Monday, October 18, 2021

ಖಾಲಿ ನಿವೇಶನಗಳಿಗೆ ನಕಲಿ ದಾಖಲೆ ಸೃಷ್ಟಿಸಿ ಲಕ್ಷಾಂತರ ರೂ. ವಂಚನೆ : ಐವರು ಆರೋಪಿಗಳು ಅರೆಸ್ಟ್..!

ಖಾಲಿ ನಿವೇಶನಗಳಿಗೆ ನಕಲಿ ದಾಖಲೆ ಸೃಷ್ಟಿಸಿ ಲಕ್ಷಾಂತರ ರೂ. ವಂಚನೆ : ಐವರು ಆರೋಪಿಗಳು ಅರೆಸ್ಟ್..!

Create duplicate records for vacant premises and Fraud 69 lacs – Five accused Arrest ..

ಬೆಂಗಳೂರು :  ಖಾಲಿ ನಿವೇಶನಗಳಿಗೆ ನಕಲಿ ದಾಖಲೆ ಸೃಷ್ಟಿಸಿ, ನಕಲಿ ಮಾಲೀಕರಿಂದ ಕ್ರಯ ಪತ್ರ ಮಾಡಿಸಿಕೊಂಡು ಅಸಲಿ ಮಾಲೀಕರ ಸೋಗಿನಲ್ಲಿ ಬೇರೆಯವರಿಗೆ ಮಾರಾಟ ಮಾಡಿ ಲಕ್ಷಾಂತರ ರೂಪಾಯಿ ವಂಚಿಸಿದ್ದ 5 ಜನ ಆರೋಪಿಗಳನ್ನು ಬೆಂಗಳೂರಿನ ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ.

ನಗರದ ನಿವಾಸಿಗಳಾದ ಕೀರ್ತನಾ, ಈಕೆಯ ಗಂಡ ಶೇಖರ್, ಸಹಚರರಾದ ಪವನ್ ಕುಮಾರ್, ಉಮಾ ಮಹೇಶ್ ರಾವ್, ಜಯಪ್ರಕಾಶ್ ಎಂಬುವರನ್ನು ಬಂಧಿಸಿ 16.83 ಲಕ್ಷ ರೂ. ಮೌಲ್ಯದ 362 ಗ್ರಾಂ ಚಿನ್ನ, ಎರಡು ಕಾರು ಹಾಗೂ ಒಂದು ಬೈಕ್ ವಶಕ್ಕೆ ಪಡೆದುಕೊಂಡಿದ್ದಾರೆ.

ಕೃತ್ಯದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಮತ್ತೋರ್ವ ಆರೋಪಿ ಪ್ರಜ್ವಲ್ ರಾಮಯ್ಯ ಪತ್ತೆಗಾಗಿ ಶೋಧ ಮುಂದುವರೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ‌.

ಆರೋಪಿಗಳ‌ ಪೈಕಿ ಕೀರ್ತನಾ ರಿಯಲ್ ಎಸ್ಟೇಟ್​ನಲ್ಲಿ ತೊಡಗಿಸಿಕೊಂಡಿದ್ದು, ಈಕೆಯ ಗಂಡ ಶೇಖರ್ ಖಾಸಗಿ ಕಂಪನಿಯಲ್ಲಿ ಕೆಲಸ‌ ಮಾಡುತ್ತಿದ್ದಾನೆ.

ತಲೆಮರೆಸಿಕೊಂಡಿರುವ ಪ್ರಜ್ವಲ್ ಜೊತೆ ಸೇರಿಕೊಂಡು ಗೊಟ್ಟಿಗೆರೆಯ ಭಾಗ್ಯನಗರದ 8ನೇ ಕ್ರಾಸ್​​ನಲ್ಲಿರುವ ಸರ್ವೇ ನಂಬರ್ 282 ಸೈಟ್ ಮಾರಾಟಕ್ಕೆ ಇರುವುದಾಗಿ ಬಿಂಬಿಸಿಕೊಂಡಿದ್ದರು.

ನಿವೇಶನದ ಅಸಲಿ ಮಾಲೀಕ ಮೈಕಲ್ ಡಿಸೋಜಾ ದುಬೈನಲ್ಲಿರುವುದನ್ನು ಅರಿತಿದ್ದ ವಂಚಕರು ಈತನ ಹಸರಿನಲ್ಲೇ ನಕಲಿ ದಾಖಲಾತಿ ಸೃಷ್ಟಿಸಿಕೊಂಡಿದ್ದರು.

ನಿವೇಶನ ಖರೀದಿಸಲು ಚಕ್ರವರ್ತಿ ನಡುಪಾಂಡು ಎಂಬುವರು ಮುಂದಾಗಿದ್ದರು.

ಈತನ ಪತ್ನಿ ರುತಿರಾದೇವಿ ಚಕ್ರವರ್ತಿ ಹೆಸರಿನಲ್ಲಿ‌ ಸೈಟ್ ಖರೀದಿಸಲು ಮುಂದಾಗಿದ್ದರು.

‌ ವಂಚಕರೊಂದಿಗೆ 1 ಕೋಟಿ ರೂಪಾಯಿ ಖರೀದಿಯ ಮಾತುಕತೆಯಾಗಿತ್ತು. ಆರೋಪಿಗಳ ಸಹಕಾರದಿಂದಲೇ ಸಹಕಾರನಗರದ ಐಸಿಐಸಿಐ ಬ್ಯಾಂಕ್​​ನಲ್ಲಿ 69 ಲಕ್ಷ ಸಾಲ ಪಡೆದುಕೊಂಡಿದ್ದರು.

ಆರೋಪಿಗಳ‌ ಸೂಚನೆಯಂತೆ ಬ್ಯಾಂಕ್​​ನಿಂದ ಮಂಜೂರಾಗಿದ್ದ ಹಣವನ್ನು ಡಿಮಾಂಡ್ ಡ್ರಾಪ್ಟ್ (ಡಿಡಿ) ಮಾಡಿಸಿಕೊಂಡು ಬೊಮ್ಮನಹಳ್ಳಿಯ ಉಪನೋಂದಣಿ ಅಧಿಕಾರಿ ಕಚೇರಿಗೆ ಬಂದಿದ್ದರು.

ಇತ್ತ ಆರೋಪಿಗಳು ನಿರುದ್ಯೋಗಿಯಾಗಿದ್ದ ಜೇರ್ವಗಿಸ್ ಮ್ಯಾಥ್ಯೂ ಎಂಬುವರನ್ನು ಕೆಲಸ ಕೊಡಿಸುವ ಸೋಗಿನಲ್ಲಿ ನೋಂದಣಿ ಕಚೇರಿಗೆ ಕರೆತಂದು ಸೈಟ್ ಮಾಲೀಕ ಮೈಕಲ್ ಡಿಸೋಜಾ ಎಂದು ಬಿಂಬಿಸುವಂತೆ ಮಾಡಿದ್ದರು.

ಬಳಿಕ ಆರೋಪಿಗಳ ಪೈಕಿ ಪವನ್ ಕುಮಾರ್ ಎಂಬಾತ ಮಲ್ಲೇಶ್ವರಂ ಬಂಧನ್ ಬ್ಯಾಂಕ್​​ನಲ್ಲಿ ಮೈಕಲ್ ಡಿಸೋಜಾ ಹೆಸರಿನಲ್ಲಿ ನಕಲಿ ಹೆಸರಿನಲ್ಲಿ ಖಾತೆ ತೆರೆದು ಹಣ ಜಮಾವಣೆ ಮಾಡಿಕೊಂಡಿದ್ದ. ಬಂದ ಹಣವನ್ನು ಆರೋಪಿಗಳು ಸಮನಾಗಿ ಹಂಚಿಕೊಂಡಿದ್ದರು ಎಂದು‌ ಪೊಲೀಸರು ತಿಳಿಸಿದ್ದಾರೆ.

 

Hot Topics

ಸಾಲದ ಹೊರೆ ತಾಳಲಾರದೆ ವೀಡಿಯೋ ಮೂಲಕ ಗುಡ್​ಬೈ ಹೇಳಿ ಶಿಕ್ಷಕ ದಂಪತಿ ಆತ್ಮಹತ್ಯೆ

ವಿಜಯವಾಡ: ಶಾಲೆ ನಡೆಸುತ್ತಿದ್ದ ಶಿಕ್ಷಕ ದಂಪತಿ ಸಾಲದ ಹೊರೆ ತಡೆಯಲಾರದೇ ವಿಷಸೇವಿಸಿ ಆತ್ಮಹತ್ಯೆ ಹಾದಿ ಹಿಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯಲ್ಲಿ ನಡೆದಿದೆ. ಸಾವಿಗೂ ಮುನ್ನ ಶಿಕ್ಷಕ ದಂಪತಿ ತಮ್ಮ...

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...