ಪೊಲೀಸ್ ಅಧಿಕಾರಿಗಳಿಗೆ ಡಿಜಿ ಪ್ರವೀಣ್ ಸೂದ್ ಕರೆಂಟ್ ಶಾಕ್ ..!
ಬೆಂಗಳೂರು: ವರ್ಗಾವಣೆಗೊಳ್ಳುವ ಅಧಿಕಾರಿಗಳು ವರ್ಗಾವಣೆಯಾಗುವ ಸ್ಥಳಕ್ಕೆ ತಮ್ಮ ಸರ್ಕಾರಿ ವಾಹನ ಕೊಂಡೊಯ್ಯುವಂತಿಲ್ಲ ಡಿಜಿ ಐಜಿಪಿ ಪ್ರವೀಣ್ ಸೂದ್ ಆದೇಶ ಹೊರಡಿಸಿದ್ದಾರೆ.
ರಾಜ್ಯದ ಎಲ್ಲಾ ಪೊಲೀಸ್ ಇಲಾಖೆಗಳಿಗೆ ಈ ಆದೇಶ ಹೊರಡಿಸಿದ್ದಾರೆ. ಕೆಲವು ಅಧಿಕಾರಿಗಳು ತಾವು ವರ್ಗಾವಣೆಯಾಗುವ ಸ್ಥಳಕ್ಕೆ ಸರ್ಕಾರಿ ವಾಹನಗಳನ್ನು ಕೊಂಡೊಯ್ಯುತ್ತಿದ್ದರು ಎನ್ನುವ ಆರೋಪಗಳು ಈ ಹಿಂದೆ ಕೇಳಿಬರುತ್ತಿದ್ದವು.
ಜೊತೆಗೆ ಖುದ್ದು ಪ್ರವೀಣ್ ಸೂದ್ ಅವರಿಗೆ ಕೆಲವು ಬಾರಿ ಆರೋಪಗಳು ಕೇಳಿ ಬಂದ ಹಿನ್ನೆಲೆ ಇನ್ನು ಮುಂದೆ ವರ್ಗಾವಣೆಯಾದ ಸ್ಥಳಗಳಿಗೆ ಸರ್ಕಾರಿ ವಾಹನಗಳನ್ನು ಕೊಂಡೊಯ್ಯಬಾರದು ಎಂದು ಆದೇಶ ಹೊರಡಿಸಿದ್ದಾರೆ.