ಚಿನ್ನದ ಡೀಲ್ ವಿಚಾರದಲ್ಲಿ ಕ್ರಿಮಿನಲ್ ತಸ್ಲೀಮ್ ಕೊಲೆ ಶಂಕೆ ಮುಂದುವರಿದ ತನಿಖೆ
Published
5 years agoon
By
Adminಚಿನ್ನದ ಡೀಲ್ ವಿಚಾರದಲ್ಲಿ ಕ್ರಿಮಿನಲ್ ತಸ್ಲೀಮ್ ಕೊಲೆ ಶಂಕೆ ಮುಂದುವರಿದ ತನಿಖೆ
ಮಂಗಳೂರು : ಬಂಟ್ವಾಳದಲ್ಲಿ ಕೊಲೆಯಾಗಿ ಸಿಕ್ಕಿದ್ದ ನಟೋರಿಯಸ್ ಕ್ರಿಮಿನಲ್ ತಸ್ಲೀಮ್ ಕೊಲೆ ಹಿಂದೆ ಭೂಗತ ಜಗತ್ತಿನ ಕೈವಾಡವಿರುವುದಾಗಿ ತಿಳಿದು ಬಂದಿದೆ. ಭೂಗತ ಪಾತಕಿಗಳ ಅಣತಿಯಂತೆ ಈ ಕೊಲೆ ನಡೆದಿದ್ದು, ಭಾರೀ ಪ್ರಮಾಣದ ಚಿನ್ನದ ಡೀಲ್ ವಿಚಾರ ಸೇರಿದಂತೆ ಹಲವು ವೈಷಮ್ಯದಲ್ಲಿ ಕೊಲೆ ನಡೆದಿದೆ ಎನ್ನಲಾಗಿದೆ.
ಈ ಹಿಂದೆ ಕ್ರಿಮಿನಲ್ ಆಗಿದ್ದ ತಸ್ಲೀಮ್ ಗೆ ಹೈಕೋರ್ಟ್ ಮೂಲಕ ಜಾಮೀನು ಕೊಡಿಸಲಾಗಿತ್ತು. ಕಲಬುರಗಿ ಜೈಲಿನಿಂದ ಹೊರ ಬಂದವನೇ ದುಬೈಗೆ ಕರೆ ಮಾಡಿದ್ದ . ತಕ್ಷಣ ಜೈಲಿನ ಬಳಿ ಬಂದು ಮೂವರು ಕಾರಿನಲ್ಲಿ ಬಂದು ಈತನನ್ನು ಕರೆದುಕೊಂಡು ಹೋಗಿದ್ದಾರೆ. ಬಳಿಕ ತಸ್ಲೀಮ್ ನನ್ನು ಕಿಡ್ನಾಪ್ ಮಾಡಿ ಅಲ್ಲಿಂದ ಈ ತಂಡ ಕರೆದೊಯ್ದಿದೆ.
ಬಳಿಕ ಈ ಮೂವರ ತಂಡ ಸ್ಥಳೀಯ ಠಾಣೆಗೆ ಕಿಡ್ನಾಪ್ ದೂರು ನೀಡಿದ್ದಾರೆ. ಇದರನ್ವಯ ಜೇವರ್ಗಿ ಪೊಲೀಸರು ಕಾರನ್ನು ಚೇಸ್ ಮಾಡಿಕೊಂಡು ಬಂದಿದ್ರು. ಅಷ್ಟರಲ್ಲಾಗಲೇ ತಸ್ಲೀಮ್ ನನ್ನು ಕೊಲೆ ಮಾಡಿ ಬಂಟ್ವಾಳ ತಾಲೂಕಿನ ನಗ್ರಿ ಶಾಂತಿನಗರ ಬಳಿ ಬಿಟ್ಟು ಆಗಂತುಕರು ಬಿಟ್ಟು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಇನ್ನು ನಟೋರಿಯಸ್ ಕ್ರಿಮಿನಲ್ ತಸ್ಲೀಮ್ ಆರ್.ಎಸ್.ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಕೊಲೆಗೆ ಸಂಚು ರೂಪಿಸಿದ್ದ ಎನ್ನಲಾಗಿದೆ. ಕರ್ನಾಟಕದ ಹಿಂದು ಮುಖಂಡರ ಹತ್ಯೆಗೆ ತಂಡ ಸ್ಕೆಚ್ ಹಾಕಿತ್ತು. ಆ ತಂಡದಲ್ಲಿ ನಟೋರಿಯಸ್ ತಸ್ಲೀಮ್ ಕೂಡ ಭಅಗಿಯಾಗಿದ್ದ. ಇದೇ ಪ್ರಕರಣದಲ್ಲಿ ದೆಹಲಿ ಪೊಲೀಸರಿಂದ ಬಂಧನವಾಗಿತ್ತು. ಹಿಂದು ಮುಖಂಡರ ಹತ್ಯೆ ಪ್ಲಾನ್ ಕೂಡ ಫ್ಲಾಫ್ ಆಗಿತ್ತು. ತಸ್ಲೀಮ್ ಭೂಗತ ಪಾತಕಿಗಳೊಂದಿಗೆ ನಿರಂತರ ಸಂಪರ್ಕವಿಟ್ಟುಕೊಂಡಿದ್ದ ಎನ್ನಲಾಗಿದೆ.
ವೀಡಿಯೋಗಾಗಿ
You may like
BIG BOSS
ಮೂರು ತಿಂಗಳು ದೂರ ಇದ್ದ ಅಕ್ಕನ ಗುರುತಿಸಲೇ ಇಲ್ಲ ತಮ್ಮ; ಮೋಕ್ಷಿತಾ ಕಣ್ಣೀರಿಗೆ ಕರುಳು ಕಿವುಚುತ್ತೆ
Published
14 minutes agoon
01/01/2025By
NEWS DESK2ಕಿಚ್ಚ ಸುದೀಪ್ ಅವರು ನಡೆಸಿ ಕೊಡುವ ಕನ್ನಡದ ಬಿಗ್ ರಿಯಾಲಿಟಿ ಶೋ ಕನ್ನಡಿಗರ ಮನ ಗೆದ್ದಿದೆ. ವಾರದಿಂದ ವಾರಕ್ಕೆ ಹೆಚ್ಚು ಹೆಚ್ಚು ಜನರನ್ನು ಸೆಳೆಯುತ್ತ ಯಶಸ್ವಿಯಾಗಿ ಸಾಗುತ್ತಿದೆ. ನ್ಯೂ ಇಯರ್ ಹಿನ್ನೆಲೆಯಲ್ಲಿ ಮನೆಯಲ್ಲಿರುವ ಎಲ್ಲ ಸ್ಪರ್ಧಿಗಳ ಕುಟುಂಬಸ್ಥರು ಬಂದು ನೋಡಿಕೊಂಡು ಹೋಗುತ್ತಿದ್ದಾರೆ. ಇದೇ ರೀತಿ ಮೋಕ್ಷಿತಾಗೆ ಬಿಗ್ಬಾಸ್ ಬಿಗ್ ಸರ್ಪ್ರೈಸ್ ಕೊಟ್ಟಿದ್ದಾರೆ. ಆದರೆ ತಮ್ಮನನ್ನು ನೋಡಿ ಅಕ್ಕ ಮೋಕ್ಷಿತಾ ಕಣ್ಣೀರು ಹಾಕಿರುವುದು ಎಲ್ಲರ ಕರುಳು ಚುರುಕ್ ಅನ್ನುತ್ತೆ.
ಹೊಸ ವರ್ಷ ಬಿಗ್ಬಾಸ್ ಮನೆಯಲ್ಲೂ ಅದ್ಧೂರಿಯಾಗಿ ಸೆಲೆಬ್ರೆಷನ್ ಮಾಡಲಾಗಿದೆ. ಎಲ್ಲ ಸ್ಪರ್ಧಿಗಳು ಸಖತ್ ಆಗಿಯೇ ಕುಣಿದು ಕುಪ್ಪಳಿಸುತ್ತಿದ್ದರು. ಮೋಕ್ಷಿತಾ ಕೂಡ ನಾನೇನು ಕಮ್ಮಿ ಇಲ್ಲ ಎನ್ನುವಂತೆ ಬಿಗ್ಬಾಸ್ಗೆ ಬಂದ ಮೇಲೆ ಪ್ರೀತಿಯ ಸಹೋದರನ್ನು ಮರೆತು ಡ್ಯಾನ್ಸ್ ಮಾಡುತ್ತಿದ್ದರು. ಆದರೆ ಈ ವೇಳೆ ನೋಡಿ ಫುಲ್ ಶಾಕ್ ಆಗಿರೋದು. ಬಿಗ್ಬಾಸ್ ಮನೆಗೆ ಕುಟುಂಬ ಬರುತ್ತಿದ್ದಂತೆ ತಮ್ಮನನ್ನು ನೋಡಿ ಮೋಕ್ಷಿತಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಇಷ್ಟು ದಿನ ಬಿಟ್ಟು ಇದ್ದಿದ್ದೆ. ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೆ. ಪುಟಾಣಿ ಎಂದು ಕರೆದರೂ ವೀಲ್ ಚೇರ್ ಮೇಲಿದ್ದ ಸಹೋದರ, ಮೋಕ್ಷಿತಾರನ್ನ ಯಾರೆಂದು ಗುರುತಿಸಲಿಲ್ಲ. ಅದಕ್ಕೆ ನನ್ನನ್ನು ಮರೆತು ಹೋಗಿದ್ದಾನೆ. ಇಷ್ಟು ದಿನ ಮನೆಯಲ್ಲಿ ಇರದಿದ್ದಕ್ಕೆ ನನ್ನನ್ನು ಮರೆತು ಹೋಗಿ ಬಿಟ್ಟಿದ್ದಾನೆ ಎಂದು ಮೋಕ್ಷಿತಾ, ತಮ್ಮನನ್ನು ತಬ್ಬಿಕೊಂಡು ಕಣ್ಣೀರು ಹಾಕಿದ್ದಾರೆ. ಇದೇ ವೇಳೆ ಮೋಕ್ಷಿತಾ ತಂದೆ, ತಾಯಿ ಕೂಡ ಕಣ್ಣೀರು ಹಾಕಿರುವುದು ಎಲ್ಲರನ್ನೂ ಮೂಕವಿಸ್ಮಿತರಾಗಿ ಮಾಡುತ್ತದೆ.
ಮೋಕ್ಷಿತಾ ತಮ್ಮನ ಪರಿಸ್ಥಿತಿಯನ್ನು ನೋಡಿ ಮನೆಯಲ್ಲಿರುವ ಎಲ್ಲ ಸ್ಪರ್ಧಿಗಳು ಬೆರಗಾಗಿದ್ದರು. ಗೌತಮಿಯಂತೂ ದುಃಖಿಸಿರುವುದು ಎಲ್ಲರ ಮನ ಕದಡುವಂತೆ ಇತ್ತು. ಚೈತ್ರಾ, ಮಂಜು, ರಜತ್, ಹನುಮಂತು, ತ್ರಿವಿಕ್ರಮ್, ಧನರಾಜ್ ಎಲ್ಲರ ಮುಖದಲ್ಲಿನ ಭಾವ ಕೂಡ ಏನೋ ಹೇಳುವಂತೆ ಇತ್ತು.
ಉಳ್ಳಾಲ: ಲಾರಿಗೆ ದ್ವಿಚಕ್ರ ವಾಹನವೊಂದು ಡಿ*ಕ್ಕಿ ಹೊಡೆದ ಪರಿಣಾಮ ವಾಹನ ಸವಾರ ಸ್ಥಳದಲ್ಲೇ ಮೃ*ತಪಟ್ಟ ಘಟನೆ ಉಳ್ಳಾಲ ಠಾಣೆ ವ್ಯಾಪ್ತಿಯ ಸಂಕೋಲಿಗೆ ಬಳಿ ನಿನ್ನೆ (ಡಿ.31) ತಡರಾತ್ರಿ ಸಂಭವಿಸಿದೆ.
ದೇರಳಕಟ್ಟೆ ಸಮೀಪದ ಪನೀರ್ ನಿವಾಸಿ ಅಝರ್ ಮೃ*ತ ವ್ಯಕ್ತಿ ಎಂದು ತಿಳಿದು ಬಂದಿದೆ.
ಮೃ*ತ ವ್ಯಕ್ತಿ ಸ್ಕೂಟರ್ ನಲ್ಲಿ ಬರುತ್ತಿದ್ದಾಗ ಕೇರಳ ಕಡೆಗೆ ಹೋಗುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ. ಈ ಸಂದರ್ಭ ರಸ್ತೆಗೆ ಎಸೆಯಲ್ಪಟ್ಟ ಸವಾರನ ಮೇಲೆ ಲಾರಿ ಚಲಿಸಿದ ಪರಿಣಾಮ ಸ್ಥಳದಲ್ಲೇ ಸಾ*ವನ್ನಪ್ಪಿದ್ದಾನೆ. ಅಝರ್‌ನ ಮೃ*ತದೇಹವನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಮಂಗಳೂರು/ಚೆನ್ನೈ: ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ನಿರ್ಮಿಸಿರುವ ದೇಶದ ಮೊದಲ ಗಾಜಿನ ಸೇತುವೆ ಲೋಕಾರ್ಪಣೆಯಾಗಿದೆ.
ವಿವೇಕಾನಂದ ರಾಕ್ ಸ್ಮಾರಕ ಮತ್ತು ತಿರುವಳ್ಳುವರ್ ಪ್ರತಿಮೆಯನ್ನು ಸಂಪರ್ಕಿಸುವ 77ಮೀ. ಉದ್ದದ ಸೇತುವೆಯನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಉದ್ಟಾಟಿಸಿದರು. ಸುಮಾರು 37 ಕೋಟಿ ರೂ. ವೆಚ್ಚದಲ್ಲಿ ಈ ಗಾಜಿನ ಸೇತುವೆ ನಿರ್ಮಾಣವಾಗಿದ್ದು, ಪಾರದರ್ಶಕ ಗಾಜಿನ ಮೇಲ್ಮೈ ಹೊಂದಿದೆ. ತಿರುವಳ್ಳುವರ್ ಪ್ರತಿಮೆ ಅನಾವರಣದ ಬೆಳ್ಳಿ ಮಹೋತ್ಸವದಂದು ಸೇತುವೆ ಉದ್ಘಾಟನೆಯಾಗಿದೆ.
ಈ ಸೇತುವೆ 77 ಮೀ (252 ಅಡಿ) ಉದ್ದ ಮತ್ತು 10 ಮೀಟರ್ ಅಗಲವನ್ನು ಹೊಂದಿದ್ದು, ಇಬ್ಬರು ಮಹಾನ್ ವ್ಯಕ್ತಿಗಳ ಸ್ಮಾರಕವಾದ ವಿವೇಕಾನಂದ ರಾಕ್ ಸ್ಮಾರಕ ಮತ್ತು ತಿರುವಳ್ಳುವರ್ ಪ್ರತಿಮೆಗೆ ಸಂಪರ್ಕ ಸಾಧಿಸಲಿದ್ದು, ದೇಶದ ಮೊದಲ ಗಾಜಿನ ಸೇತುವೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇದನ್ನೂ ಓದಿ: ಹೊಸ ವರ್ಷದ ಮೊದಲ ದಿನವೇ ಗ್ರಾಹಕರಿಗೆ ಗುಡ್ ನ್ಯೂಸ್ !
ಇದುವರೆಗೆ ಈ ಎರಡು ಸ್ಮಾರಕಗಳಿಗೆ ಭೇಟಿ ನೀಡಲು ಸಮುದ್ರದ ಮೂಲಕವೇ ತೆರಳಬೇಕಿತ್ತು. ಆದರೆ ಗಾಜಿನ ಸೇತುವೆ ಪ್ರವಾಸಿಗರಿಗೆ ಎರಡೂ ಸ್ಮಾರಕ ತಲುಪಲು ಹೊಸ ಮಾರ್ಗ ಕಲ್ಪಿಸಿದೆ. ಜೊತೆಗೆ ಪ್ರವಾಸದ ಹೊಸ ಅನುಭೂತಿ ನೀಡಲಿದೆ.
LATEST NEWS
ಮಂಗಳೂರು: ಹೊಸ ವರ್ಷಾಚರಣೆ- ವಾಹನ ಸವಾರರಿಗೆ ಕೇಕ್ ವಿತರಿಸಿದ ಪೊಲೀಸ್ ಸಿಬ್ಬಂದಿ
ಹೊಸ ವರ್ಷಾಚರಣೆ ಹಿನ್ನೆಲೆ: ಧರ್ಮಸ್ಥಳದಲ್ಲಿ ಭಕ್ತ ಸಾಗರ
ಹೊಸ ವರ್ಷಕ್ಕೆ ರಾಜ್ಯದಲ್ಲಿ ಮದ್ಯದ ಹೊಳೆ : ನಿನ್ನೆ ಒಂದೇ ದಿನ ಭರ್ತಿ 308 ಕೋಟಿ ರೂ. ಮದ್ಯ ಸೇಲ್.!
ಸೇನಾ ವಾಹನ ದು*ರಂತ ಪ್ರಕರಣ; ಹುತಾತ್ಮ ಯೋಧ ದಿವಿನ್ ಅಂತ್ಯಕ್ರಿಯೆ
ಹೊಸ ವರ್ಷದ ಮೊದಲ ದಿನವೇ ಗ್ರಾಹಕರಿಗೆ ಗುಡ್ ನ್ಯೂಸ್ !
ಹೊಸ ವರ್ಷದ ಅಮಲಿನಲ್ಲಿ ಹಾಸ್ಟೆಲ್ ದಾರಿ ಕಾಣದೆ ಕಂಗಾಲಾದ ವಿದ್ಯಾರ್ಥಿಗಳು
Trending
- DAKSHINA KANNADA5 days ago
ದಿ।ಮನಮೋಹನ್ ಸಿಂಗ್ ಸಹಿ ಇರುವ ರೂ 1ರ ನೋಟು ರೂ.100 ಕ್ಕೆ ಮಾರಾಟ…!
- BIG BOSS4 days ago
ಎಂಟು ಮಂದಿ ನಾಮಿನೇಟ್; ಈ ವಾರ ಮನೆಯಿಂದ ಹೊರ ಬರೋದು ಇವರೇ ?
- DAKSHINA KANNADA4 days ago
‘ದಿ ಅಕ್ಸಿಡೆಂಟಲ್ PM’ ಸುಳ್ಳಿನ ಕಂತೆ..! ಕ್ಷಮಿಸಿ ಎಂದ ಚಿತ್ರ ನಿರ್ಮಾಪಕ..!
- BIG BOSS3 days ago
ಈ ವಾರ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆದ ಸ್ಪರ್ಧಿ ಇವರೇ ನೋಡಿ..!