Wednesday, December 1, 2021

ಕೇರಳದಲ್ಲಿ ಸಂಘಪರಿವಾರವನ್ನು ತಲೆ ಎತ್ತಲು ಬಿಡುವುದಿಲ್ಲ: ಶೈಲಜಾ ಟೀಚರ್‌

ಮಂಗಳೂರು: ಧರ್ಮದ ಹೆಸರಿನಲ್ಲಿ ವಿಭಜಿಸುವುದು ಮೋದಿ ಮತ್ತು ಸಂಘಪರಿವಾರದ ಉದ್ದೇಶ. ಸಂಘಪರಿವಾರದ ಆಶಯವೊಂದೇ ಅದುವೇ ಮಾನವ ವಿರೋಧಿ.

ಕೇರಳದಲ್ಲಿ ಸಂಘಪರಿವಾರವನ್ನು ತಲೆ ಎತ್ತಲು ಬಿಡುವುದಿಲ್ಲ ಎಂದು ಕೇರಳದ ಮಾಜಿ ಆರೋಗ್ಯ ಸಚಿವೆ ಕೆ.ಕೆ ಶೈಲಜಾ ಟೀಚರ್‌ ಸಂಘಪರಿವಾರದ ವಾಗ್ದಾಳಿ ನಡೆಸಿದ್ದಾರೆ.


ನಗರ ಹೊರವಲಯದ ಗುರುಪುರದಲ್ಲಿ ನಡೆದ ಸಿಪಿಐಎಂ ದ.ಕ ಜಿಲ್ಲಾ ಸಮ್ಮೇಳನದ ಪ್ರಧಾನ ಭಾಷಣದಲ್ಲಿ ಮಾತನಾಡಿ, ಮೋದಿ ಸರಕಾರ ಕಾರ್ಪೋರೇಟ್‌ ಸೇವೆ ಮಾಡುತ್ತಿದೆ. ಅದನ್ನು ಪ್ರತಿಭಟಿಸುವವರನ್ನು ಧರ್ಮದ ಆಧಾರದ ಮೇಲೆ ವಿಭಜಿಸುತ್ತಿದೆ.

ಧರ್ಮದ ಹೆಸರಿನಲ್ಲಿ ಬಡತನ, ನಿರುದ್ಯೋಗ ನಿವಾರಿಸಲು ಸಾಧ್ಯವಿಲ್ಲ. ವಿವಿಧತೆಯಲ್ಲಿ ಏಕತೆ ಭಾರತದ ಆತ್ಮ, ಅದನ್ನು ರಕ್ಷಿಸಲು ಎಡಪಕ್ಷದಿಂದ ಮಾತ್ರ ಸಾಧ್ಯ ಎಂದರು.

ಎಲ್ಲಾ ಧರ್ಮವೂ ಅಹಿಂಸೆ, ಸಮಾನತೆ, ಮಾನವತೆಯನ್ನೇ ಪ್ರತಿಪಾದಿಸುತ್ತದೆ.

ನಾರಾಯಣ ಗುರುಗಳೂ ಸಹ ಅದನ್ನೇ ಬೋಧಿಸಿದ್ದರು. ಆದರೆ ಸಂಘಪರಿವಾರ ಮಾತ್ರ ಧರ್ಮ, ಜಾತಿ ಹೆಸರಿನಲ್ಲಿ ವಿಭಜಿಸುತ್ತಿದ್ದಾರೆ.

ಸಂಘಪರಿವಾರದವರು ಹೇಳುತ್ತಾರೆ. ಭಾರತ ಹಿಂದೂ ರಾಷ್ಟ್ರ ಎಂದು, ಆದರೆ ಅವರ ಹಿಂದುತ್ವ ಮೇಲ್ವರ್ಗದ ಹಿಂದುತ್ವ ಮಾತ್ರ. ಇದೇ ಸಂಘಪರಿವಾರವು ಉ.ಪ್ರ, ಮಧ್ಯಪ್ರದೇಶದಲ್ಲಿ ದಲಿತರರನ್ನು ಅತ್ಯಾಚಾರ, ಶೋಷಣೆ ಮಾಡುತ್ತದೆ.

ದೇಶಾದ್ಯಂತ ಸಂಘಪರಿವಾರ ಅದೆಷ್ಟು ಕೋಮು, ಮತಾಂಧತೆಯಿಂದ ಹಲವರ ಜೀವ ಬಲಿ ಪಡೆದಿದೆ.

ಕಮ್ಯುನಿಷ್ಟ್‌ ಧ್ವಜ ದುಡಿಯುವ ಜನರ ಅಶಾಕಿರಣ. ಎಡಪಕ್ಷ ಮಾನವರ ಧ್ವನಿಯಾಗಿದೆ.

ಕೆಂಪು ಪತಾಕೆ ವಿಮೋಚನೆಯ ಆಯುಧ. ಈ ಪತಾಕೆಯಡಿ ಹಲವಾರು ಬಲಿದಾನವಾಗಿದೆ. ಕರಾಳ ಕೃಷಿ ಕಾಯಿದೆಯ ರೈತರ ಹೋರಾಟಕ್ಕೆ ಸಾಥ್‌ ನೀಡಿದ್ದು ಕಮ್ಯುನಿಷ್ಟ್ ಪಕ್ಷ.

ಈ ಕರಾಳ ಕೃಷಿ ಮಸೂದೆಯನ್ನು ಅಂಬಾನಿ, ಅದಾನಿಗೆ ಜಾರಿಗೊಳಿಸಲು ಮೋದಿ ನಿರ್ಧರಿಸಿದ್ದರು ಎಂದು ಆರೋಪಿಸಿದ ಅವರು ಕಾಂಗ್ರೆಸ್‌, ಬಿಜೆಪಿಯ ನೀತಿ ಒಂದೇ ಅದುವೇ ಕಾರ್ಪೋರೇಟ್‌ ನೀತಿ ಎಂದು ವಾಗ್ದಾಳಿ ನಡೆಸಿದರು.

ಕಳೆದ 5 ವರ್ಷದಲ್ಲಿ ಕೇರಳ ಸರಕಾರ ಜನಪಯೋಗಿ ಕೆಲಸ ಮಾಡಿದೆ. ಹೃದಯಂ, ಕಾರುಣ್ಯ ಸ್ಕೀಮ್‌ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ಮಾಡಿದೆ. ಪಿಣರಾಯಿ ವಿಜಯನ್‌ ನೇತೃತ್ವದ ಸರಕಾರದ ಸಾಧನೆ ಅಸಂಖ್ಯಾತ.

ಆದ್ದರಿಂದ ಮತ್ತೊಮ್ಮೆ ನಾವು ಅಧಿಕಾರಕ್ಕೆ ಬರಲಿದೆ ಎಂದರು.
ಕಾರ್ಯಕ್ರಮದಲ್ಲಿ ಮುನೀರ್‌ಕಾಟಿಪಳ್ಳ, ಸುನೀಲ್‌ ಕುಮಾರ್‌ ಬಜಾಲ್‌, ಸಂತೋಷ್‌ ಬಜಾಲ್‌ ಮತ್ತಿತರರು ಉಪಸ್ಥಿತರಿದ್ದರು.

Hot Topics

ಸಾಲದ ಹೊರೆ ತಾಳಲಾರದೆ ವೀಡಿಯೋ ಮೂಲಕ ಗುಡ್​ಬೈ ಹೇಳಿ ಶಿಕ್ಷಕ ದಂಪತಿ ಆತ್ಮಹತ್ಯೆ

ವಿಜಯವಾಡ: ಶಾಲೆ ನಡೆಸುತ್ತಿದ್ದ ಶಿಕ್ಷಕ ದಂಪತಿ ಸಾಲದ ಹೊರೆ ತಡೆಯಲಾರದೇ ವಿಷಸೇವಿಸಿ ಆತ್ಮಹತ್ಯೆ ಹಾದಿ ಹಿಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯಲ್ಲಿ ನಡೆದಿದೆ. ಸಾವಿಗೂ ಮುನ್ನ ಶಿಕ್ಷಕ ದಂಪತಿ ತಮ್ಮ...

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...