Sunday, December 4, 2022

ಮಾಲೀಕರ ಅನುಮತಿಯಿಲ್ಲದೆ ಸಮೋಸಾ ತಿಂದ ವ್ಯಕ್ತಿಯ ಮರ್ಡರ್…!

ಭೋಪಾಲ್: ಅಂಗಡಿಯೊಂದಕ್ಕೆ ನುಗ್ಗಿ ಮಾಲೀಕರ ಅನುಮತಿಯಿಲ್ಲದೆ ಸಮೋಸಾ ತಿಂದ ವ್ಯಕ್ತಿಯನ್ನು ಹತ್ಯೆ ಮಾಡಿದ ಘಟನೆ ಮಧ್ಯಪ್ರದೇಶದ ಭೋಪಾಲ್‍ನಲ್ಲಿ ನಡೆದಿದೆ.


ಭೋಪಾಲ್‍ನ ಚೋಲಾ ಪ್ರದೇಶದ ಶಂಕರ್ ನಗರದಲ್ಲಿ ಈ ಘಟನೆ ನಡೆದಿದೆ.

ವಿನೋದ್ ಅಹಿರ್ವಾರ್(41) ಹತ್ಯೆಗಿಡಾದ ವ್ಯಕ್ತಿ ಹಾಗೂ ಅಂಗಡಿಯ ಮಾಲೀಕ ಹರಿಸಿಂಗ್ ಅಹಿರ್ವಾರ್ ಬಂಧಿತ ಆರೋಪಿ.

ಈತ ಭೋಪಾಲ್‍ನ ಶಂಕರ್ ನಗರದಲ್ಲಿ ಅಂಗಡಿಯೊಂದನ್ನು ಇಟ್ಟುಕೊಂಡಿದ್ದ. ಹರಿಸಿಂಗ್ ಅಹಿರ್ವಾರ್‌ನ ಅಂಗಡಿಗೆ ವಿನೋದ್ ಕುಡಿದ ಅಮಲಿನಲ್ಲಿ ನುಗ್ಗಿದ್ದ.

ಅಲ್ಲಿ ಮಾಲೀಕರ ಅನುಮತಿಯನ್ನು ಪಡೆಯದೇ ಸಮೋಸಾವನ್ನು ತೆಗೆದುಕೊಂಡು ತಿನ್ನಲು ಪ್ರಾರಂಭಿಸಿದ. ಇದನ್ನು ನೋಡಿದ ಅಂಗಡಿಯ ಮಾಲೀಕ ಹರಿಸಿಂಗ್ ಕೋಪಗೊಂಡು ವಿನೋದನನ್ನು ಗದರಿಸಿ ಆತನ ತಲೆಗೆ ದೊಣ್ಣೆಯಿಂದ ಹೊಡೆದಿದ್ದಾನೆ.

ವಿನೋದ್‍ಗೆ ಬಲವಾಗಿ ಪೆಟ್ಟು ಬಿದ್ದಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಅಂಗಡಿ ಮಾಲೀಕ ಹರಿಸಿಂಗ್ ಅಹಿರ್ವಾರ್ ಹಾಗೂ ಆತನ 20 ವರ್ಷದ ಮಗನನ್ನು ಬಂಧಿಸಿದ್ದಾರೆ.

ಛೋಲಾ ಮಂದಿರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

LEAVE A REPLY

Please enter your comment!
Please enter your name here

Hot Topics