HomeDAKSHINA KANNADA‘ಡಿ.ವಿ. ಸದಾನಂದ ಗೌಡ್ರೆ.., ರಾತ್ರಿ ಹೊತ್ತು ಯಾರ್ಯಾರದ್ದೋ ಮನೆಯ ಹೆಂಗ... ಶ್ರೀಕಾಂತ್ ಶೆಟ್ಟಿ ಖಡಕ್ ಪ್ರಶ್ನೆ..!

‘ಡಿ.ವಿ. ಸದಾನಂದ ಗೌಡ್ರೆ.., ರಾತ್ರಿ ಹೊತ್ತು ಯಾರ್ಯಾರದ್ದೋ ಮನೆಯ ಹೆಂಗ… ಶ್ರೀಕಾಂತ್ ಶೆಟ್ಟಿ ಖಡಕ್ ಪ್ರಶ್ನೆ..!

ಪೊಲೀಸರಿಂದ ದೌರ್ಜನ್ಯಕ್ಕೊಳಗಾದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರ ವಿಚಾರದ ಬಗ್ಗೆ ಹಿಂದೂ ಜಾಗರಣ ವೇದಿಕೆ ಮುಖಂಡ ಕಾರ್ಕಳದ ಶ್ರೀಕಾಂತ್ ಶೆಟ್ಟಿ ರವರು, ಹಿಂದುತ್ವದ ಅನೇಕ ಕಾರ್ಯಕರ್ತರಿಗೆ ಪ್ರೇರಣೆಯನ್ನು ನೀಡುವ ಕೇಂದ್ರ ಎಂದರೆ ಅದು ಪುತ್ತೂರು ಎಂದು ಹೇಳಿದರು.

ಪುತ್ತೂರು: ಪೊಲೀಸರಿಂದ ದೌರ್ಜನ್ಯಕ್ಕೊಳಗಾದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರ ವಿಚಾರದ ಬಗ್ಗೆ ಹಿಂದೂ ಜಾಗರಣ ವೇದಿಕೆ ಮುಖಂಡ ಕಾರ್ಕಳದ ಶ್ರೀಕಾಂತ್ ಶೆಟ್ಟಿ ರವರು, ಹಿಂದುತ್ವದ ಅನೇಕ ಕಾರ್ಯಕರ್ತರಿಗೆ ಪ್ರೇರಣೆಯನ್ನು ನೀಡುವ ಕೇಂದ್ರ ಎಂದರೆ ಅದು ಪುತ್ತೂರು ಎಂದು ಹೇಳಿದರು.

ಕಾರ್ಯಕರ್ತರ ಮೇಲೆ ಪುತ್ತೂರಿನಲ್ಲಿ ನಡೆದಿರುವ ದೌರ್ಜನ್ಯವನ್ನು ನೋಡಿದಾಗ ಕರಾವಳಿಯಲ್ಲಿ ಮುಂದಿನ ದಿನಗಳಲ್ಲಿ ಏನಾಗಬಹುದು ಎಂಬಂತಹ ಆತಂಕ ನಮ್ಮನ್ನು ಕಾಡುತ್ತದೆ ಎಂದರು.

ಕೇವಲ ಬ್ಯಾನರ್ ಗೆ ಚಪ್ಪಲಿ ಹಾರ ಹಾಕಿದ್ದಾರೆಂದು ಈ ರೀತಿಯಾಗಿ ಥರ್ಡ್ ಡಿಗ್ರಿ ಟ್ರೀಟ್ಮೆಂಟ್ ಕೊಡ್ತಾರೆಂದರೆ ಇದರ ಹಿಂದೆ ಯಾವುದೋ ಪ್ರಭಾವಿಗಳು ಕೆಲಸ ಮಾಡಿದ್ದಾರೆ.

ಹಿಂದೂ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಸಿದ ಅಧಿಕಾರಿಗಳನ್ನು ಕೆಲಸದಿಂದ ವಜಾ ಮಾಡಬೇಕು ಅಲ್ಲದೆ  ಅವರ ಮೇಲೆ  ವಿರುದ್ಧ ಕ್ರಮ ಕೈಗೊಳ್ಳಬೇಕು.

ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದಿದ್ದು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಪೊಲೀಸರ ವರ್ತನೆ  ಬದಲಾಗಿದೆ.

ಸರಕಾರ ಬದಲಾವಣೆಯಾದರೆ ಅದರ ನೇರ ಪರಿಣಾಮ ಬೀರುವುದು ಕಾರ್ಯಕರ್ತರ ಮೇಲೆ ಹೊರತು ನಾಯಕರ ಮೇಲೆ ಅಲ್ಲ. ನಾಯಕರು ಕಾಫಿ-ತಿಂಡಿ ಮಾಡುತ್ತಾ ಒಳ್ಳೆಯ ರೀತಿಯಲ್ಲಿರುತ್ತಾರೆ.

ಕೆಲವು ಬಿಜೆಪಿ ನಾಯಕರ ವರ್ತನೆ ನೋಡಿದಾಗ ಹಿಂದೂ ಸಂಘಟನೆಗಳನ್ನು ತುಳಿಯುವ ಕೆಲಸ ಮಾಡುತ್ತಿದ್ದಾರೆ. ಅವರನ್ನು ಸಂಘ-ಪರಿವಾರದ ಹಿರಿಯರು ಗಮನಿಸಿ, ಮತ್ತು ಅವರ ವಿರುದ್ಧ ಸಂಘ ಪರಿವಾರದ ಹಿರಿಯರೇ ಕಠಿಣ ಕ್ರಮಕೈಗೊಳ್ಳಬೇಕು ಎಂದು ಹೇಳಿದರು.

ಇನ್ನು ಮುಂದೆ ಈ ರೀತಿಯ ಕೆಲಸ ಮಾಡಲು ಯಾವುದೇ ಅಧಿಕಾರಿಗಳು ಮುಂದಾಗಬಾರದು.

ಈ ರೀತಿಯಾಗಿ ಕೆಲಸ ಮಾಡಿದವರ ಮೇಲೆ ಕ್ರಮ ಕೈಗೊಳ್ಳಬೇಕು ಎಂಬುದು ನಮ್ಮ ಮನವಿ ಎಂದರು.

ಡಿ.ವಿ. ಸದಾನಂದ ಗೌಡರ ಬಳಿ ನಾವು ಹೇಳುವುದು ಇಷ್ಟೇ ನೀವು ರಾತ್ರಿ ಹೊತ್ತು ಯಾರ್ಯಾರದ್ದೋ ಮನೆಯ ಹೆಂಗಸರಿಗೆ ಫೋನ್ ಮಾಡಿ ತೊಡೆ ತೋರ್ಸು ತೊಡೆ ತೋರ್ಸು ಅಂತ ಹೇಳ್ತೀರಾ.., ನೀವು ಒಮ್ಮೆ ಪುತ್ತೂರು ಆಸ್ಪತ್ರೆಗೆ ಬಂದು ನಿಮ್ಮ ಕಾರ್ಯಕರ್ತರ ತೊಡೆ ಹೇಗೆ ಆಗಿದೆ ಅಂತಾ ನೋಡ್ಬೇಕು.

ಆ ಕಾರ್ಯಕರ್ತರ ಸ್ಥಿತಿ ಹೇಗಿದೆ ಅಂತ ಒಮ್ಮೆ ನೋಡ್ಬೇಕು.ಈ ಘಟನೆಯ ಬಗ್ಗೆ ಸೂಕ್ತವಾದಂತಹ ತನಿಖೆ ನಡೆಯಬೇಕು.

ಸರಿಯಾದ ತನಿಖೆ ನಡೆಸದೆ ಇದ್ದರೆ ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ನಾವು ಹೋರಾಟ ನಡೆಸಬೇಕಾಗುತ್ತದೆ ಎಂದರು.

ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ..

 

Latest articles

ಮಂಗಳೂರು: ಮಹಿಳಾ ಕುಸ್ತಿಪಟುಗಳಿಗೆ ಬೆಂಬಲ ಸೂಚಿಸಿ ಮಂಗಳೂರಿನಲ್ಲಿ ಪ್ರತಿಭಟನೆ-ಬೃಜ್‌ ಭೂಷಣ್‌ ಬಂಧನಕ್ಕೆ ಆಗ್ರಹ

ಮಹಿಳಾ ಕುಸ್ತಿ ಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅರೋಪ ಹೊತ್ತ ಎಸಗಿದ ಉತ್ತರ ಪ್ರದೇಶದ ಬಿಜೆಪಿ ಸಂಸದ...

ಮಂಗಳೂರು: ಬೀದಿಬದಿ ವ್ಯಾಪಾರಿಗಳ ಮೇಲಿನ ಕಿರುಕುಳ, ಕೇಸುಗಳಿಗೆ ಖಂಡನೆ – ಸುಳ್ಳು ಮೊಕದ್ದಮೆ ವಾಪಾಸ್ ಪಡೆಯಲು ಒತ್ತಾಯಿಸಿ ಪ್ರತಿಭಟನೆ

ಜನಪರ ಹೋರಾಟಗಾರ, ಬೀದಿ ವ್ಯಾಪಾರಿಗಳ ಮುಂದಾಳು ಬಿ ಕೆ ಇಮ್ತಿಯಾಝ್‌ ಮತ್ತು ಮುಖಂಡರ ಮೇಲಿನ ಸುಳ್ಳು ಮೊಕದ್ದಮೆಗಳನ್ನು ವಾಪಾಸ್...

ರಾಮನಗರ: ಟೋಲ್ ವಿಚಾರಕ್ಕೆ ಸಂಬಂಧಿಸಿ ಗಲಾಟೆ- ಯುವಕರ ತಂಡದಿಂದ ಸಿಬಂದಿ ಹತ್ಯೆ..!

ಟೋಲ್ ಕಟ್ಟುವ ವಿಚಾರಕ್ಕೆ ಸಂಬಂಧಿಸಿ ಯುವಕರ ತಂಡವೊಂದು ಗಲಾಟೆ ಮಾಡಿದ ಹಿನ್ನಲೆಯಲ್ಲಿ ಟೋಲ್ ಸಿಬ್ಬಂದಿಯ ಕೊಲೆಯಾಗಿದೆ. ಈ ಘಟನೆ...

ಊರಿಗೆ ಹೋಗಲು ನಿಲ್ದಾಣದಲ್ಲಿ ಕಾದು ಸುಸ್ತಾಗಿ ತಾನೇ ಸರ್ಕಾರಿ ಬಸ್ ಚಲಾಯಿಸಿದ ಭೂಪನ ಮೇಲೆ ಪೊಲೀಸ್ ಕೋಪ..!

ವ್ಯಕ್ತಿಯೊಬ್ಬ ತನ್ನ ಊರಿಗೆ ಬಸ್ ಇಲ್ಲವೆಂದು ನಿಲ್ದಾಣದಲ್ಲಿ ನಿಲ್ಲಿಸಿದ್ದ ಸಾರಿಗೆ ಸಂಸ್ಥೆಯ ಬಸ್ಸನ್ನೇ ಚಲಾಯಿಸಿ ನಿಲ್ದಾಣದಿಂದ ಹೊರಗಿರುವ ಡಿವೈಡರ್...