Tuesday, May 18, 2021

ಕೊಣಾಜೆಯಲ್ಲಿ ದನ ಕಳವಿಗೆ ಯತ್ನ :12 ವರ್ಷಗಳಲ್ಲಿ 37 ಜಾನುವಾರು ಕಳೆದುಕೊಂಡ ಕಲ್ಯಾಣಿ..!

ಕೊಣಾಜೆಯಲ್ಲಿ ದನ ಕಳವಿಗೆ ಯತ್ನ :12 ವರ್ಷಗಳಲ್ಲಿ 37 ಜಾನುವಾರು ಕಳೆದುಕೊಂಡ ಕಲ್ಯಾಣಿ..!

ಮಂಗಳೂರು : 12 ವರ್ಷಗಳ ಅವಧಿಯಲ್ಲಿ 37 ಜಾನುವಾರುಗಳನ್ನು ಕಳೆದುಕೊಂಡ ಮಂಗಳೂರು ಹೊವಲಯದ ಕೊಣಾಜೆ ನಡುಪದವು ನಿವಾಸಿ ಕಲ್ಯಾಣಿಯವರ ಮನೆಗೆ ಮತ್ತೆ ಲಗ್ಗೆಯಿಟ್ಟ ಗೋಕಳ್ಳರು ದನವೊಂದರ ಕಳವಿಗೆ ಯತ್ನಿಸಿದ್ದಾರೆ.

ಈ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಕಲ್ಯಅಣಿ ಅವರು  ದೂರು ದಾಖಲಿಸಿದ್ದಾರೆ.

ಒಂದು ಕಾಲದಲ್ಲಿ ತಮ್ಮ ಹಟ್ಟಿಯಲ್ಲಿ 60 ಜಾನುವಾರುಗಳನ್ನು ಕಲ್ಯಾಣಿಯವರು ಸಾಕುತ್ತಿದ್ದರು.

ಜಾನುವಾರು ಮೇಲಿನ ಪ್ರೀತಿಯಿಂದ ಕಿವಿ ಬೆಂಡೋಲೆಯನ್ನು ಮಾರಿ ದನವನ್ನು ಖರೀದಿಸಿ ಅದರಿಂದ ಬಂದ ಆದಾಯದಿಂದ 60 ರಷ್ಟು ಜಾನುವಾರುಗಳನ್ನು ಬೆಳೆಸಿದ್ದರು.

ಆದರೆ 12 ವರ್ಷಗಳ ಅವಧಿಯಲ್ಲಿ 37 ಜಾನುವಾರುಗಳನ್ನು ಅವರ ಹಟ್ಟಿಯಿಂದಲೇ ಕಳವು ನಡೆಸಲಾಗಿತ್ತು.

ಆದರೆ ಈವರೆಗೂ ಕಳವುಗೈದ ಜಾನುವಾರುಗಳು ವಾಪಸ್ಸು ಸಿಕ್ಕಿಲ್ಲ. ಸುಮಾರು 50 ಲೀ. ನಷ್ಟು ಹಾಲು ತಮ್ಮಲ್ಲಿದ್ದ ಜಾನುವಾರುಗಳಿಂದಲೇ ಪಡೆಯುತ್ತಿದ್ದರು,

ಆದರೆ ಇದೀಗ ತಾವೇ ನಂದಿನಿ ಹಾಲು ಮನೆಗೆ ತರುವಂತಹ ಪರಿಸ್ಥಿತಿ ಎದುರಾಗಿದೆ.

ಈ ನಡುವೆಯೂ 13 ಜಾನುವಾರುಗಳನ್ನು ಇದೀಗ ಸಲಹುತ್ತಿದ್ದಾರೆ, ಆದರೆ ಅದರಲ್ಲಿ ಒಂದನ್ನು ಮತ್ತೆ ಕಳ್ಳರು ಕಳವಿಗೆ ನಿನ್ನೆ ಯತ್ನಿಸಿದ್ದಾರೆ.

ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

Hot Topics

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ: ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..! 

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..!  ಮಂಗಳೂರು: ಟೆರೇಸ್ ನಲ್ಲಿ ಫೋನ್ ನಲ್ಲಿ ಮಾತನಾಡುತ್ತಿದ್ದ ವೇಳೆ ಆಯತಪ್ಪಿ ಕೆಳಗೆ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ವಿಟ್ಲದ ಕೇಪು ಎಂಬಲ್ಲಿ...