ತುಮಕೂರು: ಕ್ರೂಸರ್ ವಾಹನಕ್ಕೆ ಲಾರಿ ಢಿಕ್ಕಿ ಹೊಡೆದ ಕಾರಣ 9ಮಂದಿ ದಾರುಣವಾಗಿ ಮೃತಪಟ್ಟ ಘಟನೆ ತುಮುಕೂರಿನ ಶಿರಾ ಸಮೀಪ ಇಂದು ಮುಂಜಾನೆ ನಡೆದಿದೆ.
ಮೃತಪಟ್ಟವರನ್ನು ಮಾನ್ವಿ ತಾಲ್ಲೂಕಿನ ಸುಜಾತಾ (25), ಲಕ್ಷ್ಮಿ 913), ವಿನೋದ್ (3), ಕ್ರೂಸರ್ ಚಾಲಕ ಕೃಷ್ಣಪ್ಪ (25) ಎಂದು ತಿಳಿದುಬಂದಿದ್ದು ಉಳಿದವರ ಹೆಸರನ್ನು ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ.
ರಾಯಚೂರು ಜಿಲ್ಲೆಯ ವಿವಿಧ ಗ್ರಾಮಗಳಿಂದ ತುಮಕೂರು ಹಾಗೂ ಬೆಂಗಳೂರಿನಲ್ಲಿ ಕೂಲಿ ಕೆಲಸಕ್ಕೆ ಎಂದು ಇವರೆಲ್ಲರೂ ನಿನ್ನೆ ಸಂಜೆ ತಮ್ಮ ಗ್ರಾಮಗಳಿಂದ ಕ್ರೂಸರ್ನಲ್ಲಿ ಹೊರಟಿದ್ದರು.
ಬೆಳಗಿನ ಜಾವ ನಾಲ್ಕು ಮೂವತ್ತರ ಸಂದರ್ಭದಲ್ಲಿ ಎಲ್ಲರೂ ಸಂಪೂರ್ಣ ನಿದ್ರೆಗೆ ಜಾರಿದ್ದರು.
ಈ ವೇಳೆ ದುರ್ಘಟನೆ ಸಂಭವಿಸಿದ್ದು ಶಿರಾ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವಾಹನಗಳನ್ನು ತೆರವುಗೊಳಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ಕಾರ್ಯ ಮಾಡಿದ್ದಾರೆ.