ರಿಕ್ಷಾ ಪಾರ್ಕ್ ನೋಂದಣಿ ಕುರಿತು ಸೂಕ್ತ ಕ್ರಮ ಕೈಗೊಳ್ಳಲು ದ.ಕ ಜಿಲ್ಲಾ ಆಟೋರಿಕ್ಷಾ ಚಾಲಕ ಮಾಲಕರ ಒಕ್ಕೂಟ ಆಗ್ರಹ
ಮಂಗಳೂರು:ಸ್ಮಾರ್ಟ್ ಸಿಟಿ ಕಾಮಗಾರಿ ಸಂದರ್ಭ ಎತ್ತಂಗಡಿಯಾಗುತ್ತಿರುವ ಆಟೋರಿಕ್ಷಾ ಪಾರ್ಕ್ ಗಳ ಅಭಿವೃದ್ಧಿ ಕುರಿತು ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಆಟೋರಿಕ್ಷಾ ಚಾಲಕ ಮಾಲಕರ ಒಕ್ಕೂಟ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದೆ.
ದೇಶಾದ್ಯಂತ ನೂರು ಜಿಲ್ಲಾ ಕೇಂದ್ರದ ನಗರಗಳನ್ನು ಸ್ಮಾರ್ಟ್ ಸಿಟಿಮಾಡಲು ಕೇಂದ್ರ ಸರ್ಕಾರ ಯೋಜನೆ ಹಾಕಿಕೊಂಡಿದ್ದು, ಕಾಮಗಾರಿ ಸಂದರ್ಭ ರಿಕ್ಷಾ ಪಾರ್ಕ್ ಗಳು ಎತ್ತಂಗಡಿಯಾಗಿವೆ. ಈ ಕುರಿತು ಶೀಘ್ರದಲ್ಲೇ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಆಟೋರಿಕ್ಷಾ ಚಾಲಕ ಮಾಲಕ ಒಕ್ಕೂಟ ಆಗ್ರಹಿಸಿದೆ. ಸುಮಾರು 320ಕ್ಕೂ ಹೆಚ್ಚಿನ ಆಟೋರಿಕ್ಷಾ ಪಾರ್ಕ್ ಅಧಿಕೃತ ನೋಂದಾವಣಿಯ ಬೇಡಿಕೆಯು 1981ರಿಂದ ಪ್ರಸ್ತುತ 2020ರವರೆಗೆ ಸುಮಾರು 250ಕ್ಕೂ ಅಧಿಕ ರಿಕ್ಷಾ ಪಾರ್ಕ್ ಗಳು ಅಧಿಕೃತವಾಗಿ ನೋಂದಾಯಿಸಲ್ಪಟ್ಟಿದೆ ಡಿಸಿಪಿ ವಿನಯ್ ಗಾಂವ್ಕರ್ ಗಜಟೆಡ್ ನೋಂದಾವಣೆ ಕುರಿತು ಬೇಡಿಕೆ ಪರಿಗಣನೆಗೆ ತೆಗೆದುಕೊಂಡು ಸರ್ವೆ ಕಾರ್ಯ ಕೂಡ ಮಾಡಿರುವುದಾಗಿ ಆಟೋ ಚಾಲಕ ಮಾಲಕರ ಒಕ್ಕೂಟ ತಿಳಿಸಿದೆ.