನಿಲುಗಡೆ ಕಷ್ಟ. ರಾಜ್ಯ, ಅಂತರ್‌ರಾಜ್ಯಗಳಿಂದ ಹಣ್ಣು-ಹಂಪಲು, ತರಕಾರಿ, ಇತರ ವ್ಯಾಪಾರ-ವಹಿವಾಟುಗಳ ಸಂಬಂಧ ನೂರಾರು ವಾಹನಗಳು ಬಂದು ಹೋಗುತ್ತಿವೆ.
ಇಲ್ಲಿ 1,500 ರಿಂದ 2,000ದಷ್ಟು ಹಮಾಲರು, ವ್ಯಾಪಾರಸ್ಥರಿದ್ದು, ಸುರಕ್ಷಿತ ಅಂತರ ಕಾಪಾಡುವುದು ಕಷ್ಟಸಾಧ್ಯ. ಇದರಿಂದ ಕೋವಿಡ್ ಶೀಘ್ರವಾಗಿ ಹರಡುವ ಸಾಧ್ಯತೆ ಇದೆ.
ಜೊತೆಗೆ ಮಾರುಕಟ್ಟೆಯಲ್ಲಿನ ವ್ಯಾಪಾರಸ್ಥರು, ಮಾಲಕರು, ಕೂಲಿಕಾರ್ಮಿಕರು, ಗ್ರಾಹಕರನ್ನು ಒಳಗೊಂಡಂತೆ ಮುಖಗವಸು ಆಗಲಿ, ಫೇಸ್‌ಶೀಲ್ಡ್‌ಗಳನ್ನು ಧರಿಸುತ್ತಿರುವುದು ಕಂಡುಬರುತ್ತಿಲ್ಲ.
ಧರಿಸಿದ್ದರೂ ಬೆರಳೆಣಿಕೆಯ ಸಂಖ್ಯೆಯಲ್ಲಿ ಮಾತ್ರ. ಕೇಂದ್ರ ಮಾರುಕಟ್ಟೆಯಲ್ಲಿರುವ ಮಾಂಸದ ಅಂಗಡಿಗಳಿಗೆ ಸಮರ್ಪಕವಾದ ವ್ಯವಸ್ಥೆ ಇಲ್ಲದೇ ಇರುವುದರಿಂದ ಶುಚಿತ್ವ ಕಾಪಾಡುವುದು ಕಷ್ಟಸಾಧ್ಯವಾಗಿದೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ವಿವರಿಸಿದ್ದಾರೆ.
ಮಂಗಳೂರು : ಚಂದನವನದಲ್ಲಿ ಸಿನಿಮಾ ನಿರ್ಮಾಣ ಮಾಡಿ ಗೆದ್ದಿರುವ ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರ ಪತ್ನಿ ಶಿಲ್ಪಾ ಗಣೇಶ್ ಕೋಸ್ಟಲ್‌ವುಡ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಅವರ ಗೋಲ್ಡನ್ ಮೂವೀಸ್ ಸಂಸ್ಥೆ ತುಳು ಸಿನೆಮಾ ಇಂಡಸ್ಟ್ರಿಗೆ ಕಾಲಿಟ್ಟಿದೆ. ಕುದ್ರೋಳಿ ಗೋಕರ್ಣನಾಥ ದೇವಸ್ಥಾನದಲ್ಲಿ ಈ ಪ್ರೊಡಕ್ಷನ್‌ನ ಮೊದಲ ತುಳು ಸಿನಿಮಾ ಪ್ರೊಡಕ್ಷನ್ ನಂ 1ಗೆ ಮುಹೂರ್ತ ನೆರವೇರಿಸಲಾಗಿದೆ.
ಉದ್ಯಮಿ ಎಂ ಆರ್ ಜಿ ಗ್ರೂಪ್ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಅವರು ಮೊದಲ ಕ್ಲ್ಯಾಪ್ ಮಾಡಿದ್ದು, ಕುದ್ರೋಳಿ ಕ್ಷೇತ್ರದ ನವ ನಿರ್ಮಾಣದ ರೂವಾರಿ ಜನಾರ್ದನ ಪೂಜಾರಿ ಅವರ ಆಶೀರ್ವಾದೊಂದಿಗೆ ನಟ ಗಣೇಶ್ ಕ್ಯಾಮೆರಾ ರೋಲ್ ಮಾಡಿದ್ದಾರೆ.
ಕಾರ್ಯಕ್ರಮದಲ್ಲಿ ಸಂಸದ ಬ್ರಿಜೇಶ್ ಚೌಟ, ಶಾಸಕ ವೇದವ್ಯಾಸ್ ಕಾಮತ್, ರಾಜೇಶ್ ನಾಯಕ್, ಉದ್ಯಮಿ ರೋಹನ್ ಮೊಂತೆರೋ, ಲೀಲಾಕ್ಷ ಕರ್ಕೇರ , ತುಳು ಸಿನೆಮಾದ ಕಲಾವಿದರು ಸೇರಿದಂತೆ ಹಲವು ಗಣ್ಯರು ಭಾಗಿಯಾಗಿ ಶುಭ ಹಾರೈಸಿದ್ದಾರೆ.
ಗಣೇಶ್ ಹೇಳಿದ್ದೇನು?
ಈ ಬಗ್ಗೆ ಮಾಹಿತಿ ನೀಡಿದ ನಟ ಗಣೇಶ್ , ನಾಲ್ಕು ವರ್ಷದ ಹಿಂದೆ ಮಂಗಳೂರಿಗೆ ಬಂದಾಗ ತುಳು ಸಿನೆಮಾ ಮಾಡಬೇಕು ಅಂತ ಯೋಚನೆ ಬಂದಿತ್ತು. ಉತ್ತಮ ಕಥೆಗಾಗಿ ಕಾಯುತ್ತಿದ್ದು, ಈಗ ಅಂತಹ ಒಂದು ಉತ್ತಮ ಕಥೆ ಸಿಕ್ಕಿದೆ. ಹೀಗಾಗಿ ಶಿಲ್ಪಾ ಈ ಸಿನೆಮಾ ಮಾಡಲು ಮುಂದಾಗಿದ್ದಾಳೆ. ನನ್ನ ನಂಟು ತುಳುನಾಡಿನ ಜೊತೆ ಜಾಸ್ತಿ ಇದ್ದ ಕಾರಣ ಅವಕಾಶ ಸಿಕ್ಕರೆ ಈ ಸಿನೆಮಾದಲ್ಲಿ ಹಾಡಿನ ಸೀನ್‌ನಲ್ಲಾದ್ರೂ ಕಾಣಸಿಕೊಳ್ಳುವುದಾಗಿ ಹೇಳಿದ್ದಾರೆ.
ಪ್ರೊಡಕ್ಷನ್ ನಂಬರ್ 1 ಸಿನಿಮಾ ತುಳುನಾಡಿನ ಸೊಗಡಿನೊಂದಿಗೆ ಸುಂದರ ಸಾಂಸಾರಿಕ ಕಥೆಯನ್ನು ಹೊಂದಿರುವ ಸಿನೆಮಾವಾಗಿದ್ದು, ನಾಯಕ ನಟನಾಗಿ ನಿತ್ಯ ಪ್ರಕಾಶ್ ಬಂಟ್ವಾಳ ಅವರು ಮೊದಲ ಬಾರಿಗೆ ಸಿನೆಮಾಗೆ ಎಂಟ್ರಿ ಕೊಟ್ಟಿದ್ದು, ಅಮೃತಾ ನಾಯಕ್ ಅವರು ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು ಪಡೆಯುತ್ತಿದ್ದ ಶಹೀಮ್ ಗೆಳೆಯರೊಂದಿಗೆ ಶಟಲ್ ಬ್ಯಾಡ್ಮಿಂಟನ್ ಆಡುತ್ತಿದ್ದಾಗ ಏಕಾಏಕಿ ಕೋರ್ಟ್‌ನಲ್ಲೇ ಕು*ಸಿದು ಬಿ*ದ್ದಿದ್ದಾನೆ. ತಕ್ಷಣವೇ ಅವನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅದಾಗಲೇ ಶಹೀಮ್ ಮೃ*ತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಮಂಗಳೂರು : ಕರಾವಳಿ ಉತ್ಸವ ವಸ್ತುಪ್ರದರ್ಶನ ವೇದಿಕೆಯಲ್ಲಿ ಇಂದು (ಜ.16) ಸಂಜೆ 6 ಗಂಟೆಯಿಂದ ಸ್ಟಾರ್ ಸಿಂಗರ್ಸ್,ಮಂಗಳೂರು ತುಳು ಚಲನಚಿತ್ರ ಕಲಾವಿದರಿಂದ ‘ಸಂಗೀತ ರಸಮಂಜರಿ’ ಕಾರ್ಯಕ್ರಮ ನೆರವೇರಲಿದೆ.
ಮುಖ್ಯಮಂತ್ರಿ ಪ್ರವಾಸ :
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನವರಿ 17 ರಂದು ಜಿಲ್ಲೆಗೆ ಆಗಮಿಸಲಿದ್ದಾರೆ. ನಾಳೆ ಬೆಳಗ್ಗೆ 11:30 – ಮಂಗಳೂರು ವಿಮಾನ ನಿಲ್ದಾಣ ಆಗಂಇಸಲಿದ್ದಾರೆ. ನಂತರ ಮೇರಿಹಿಲ್ನಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ ಮಂಗಳೂರು ಪ್ರಾದೇಶಿಕ ಕಚೇರಿ ಕಟ್ಟಡ ಶಿಲಾನ್ಯಾಸ ಭೇಟಿ ನೀಡಲಿದ್ದು, ಮಧ್ಯಾಹ್ನ 12:15 – ಪುರಭವನದಲ್ಲಿ ಬಹುಸಂಸ್ಕೃತಿ ಉತ್ಸವ – ಕರ್ನಾಟಕ ಸುವರ್ಣ ಸಂಭ್ರಮ 50 ಉದ್ಘಾಟನೆ ಮಾಡಲಿದ್ದಾರೆ.