ಮಂಗಳೂರಲ್ಲಿ ಪ್ಲಾಸ್ಟಿಕ್ ಪಾರ್ಕ್ ಸ್ಥಾಪನೆಗೆ ಹರ್ಷ : ಸಂಸದ ಕಟೀಲರನ್ನು ಅಭಿನಂದಿಸಿದ CPMTA..!
CPMTA Facilitate MP Nalin kumar kateel for Plastic park ..
ಮಂಗಳೂರು : ಮಂಗಳೂರಿನಲ್ಲಿ ಬಹು ನಿರೀಕ್ಷಿತ ಪ್ಲಾಸ್ಟಿಕ್ ಪಾರ್ಕನ್ನು ನಿರ್ಮಾಣ ಮಾಡಲು ಮುಂದಾದ ಕೇಂದ್ರ ಸರ್ಕಾರವನ್ನು ಕೆನರಾ ಪ್ಲಾಸ್ಟಿಕ್ ತಯಾರಕರು ಮತ್ತು ವರ್ತಕರ ಸಂಘ ಅಭಿನಂದಿಸಿದೆ.
ಈ ಹಿನ್ನೆಲೆಯಲ್ಲಿ ಕೆನರಾ ಪ್ಲಾಸ್ಟಿಕ್ ತಯಾರಕರು ಮತ್ತು ವರ್ತಕರ ಸಂಘದ( CPMTA) ವತಿಯಿಂದ ಮಾನ್ಯ ಮಂಗಳೂರು ಲೋಕಸಭಾ ಸದಸ್ಯರಾದ ನಳಿನ್ ಕುಮಾರ್ ಕಟೀಲ್ ಅವರನ್ನು ಭೇಟಿ ಮಾಡಿ ಮಂಗಳೂರು ಪ್ಲಾಸ್ಟಿಕ್ ಪಾರ್ಕ್ ಸ್ಥಾಪನೆಗೆ ಕೇಂದ್ರ ಸರಕಾರದಿಂದ ಅನುಮತಿ ದೊರಕಿಸಿ ಕೊಟ್ಟಿದ್ದ ಕ್ಕಾಗಿ ಕೃತಜ್ಞತೆ ಸಲ್ಲಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಬಿ ಎ ನಜೀರ್ ಉಪಾಧ್ಯಕ್ಷ ಆಸ್ಕರ್ ಆಲಿ, ಪ್ರ. ಕಾರ್ಯದರ್ಶಿ ಬಿ ಎ ಇಕ್ಬಾಲ್, ಕಾರ್ಯದರ್ಶಿ ಸುರೇಶ್ ಕರ್ಕೇರ, ರೋಷನ್ ಬಾಳಿಗ, ಹರೀಶ್ ಬಿ. ಕರ್ಕೇರ, ಅಝೀಝ್ ಕೃಷ್ಣಾಪುರ ಉಪಸ್ಥಿತರಿದ್ದರು.