Home ಪ್ರಮುಖ ಸುದ್ದಿ ಕೊರೊನಾ ವೈರಸ್ ತಡೆಗಟ್ಟುವಲ್ಲಿ ಕೇಂದ್ರ ಸರಕಾರದ ಸಂಪೂರ್ಣ ವೈಫಲ್ಯ ಖಂಡಿಸಿ ಸಿ.ಪಿ.ಐ.ಎಂ ಪ್ರತಿಭಟನೆ..

ಕೊರೊನಾ ವೈರಸ್ ತಡೆಗಟ್ಟುವಲ್ಲಿ ಕೇಂದ್ರ ಸರಕಾರದ ಸಂಪೂರ್ಣ ವೈಫಲ್ಯ ಖಂಡಿಸಿ ಸಿ.ಪಿ.ಐ.ಎಂ ಪ್ರತಿಭಟನೆ..

ಕೊರೊನಾ ವೈರಸ್ ತಡೆಗಟ್ಟುವಲ್ಲಿ ಕೇಂದ್ರ ಸರಕಾರದ ಸಂಪೂರ್ಣ ವೈಫಲ್ಯ ಖಂಡಿಸಿ ಸಿ.ಪಿ.ಐ.ಎಂ ಪ್ರತಿಭಟನೆ..

ಮಂಗಳೂರು: ವಿಜ್ಞಾನ, ವೈದ್ಯಕೀಯ ಕ್ಷೇತ್ರಗಳು ಮೊದಲ ಆದ್ಯತೆಯಾದಾಗ ಮಾತ್ರವೇ ದೇಶದ ಅಭಿವ್ರದ್ದಿ ಸಾಧ್ಯ.

ಆದರೆ ನಮ್ಮ ದೇಶವು ಜಾಗತೀಕರಣದ ಕರಿ ನೆರಳಿನಲ್ಲಿ ಒದ್ದಾಡುತ್ತಿದ್ದು, ಆಳುವ ಕೇಂದ್ರ ಸರಕಾರವು ಇವೆರಡನ್ನೂ ತೀರಾ ನಿರ್ಲಕ್ಷಿಸಿದ್ದರ ಫಲವಾಗಿ ಕೊರೊನಾ ವೈರಸ್ಸನ್ನು ಹತ್ತಿಕ್ಕುವಲ್ಲಿ ಸಂಪೂರ್ಣ ವೈಫಲ್ಯವನ್ನು ಕಂಡಿದೆ.

ಜನರ ಜೀವವನ್ನು ರಕ್ಷಿಸಬೇಕಾದ ಸರಕಾರವು ಜನರಲ್ಲಿ ಮೌಢ್ಯತೆಯನ್ನು ತುಂಬಿ ಅಪಪ್ರಚಾರ ನಡೆಸಿ, ಇಂತಹ ಸಂಕಷ್ಟದ ಕಾಲದಲ್ಲೂ ಕೋಮುವಿಷ ಬೀಜವನ್ನು ಬಿತ್ತುವ ನೀಚ ಕಾರ್ಯಕ್ಕೆ ಮುಂದಾಗಿದೆ.

ಮತ್ತೊಂದು ಕಡೆ ಆರೋಗ್ಯ ಕ್ಷೇತ್ರವು ತೀವ್ರವಾಗಿ ಖಾಸಗೀಕರಣಗೊಂಡಿರುವುದರಿಂದ ಹಾಗೂ ಸರಕಾರಿ ಆಸ್ಪತ್ರೆಗಳು ಮೂಲಭೂತ ಸೌಕರ್ಯಗಳ ಕೊರತೆಯಿಂದ,

ಅನಿವಾರ್ಯವಾಗಿ ಘೋಷಣೆ ಮಾಡಿದ ಲಾಕ್ ಡೌನ್ ನಿಂದಾಗಿ ದೇಶದ ಕೋಟ್ಯಾಂತರ ಜನತೆಯ ಬದುಕು ತೀರಾ ಶೋಚನೀಯವಾಗಿದೆ ಎಂದು DYFI ಮಂಗಳೂರು ನಗರಾಧ್ಯಕ್ಷರಾದ ನವೀನ್ ಕೊಂಚಾಡಿಯವರು ಅಭಿಪ್ರಾಯಪಟ್ಟರು.

ಅವರು CPIM ನೇತೃತ್ವದಲ್ಲಿ ನಗರದಲ್ಲಿ ಇಂದು (ಜೂನ್ 29) ಸ್ಟೇಟ್ ಬ್ಯಾಂಕ್ ಹಾಗೂ ಲೇಡಿಗೋಷನ್ ಬಳಿಯಲ್ಲಿ ಬಿತ್ತಿಚಿತ್ರ ಪ್ರದರ್ಶನ ಹಾಗೂ ಪ್ರತಿಭಟನೆಯಲ್ಲಿ ಭಾಗವಹಿಸಿ, ಮಾತನಾಡಿದರು.

ಕೊರೊನಾ ವೈರಸ್ ತಡೆಗಟ್ಟುವಲ್ಲಿ ಕೇಂದ್ರ ಸರಕಾರದ ಸಂಪೂರ್ಣ ವೈಫಲ್ಯವನ್ನು ಖಂಡಿಸಿ,CPIM ದ.ಕ‌.ಜಿಲ್ಲೆಯಾದ್ಯಂತ ಹಮ್ಮಿಕೊಂಡ ವಾರಾಚರಣೆಯ ಭಾಗವಾಗಿ ಈ ಪ್ರತಿಭಟನೆಯನ್ನು ಆಯೋಜಿಸಲಾಗಿತ್ತು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ CPIM ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಅಂದು ನರೇಂದ್ರ ಮೋದಿ ಸರಕಾರವು ಅಧಿಕಾರಕ್ಕೇರುವಲ್ಲಿ ಪ್ರಾರಂಭಿಸಿದ ಹಸಿಹಸಿ ಸುಳ್ಳಿನ ವರಸೆ ಇಂದಿಗೂ ಕೊನೆಗೊಂಡಿಲ್ಲ.

ಜನರ ಭಾವನೆಗಳನ್ನು ಕೆರಳಿಸಿ, ವಾಸ್ತವ ಬದುಕನ್ನು ಮರೆಮಾಚಿ ಸುಳ್ಳಿನ ಸಾಮ್ರಾಜ್ಯವನ್ನು ಕಟ್ಟುವಲ್ಲಿ ನಿಸ್ಸೀಮರಾದ ಬಿಜೆಪಿಗರು, ಕಪ್ಪು ಹಣ ತರುವುದಾಗಿ, ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ 15 ಲಕ್ಷ ಹಾಕುವುದಾಗಿ ಹೇಳಿದ್ದರು.

ಇಂದು 20 ಲಕ್ಷ ಕೋಟಿ ರೂ.ಪರಿಹಾರ ಘೋಷಣೆ ಮಾಡಿರುವುದು ಸಂಪೂರ್ಣ ಬೊಗಳೆಯಾಗಿದೆ. ಯಾವುದೇ ವಿಭಾಗದ ಕಾರ್ಮಿಕರಿಗೂ ಪರಿಹಾರ ಘೋಷಣೆ ಮಾಡಿಲ್ಲ.

ಲಾಕ್ ಡೌನ್ ನಿಂದಾಗಿ ಹೋಟೆಲ್ ಉದ್ಯಮ, ಟೂರಿಸಂ, ಶಾಲಾ ಕಾಲೇಜ್ ಪ್ರಾರಂಭವಾಗುವುದು ಇನ್ನೂ ಅನಿಶ್ಚಿತತೆಯಲ್ಲಿದ್ದು,

ಅಲ್ಲಿನ ಹೋಟೆಲ್ ಕಾರ್ಮಿಕರು, ಖಾಸಗಿ ಶಾಲಾ ಶಿಕ್ಷಕರು, ಬಿಸಿಯೂಟ ನೌಕರರ ಬದುಕು ತೀರಾ ಸಂಕಷ್ಟಮಯವಾಗಿದೆ ಎಂದು ಹೇಳಿದರು.

CITU ಮಂಗಳೂರು ನಗರ ಮುಖಂಡರಾದ ಮಹಮ್ಮದ್ ಮುಸ್ತಫಾರವರು ಮಾತನಾಡುತ್ತಾ, ಇಡೀ ದೇಶದಲ್ಲಿ 3 ಕೋಟಿಗೂ ಮಿಕ್ಕಿರುವ ಬೀದಿ ಬದಿ ವ್ಯಾಪಾರಸ್ಥರ ಬದುಕು ಈ ಲಾಕ್ ಡೌನ್ ನಿಂದಾಗಿ ತೀರಾ ಕಂಗೆಟ್ಟಿದ್ದು,

ಕೇಂದ್ರ ಸರಕಾರ ಕಿಂಚಿತ್ತೂ ಗಮನ ಹರಿಸಿಲ್ಲ. ಬೀದಿಬದಿ ವ್ಯಾಪಾರಸ್ಥರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವ ಮೂಲಕ ಪರಿಹಾರ ಧನವನ್ನು ಒದಗಿಸಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ CITU ನಗರ ಮುಖಂಡರಾದ ಸಂತೋಷ್ ಆರ್.ಎಸ್, ಹರೀಶ್ ಪೂಜಾರಿ ಹಸೈನಾರ್, ಮುಝಾಫರ್, ವಿಜಯ,ಶಿವಪ್ಪ, ಗುಡ್ಡಪ್ಪ, ಸೆಲ್ವರಾಜ್ ಮುಂತಾದವರು ಹಾಜರಿದ್ದರು.

RECENT NEWS

ದ.ಕ‌ ಜಿಲ್ಲೆಯಲ್ಲಿ ಅರ್ಧಶತಕ ದಾಖಲಿಸಿದ ಕೊರೊನಾ ಸಾವಿನ ಸಂಖ್ಯೆ: ಇಂದು ಕೂಡ ಸ್ಪೋಟ 131 ಪ್ರಕರಣ ಪತ್ತೆ..!

ದ.ಕ‌ ಜಿಲ್ಲೆಯಲ್ಲಿ ಅರ್ಧಶತಕ ದಾಖಲಿಸಿದ ಕೊರೊನಾ ಸಾವಿನ ಸಂಖ್ಯೆ: ಇಂದು ಕೂಡ ಸ್ಪೋಟ 131 ಪ್ರಕರಣ ಪತ್ತೆ..! ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಮತ್ತೆ ನಾಲ್ವರು ಸಾವನ್ನಪ್ಪಿದ್ದಾರೆ. ಈ ಮೂಲಕ ಕೊರೊನಾ...

ನಾಳೆ ಮಂಗಳವಾರ 11:30ಕ್ಕೆ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ..!

ನಾಳೆ ಮಂಗಳವಾರ 11:30ಕ್ಕೆ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ..! ಬೆಂಗಳೂರು : ರಾಜ್ಯ ದ್ವಿತೀಯ ಪಿಯುಸಿ ಪರೀಕ್ಷೆಗಳ ಫಲಿತಾಂಶ  ನಾಳೆ ಮಂಗಳವಾರ  ಪ್ರಕಟವಾಗಲಿದೆ. ಈ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್...

ಉಡುಪಿ ಜಿಲ್ಲೆಗೆ ಸದ್ಯಕ್ಕೆ ಲಾಕ್ಡೌನ್ ಅಗತ್ಯವಿಲ್ಲ – ರಘುಪತಿ ಭಟ್

ಉಡುಪಿ : ಉಡುಪಿ ಜಿಲ್ಲೆ ಸದ್ಯಕ್ಕೆ ಲಾಕ್ಡೌನ್ ಅಗತ್ಯವಿಲ್ಲ ಅಂತ ಶಾಸಕ ರಘುಪತಿ ಭಟ್ ಹೇಳಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಅವರು ಜನಜೀವನ ಈಗಷ್ಟೇ ಚೇತರಿಸಿಕೊಳ್ಳುತ್ತಿದೆ. ಮತ್ತೆ ಲಾಕ್ಡೌನ್ ಮಾಡಿದರೆ ಆರ್ಥಿಕತೆಯ ಮೇಲೆ ಭಾರಿ ಹೊಡೆತ ಬೀಳಲಿದೆ....

ಗುರುವಾರದಿಂದ ಒಂದು ವಾರ ದಕ್ಷಿಣಕನ್ನಡ ಜಿಲ್ಲೆ ಲಾಕ್ ಡೌನ್

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿರುವ ಕೊರೊನಾ ಸೋಂಕು ಆತಂಕಕ್ಕೆ ಕಾರಣವಾಗಿರುವ ಹಿನ್ನಲೆಯಲ್ಲಿ ಜುಲೈ 16 ರಿಂದ ಜಿಲ್ಲೆಯಲ್ಲಿ ಒಂದು ವಾರಗಳ ಕಾಲ ಲಾಕ್ ಡೌನ್ ಜಾರಿಗೆ ತರಲಾಗುವುದು...
error: Content is protected !!