Saturday, February 4, 2023

ಹೈದರಾಬಾದ್ ಏರ್​ಪೋರ್ಟ್​ನಲ್ಲಿ ಕಸ್ಟಮ್ಸ್ ಭರ್ಜರಿ ಬೇಟೆ..! 25 ಕೋಟಿ ರೂ ಮೌಲ್ಯದ 21 ಕಿ.ಗ್ರಾಂ ಅಕ್ರಮ ಚಿನ್ನ ವಶಕ್ಕೆ..

ಹೈದರಾಬಾದ್ ಏರ್​ಪೋರ್ಟ್​ನಲ್ಲಿ ಕಸ್ಟಮ್ಸ್ ಭರ್ಜರಿ ಬೇಟೆ..! 25 ಕೋಟಿ ರೂ ಮೌಲ್ಯದ 21 ಕಿ.ಗ್ರಾಂ ಅಕ್ರಮ ಚಿನ್ನ ವಶಕ್ಕೆ..

ಹೈದ್ರಾಬಾದ್ : ಇಲ್ಲಿನ ಶಂಶಾಬಾದ್​ನಲ್ಲಿರುವ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು  25 ಕೋಟಿ ಮೌಲ್ಯದ 21 ಕಿಲೋ ಅಕ್ರಮ ಚಿನ್ನಾಭರಣಗಳನ್ನ ವಶಪಡಿಸಿಕೊಂಡಿದ್ದಾರೆ.

ಈ ಗೋಲ್ಡ್ ಬಿಸ್ಕತ್ ಮತ್ತು ಆಭರಣಗಳಿಗೆ ಯಾವುದೇ ದಾಖಲೆಗಳಿರಲಿಲ್ಲ. ಗಲ್ಫ್ ದೇಶಗಳಿಂದ ಬಂದಿದ್ದ ಇದನ್ನು ಮುಂಬೈಗೆ ಸಾಗಿಸಲು ಯೋಜಿಸಲಾಗಿತ್ತು.

ಗಲ್ಫ್ ದೇಶದಿಂದ ಕೊರಿಯರ್ ನಲ್ಲಿ ಬಂದ ಈ ಸರಕನ್ನು ಹೈದರಾಬಾದ್​ನಲ್ಲಿ ಮುಂಬೈಗೆ ಹೋಗುವ ಸ್ಥಳೀಯ ಕಾರ್ಗೋ ಫ್ಲೈಟ್​ಗೆ ಹಾಕಲಾಗಿತ್ತು. ಸುಂಕದ ಅಧಿಕಾರಿಗಳು ತಪಾಸಣೆ ಮಾಡುವ ವೇಳೆ ಈ ಸರಕು ಸಿಕ್ಕಿದೆ.

ಯಾವುದಕ್ಕೂ ದಾಖಲೆಗಳಿಲ್ಲದ್ದರಿಂದ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. 2 ಕಿಲೋನಷ್ಟು ಚಿನ್ನದ ಬಿಸ್ಕತ್​ಗಳಿದ್ದರೆ, ಉಳಿದ 19 ಕಿಲೋ ಚಿನ್ನ ಹಾಗೂ ವಜ್ರದ ಆಭರಣಗಳಿವೆ ಎಂದು ಅಧಿಕಾರಿಗಳು ಹೇಳಿರುವುದು ತಿಳಿದುಬಂದಿದೆ.

ಈ ಚಿನ್ನಗಳನ್ನ ಕೊರಿಯರ್ ಮೂಲಕ ಹೈದರಾಬಾದ್​ಗೆ ಕಳುಹಿಸಿದ ವ್ಯಕ್ತಿ ಯಾರು ಎಂಬುದು ಗೊತ್ತಾಗಿಲ್ಲ. ತನಿಖೆ ನಡೆಸಲಾಗುತ್ತಿದೆ. ಹೈದರಾಬಾದ್ ಏರ್​ಪೋರ್ಟ್​ನಲ್ಲಿ ಈ ವರ್ಷ ಸಿಕ್ಕಿಬಿದ್ದ ಮೊದಲ ಪ್ರಮುಖ ಕಳ್ಳ ಮಾಲು ಇದಾಗಿದೆ.

LEAVE A REPLY

Please enter your comment!
Please enter your name here

Hot Topics

ಬೆಳ್ತಂಗಡಿ : ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿದ ಆಟೋ- ಮಹಿಳೆ ಸಾವು..!

ಆಟೋ ರಿಕ್ಷಾವೊಂದು ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದ ಪರಿಣಾಮ ಮಹಿಳೆ ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯ ಮುಂಡಾಜೆ ಸಮೀಪ ನಡೆದಿದೆ.ಬೆಳ್ತಂಗಡಿ: ಆಟೋ ರಿಕ್ಷಾವೊಂದು ಚಾಲಕನ ನಿಯಂತ್ರಣ ತಪ್ಪಿ ನದಿಗೆ...

ಮಂಗಳೂರು ಮುಸ್ಲಿಂ ಯುವಕನನ್ನು ವರಿಸಿದ ನೆದರ್ಲೆಂಡ್ ಕ್ರೈಸ್ತ ಕನ್ಯೆ..!

ಪ್ರೀತಿ ಎಂಬ ಮಾಯೆಗೆ ಅಂತರವಿಲ್ಲ,ಜಾತಿ - ಪಂಗಡವಿಲ್ಲ, ಭಾಷೆ ಬೇಕಿಲ್ಲ ಪ್ರೀತಿಸುವ ಮನಸ್ಸುಗಳಿದ್ದರೆ ಸಾಕು, ಯಾರಿಗೆ, ಯಾವಾಗ, ಯಾರಮೇಲಾದರೂ ಎಲ್ಲಿ ಬೇಕಾದರೂ ಪ್ರೀತಿ ಹುಟ್ಟಬಹುದು. ಮಂಗಳೂರು: ಪ್ರೀತಿ ಎಂಬ ಮಾಯೆಗೆ ಅಂತರವಿಲ್ಲ,ಜಾತಿ - ಪಂಗಡವಿಲ್ಲ,...

ಸೌದಿ ಅರೇಬಿಯಾದಲ್ಲಿ ಭೀಕರ ವಾಹನ ಅಪಘಾತ : ಮಂಗಳೂರು ಮೂಲದ ಮೂವರ ದಾರುಣ ಅಂತ್ಯ..!

ಸೌದಿ ಅರೇಬಿಯಾದ ಅಲ್-ಹಸಾ ಎಂಬ ಪ್ರದೇಶದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂವರು ಸೇರಿದಂತೆ ಒಟ್ಟು ನಾಲ್ವರು ಅನಿವಾಸಿ ಉದ್ಯೋಗಿಗಳು ಮೃತಪಟ್ಟಿರುವ ದಾರುಣ ಘಟನೆ ಕಳೆದ ರಾತ್ರಿ ನಡೆದಿದೆ.ರಿಯಾದ್:...