ಕಲಬುರಗಿ: ಪರಿಹಾರ ನೀಡದೆ ವಿಳಂಬ ನೀತಿ ಅನುಸರಿಸಿದ ಕಲಬುರಗಿ ಜಿಲ್ಲಾಧಿಕಾರಿ ಯಶವಂತ್ ಗುರುಕರ್ ಅವರ ಕಾರು ಜಪ್ತಿ ಮಾಡುವಂತೆ ಕೋರ್ಟ್ ಆದೇಶಿಸಿದೆ.
ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದ ಆದೇಶದ ಮೇರೆಗೆ ಜಿಲ್ಲಾಧಿಕಾರಿಯ ಸರ್ಕಾರಿ ಕಾರನ್ನು ಜಪ್ತಿ ಮಾಡಲು ಜಿಲ್ಲಾಧಿಕಾರಿ ಕಚೇರಿಗೆ ಇಂದು ಬಂದ ಕೋರ್ಟ್ ಸಿಬ್ಬಂದಿ ಮತ್ತು ವಕೀಲರು, ಕಾರಿನ ಮೇಲೆ ನೋಟಿಸ್ ಅಂಟಿಸಿದರು.
2008ರಲ್ಲಿ ರೈತ ಕಲ್ಲಪ್ಪ ಮೇತ್ರೆ ಅವರ 33 ಗುಂಟೆ ಜಮೀನು ಭೀಮಾ ಏತನಿರಾವರಿ ಯೋಜನೆಯಡಿ ಮುಳುಗಡೆಯಾಗಿತ್ತು.
ಇದಕ್ಕೆ ಸಂಬಂಧಿಸಿದಂತೆ 7,39,632 ರೂಪಾಯಿ ಪರಿಹಾರ ನೀಡವಂತೆ ಕೋರ್ಟ್ ಆದೇಶಿಸಿತ್ತು.
ಆದರೂ ಪರಿಹಾರ ನೀಡದೆ ಜಿಲ್ಲಾಡಳಿತ ಸತಾಯಿಸಿತ್ತು. ಈ ಸಂಬಂಧ ಗರಂ ಆದ ಕೋರ್ಟ್, ಡಿಸಿ ಕಾರನ್ನೇ ಜಪ್ತಿ ಮಾಡುವಂತೆ ಆದೇಶಿಸಿದೆ.
ಬಂಟ್ವಾಳ : ಜನವರಿ 3 ರಂದು ವಿಟ್ಲ ಸಮೀಪದ ಬೋಳಂತೂರಿನಲ್ಲಿ ಬೀಡಿ ಉದ್ಯಮಿಯ ಮನೆ ದರೋಡೆ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ನಕಲಿ ಇಡಿ ಅಧಿಕಾರಿಗಳು ಎಂದು ರಾತ್ರಿ ವೇಳೆ ಮನೆಗೆ ಆಗಮಿಸಿ ದರೋಡೆ ನಡೆಸಲಾಗಿತ್ತು. ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರ ತಂಡ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಕೇರಳದ ಕೊಲ್ಲಂ ನಿವಾಸಿಯಾಗಿರುವ ಅನಿಲ್ ಫೆರ್ನಾಂಡಿಸ್ ಎಂಬಾತನನ್ನು ಬಂಧಿಸಿ ಆತನಿಂದ ಸುಮಾರು 5 ಲಕ್ಷ ರೂ. ನಗದು ಹಾಗೂ ಕಾರು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣದಲ್ಲಿ ಆರು ಜನ ಆರೋಪಿಗಳು ಭಾಗಿಯಾಗಿದ್ದು, ಇಡಿ ಹೆಸರಿನಲ್ಲಿ ದಾಳಿ ಮಾಡಿ ದರೋಡೆ ಮಾಡಿದ್ದರು.
ಪ್ರಕರಣದ ಆರೋಪಿಗಳು ಕೇರಳ ಮೂಲದವರೇ ಎಂಬುದು ಪೊಲೀಸರಿಗೆ ಸ್ಪಷ್ಟವಾಗಿತ್ತು. ಇದೀಗ ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಉಳಿದವರಿಗೆ ಶೋಧ ಕಾರ್ಯ ಮುಂದುವರೆದಿದೆ.
ಉಡುಪಿ: ಸಂಜೆ ಆಕಾಶದಲ್ಲಿ ಕೆಲವು ದಿನಗಳಿಂದ ಬರಿಗಣ್ಣಿಗೆ ನಾಲ್ಕು ಗ್ರಹಗಳು ಕಾಣುತ್ತಿವೆ. ಸೂರ್ಯಾಸ್ತವಾಗು ತ್ತಿದ್ದಂತೆ ಪಶ್ಚಿಮದಲ್ಲಿ ದಿಗಂತಕ್ಕೆ ಸಮೀಪ ಶನಿ, ಸುಮಾರು 45 ಡಿಗ್ರಿ ಎತ್ತರದಲ್ಲಿ ಹೊಳೆಯುವ ಶುಕ್ರ, ನೆತ್ತಿಯ ಮೇಲೆ ಗುರು, ಪೂರ್ವ ಆಕಾಶದಲ್ಲಿ ಕೆಂಬಣ್ಣದಿಂದ ಆಕರ್ಷಿಸುವ ಮಂಗಳ ಕಾಣುತ್ತಿವೆ.
ಶುಕ್ರ ಗ್ರಹ ನಕ್ಷತ್ರದಂತೆ ಹೊಳೆ ಯುತ್ತಿದ್ದರೂ ದೂರದರ್ಶಕದಲ್ಲಿ ಈಗ ನೋಡಿದರೆ ಚೌತಿಯ ಚಂದ್ರನಂತೆ ಕಾಣುತ್ತದೆ. ಅತ್ಯಂತ ಸುಂದರ ಮಿಥುನ ರಾಶಿ ಓರಿಯಾನ್, ಅಂಡೋ ಮಿಡಾಗೆಲಾಕ್ಸಿಗಳೊಂದಿಗೆ ಆಕಾಶ ವೀಕ್ಷಕರಿಗೆ ಈಗಿನ ಸಂಜೆಯ ಆಕಾಶ ಬಹಳ ಪ್ರಶಸ್ತ. ಆದರೆ ಗ್ರಹಗಳು ನೇರ ರೇಖೆಯಲ್ಲಿ ಇಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಮಾಹಿತಿ ತಪ್ಪು ಎಂದು ಉಡುಪಿಯ ಖಗೋಳಶಾಸ್ತ್ರಜ್ಞ ಡಾ| ಎ.ಪಿ. ಭಟ್ ತಿಳಿಸಿದ್ದಾರೆ.
ಜ.10ರಿಂದ ಪಶ್ಚಿಮ ಆಕಾಶದಲ್ಲಿ ಅತಿ ಎತ್ತರದಲ್ಲಿ 47 ಡಿಗ್ರಿಯಲ್ಲಿ ಹೊಳೆವ ಶುಕ್ರ ನಮ್ಮನ್ನು ಆಕರ್ಷಿಸುತ್ತಲೇ ಇದೆ. ದಿನದಿಂದ ದಿನಕ್ಕೆ ಕೆಳ ಕೆಳಗೆ ದಿಗಂತದೆಡೆಗೆ ಗೋಚರಿಸುತ್ತಾ ಮಾರ್ಚ್ ಅಂತ್ಯದವರೆಗೂ ಪಶ್ಚಿಮದಲ್ಲಿ ಕಾಣಲಿದೆ. ಸುಮಾರು ಎರಡು ವರ್ಷಗಳಿಗೊಮ್ಮೆ 24 ಕೋಟಿ ಕಿ.ಮೀ.ನಿಂದ 9 ಕೋಟಿ ಕಿ.ಮೀ. ವರೆಗೆ ಭೂಮಿಗೆ ಸಮೀಪವಾಗುವ ಮಂಗಳವು ಪೂರ್ವ ದಿಕ್ಕಿನಲ್ಲಿ ಕೆಂಬಣ್ಣದಲ್ಲಿ ಹೊಳೆಯುತ್ತಿದೆ. ಈ ರೀತಿಯ ಬದಲಾವಣೆಗಳು ಮತ್ತೂ ಪ್ರಕೃತಿಯ ಸೌಂದರ್ಯವನ್ನು ಹೆಚ್ಚಿಸುತ್ತಿದೆ.
ಉತ್ತರ ಪ್ರದೇಶದ ಪ್ರಯಾಗರಾಜ್‌ನ ತ್ರಿವೇಣಿ ಸಂಗಮದಲ್ಲಿ ಜನವರಿ 13 ರಿಂದ 2025ರ ಮಹಾ ಕುಂಭಮೇಳ ಸಂಭ್ರಮದಿಂದ ನಡೆಯುತ್ತಿದೆ. ಈ ಮಹಾ ಕುಂಭದಲ್ಲಿ ಕೋಟ್ಯಂತರ ಜನರು ಬಂದು ಪುಣ್ಯ ಸ್ನಾನ ಮಾಡಿ ವಾಪಸ್ ಆಗುತ್ತಿದ್ದಾರೆ. ಇನ್ನು ಫೆಬ್ರವರಿ 26 ರವರೆಗೆ ಈ ಮಹಾ ಕುಂಭಮೇಳ ನಡೆಯಲಿದೆ. ಆದರೆ ಇದರ ನಡುವೆ ಇಡೀ ದೇಶದ ಗಮನ ಸೆಳೆದಿದ್ದ ಮೊನಾಲಿಸಾ ತಮ್ಮೂರಿಗೆ ವಾಪಸ್ ಆಗಿದ್ದಾರೆ.
ಮಹಾಕುಂಭದಲ್ಲಿ ನೋಡುಗರ ಕಣ್ಮನ ಸೆಳೆದ ನೀಲಿ ಕಣ್ಣುಗಳ ಬ್ಯೂಟಿ ಮೊನಾಲಿಸಾ ಬೇಸರದಿಂದಲೇ ಮನೆಗೆ ವಾಪಸ್ ಆಗಿದ್ದಾರೆ. ಇಷ್ಟೊಂದು ಪ್ರಚಾರ ಪಡೆಯುತ್ತೇನೆ ಎಂದು ಮೊನಾಲಿಸಾಗೆ ತಿಳಿದಿರಲಿಲ್ಲ. ಆದರೆ ಆ ಪ್ರಚಾರನೇ ಆಕೆಗೆ ಸಂಕಷ್ಟ ತಂದೊಡ್ಡಿತು. ಇದರಿಂದ ಮಹಾ ಕುಂಭಮೇಳವನ್ನು ಬಿಟ್ಟು ನೀಲಿ ಕಣ್ಣುಗಳ ಹುಡುಗಿ ಮಧ್ಯೆಪ್ರದೇಶದ ಇಂದೋರ್ಗೆ ಮರಳಿದ್ದಾರೆ.
ಮೊನಾಲಿಸಾ ಹೇಳಿದ್ದೇನು?
ಈ ಬಗ್ಗೆ ಮಾತನಾಡಿರುವ ಮೊನಾಲಿಸಾ, ಕುಂಭಮೇಳದಲ್ಲಿ ನನಗೆ ಸಪೋರ್ಟ್ ಮಾಡಿ, ಪ್ರೀತಿ ತೋರಿಸಿದ ಎಲ್ಲರಿಗೂ ತುಂಬಾ ಧನ್ಯವಾದಗಳು. ನನ್ನ ಹಾಗೂ ನನ್ನ ಕುಟುಂಬದ ಸುರಕ್ಷತೆಗಾಗಿ ವಾಪಸ್ ಹೋಗಬೇಕಾಗಿದೆ. ಇದರಿಂದ ನಮ್ಮೂರಿಗೆ ಹೋಗುತ್ತಿದ್ದೇನೆ. ಸಾಧ್ಯವಾದರೆ ನಾವು ಮುಂದಿನ ಸಹಿ ಸ್ನಾನದ ವೇಳೆಗೆ ಪ್ರಯಾಗ್‌ರಾಜ್ ಮಹಾ ಕುಂಭದಲ್ಲಿ ಮತ್ತೆ ಭೇಟಿಯಾಗೋಣ ಎಂದು ಹೇಳಿದ್ದಾರೆ.
ಮೊನಾಲಿಸಾ ಅವರದ್ದು ಬಡ ಕುಟುಂಬ. ರುದ್ರಕ್ಷಿಗಳನ್ನು ಮಾರಾಟ ಮಾಡಿ ಸ್ವಲ್ಪ ಹಣ ಸಂಪಾದನೆಗೆ ಎಂದು ಮಹಾಕುಂಭಮೇಳಕ್ಕೆ ಪೋಷಕರ ಜೊತೆ ಬಂದಿದ್ದರು. ಆದರೆ ಮೊನಾಲಿಸಾ ಅವರ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಂಚಲ ಸೃಷ್ಟಿಸಿತ್ತು. ಮೊನಾಲಿಸಾ ಅಂದಕ್ಕೆ ಎಲ್ಲರೂ ಮನಸೋತರು. ಹೀಗಾಗಿ ಕುಂಭಮೇಳದಲ್ಲಿ ಫೋಟೋ, ವಿಡಿಯೋ ಮಾಡಿಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಜನ, ಮೊನಾಲಿಸಾ ಹಿಂದೆ ಬೀಳುತ್ತಿದ್ದರು. ಇದರಿಂದ ಆಕೆಗೆ ಸಮಸ್ಯೆಗಳು ಎದುರಾದವು.
ಜನರು ಮೊಬೈಲ್, ಕ್ಯಾಮೆರಾ ಹಿಡಿದುಕೊಂಡು ಬಂದು ಸೆಲ್ಫಿಗಾಗಿ ಹಿಂದೆ ಬೀಳುತ್ತಿದ್ದರು. ಇದರಿಂದ ಆಕೆ ವ್ಯಾಪಾರಕ್ಕೆ ತೊಂದರೆ ಆಗಿತ್ತು. ಒಂದು ರುದ್ರಾಕ್ಷಿ ಮಾಲೆ ಖರೀದಿ ಮಾಡಲು ಹಿಂದೇಟು ಹಾಕುತ್ತಿದ್ದ ಜನ ಸೆಲ್ಫಿ ಬೇಕು ಎನ್ನುತ್ತಿದ್ದರು. ಮೊನಾಲಿಸಾ ಹಾಗೂ ಈಕೆಯ ಕುಟುಂಬದ ಖಾಸಗಿತನ ಮತ್ತು ಮಾನಸಿಕ ಶಾಂತಿ ಹಾಳಾಗಿದೆ ಎಂದು ಹೇಳಲಾಗಿದೆ.
ಇದು ಅಲ್ಲದೇ ಮೊನಾಲಿಸಾ ಇರುವ ಟೆಂಟ್ಗೆ ಜನರು ಏಕಾಏಕಿ ನುಗ್ಗಿದ್ದರಿಂದ ತೀವ್ರ ಆತಂಕ ವ್ಯಕ್ತಪಡಿಸಿದ್ದರು. ಹೀಗಾಗಿ ಸುರಕ್ಷತೆ ದೃಷ್ಟಿಯಿಂದ ಮೊನಾಲಿಸಾ ಕುಂಭವನ್ನು ಅರ್ಧಕ್ಕೆ ಬಿಟ್ಟು ಮನೆಗೆ ವಾಪಸ್ ಆಗಿದ್ದಾರೆ. 17 ವರ್ಷದ ಮೊನಾಲಿಸಾ, ಮಧ್ಯಪ್ರದೇಶದ ಇಂದೋರ್ನ ನಿವಾಸಿ. ವ್ಯಾಪಾರ ಮಾಡಲೆಂದು ಪ್ರಯಾಗ್ರಾಜ್ಗೆ ಬಂದರೆ ಜನ ಕೊಟ್ಟ ಕಿರುಕುಳದಿಂದ ಮೊನಲಿಸಾ ಕುಂಭಮೇಳಕ್ಕೆ ಗುಡ್ಬೈ ಹೇಳಿದ್ದಾರೆ.