Connect with us

LATEST NEWS

ಪ್ರಾಥಮಿಕ ಸಂಪರ್ಕ ಮುಚ್ಚಿಟ್ಟರೆ ಕ್ರಿಮಿನಲ್ ಪ್ರಕರಣ- ಉಡುಪಿ ಜಿಲ್ಲಾಧಿಕಾರಿ ವಾರ್ನಿಂಗ್

Published

on

ಉಡುಪಿ: ಪಾಸಿಟಿವ್ ಬಂದ ವ್ಯಕ್ತಿಗಳು ಸರಿಯಾದ ಮಾಹಿತಿ ನೀಡದಿದ್ದರೆ ಅಥವಾ ವಾಸ್ತವತೆ ಮುಚ್ಚಿಟ್ಟರೆ ಅವರ ವಿರುದ್ಧ ಕ್ರಿಮಿನಲ್ ಕೇಸ್ ಹಾಕಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಮತ್ತೊಮ್ಮೆ ವಾರ್ನಿಂಗ್ ಕೊಟ್ಟಿದ್ದಾರೆ.


ಈ ಸಂಬಂಧ ಜಿಲ್ಲೆಯ ಜನತೆಗೆ ಮನವಿ ಮಾಡಿರುವ ಜಿಲ್ಲಾಧಿಕಾರಿ ಜಿ.ಜಗದೀಶ್ , ಪಾಸಿಟಿವ್ ಬಂದವರಿಗೆ ಕಂಟ್ರೋಲ್ ರೂಂನಿಂದ ಫೋನ್ ಮಾಡುತ್ತೇವೆ. ಆ ಸಂದರ್ಭದಲ್ಲಿ ಕೆಲವರು ಸರಿಯಾಗಿ ಸ್ಪಂದಿಸದಿರುವುದು ಕಂಡುಬಂದಿದೆ. ಮಾಹಿತಿ ನೀಡದೇ ಇರುವುದು ಅಥವಾ ಆರೋಗ್ಯ ಕಾರ್ಯಕರ್ತರ ಜೊತೆ ಉಡಾಫೆ ವರ್ತನೆ ತೋರುತ್ತಾರೆ. ಈ ರೀತಿ ಮಾಡಿದರೆ ಕಾಯಿಲೆ ನಿಯಂತ್ರಣ ಕಷ್ಟವಾಗುತ್ತದೆ. ಹಾಗಾಗಿ ಜಿಲ್ಲಾಡಳಿತದ ಜೊತೆ ಸೂಕ್ತ ಮಾಹಿತಿ ನೀಡುವ ಮೂಲಕ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.


ಇನ್ನು ಪಾಸಿಟಿವ್ ಬಂದ ಕೆಲವು ವ್ಯಕ್ತಿಗಳು ಪ್ರೈಮರಿ ಸಂಪರ್ಕದ ಬಗ್ಗೆ ಸರಿಯಾದ, ಖಚಿತ ಮಾಹಿತಿ ನೀಡುತ್ತಿಲ್ಲ. ನಿಮಗೆ ಗೊತ್ತಿರಲಿ, ಪ್ರೈಮರಿ ಕಾಂಟಾಕ್ಟ್ ಇರುವ ಶೇ.50 ಜನರಿಗೆ ಪಾಸಿಟಿವ್ ಬರುತ್ತದೆ. ಆದರೆ ಮಾಹಿತಿ‌ ಮುಚ್ಚಿಟ್ಟರೆ ಅವರು ಇತರರಿಗೂ ಕಾಯಿಲೆ ಹರಡಿಸುತ್ತಾರೆ. ಹೀಗಾಗಿ ಮಾಹಿತಿ ನೀಡದವರ ಅಥವಾ ವಾಸ್ತವ ಅಂಶ ಮುಚ್ಚಿಡುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

KADABA

ನಿಯಂತ್ರಣ ತಪ್ಪಿ ಮೋರಿಗೆ ಗುದ್ದಿದ ಬೈಕ್: ಸವಾರ ಸಾವು

Published

on

ಕಡಬ : ಅತಿ ವೇಗದಿಂದ ಚಾಲನೆ ಮಾಡಿದ ಬೈಕ್ ಸವಾರನೊಬ್ಬ ನಿಯಂತ್ರಣ ತಪ್ಪಿ ಮೋರಿಗೆ ಗುದ್ದಿದ ಪರಿಣಾಮ ಬೈಕ್ ಸವಾರ ಕಲ್ಲುಗುಡ್ಡೆ ವಿಶ್ವನಾಥ ಎಂಬವರ ಏಕೈಕ ಪುತ್ರ ಆಶೀಶ್‌(16) ಎಂಬಾತ ಸಾವನ್ನಪ್ಪಿದ್ದಾನೆ.

 

ಕಡಬದ ಪೇರಡ್ಕ ಬಳಿ ಈ ದುರಂತ ನಡೆದಿದ್ದು, ಗಂಭೀರ ಗಾಯಗೊಂಡ ಆತನನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ. ಆಶೀಶ್‌ ಪೇರಡ್ಕ ಸಾಂತೋಮ್ ಶಾಲೆಯ 10ನೇ ತರಗತಿ ವಿದ್ಯಾರ್ಥಿಯಾಗಿದ್ದ.

ಈತ ಶಾಲೆಗೆ ಬರುವಾಗಲೂ ಬೈಕ್ ಹಿಡಿದುಕೊಂಡೇ ಬರುತ್ತಿದ್ದು, ಅದರಂತೆ ಇಂದು ಕೂಡಾ ಶಾಲೆಗೆ ಬರುವಾಗ ಕುಕ್ಕೆ ಸುಬ್ರಹ್ಮಣ್ಯ- ಧರ್ಮಸ್ಥಳ ರಾಜ್ಯ ಹೆದ್ದಾರಿಯಲ್ಲಿ ಬಂದಾಗ ನಿಯಂತ್ರಣ ತಪ್ಪಿದ ಬೈಕ್‌ ಮೋರಿಗೆ ಬಡಿದು ದುರಂತ ಸಂಭವಿಸಿದೆ.

ಇದನ್ನೂ ಓದಿ: ರಾಷ್ಟ್ರಿಯ ಹೆದ್ದಾರಿ 66ರ ಕಿನ್ನಿಮುಲ್ಕಿಯಲ್ಲಿ ಟ್ಯಾಂಕರ್ ವಾಹನ ಪಲ್ಟಿ

ಕಡಬದಲ್ಲಿ ಮಿತಿಮೀರಿದ ವಿದ್ಯಾರ್ಥಿಗಳ ಅತಿ ವೇಗದ ಬೈಕ್ ಸವಾರಿಯಿಂದ ನಿರಂತರ ದುರಂತಗಳಾಗುತ್ತಿವೆ. ವಿದ್ಯಾರ್ಥಿಗಳ ವಾಹನ ತಪಾಸಣೆ ಮಾಡದಿರುವ ಪೊಲೀಸರ ವಿರುದ್ಧ ಇಲ್ಲಿನ ಸಾರ್ವಜನಿಕರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Continue Reading

LATEST NEWS

ರಾಷ್ಟ್ರಿಯ ಹೆದ್ದಾರಿ 66ರ ಕಿನ್ನಿಮುಲ್ಕಿಯಲ್ಲಿ ಟ್ಯಾಂಕರ್ ವಾಹನ ಪಲ್ಟಿ

Published

on

ಉಡುಪಿ : ಗುಜರಾತ್ ನಿಂದ ಮಂಗಳೂರು ಕಡೆ ಹೋಗುತ್ತಿದ್ದ ಟ್ಯಾಂಕರ್ವೊಂದು ಉಡುಪಿ ಕಿನ್ನಿ ಮುಲ್ಕಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಪಲ್ಟಿಯಾಗಿದೆ.

ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಟ್ಯಾಂಕರ್‌ನಿಂದ ಚಾಲಕ ಪ್ರಾಣಾಪಾಯದಿಂದ ಪಾರು ಆಗಿದ್ದಾನೆ. ಉಡುಪಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಎಕ ಆಗಮಿಸಿ ವಾಹನ ತೆರವು ಕಾರ್ಯಾಚರಣೆ ನಡೆಸಿದರು.

ಇದನ್ನೂ ಓದಿ: ತಣ್ಣೀರುಬಾವಿ ಬೀಚ್‌: ನಾಳೆ, ನಾಡಿದ್ದು ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ

ವಾಹನ ಪಲ್ಟಿಯಾದ ಪರಿಣಾಮ ಸರ್ವಿಸ್ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಲಾಯಿತು.

Continue Reading

DAKSHINA KANNADA

ತಣ್ಣೀರುಬಾವಿ ಬೀಚ್‌: ನಾಳೆ, ನಾಡಿದ್ದು ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ

Published

on

ಮಂಗಳೂರು : ಟೀಮ್‌ ಮಂಗಳೂರು ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾಡಳಿತದ ಸಹಕಾರದೊಂದಿಗೆ ಜನವರಿ 18 ಮತ್ತು 19ರಂದು ತಣ್ಣೀರುಬಾವಿ ಬೀಚ್‌ನಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಆಯೋಜಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ ಈ ಗಾಳಿ ಪಟ ಉತ್ಸವದಲ್ಲಿ ಭಾಗವಹಿಸಲು ವಿದೇಶದ ಕೆಲವು ತಂಡಗಳು ಈಗಾಗಲೇ ಆಗಮಿಸಿದ್ದು, ಅಂತಿಮ ಹಂತದ ಸಿದ್ಧತೆಗಳು ನಡೆಯುತ್ತಿವೆ.

ಮಂಗಳೂರಿನಲ್ಲಿ ನಡೆಯುವ 8ನೇ ವರ್ಷದ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಇದಾಗಿದ್ದು ನೆದರ್‌ಲ್ಯಾಂಡ್‌, ಸ್ಲೋವೆನಿಯಾ, ಇಟಲಿ, ಇನ್ಪೊನಿಯ, ಸ್ವೀಡನ್‌, ಇಂಡೋನೇಶಿಯಾ, ಪೋರ್ಚುಗಲ್‌ ಮುಂತಾದ ದೇಶಗಳ ತಂಡಗಳು, ಒಡಿಸ್ಸಾ, ರಾಜಸ್ಥಾನ, ಮಹಾರಾಷ್ಟ್ರ, ತೆಲಂಗಾಣ, ಕೇರಳ, ಗುಜರಾತ್‌ ಮುಂತಾದ ರಾಜ್ಯ ಮಟ್ಟದ ತಂಡಗಳು ಭಾಗವಹಿಸಲಿವೆ ಎಂದು ತಿಳಿಸಿದರು.

ಇದನ್ನೂ ಓದಿ: ಕರಾವಳಿ ಉತ್ಸವ : ಸಂಗೀತ ರಸಮಂಜರಿ, ಮುಖ್ಯಮಂತ್ರಿ ಆಗಮನ

ನಾಳೆ ಸಂಜೆ 4 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಉಪಸ್ಥಿತಿಯಲ್ಲಿ ಈ ಉತ್ಸವಕ್ಕೆ ಚಾಲನೆ ಸಿಗಲಿದೆ. ಎರಡು ದಿನ ಅಪರಾಹ್ನ 3ರಿಂದ ರಾತ್ರಿ 9ರ ವರೆಗೆ ಉತ್ಸವ ನಡೆಯಲಿದೆ ಎಂದರು.

ಟೀಂ ಮಂಗಳೂರಿನ ಪ್ರಶಾಂತ್‌ ಉಪಾಧ್ಯಾಯ ಮಾತನಾಡಿ, ‘ಒಂದೇ ಆಕಾಶ, ಒಂದೇ ಭೂಮಿ, ಒಂದೇ ಕುಟುಂಬ’ ಎಂಬ ಧ್ಯೇಯ ವಾಕ್ಯದಲ್ಲಿ ಉತ್ಸವ ಜರಗಲಿದ್ದು, ದೇಶ-ದೇಶಗಳ ನಡುವಿನ ಸಂಸ್ಕೃತಿಯನ್ನು ಬೆಸೆಯುವ ಉದ್ದೇಶ ಹೊಂದಲಾಗಿದೆ. ಬಾನಿನಲ್ಲಿ ಜಿಗಿದಾಡುವ ಸ್ಟಂಟ್‌ ಗಾಳಿಪಟಗಳು, ಗಾಳಿ ತುಂಬಿ ಬಲೂನ್‌ ರೀತಿಯಲ್ಲಿ ಹಾರಾಡುವ ಬೃಹತ್‌ ಏರೋ ಫಾಯ್ಸ ಗಾಳಿಪಟಗಳು, ಏಕದಾರದಲ್ಲಿ ನೂರಾರು ಗಾಳಿಪಟಗಳು, ರೆಕ್ಕೆ ಬಿಚ್ಚಿ ಹಕ್ಕಿಯಂತೆ ಹಾರಾಡುವ ಗಾಳಿಪಟಗಳು ಈ ಉತ್ಸವದಲ್ಲಿ ಜನರಿಗೆ ಮನರಂಜನೆ ನೀಡಲಿವೆ.

ಮಹಾರಾಷ್ಟ್ರ ಗಾಳಿಪಟ ತಂಡದ ಪ್ರತಿನಿಧಿ ಅಶೋಕ್‌ ಶಾ, ಟೀಂ ಮಂಗಳೂರಿನ ಸರ್ವೇಶ್‌ ರಾವ್‌, ಪ್ರಾಣ್‌ ಹೆಗ್ಡೆ, ಗಿರಿಧರ್‌, ಯತೀಶ್‌ ಬೈಕಂಪಾಡಿ, ನಿತೇಶ್‌, ಗ್ರೀಸ್‌ ದೇಶದ ಪ್ರತಿನಿಧಿ ಕೋಸ್ತಾ, ಥಿಯೋ ಸುದ್ದಿಗೋಷ್ಠಿಯಲ್ಲಿ ಇದ್ದರು.

Continue Reading

LATEST NEWS

Trending

Exit mobile version