LATEST NEWS
ಸಿಲಿಂಡರ್ ಸ್ಪೋಟ ಪ್ರಕರಣ; ಇಬ್ಬರು ಅಯ್ಯಪ್ಪ ಮಾಲಾಧಾರಿಗಳ ಸಾವು
Published
13 hours agoon
By
NEWS DESK3ಮಂಗಳೂರು/ಹುಬ್ಬಳ್ಳಿ: ಸಿಲಿಂಡರ್ ಸೋರಿಕೆ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ಅಯ್ಯಪ್ಪ ಮಾಲಾಧಾರಿಗಳು ಉಸಿರು ನಿಲಿಸಿದ್ದಾರೆ. ಏಳು ಮಂದಿಯ ಸ್ಥಿತಿ ಗಂಭೀರವಾಗಿದ್ದು, ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಹುಬ್ಬಳ್ಳಿಯ ಉಣಕಲ್ ನ ಅಯ್ಯಪ್ಪ ದೇವಸ್ಥಾನದಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟದಿಂದ ಗಾಯಗೊಂಡಿದ್ದ 9 ಮಂದಿ ಅಯ್ಯಪ್ಪ ಮಾಲಾಧಾರಿಗಳ ಪೈಕಿ ಇಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ನಿಜಲಿಂಗಪ್ಪ (58), ಸಂಜಯ್ ಸವದತ್ತಿ (18) ಮೃತಪಟ್ಟ ಮಾಲಾಧಾರಿಗಳು. ಇವರಿಬ್ಬರು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಇದನ್ನೂ ಓದಿ: ಏಕಾಏಕಿ ಗ್ಯಾ*ಸ್ ಸಿ*ಲಿಂಡರ್ ಸ್ಫೋ*ಟ; 9 ಅಯ್ಯಪ್ಪ ಮಾಲಾಧಾರಿಗಳ ಸ್ಥಿತಿ ಗಂ*ಭೀರ
ಇನ್ನುಳಿದ 7 ಮಂದಿ ಅಯ್ಯಪ್ಪ ಮಲಾಧಾರಿಗಳಿಗೆ ಚಿಕಿತ್ಸೆ ಮುಂದುವರಿದಿದೆ. ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಅಯ್ಯಪ್ಪ ಮಾಲಾಧಾರಿಗಳಿಗೆ ಕಿಮ್ಸ್ ವೈದ್ಯರು ಚಿಕಿತ್ಸೆ ಮುಂದುವರೆಸಿದ್ದಾರೆ.
ಸಚಿವ ಸಂತೋಷ್ ಲಾಡ್ ಮನವಿ ಹಿನ್ನೆಲೆ ಬೆಂಗಳೂರಿನಿಂದ ವೈದ್ಯರ ತಂಡ ಆಗಮಿಸಿದೆ. ಕಿಮ್ಸ್ ಆಸ್ಪತ್ರೆಯ ಮುಂಭಾಗದಲ್ಲಿ ಮೃತರ ಕುಟುಂಬಸ್ಥರು ಮತ್ತು ಅಯ್ಯಪ್ಪ ಮಾಲಾಧಾರಿಗಳು ಕಣ್ಣೀರು ಇಡುತ್ತಿದ್ದಾರೆ.
ಮನೆ ಮಕ್ಕಳನ್ನು ಕಳೆದುಕೊಂಡು ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ. ಮೃತ ಅಯ್ಯಪ್ಪ ಮಾಲಾಧಾರಿ ಸಂಜಯ್ ಸವದತ್ತಿ ದೇಶ ಸೇವೆ ಕನಸು ಕಟ್ಟಿಕೊಂಡಿದ್ದ. ಹುಬ್ಬಳ್ಳಿಯ ಖಾಸಗಿ ಕಾಲೇಜಿನಲ್ಲಿ ಬಿಎ ಓದುತ್ತಿದ್ದ. ಇದೇ ಮೊದಲ ಬಾರಿಗೆ ಅಯ್ಯಪ್ಪನ ಸೇವೆ ಮಾಡಲು ಮಾಲೆ ಹಾಕಿಕೊಂಡಿದ್ದ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
LATEST NEWS
ಸಕಲ ಗೌರವಗಳೊಂದಿಗೆ ಹುತಾತ್ಮ ಯೋಧ ಅನೂಪ್ ಅಂತ್ಯಕ್ರಿಯೆ
Published
6 hours agoon
26/12/2024By
NEWS DESK4ಕುಂದಾಪುರ : ಪೂಂಚ್‌ನಲ್ಲಿ ನಡೆದ ಅಪಘಾ*ತದಲ್ಲಿ ಹುತಾ*ತ್ಮರಾದ ಕುಂದಾಪುರದ ಬೀಜಾಡಿಯ ಯೋಧ ಅನೂಪ್ ಪೂಜಾರಿ ಅವರು ಪಂಚಭೂತಗಳಲ್ಲಿ ಲೀನರಾಗಿದ್ದಾರೆ.
ಯೋಧ ಅನೂಪ್ ಪೂಜಾರಿ ಅವರ ಅಂತ್ಯ ಸಂಸ್ಕಾರ ಬೀಜಾಡಿಯ ಕಡಲ ತೀರದಲ್ಲಿ ಸರ್ಕಾರಿ ಗೌರವದೊಂದಿಗೆ ನಡೆಸಲಾಯಿತು. ಮೂರು ಸುತ್ತು ಕುಶಾಲ ತೋಪು ಸಿಡಿಸಿ ಅಂತಿಮ ನಮನ ಸಲ್ಲಿಸಲಾಯಿತು.
ಇದನ್ನೂ ಓದಿ : ಮಗನ ಆ ಒಂದು ನಿರ್ಧಾರದಿಂದ ಸಾ*ವಿಗೆ ಶರಣಾದ ಹೆತ್ತವರು!
ಮೆರವಣಿಗೆಯ ಮೂಲಕ ಪಾರ್ಥೀವ ಶರೀರವನ್ನು ಬೀಜಾಡಿಯ ಅನೂಪ್ ನಿವಾಸಕ್ಕೆ ತರಲಾಯಿತು. ಅಲ್ಲಿ ಅಂತಿಮ ವಿಧಿ ವಿಧಾನ ನಡೆದು ಬೀಜಾಡಿ ಪಡುಶಾಲೆಯ ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಯಿತು. ನೂರಾರು ಮಂದಿ ಆಗಮಿಸಿ ಹುತಾತ್ಮ ಯೋಧನ ಅಂತಿಮ ದರ್ಶನ ಪಡೆದರು. ಬಳಿಕ ಅಂತ್ಯಕ್ರಿಯೆ ನಡೆಯಿತು.
ಚಿತೆಗೆ ಸಹೋದರ ಶಿವರಾಂ ಅಗ್ನಿಸ್ಪರ್ಶ ಮಾಡಿದ್ದು, ಸಾವಿರಾರು ಜನರು ಯೋಧನ ಅಂತಿಮ ವಿದಾಯಕ್ಕೆ ಸಾಕ್ಷಿಯಾಗಿದ್ದರು. 13 ವರ್ಷಗಳಿಗೂ ಅಧಿಕ ಕಾಲ ದೇಶ ಸೇವೆ ಮಾಡಿದ್ದ ಯೋಧ ಅಕಾಲಿಕವಾಗಿ ಅಗಲಿದ್ದು, ಇಡೀ ಜಿಲ್ಲೆಯೆ ಶೋಕ ಸಾಗರದಲ್ಲಿ ಮುಳುಗಿದೆ.
LATEST NEWS
ಕರಾವಳಿ ಉತ್ಸವದ ಪ್ರಯುಕ್ತ ಡಿಸೆಂಬರ್ 28 ಮತ್ತು 29 ರಂದು ಬೀಚ್ ಉತ್ಸವ
Published
7 hours agoon
26/12/2024By
NEWS DESK2ಮಂಗಳೂರು: ಕರಾವಳಿ ಉತ್ಸವದ ಹಿನ್ನಲೆಯಲ್ಲಿ ಡಿಸೆಂಬರ್ 28 ಮತ್ತು 29 ರಂದು ತಣ್ಣೀರು ಬಾವಿ ಬೀಚ್‌ನಲ್ಲಿ ಬೀಚ್ ಉತ್ಸವ ಆಯೋಜಿಸಲಾಗಿದೆ. ಎರಡು ದಿನಗಳ ಕಾಲ ಜನರಿಗೆ ಬರಪೂರ ಮನರಂಜನೆ ನೀಡಲಿರುವ ಈ ಬೀಚ್ ಉತ್ಸವದಲ್ಲಿ ಖ್ಯಾತ ಹಿನ್ನೆಲೆ ಗಾಯಕರ ಸಮಾಗಮವಾಗಲಿದೆ.
ಈ ಬೀಚ್ ಉತ್ಸವದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದಿದ್ದು, ಕಾರ್ಯಕ್ರಮಗಳ ಮಾಹಿತಿ ನೀಡಿದ್ದಾರೆ. ಎರಡು ದಿನಗಳ ಕಾರ್ಯಕ್ರಮಗಳಲ್ಲಿ ಖ್ಯಾತ ಸಂಗೀತ ನಿರ್ದೇಶಕ ಹಾಗೂ ಗಾಯಕರಾಗಿರುವ ಮಣಿಕಾಂತ್ ಕದ್ರಿ ಹಾಗೂ ತನ್ನದೇ ಶೈಲಿಯ ಸಂಗೀತದ ಮೂಲಕ ಜಗತ್ಪ್ರಸಿದ್ದಿ ಪಡೆದುಕೊಂಡಿರುವ ಗಾಯಕ ರಘು ದೀಕ್ಷೀತ್ ಅವರಿಂದ ಸಂಗೀತ ಕಾರ್ಯಕ್ರಮಗಳು ನಡೆಯಲಿದೆ.
ಇದರ ಜೊತೆಗೆ ಬೀಚ್ ಉತ್ಸವದಲ್ಲಿ ಡ್ಯಾನ್ಸ್ ಫೆಸ್ಟಿವಲ್ , ವಾಟರ್ ಸ್ಪೋರ್ಟ್ಸ್, ಸ್ಯಾಂಡ್ ಆರ್ಟ್ , ಮೊದಲಾದ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ವೀಕೆಂಡ್ ಎಂಜಾಯ್ ಮಾಡಲು ಇದೊಂದು ಸದಾವಕಾಶವಾಗಿದ್ದು, ಕರಾವಳಿ ಉತ್ಸವ ಸಂಭ್ರಮಕ್ಕೆ ಈ ಎರಡು ದಿನಗಳ ಬೀಚ್‌ನಲ್ಲಿ ಜನರಿಗೆ ಸಾಕಷ್ಟು ಮನರಂಜನೆ ಸಿಗಲಿದೆ. ವಾಹನ ನಿಲುಗಡೆಗೂ ಪೊಲೀಸ್ ಇಲಾಖೆಯಿಂದ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಸುಲ್ತಾನ್ ಬತ್ತೇರಿಯಿಂದ ಬೋಟ್ ಮೂಲಕ ತೆರಳುವವರಿಗೂ ಹೆಚ್ಚಿನ ವ್ಯವಸ್ಥೆಯನ್ನ ಮಾಡಲಾಗಿದೆ.
ಮಂಗಳೂರಿನ ಖ್ಯಾತ ಬಿಲ್ಡರ್ ರೋಹನೊ ಕಾರ್ಪೋರೇಷನ್ ಈ ಬೀಚ್ ಫೆಸ್ಟಿವಲ್‌ಗೆ ಟೈಟಲ್ ಸ್ಪಾನ್ಸರ್ ಆಗಿ ಸಹಕರಿಸಿದ್ದು, ಬೀಚ್ ಫೆಸ್ಟಿವಲ್ ಸಮಿತಿಯ ಅದ್ಯಕ್ಷತೆಯನ್ನು ನಗರ ಪೊಲೀಸ್ ಆಯುಕ್ತರು ವಹಿಸಿಕೊಂಡಿದ್ದಾರೆ.
LATEST NEWS
ಮಗನ ಆ ಒಂದು ನಿರ್ಧಾರದಿಂದ ಸಾ*ವಿಗೆ ಶರಣಾದ ಹೆತ್ತವರು!
Published
7 hours agoon
26/12/2024By
NEWS DESK4ಮಂಗಳೂರು/ನಂದ್ಯಾಲ್ : ತಮ್ಮ 24 ವರ್ಷದ ಮಗ ತೃತೀಯ ಲಿಂಗಿಯನ್ನು ಮದುವೆಯಾಗಲು ಮುಂದಾಗಿದ್ದನ್ನು ಕೇಳಿ ತಂದೆ – ತಾಯಿ ಆತ್ಮಹ*ತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶದ ನಂದ್ಯಾಲ್ ಜಿಲ್ಲೆಯಲ್ಲಿ ನಡೆದಿದೆ. ಸುಬ್ಬಾ ರಾಯುಡು(45) ಮತ್ತು ಸರಸ್ವತಿ(38) ಮೃ*ತ ದಂಪತಿ.
ಮಗ ಸುನೀಲ್ ಕುಮಾರ್ ಕಳೆದ ಮೂರು ವರ್ಷಗಳಿಂದ ಸ್ಥಳೀಯ ತೃತೀಯ ಲಿಂಗಿ ಸಮುದಾಯದೊಂದಿಗೆ ಒಡನಾಟ ಹೊಂದಿದ್ದನಂತೆ. ಈ ವಿಚಾರ ಗೊತ್ತಾದಾಗ ಸುಬ್ಬಾ ರಾಯುಡು, ಸರಸ್ವತಿ ವಿರೋಧ ವ್ಯಕ್ತಪಡಿಸಿದ್ದರು. ಈ ಬಗ್ಗೆ ಮಗನೊಂದಿಗೆ ಜಗಳವೂ ನಡೆದಿದೆ ಎಂದು ತಿಳಿದು ಬಂದಿದೆ.
ತೃತೀಯಲಿಂಗಿಯೊಂದಿಗೆ ಮೂರು ವರ್ಷಗಳಿಂದ ಸುನೀಲ್ ಕುಮಾರ್ ಸಂಬಂಧ ಹೊಂದಿದ್ದ. ಅವರನ್ನೇ ಮದುವೆಯಾಗುವುದಾಗಿ ಹಠ ಹಿಡಿದಿದ್ದ. ಈ ಬಗ್ಗೆ ಪೋಷಕರೊಂದಿಗೆ ಆಗಾಗ್ಗೆ ಜಗಳವಾಡುತ್ತಿದ್ದರು. ಇದೇ ವಿಚಾರವಾಗಿ ಈ ಹಿಂದೆ ಸುನೀಲ್ ಆತ್ಮಹ*ತ್ಯೆಗೆ ಯತ್ನಿಸಿದ್ದ ಎಂದು ಪೊಲೀಸರು ತಿಳಿಸಿರುವ ಬಗ್ಗೆ ವರದಿಯಾಗಿದೆ.
ಇದನ್ನೂ ಓದಿ : ಹೆಚ್ಚು ಮೊಬೈಲ್ ನೋಡ್ಬೇಡ ಎಂದು ಬುದ್ಧಿ ಹೇಳಿದ್ದಕ್ಕೆ ವಿಷ ಸೇವಿಸಿ ಯುವತಿ ಆತ್ಮಹತ್ಯೆ
ತೃತೀಯ ಲಿಂಗಿಗಳ 1.5 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದು, ಪೋಷಕರಿಗೆ ಆ ಹಣ ಕೊಡುವಂತೆ ಒತ್ತಾಯಿಸಿದ್ದಾರೆ. ಈ ಬಗ್ಗೆ ತೃತೀಯ ಲಿಂಗಿ ಸಮುದಾಯದ ಸದಸ್ಯರು ಪೋಷಕರನ್ನು ಸಾರ್ವಜನಿಕವಾಗಿ ನಿಂದಿಸಿದ್ದರು. ಇದರಿಂದ ನೊಂದ ದಂಪತಿ ಸಾ*ವಿನ ದಾರಿ ಹಿಡಿದಿದ್ದಾರೆ ಎಂದು ತಿಳಿದುಬಂದಿದೆ.