Tuesday, January 26, 2021

ಕೋಟ್ಯಾಂತರ  ರೂಪಾಯಿ  ವಂಚಕ ;ಸಂದೇಶ್ ಶೆಟ್ಟಿ ಬಂಧನ..!

ಕೋಟ್ಯಾಂತರ  ರೂಪಾಯಿ  ವಂಚಕ ;ಸಂದೇಶ್ ಶೆಟ್ಟಿ ಬಂಧನ..!

ಬೆಂಗಳೂರು: ಕಮಿಷನ್ ಆಮಿಷ ಒಡ್ಡಿ ನೂರಾರು ಮಂದಿಯಿಂದ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿಸಿಕೊಂಡು ವಂಚನೆ ಮಾಡಿದ ಆರೋಪಿಯನ್ನು ಸುಬ್ರಹ್ಮಣ್ಯ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.ಮಲ್ಲೇಶ್ವರದ ಬ್ರಿಗೇಡ್​ ಗೇಟ್‌ವೇ ಟ್ರಿಲಿಯನರ್ ಮೈಂಡ್ ವರ್ಲ್ಡ್ ವೆಂಚರ್ ಪ್ರೈ. ಲಿ. ಕಂಪನಿ ಮಾಲೀಕ ಸಂದೇಶ್ ಕುಮಾರ್ ಶೆಟ್ಟಿ (29) ಬಂಧಿತ ಆರೋಪಿಯಾಗಿದ್ದಾನೆ. ಆರೋಪಿಯ ಆಮಿಷಕ್ಕೆ ಒಳಗಾಗಿ ಹೂಡಿಕೆ ಮಾಡಿರುವ ನೂರಾರು ಮಂದಿ ದೂರು ನೀಡುತ್ತಿದ್ದು, 20 ಪ್ರಕರಣಗಳು ದಾಖಲಾಗಿವೆ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕುಂದಾಪುರ ಮೂಲದ ಸಂದೇಶ್, 2018ರ ಜುಲೈನಲ್ಲಿ ಬ್ರಿಗೇಡ್ ಗೇಟ್‌ವೇನಲ್ಲಿ ಕಚೇರಿ ತೆರೆದು ಚೈನ್‌ಲಿಂಕ್ ಬಿಸಿನೆಸ್ ಆರಂಭಿಸಿದ್ದ. ವಿದ್ಯಾರ್ಥಿಗಳು ಮತ್ತು ಯುವಕರನ್ನೇ ಟಾರ್ಗೆಟ್ ಮಾಡಿದ್ದ ಆರೋಪಿ ಮೊದಲು 15 ಸಾವಿರ ರೂ. ಹೂಡಿಕೆ ಮಾಡಿ ಸದಸ್ಯತ್ವ ಪಡೆದರೆ ಆ ಹಣಕ್ಕೆ ಬಟ್ಟೆ, ತೂಕ ಇಳಿಸುವ ಪೌಡರ್, ಸೌಂದರ್ಯವರ್ಧಕ ಸೇರಿ ಇನ್ನಿತರ ವಸ್ತುಗಳನ್ನು ಕೊಡುವುದಾಗಿ ಆಮಿಷವೊಡ್ಡಿದ್ದ. ಪಾರ್ಟ್ ಟೈಮ್ ಕೆಲಸದ ಆಸೆಯಿಂದ ವಿದ್ಯಾರ್ಥಿಗಳು 15 ಸಾವಿರ ರೂಪಾಯಿ ಹೂಡಿಕೆ ಮಾಡಿದ್ದರು. ಇದಾದ ಮೇಲೆ ಪ್ರವಾಸ ಪ್ಯಾಕೇಜ್, ಶಿಕ್ಷಣ ಅವಧಿ ಆಸೆ ತೋರಿಸಿ ಮತ್ತೆ 18 ಸಾವಿರ ರೂ. ಹೂಡಿಕೆ ಮಾಡಿ ಎಡ-ಬಲ ಸದಸ್ಯರನ್ನು ಕರೆತಂದರೆ ಹೆಚ್ಚಿನ ಕಮಿಷನ್ ಮತ್ತು ವಸ್ತುಗಳು ಸಿಗಲಿವೆ. ಕೈತುಂಬ ಹಣದ ಪ್ರವಾಸವೂ ಹೋಗಬಹುದು ಎಂದು ಹೇಳಿದ್ದ.

ನಂಬಿದ ನೂರಾರು ಮಂದಿ ತಾವು ಹೂಡಿಕೆ ಮಾಡಿದ್ದಲ್ಲದೆ ಸ್ನೇಹಿತರು, ಕುಟುಂಬ ಸದಸ್ಯರ ಹೆಸರಿನಲ್ಲಿಯೂ ಸಾವಿರಾರು ರೂಪಾಯಿ ಹಣ ತೊಡಗಿಸಿದ್ದರು.

ತನ್ನ ಸಹಚರರಿಗೆ ಬೆಲೆ ಬಾಳುವ ವಸ್ತುಗಳು ಮತ್ತು ಕಮಿಷನ್​ ಹಣ ಕೊಟ್ಟು ಇತರರನ್ನು  ನಂಬಿಸಿದ್ದ. ಬ್ರಿಗೇಡ್​ ಗೇಟ್‌ವೇಗೆ ಸೇರಿದ ವರ್ಲ್ಡ್ ಟ್ರೇಡ್ ಸೆಂಟರ್‌ನ 22ನೇ ಮಹಡಿಯಲ್ಲಿ ಟ್ರಿಲಿಯನರ್ ಮೈಂಡ್ ವರ್ಲ್ಡ್ ವೆಂಚರ್ ಪ್ರೈ.ಲಿ. ಕಂಪನಿ ತೆರೆದಿದ್ದ. ಹೂಡಿಕೆದಾರರು ಮತ್ತು ಆಸಕ್ತಿ ಇರುವರರ ಮೀಟಿಂಗ್ ಕರೆದು ಟಿವಿ ಪರದೆ ಮೇಲೆ ಬಣ್ಣಬಣ್ಣದ ಆಸೆ ತೋರಿಸುತ್ತಿದ್ದ.

ಕೇವಲ 15 ಸಾವಿರ ರೂ. ಹೂಡಿಕೆ ಮಾಡಿ ಎಡ-ಬಲ ಸದಸ್ಯರನ್ನು ಮಾಡಿದರೆ ಕೂತಲ್ಲೇ ಲಕ್ಷಾಂತರ ರೂ. ಸಂಪಾದನೆ ಮಾಡಬಹುದು ಎಂದು ಟ್ರಿಲಿಯನ್ ಆಸೆ ತೋರಿಸುತ್ತಿದ್ದ..

ನಕಲಿ ವಸ್ತುಗಳ ಮಾರಾಟ: ಹೂಡಿಕೆದಾರರಿಗೆ ಬಟ್ಟೆ, ಪಾನೀಯಗಳು, ಸೌಂದರ್ಯವರ್ಧಕ ಮತ್ತು ವ್ಯಾಯಾಮ ಉಪಕರಣಗಳನ್ನು ಕೊಡುತ್ತಿದ್ದ.ಆದರೆ ಯಾವುದೇ ವಸ್ತುಗಳು ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದಿರಲಿಲ್ಲ. ಕಳಪೆ ಮತ್ತು ನಕಲಿ ವಸ್ತುಗಳು ಆಗಿದ್ದವು.ಈ ಬಗ್ಗೆ ಪ್ರಶ್ನೆ ಮಾಡಿದಾಗ ಜಾಹೀರಾತು ನೀಡಿದರೆ ವಸ್ತುಗಳ ಬೆಲೆ ಹೆಚ್ಚಾಗುತ್ತವೆ. ಬದಲಿಗೆ ಸದಸ್ಯತ್ವ ಪಡೆದಿರುವವರೇ ಚೈನ್ ಲಿಂಕ್‌ನಲ್ಲಿ ವಸ್ತುಗಳನ್ನು ಮಾರಾಟ ಮಾಡಿದರೆ ಕಮಿಷನ್ ಸಿಗುತ್ತದೆ ಎಂದು ಆಸೆ ಹುಟ್ಟಿಸುತ್ತಿದ್ದ.

Hot Topics

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ: ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..! 

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..!  ಮಂಗಳೂರು: ಟೆರೇಸ್ ನಲ್ಲಿ ಫೋನ್ ನಲ್ಲಿ ಮಾತನಾಡುತ್ತಿದ್ದ ವೇಳೆ ಆಯತಪ್ಪಿ ಕೆಳಗೆ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ವಿಟ್ಲದ ಕೇಪು ಎಂಬಲ್ಲಿ...
Copy Protected by Chetans WP-Copyprotect.