Home ಮಂಗಳೂರು ಮಾನವ ಹಕ್ಕುಗಳ ರಕ್ಷಣೆಗಾಗಿ ಸದಾ ಸಿದ್ಧ ಪಿಯುಸಿಎಲ್

ಮಾನವ ಹಕ್ಕುಗಳ ರಕ್ಷಣೆಗಾಗಿ ಸದಾ ಸಿದ್ಧ ಪಿಯುಸಿಎಲ್

ಪಿಯುಸಿಎಲ್ ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲಾ ವಲಯದ ಸಮಿತಿ ಚುನಾವಣೆ ಮುಕ್ತಾಯ

ಮಂಗಳೂರು: ಪಿಯುಸಿಎಲ್ ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲಾ ವಲಯದ ಸಮಿತಿ ಚುನಾವಣೆ ನಡೆದಿದ್ದು, ಹೊಸ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಾಗಿದೆ ಅಂತ ಹೊಸ ಕಮಿಟಿ ತಿಳಿಸಿದೆ.

ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಉಪಾಧ್ಯಕ್ಷ ಮೆಲ್ವಿನ್ ಪಿಂಟೋ, ಪಿಯುಸಿಎಲ್ ನ ಹೊಸ ಕಮಿಟಿ ರಚನೆಯಾಗಿ ಚುನಾವಣೆ ನಡೆದಿದ್ದು, ಹದಿನೈದು ದಿನಗಳೊಳಗಾಗಿ ಇದರ ಫಲಿತಾಂಶ ಬರಲಿದೆ.

ಇನ್ನು ಪಿಯುಸಿಎಲ್ ನಲ್ಲಿ ಯಾವುದೇ ಹಣಕಾಸಿನ ವಿಷಯ ಬರೋದಿಲ್ಲ. ಇದರಲ್ಲಿ ಎಲ್ಲರೂ ಜೊತೆ ಸೇರಿ ಮಾಡವಂತಹ ಸೇವೆ. ಜನರ ಸಮಸ್ಯೆಗಳತ್ತ, ಭ್ರಷ್ಟಾಚಾರ ಶೋಷಿತರ ಪರ ಮಾನವ ಹಕ್ಕುಗಳ ರಕ್ಷಣೆಗಾಗಿ ನಾವು ಸೇವೆ ಸಲ್ಲಿಸುವುದಾಗಿದೆ.

ಹಣಕ್ಕಾಗಿ ಸೇವೆ ಸಲ್ಲಿಸದೇ ಸ್ವತಃ ನಾವೆಲ್ಲರೂ ಒಗ್ಗೂಡಿ ಸಹಾಯ ಮಾಡೋದು ಅಂತ ಹೇಳಿದ್ರು.

ಇನ್ನು ಅಧ್ಯಕ್ಷ ಪಿ.ಬಿ.ಡೇಸ ಮಾತನಾಡಿ, ಕಮಿಟಿಗೆ ಸೇರದವರೂ ತಾವು ಮುಖ್ಯಸ್ಥರೆಂದೇಳಿಕೊಂಡು ಬಡ ಜನರಿಂದ ಹಣ ತೆಗೆದುಕೊಂಡು, ಕೆಲಸ ಮಾಡದೆ ಅವರಿಗೆ ಮೋಸ ಮಾಡುತ್ತಿದ್ದಾರೆ.

ಯಾರು ಕೂಡ ಮೋಸ ಹೋಗಬಾರದು ಹಾಗೂ ನಮ್ಮ ಹೊಸ ಕಮಿಟಿಯ ಫಲಿತಾಂಶ ಬೇಗನೇ ಬರಲಿದ್ದು, ಬಳಿಕ ಸಮಿತಿಯಲ್ಲಿರುವ ಸದಸ್ಯರ ಪರಿಚಯವಾಗಲಿದೆ ಎಂದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಮ್ಯಾಕ್ಸುವೆಲ್ ಕುಮಾರ್, ಅಲೆಕ್ಸ್ ಡಿಸೋಜಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

- Advertisment -

RECENT NEWS

ಪ್ರಧಾನಿ ದೇಶದ ಜನರಿಗೆ ಬರೆದಿರೋ “ನೀವು ಪ್ರೇರಕರು ನಾನು ಸೇವಕ” ಪತ್ರದ ಸಾರಾಂಶ ಹಾಗು ಸಾಧನೆ ಹಂಚಿದ ಕಟೀಲ್

“ನೀವು ಪ್ರೇರಕರು ನಾನು ಸೇವಕ” ಪತ್ರದ ಸಾರಾಂಶ ಹಾಗು ಪ್ರಧಾನಿಗಳ ಸಾಧನೆಯ ಸಾರಾಂಶ ಮನೆಮನೆಗೆ ಹಂಚಿದ ಸಂಸದ ಕಟೀಲ್ ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಯಶಸ್ವಿಯಾಗಿ ಒಂದು ವರ್ಷ ಪೂರೈಸಿದ...

ಕಡಬಕ್ಕೂ ವಕ್ಕರಿಸಿದ ಮಹಾಮಾರಿ ಕೊರೊನಾ ವೈರಸ್.. ಶಿಕ್ಷಕನಿಗೆ ಪಾಸಿಟಿವ್

45 ವರ್ಷದ ಶಿಕ್ಷಕನಿಗೆ ಕೊರೊನಾ ಪಾಸಿಟಿವ್: ಆತಂಕದಲ್ಲಿ ಕಡಬ ಜನತೆ ಕಡಬ: ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಕೊರೊನಾ ಮಹಾಮಾರಿ ಇದೀಗ ಕಡಬಕ್ಕೂ ಕಾಲಿಟ್ಟಿದೆ. ಕಡಬದ 42 ವರ್ಷದ ಶಿಕ್ಷಕರೋರ್ವರಿಗೆ ಕೊರೋನಾ ಪಾಸಿಟಿವ್ ಬಂದಿದ್ದು ಈಗಾಗಲೇ...

ದೇಶದಲ್ಲಿ ಕೊರೊನಾ ಹಂಚಲು ತಬ್ಲಿಘಿಗಳಿಂದ ವ್ಯವಸ್ಥಿತ ಷಡ್ಯಂತ್ರ ನಡೆದಂತಿದೆ: ಸಂಸದೆ ಶೋಭಾ ಗಂಭೀರ ಆರೋಪ..!

ಬೆಂಗಳೂರು ಸ್ಲಂಗಳಿಗೆ ತಬ್ಲಿಘಿಗಳು ಸೋಂಕು ಪಸರಿಸಿದರು: ಸಂಸದೆ ಶೋಭಾ ಕರಂದ್ಲಾಜೆ ಕಿಡಿ ಉಡುಪಿ: ಶಾಂತವಾಗಿದ್ದ ಉಡುಪಿ ಜಿಲ್ಲೆಯಲ್ಲಿ ದೆಹಲಿ ಮತ್ತು ಮಹಾರಾಷ್ಟ್ರದಿಂದ ಕೊರೊನಾ ಹಬ್ಬಿದೆ. ಬೆಂಗಳೂರು ಸ್ಲಂಗಳಿಗೆ ತಬ್ಲಿಘಿಗಳು ಸೋಂಕು ಪಸರಿಸಿದರು ಎಂದು ಉಡುಪಿ-ಚಿಕ್ಕಮಗಳೂರು...

ಮಹಾರಾಷ್ಟ್ರದಿಂದ ಉಡುಪಿಗೆ ಬರುತ್ತಿರುವವರ ಪಾಸ್ ತಡೆಯುತ್ತೇನೆ: ಗುಡುಗಿದ ಸಂಸದೆ ಶೋಭಾ..!

ಮಹಾರಾಷ್ಟ್ರದಿಂದ ಉಡುಪಿಗೆ ಬರುತ್ತಿರುವವರ ಪಾಸ್ ತಡೆಯುತ್ತೇನೆ: ಗುಡುಗಿದ ಸಂಸದೆ ಶೋಭಾ..! ಉಡುಪಿ: ಉಡುಪಿ ಜಿಲ್ಲೆಯಲ್ಲಿ ಇನ್ನಿಲ್ಲದಂತೆ ಕೊರೊನಾ ವೈರಸ್ ಸ್ಫೋಟವಾಗುತ್ತಿದೆ. ಇದು ಮಹಾರಾಷ್ಟ್ರದಿಂದ ಬಂದವರಿಂದ ಹೆಚ್ಚಾಗುತ್ತಿದೆ. ಹಾಗಾಗಿ ಮಹಾರಾಷ್ಟ್ರದಿಂದ ಉಡುಪಿಗೆ ಆಗಮಿಸುತ್ತಿರುವವರ ಪಾಸ್ ತಡೆಹಿಡಿಯಲು ಸರಕಾರದ...