ಬೆಂಗಳೂರು: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ FIR ದಾಖಲಿಸಲು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಬೆಂಗಳೂರಿನ ತಿಲಕ್ ನಗರ ಪೊಲೀಸರಿಗೆ ಆದೇಶ ನೀಡಿದೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಚುನಾವಣಾ ಬಾಂಡ್ ಗಳ ಮೂಲಕ ಬೆದರಿಸಿ ಹಣವನ್ನು ಸುಲಿಗೆ ಮಾಡಿದ್ದಾರೆ. ಹೀಗಾಗಿ ನಿರ್ಮಲಾ ಸೀತಾರಾಮನ್ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು. FIR ದಾಖಲಿಸಬೇಕು ಎಂದು ಜನಾಧಿಕಾರ ಸಂಘರ್ಷ ಪರಿಷತ್ ನ ಆದರ್ಶ್ ಅಯ್ಯರ್ ಎಂಬುವವರು ಕೋರ್ಟ್ ನಲ್ಲಿ ದೂರು ದಾಖಲಿಸಿದ್ದರು.
ಈ ಅರ್ಜಿಯ ವಿಚಾರಣೆ ಇಂದು ನಡೆಸಿರುವ ಕೋರ್ಟ್ FIR ದಾಖಲಿಸಿ ಎಂದು ಬೆಂಗಳೂರಿನ ತಿಲಕ್ ನಗರದ ಪೊಲೀಸರಿಗೆ ಆದೇಶಿಸಿದೆ. ಅಲ್ಲದೇ ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಅ.10ಕ್ಕೆ ಕೋರ್ಟ್ ಮುಂದೂಡಿದೆ.
ಜ್ಯೂಸ್ ಹೆಸರಿನಲ್ಲಿ ಮಾರುಕಟ್ಟೆಗೆ ಈಗ ಸ್ಲೋ ಪಾಯಿಸನ್ ಅಂದ್ರೆ ವಿಷ ಎಂಟ್ರಿ ಆಗುತ್ತಿದೆ, ಇದು ನಿಮ್ಮ ಮಕ್ಕಳು ಮತ್ತು ನಿಮ್ಮ ದೇಹಕ್ಕೆ ಸೇರಿದರೆ ಅದರಿಂದ ದೊಡ್ಡ ಸಮಸ್ಯೆ ಗ್ಯಾರಂಟಿ. ಹೀಗೆ ಆಹಾರ ತಜ್ಞರು & ವೈದ್ಯರು ಮಾರುಕಟ್ಟೆಗಳಲ್ಲಿ ಸಿಗುತ್ತಿರುವ ಜ್ಯೂಸ್ ಬಗ್ಗೆ ವಾರ್ನಿಂಗ್ ಕೊಡುತ್ತಿದ್ದಾರೆ.
ಅದರಲ್ಲೂ ಜ್ಯೂಸ್‌ಗೆ ಆಯುರ್ವೇದದ ಹೆಸರು ಕೊಟ್ಟು ದಾರಿ ತಪ್ಪಿಸುವ ಜನರು ಕೂಡ ಇದೀಗ ಮಾರುಕಟ್ಟೆಗೆ ಬಂದಿದ್ದು, ಸಾಕಷ್ಟು ದೊಡ್ಡ ಸಮಸ್ಯೆಗಳು ಎದುರಾಗಿ ಒದ್ದಾಡುವ ಪರಿಸ್ಥಿತಿ ಬಂದುಬಿಟ್ಟಿದೆ.
ಹೌದು, ಗ್ರಾಹಕರಿಗೆ ಮೋಸ ಮಾಡಲು ಅಂತಾನೇ ಹಲವು ಕಂಪನಿಗಳು ಹುಟ್ಟಿಕೊಂಡಿವೆ. ಅದರಲ್ಲೂ ನಿಮ್ಮ ಆರೋಗ್ಯ ಸರಿಯಾಗುತ್ತೆ, ನಿಮ್ಮ ಆರೋಗ್ಯಕ್ಕೆ ಇದು ಉತ್ತಮ ಎನ್ನುತ್ತ ವಿಷವನ್ನೇ ತಿನ್ನಿಸುವ ವಸ್ತುಗಳು ಹೆಚ್ಚಾಗುತ್ತಿವೆ. ಈ ಪೈಕಿ ಜ್ಯೂಸ್‌ಗಳು ಕೂಡ ಆರೋಗಕ್ಕೆ ಭಾರಿ ಡೇಂಜರ್ ಎಂಬ ಆರೋಪವನ್ನ ವೈದ್ಯರು ಮಾಡುತ್ತಾರೆ. ಅದರಲ್ಲೂ ಕೆಲವರು ಈ ನಿಮ್ಮ ಆರೋಗ್ಯದ ಹೆಸರನ್ನೇ ಬಂಡವಾಳ ಮಾಡಿಕೊಂಡು, ವಿಷಕಾರಿ ಜ್ಯೂಸ್ ಮಾರಾಟ ಮಾಡುತ್ತಾರೆ ಹುಷಾರ್ ಅಂತಿದ್ದಾರೆ ವೈದ್ಯರು!
ವಿಷಕಾರಿ ಜ್ಯೂಸ್ ಮಾರಾಟ?
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಒಂದು ಇದೀಗ ಸಂಚಲನ ಸೃಷ್ಟಿ ಮಾಡಿದೆ. ಯಾಕಂದ್ರೆ ರೆಡಿಮೇಡ್ ಜ್ಯೂಸ್ ಲೆಕ್ಕದಲ್ಲಿ, ನಿಮ್ಮ ಆರೋಗ್ಯ ಕಾಪಾಡುವ ಸುಳ್ಳು ಭರವಸೆ ನೀಡುತ್ತಾ ಸ್ಲೋ ಪಾಯಿಸನ್ ಜ್ಯೂಸ್‌ಗಳನ್ನ ಮಾರಾಟ ಮಾಡುತ್ತಿರುವ ಭಾರಿ ಗಂಭೀರ ಆರೋಪ ಮಾಡಲಾಗುತ್ತಿದೆ. ಈ ವಿಡಿಯೋ ನೋಡಿ ಜನರು ಕೂಡ ಆಘಾತಕಾರಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಜನರ ಬಳಿ ದುಡ್ಡು ಪಡೆಯುವ ಕೆಲವು ಸಂಸ್ಥೆಗಳು, ಜನಗಳಿಗೇ ಮೋಸ ಮಾಡುತ್ತಿರುವ ಆರೋಪ ಕೂಡ ಕೇಳಿ ಬರುತ್ತಿದೆ.
ಜ್ಯೂಸ್ ಕುಡಿಯಬೇಡಿ ಅಂತಾರೆ ವೈದ್ಯರು!
ವೈದ್ಯರು ಹೇಳುವ ಪ್ರಕಾರ ಮನುಷ್ಯನ ದೇಹಕ್ಕೆ ಉತ್ತಮವಾದ ಆಹಾರ ಸಾಕು. ಆದರೆ ಈ ರೀತಿ ಮಾರುಕಟ್ಟೆಯಲ್ಲಿ ಸಿಗುವ ಜ್ಯೂಸ್‌ಗಳು ಮನುಷ್ಯರ ದೇಹಕ್ಕೆ ಉತ್ತಮ ಅಲ್ಲ. ಇದರಿಂದ ಮನುಷ್ಯರಿಗೆ ದೊಡ್ಡ ಸಮಸ್ಯೆ ಎದುರಾಗುತ್ತದೆ. ಭವಿಷ್ಯದಲ್ಲಿ ದೊಡ್ಡ ದೊಡ್ಡ ರೋಗಗಳು ಕೂಡ ಬರುತ್ತವೆ. ಹೀಗಾಗಿ ವೈದ್ಯರ ಸಲಹೆ ಇಲ್ಲದೆ ಯಾವುದೇ ರೀತಿಯ ಜ್ಯೂಸ್ ಕುಡಿಯಲು ಹೋಗಬಾರದು ಅಂತಾರೆ ಡಾಕ್ಟರ್ಸ್.
ಒಟ್ನಲ್ಲಿ ಜ್ಯೂಸ್ ಹೆಸರಲ್ಲಿ ಏನೇನೋ ಸೇಲ್ ಮಾಡುವವರ ವಿರುದ್ಧ ಕೂಡ ಸರ್ಕಾರ ಈಗ ಕ್ರಮ ಕೈಗೊಳ್ಳಬೇಕು. ಗೋಬಿ, ಪಾನಿಪುರಿ ರೀತಿ ಜ್ಯೂಸ್‌ಗಳನ್ನ ಕೂಡ ಸರ್ಕಾರ ಲ್ಯಾಬ್‌ನ ಒಳಗೆ ಪರೀಕ್ಷೆ ಮಾಡಿ, ಮನುಷ್ಯರ ಲಿವರ್, ಕಿಡ್ನಿ ಮೇಲೆ ಪ್ರಭಾವ ಬೀರುವ ವಸ್ತುಗಳನ್ನ ಬ್ಯಾನ್ ಮಾಡಬೇಕು ಎಂಬ ಆಗ್ರಹ ಜನರಿಂದ ಕೇಳಿ ಬರುತ್ತಿದೆ. ಹೀಗಾಗಿ ವೈದ್ಯರು ಜ್ಯೂಸ್ ಕುಡಿಯಬೇಡಿ ಅಂತಾ ಹೇಳಿರುವ ವಿಡಿಯೋ ಫುಲ್ ವೈರಲ್ ಆಗುತ್ತಿದೆ. ಅಲ್ಲದೆ ಆಯುರ್ವೇದ ಮತ್ತಿತರ ಹೆಸರಲ್ಲಿ ಜ್ಯೂಸ್ ಮಾರುವ ಸಂಸ್ಥೆಗಳ ವಿರುದ್ಧ ಕೂಡ ಆಕ್ರೋಶ ವ್ಯಕ್ತವಾಗುತ್ತಿದೆ.
ಭಾರತದ ಪ್ರತಿಷ್ಠೀತ ಕಂಪನಿ ಅಮೆಜಾನ್ ಸಿಇಒ ಜೆಫ್ ಬೆಜೋಸ್ (60) ತಮ್ಮ ಬಹುಕಾಲದ ಗೆಳತಿ ಲಾರೆನ್ ಸ್ಯಾಚೆಂಜ್ (54)ರನ್ನು ಈ ಡಿಸೆಂಬರ್‌ನ ಕ್ರಿಸ್ಮಸ್ ಸಂಭ್ರಮದ ವೇಳೆಗೆ ಮದುವೆಯಾಗಲಿದ್ದಾರೆ.
ಅಮೆರಿಕದ ಕೊಲೋರಡೋದಲ್ಲಿರುವ ಆ್ಯಸ್ಪೆನ್ ನಗರದಲ್ಲಿ ಬೆಜೋಸ್ ಅವರ ಅದ್ದೂರಿ ವಿವಾಹ ನಡೆಯಲಿದ್ದು, ಆಪ್ತ ವಲಯದವರು ಮಾತ್ರ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿಸಿದ್ದಾರೆ.
2023ರಲ್ಲಿ ಸಿಇಒ ತಮ್ಮ ಗೆಳತಿ ಲಾರೆನ್‌ಗೆ 21 ಕೋಟಿ ರೂ.ಮೌಲ್ಯದ ಪಿಂಕ್ ಡೈಮಂಡ್ ರಿಂಗ್ ನೀಡುವ ಮೂಲಕ ಪ್ರೇಮ ನಿವೇದನೆ ಮಾಡಿಕೊಂಡಿದ್ದು, ಈ ಬಾರಿಯ ವರ್ಷಾಂತ್ಯದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
ಉಳ್ಳಾಲ : ಸೂರಜ್ ಪದವಿ ಪೂರ್ವ ಕಾಲೇಜು ಮತ್ತು ಜ್ಞಾನದೀಪ ಶಾಲೆ ಮುಡಿಪುವಿನಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಉಪನ್ಯಾಸಕಿ ರೋಶನಿ ಮಕ್ಕಳ ದಿನಾಚರಣೆಯ ಮಹತ್ವದ ಬಗ್ಗೆ ಮಕ್ಕಳಿಗೆ ತಿಳಿಸಿಕೊಟ್ಟರು.
ಈ ವೇಳೆ ಮಕ್ಕಳ ದಿನಾಚರಣೆಯ ಪ್ರಯುಕ್ತ ನಡೆದ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ರಕ್ಷಿತ್ ಕುಲಾಲ್, ಶಿಕ್ಷಕರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ಶಿಕ್ಷಕರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಹಾಡು ಹಾಗೂ ನೃತ್ಯಗಳ ಮೂಲಕ ಶಿಕ್ಷಕರು ಮಕ್ಕಳ ಮನರಂಜಿಸಿದರು. ಮಕ್ಕಳಿಗೆ ಸಿಹಿ ತಿಂಡಿ ವಿತರಿಸಲಾಯಿತು.
ಈ ಕಾರ್ಯಕ್ರಮವನ್ನು ಪ್ರತಿಷ್ಠಾನಿರೂಪಿಸಿ, ಕುಮಾರಿ ತೇಜಸ್ವಿನಿ ವಂದಿಸಿದರು.