ಕಾಬೂಲ್: ಸಂಪೂರ್ಣ ತಾಲಿಬಾನ್ ವಶವಾಗಿರುವ ಅಪ್ಘಾನಿಸ್ತಾನದಲ್ಲಿ ಪರಿಸ್ಥಿತಿ ಕ್ಷಣದಿಂದ ಕ್ಷಣಕ್ಕೆ ಬಿಗಾಡಾಯಿಸುತ್ತಿದೆ. ತಾಲಿಬಾನ್ ಉಗ್ರರಿಂದ ತಪ್ಪಿಸಿಕೊಳ್ಳಲು ಅಲ್ಲಿನ ಜನ ಬೇರೆ ದೇಶಗಳಿಗೆ ತೆರಳಲು ವಿಮಾನ ಏರಲು ಮುಗಿಬಿದ್ದಿರುವ ದೃಶ್ಯಗಳು ಕಾಬೂಲ್ ವಿಮಾನ ನಿಲ್ದಾಣದಲ್ಲಿ ಕಂಡುಬಂದವು.
ಏರ್ಪೋರ್ಟ್ನಲ್ಲಿ ನಿಂತಿರುವ ವಿಮಾನ ಏರಲು ಜನ ಮುಗಿಬಿದ್ದಿದ್ದು, ವಿಮಾನ ಕ್ಯಾಬಿನ್ ಒಳಗಡೆ ಹೋಗಲು ಜನರು ತಳ್ಳಾಟ ನೂಕಾಟ ನಡೆಸುತ್ತಿರುವ ದೃಶ್ಯಗಳು ಸಾಮಾನ್ಯವಾಗಿತ್ತು. ವಿಮಾನ ನಿಲ್ದಾಣದಲ್ಲಿ ಜನಸಾಗರವೇ ಕಂಡುಬರುತ್ತಿದೆ.
ಇನ್ನು, ವಿಮಾನ ನಿಲ್ದಾಣದಲ್ಲಿನ ಜನರನ್ನು ಚದುರಿಸಲು ಅಮೆರಿಕ ಸೈನಿಕರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.
ದೇಶದಿಂದ ಪಲಾಯನ ಮಾಡಿದ ಬಳಿಕ ಫೇಸ್ಬುಕ್ನಲ್ಲಿ ಹೇಳಿಕೆ ನೀಡಿರುವ ಅಶ್ರಫ್ ಘನಿ, ತಾಲಿಬಾನಿಗಳು ತಮ್ಮ ಖಡ್ಗ ಮತ್ತು ಬಂದೂಕುಗಳ ತೀರ್ಪಿನಿಂದ ಗೆದ್ದಿದ್ದಾರೆ.
ಈಗ ತಮ್ಮ ದೇಶವಾಸಿಗಳ ಗೌರವ, ಆಸ್ತಿ ಮತ್ತು ಸ್ವ-ಸಂರಕ್ಷಣೆಯ ಹೊಣೆ ಹೊತ್ತಿದ್ದಾರೆ ಎಂದು ಹೇಳಿದ್ದರು. ತಾಲಿಬಾನ್ ಸಹ-ಸಂಸ್ಥಾಪಕ ಅಬ್ದುಲ್ ಘನಿ ಬರದಾರ್ ಕೂಡ ವಿಜಯವನ್ನು ಘೋಷಿಸಿದ್ದಾರೆ.