Connect with us

    LATEST NEWS

    ‘ಸುಗಂಧ ದ್ರವ್ಯ ಬ್ರಾಂಡ್’ ಪ್ರಾರಂಭಿಸಿದ ಕ್ರಿಕೆಟ್ ಅಂಪೈರ್ ‘ಧರ್ಮಸೇನಾ’, ಬಾಟಲಿ ವಿಶಿಷ್ಟ ವಿನ್ಯಾಸ ವೈರಲ್

    Published

    on

    ನವದೆಹಲಿ: ಅಂಪೈರಿಂಗ್ ಜ್ಞಾನ ಮತ್ತು ಜಾಣ್ಮೆಗೆ ಹೆಸರುವಾಸಿಯಾದ ಕುಮಾರ್ ಧರ್ಮಸೇನಾ ಪ್ರತಿಷ್ಠಿತ ಐಸಿಸಿ ಸಮಿತಿಯನ್ನ ಪ್ರತಿನಿಧಿಸುವ ಗೌರವಾನ್ವಿತ ಅಂಪೈರ್’ಗಳಲ್ಲಿ ಒಬ್ಬರು. ಶ್ರೀಲಂಕಾದ ಅಂಫೈರ್ ಈಗಾಗಲೇ ದೇಶಾದ್ಯಂತ ಮತ್ತು ಮಧ್ಯಪ್ರಾಚ್ಯ ದೇಶಗಳಲ್ಲಿ ಹರಡಿರುವ ತನ್ನ ಬ್ರಾಂಡ್ ಮಳಿಗೆಗಳೊಂದಿಗೆ ಪರಿಮಳ ವ್ಯವಹಾರದಲ್ಲಿದ್ದರು.

    ಸಧ್ಯ ಪ್ರೀಮಿಯಂ ಸುಗಂಧ ದ್ರವ್ಯ ಉದ್ಯಮವನ್ನ ಪ್ರವೇಶಿಸಿದ್ದು, ಉನಾಂಡುವಾ ಸುಗಂಧ ದ್ರವ್ಯಗಳನ್ನ ಪ್ರಾರಂಭಿದ್ದಾರೆ. ಸುಗಂಧ ದ್ರವ್ಯದ ಅತ್ಯಂತ ಗಮನಾರ್ಹ ವೈಶಿಷ್ಟ್ಯವೆಂದರೆ ಅದರ ಬಾಟಲಿ ವಿನ್ಯಾಸ, ಇದು ಕ್ರೀಡಾ ಕ್ರಿಕೆಟ್ ಅಂಪೈರ್’ನ್ನ ಹೋಲುತ್ತದೆ.

    LATEST NEWS

    ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ

    Published

    on

    ದೆಹಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಆಧ್ಯಾತ್ಮಿಕ ಗುರು ಸದ್ಗುರು ಜಗ್ಗಿ ವಾಸುದೇವನ್ ಅವರ ಇಶಾ ಫೌಂಡೇಶನ್ ವಿರುದ್ಧದ ಎಲ್ಲಾ ಪ್ರಕರಣಗಳನ್ನು ಸುಪ್ರೀಂಕೋರ್ಟ್ ಇಂದು ವಜಾಗೊಳಿಸಿದೆ.

    ಆಶ್ರಮವನ್ನು ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಸದ್ಗುರು ಜಗ್ಗಿ ವಾಸುದೇವನ್ ಅವರು ‘ಬ್ರೈನ್ ವಾಶ್’ ಮಾಡಲಾಗಿದ್ದಾರೆ ಎಂದು ವ್ಯಕ್ತಿಯೊಬ್ಬರು ಇಶಾ ಫೌಂಡೇಶನ್ ವಿರುದ್ಧ ಆರೋಪಿಸಿದ್ದರು. ಇದೀಗ ಈ ಪ್ಕರಣದ ತೀರ್ಪು ನೀಡಿದ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠವು, ಗೀತಾ ಮತ್ತು ಲತಾ ಇಬ್ಬರೂ ವಯಸ್ಕರಾಗಿದ್ದು, ಅವರ ಸ್ವಂತ ಇಚ್ಛೆಯ ಆಶ್ರಮದಲ್ಲಿ ವಾಸಿಸುತ್ತಿರುವ ಕಾರಣ ಕಾನೂನುಬಾಹಿರ ಬಂಧನದ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದು ತಿಳಿಸಿದೆ.

    ಆದಾಗ್ಯೂ, ಆದೇಶವು ಈ ಪ್ರಕರಣಕ್ಕೆ ಮಾತ್ರ. ಆಶ್ರಮದಲ್ಲಿ ವೈದ್ಯರೊಬ್ಬರ ಮೇಲೆ ಇತ್ತೀಚೆಗೆ ಮಕ್ಕಳ ಮೇಲಿನ ದೌರ್ಜನ್ಯದ ಆರೋಪವಿದೆ ಎಂದು ನ್ಯಾಯಾಲಯ ಹೇಳಿದೆ. ಬ್ರೈನ್ ವಾಶ್ ವಿಷಯದಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿಯ ತನಿಖೆಗೆ ಆದೇಶಿಸಿದ ಮದ್ರಾಸ್ ಹೈಕೋರ್ಟ್, ಆಶ್ರಮದ ಮೇಲೆ ದಾಳಿ ನಡೆಸಿದ ನಂತರ, ‘ಸಂಪೂರ್ಣವಾಗಿ ಅನುಚಿತ’ ರೀತಿಯಲ್ಲಿ ವರ್ತಿಸಿದೆ ಎದು ತಿಳಿಸಿದೆ.

    ಆಶ್ರಮಕ್ಕೆ ಸೇರಿದಾಗ ಅವರಿಬ್ಬರಿಗೂ 27 ಮತ್ತು 24 ವರ್ಷ. ಹೆಣ್ಣುಮಕ್ಕಳಿಬ್ಬರೂ ಅಪ್ರಾಪ್ತ ವಯಸ್ಸಿನವರಾಗಿರಲಿಲ್ಲ. ಅವರು ಹೈಕೋರ್ಟಿಗೆ ಹಾಜರಾಗುವ ಮೂಲಕ ಹೇಬಿಯಸ್ ಕಾರ್ಪಸ್ ಅರ್ಜಿಯ ಉದ್ದೇಶವನ್ನು ಪೂರೈಸಲಾಗಿದೆ. ಮುಂದೆ ಯಾವುದೇ ನಿರ್ದೇಶನಗಳ ಅಗತ್ಯವಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ.

    Continue Reading

    BIG BOSS

    BBK11: ಓಪನ್ ಆಗಿದೆ ಬಿಗ್​ಬಾಸ್ ಮನೆಯ ಮುಖ್ಯದ್ವಾರ; ಕ್ಲೈಮ್ಯಾಕ್ಸ್​ನಲ್ಲಿ ಇದೆಯಾ ರೋಚಕ ಟ್ವಿಸ್ಟ್..!

    Published

    on

    ಬಿಗ್​ ಬಾಸ್​… ಆರಂಭದಲ್ಲೇ ರಣಾಂಗಣವಾಗಿ ಬದಲಾಗಿರೋ ಬಿಗ್ ಮನೆ ಅತಿರೇಕದ ಕದನಕ್ಕೂ ಸಾಕ್ಷಿಯಾಗಿದೆ. ಇದುವರೆಗೂ ಚರ್ಚೆಯಾಗುತ್ತಿದ್ದ ರೀತಿಯೇ ರಂಜಿತ್ ಹಾಗೂ ಲಾಯರ್ ಜಗದೀಶ್​ಗೆ ಕಿರುತೆರೆಯ ದೊಡ್ಮನೆಯಿಂದ ಗೇಟ್ ಪಾಸ್ ಸಿಕ್ಕಿದೆ. ಹೊರಹೋಗಲು ಡೋರ್ ಓಪನ್ ಆಗಿದೆ.

    ಬಿಗ್‌ಬಾಸ್ ಅಂದ್ರೆ.. ಟಾಸ್ಕ್‌, ಎಲಿಮಿನೇಟ್, ಸೇವ್, ಜಗಳ ಎಲ್ಲ ಮಿಕ್ಸ್​ ಮಸಾಲ ಇದ್ದೇ ಇರುತ್ತೆ. ಆದ್ರೆ, ಈ ಸಲದ ಬಿಗ್‌ಬಾಸ್‌ ಸೀಸನ್ ನೋಡಿದ್ರೆ ಜನಕ್ಕೆ ಇದೇನಪ್ಪ ಬರೀ ಜಗಳ ಅನಿಸುವಂತೆ ಆಗ್ಬಿಟ್ಟಿದೆ. ಆರಂಭದಿಂದ ಬಿಗ್ ಮನೆಯಲ್ಲಿ ಬರೀ ಜಗಳದ್ದೇ ಸದ್ದು. ಅದರ ಸೆಂಟರ್ ಆಫ್ ಅಟ್ರ್ಯಾಕ್ಷನ್ ಅಭಿಮಾನಿಗಳ ಪಾಲಿನ ಕಿಂಗ್ ಜಗದೀಶ್.

    ಆದ್ರೀಗ ಇದೇ ಜಗದೀಶ್, ಜಗಳದ ಜಟಾಪಟಿಯಿಂದ ಬಿಗ್ ಬಾಸ್​ ಮನೆಯಿಂದ ಹೊರಹೋಗೋ ಪರಿಸ್ಥಿತಿ ಬಂದಿದೆ. ಎಪಿಸೋಡ್‌ನಲ್ಲಿ ಬಿಗ್‌ಬಾಸ್‌ ಕಂಟೆಸ್ಟ್‌ಗಳಿಗೆ ಒಂದು ಟಾಸ್ಕ್‌ ಕೊಟ್ಟಿರುತ್ತೆ. ಟಾಸ್ಕ್‌ನಲ್ಲಿ ಗೆದ್ದೋರಿಗೆ ಇಬ್ಬರನ್ನ ಸೇವ್‌ ಮತ್ತು ನಾಮಿನೇಟ್‌ ಮಾಡೋ ಅವಕಾಶ ಇರುತ್ತೆ. ಆದರೆ ನಾಮಿನೇಟ್​ ವೇಳೆ ಜಗಳ ಆಗಿದ್ದೆ ಜಗಳ ಆಗೋಕೆ ಕಾರಣ ಆಗಿದೆ.

    ಈ ವಾರದ ನಾಮಿನೇಟ್‌ ಯಾರು?

    ಆಟ ಆದ ಮೇಲೆ.. ನೇರವಾಗಿ ನಾಮಿನೇಟ್‌ ಆಗಿದ್ದ ಅನುಷಾ.. ಐಶ್ವರ್ಯ, ಮಾನಸ, ಜಗದೀಶ್, ಗೋಲ್ಡ್‌ ಸುರೇಶ್, ಮೋಕ್ಷಿತಾ, ಧನರಾಜ್‌ ಹಾಗೂ ಉಗ್ರಂ ಮಂಜು ಈ ವಾರದ ನಾಮಿನೇಟ್‌ ಅಂತಾ ಬಿಗ್‌ಬಾಸ್ ಅಂತಿಮ ಪಟ್ಟಿಯನ್ನ ಡಿಸ್‌ಪ್ಲೇ ಮಾಡಿದೆ ಅಷ್ಟೇ.. ಅಷ್ಟೋತ್ತು ಆಟ ಆಡಿದವ್ರು ಈಗ ಗುಂಪು ಗುಂಪಾಗಿ ಸಮಜಾಯಿಷಿ ಕೋಡೋಕೆ ಶುರು ಮಾಡಿದರು.

    ಇಷ್ಟೇ ಆಗಿದ್ರೆ ಬಿಗ್‌ಬಾಸ್ ಮನೆ ರಣರಂಗ ಆಗುತ್ತಿರಲಿಲ್ಲ. ಆದ್ರೆ ಈ ಗ್ಯಾಪಲ್ಲಿ ಮಹಿಳಾ ಸ್ಪರ್ಧಿಯೊಬ್ಬರ ಬಗ್ಗೆ ಜಗದೀಶ್ ಹೇಳಿದ ಅದೊಂದು ಮಾತು ದೊಡ್ಡ ರಾದ್ದಾಂತ ಸೃಷ್ಟಿಸಿಬಿಟ್ಟಿತು. ಜಗದೀಶ್ ಆ ವರ್ಡ್‌ ಯೂಸ್‌ ಮಾಡ್ತಿದ್ದಂತೆ ಬಿಗ್‌ಬಾಸ್ ಮಹಿಳಾ ಮಣಿಗಳು ಲಾಯರ್‌ಗೆ ಪ್ರಶ್ನೆ ಮಾಡೋಕೆ ಶುರು ಮಾಡಿದರು.

    ಜಗದೀಶ್​​ ತಪ್ಪಾಗಿ ಮಾತನಾಡಿದ್ರಾ..?

    ಮಾಸನ ಹಾಗೂ ಜಗದೀಶ್ ಮಾತಿನ ಚಕಮಕಿ ವೇಳೇ ರಂಜಿತ್‌ ಬಂದು ಜಗದೀಶ್​​ರನ್ನ ತಳ್ಳಿದ್ದಾರೆ. ಅತ್ತ ಮಹಿಳೆಯರ ಬಗ್ಗೆ ಜಗದೀಶ್​​ ತಪ್ಪಾಗಿ ಮಾತಾಡಿದ್ದಾರೆ. ಹೀಗಾಗಿ ಈ ಇಬ್ಬರನ್ನ ಮನೆಯಿಂದ ಹೊರಬರಲು ಬಿಗ್‌ಬಾಸ್‌ ಸೂಚಿಸಿದ್ದು, ಮನೆಯ ಮುಖ್ಯದ್ವಾರ ಓಪನ್ ಆಗಿದೆ. ಡೋರ್ ಏನೋ ಓಪನ್ ಆಗಿದೆ. ಆದ್ರೆ, ಯಾರೂ ಹೊರಗೆ ಹೋಗಿರುವುದು ಎನ್ನುವುದು ತೋರಿಸಿಲ್ಲ. ಹೀಗಾಗಿ ಕ್ಲೈಮ್ಯಾಕ್ಸ್ ಇವತ್ತಿನ ಸಂಚಿಕೆಯಲ್ಲಿ ಕಾಣಸಿಗಲಿದೆ.

    Continue Reading

    DAKSHINA KANNADA

    SHOCKING NEWS – ಉಳ್ಳಾಲ: ತಿಂಗಳ ಹಿಂದಷ್ಟೇ ಖರೀದಿಸಿದ್ದ ಟಿವಿಎಸ್‌ ಸ್ಕೂಟಿ ಬೆಂಕಿಗಾಹುತಿ

    Published

    on

    ಉಳ್ಳಾಲ: ಟಿವಿಎಸ್‌ ಕಂಪನಿಯ ಎಂಟಾರ್ಕ್‌ ಸ್ಕೂಟರ್‌ ತನ್ನಷ್ಟಕ್ಕೆ ಉರಿದು ಸುಟ್ಟ ಆಶ್ಚರ್ಯಕರ ಘಡನೆ ಉಳ್ಳಾಲದಲ್ಲಿ ನಡೆದಿದೆ.

    ಕುಂಪಲ ವಿದ್ಯಾನಗರ ನಿವಾಸಿ ಐಟಿಐ ಕಲಿಯುತ್ತಿರುವ ರಾಕೇಶ್‌ ಎಂಬ ವಿದ್ಯಾರ್ಥಿ ತಿಂಗಳ ಹಿಂದೆ ಖರೀದಿ ಮಾಡಿದ್ದನು. ಆ ಸ್ಕೂಟರ್ ತನ್ನಷ್ಟಕ್ಕೆ ತಾನೇ ಬೆಂಕಿಗಾಹುತಿ ಆದದಲ್ಲದೆ, ಮನೆಯ ಗೋಡೆ, ಕಿಟಕಿಗಳ ಗಾಜುಗಳು, ಒಣಗಲು ಹಾಕಲಾದ ಬಟ್ಟೆಗಳು ಸುಟ್ಟು ಕರಕಲಾಗಿದೆ.

    ಘಟನೆ ನಡೆದಾಗ ಕೂಡಲೇ ಮನೆ ಮಂದಿ ಎಚ್ಚೆತ್ತು ಬೆಂಕಿಯನ್ನು ನಂದಿಸಿ, ಮನೆಗೆ ವ್ಯಾಪಿಸಲಿದ್ದ ಬೆಂಕಿಯನ್ನು ನಂದಿಸಿ, ಹೆಚ್ಚಾಗುವ ಅನಾಹುತವನ್ನು ತಡೆದಿದ್ದಾರೆ.

    ರಾಕೇಶ್‌ ಓದಿನ ಜೊತೆ ಪಾರ್ಟ್‌ ಟೈಂ ಕೆಲಸ ಮಾಡಿ ತೊಕ್ಕೊಟ್ಟಿನ “ಸೋನಾ ಟಿವಿಎಸ್‌” ಶೋರೂಂನಲ್ಲಿ ಸ್ಕೂಟರ್‌ ಖರೀದಿ ಮಾಡಿದ್ದರು.

    ಎರಡು ದಿನಗಳ ಹಿಂದೆ ಮೊದಲ ಇಎಮ್‌ಐ ಕಂತು ಕಟ್ಟಿದ್ದು. ಸ್ಕೂಟರಿನ ಬ್ಯಾಟರಿ ಸಿಡಿದು ಬೆಂಕಿ ಹತ್ತಿರುವುದಾಗಿ ಶಂಕೆ ವ್ಯಕ್ತಪಡಿಸಲಾಗಿದೆ. ಈ ಕುರಿತು ರಾಕೇಶ್‌ ಉಳ್ಳಾಲ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

    Continue Reading

    LATEST NEWS

    Trending