Sunday, May 22, 2022

ವರ್ಷದೊಳಗೆ ಹಾಳಾದ ಟಿವಿ: ಗ್ರಾಹಕರಿಗೆ ಪರಿಹಾರ ನೀಡುವಂತೆ ಕೋರ್ಟ್ ಆದೇಶ

ಬೆಂಗಳೂರು: ಖರೀದಿಸಿ ವರ್ಷ ತುಂಬುವ ಮುನ್ನವೇ ಟಿವಿ ಹಾಳಾಗಿ ಸರ್ವೀಸ್ ಕೊಡಲು ಸತಾಯಿಸಿದ ಸ್ಯಾಮ್‌ಸಂಗ್‌ ಟಿವಿ ಕಂಪನಿಗೆ ಟಿವಿ ಸರಿಪಡಿಸಿಕೊಡುವಂತೆ ಮತ್ತು ಗ್ರಾಹಕರಿಗೆ 3 ಸಾವಿರ ಪರಿಹಾರ ನೀಡುವಂತೆ ಆದೇಶಿಸಿದೆ.


ಬೆಂಗಳೂರಿನ ಕೆ.ಆರ್ ಪುರ ನಿವಾಸಿ ವಿನೀತ್ ಕುಮಾರ್ ಎಂಬುವರು ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿದ ಬೆಂಗಳೂರಿನ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಪರಿಹಾರ ನೀಡುವಂತೆ ಆದೇಶಿಸಿದೆ.

ವಿನೀತ್‌ ಕುಮಾರ್‌ 2020ರ ಅಕ್ಟೋಬರ್‌ 3ರಂದು 70,900 ರೂಪಾಯಿ ಪಾವತಿಸಿ ಸ್ಯಾಮ್‌ಸಂಗ್‌ ಟಿವಿ ಖರೀದಿಸಿದ್ದರು. 2021ರ ಅಕ್ಟೋಬರ್‌ 3ಕ್ಕೆ ವಾರಂಟಿ ಮುಗಿಯುವುದಿತ್ತು.

ಆದರೆ, 2021ರ ಜೂನ್‌ನಲ್ಲಿ ಟಿವಿಯ ಡಿಸ್‌ಪ್ಲೇ ಕಪ್ಪು ಬಣ್ಣಕ್ಕೆ ತಿರುಗಲಾರಂಭಿಸಿತ್ತು. ಈ ವೇಳೆ ತಂತ್ರಜ್ಞರಿಗೆ ದೂರು ನೀಡಿದ್ದರೂ ಸೂಕ್ತ ಸಮಯದಲ್ಲಿ ಸೇವೆ ನೀಡಿರಲಿಲ್ಲ.

ಅದಾದ 29 ದಿನಗಳ ಬಳಿಕ 50 ಇಂಚು ಸ್ಯಾಮ್‌ಸಂಗ್‌ ಟಿವಿ ಬದಲಿಗೆ 48 ಇಂಚು ಸ್ಯಾಮ್‌ಸಂಗ್‌ ಟಿವಿ ತಂದಿದ್ದರು ಎಂಬ ಕಾರಣಕ್ಕೆ ದೂರುದಾರರು ಅದನ್ನು ಪಡೆದುಕೊಳ್ಳಲು ಒಪ್ಪಿರಲಿಲ್ಲ.

ಬಳಿಕ, ಸೇವೆ ನೀಡಲು ಸತಾಯಿಸಿದ ಸ್ಯಾಮಸಂಗ್ ವಿರುದ್ಧ ವಿನೀತ್ ಕುಮಾರ್ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿದ್ದರು.

ದೂರಿನ ವಿಚಾರಣೆ ನಡೆಸಿದ ಆಯೋಗ 60 ದಿನಗಳ ಒಳಗೆ ಟಿವಿ ಪ್ಯಾನೆಲ್ ಸರಿಪಡಿಸಿಕೊಡಬೇಕು ಹಾಗೆಯೇ ಕೋರ್ಟ್ ವೆಚ್ಚವಾಗಿ ದೂರುದಾರ ಗ್ರಾಹಕರಿಗೆ 3 ಸಾವಿರ ಪರಿಹಾರ ನೀಡಬೇಕು ಆದೇಶಿಸಿದೆ.

LEAVE A REPLY

Please enter your comment!
Please enter your name here

Hot Topics

ಏಕಲವ್ಯ ಪ್ರಶಸ್ತಿ ವಿಜೇತ ಕಬಡ್ಡಿ ಆಟಗಾರ ಉದಯ್ ಚೌಟ ಇನ್ನಿಲ್ಲ

ಬಂಟ್ವಾಳ: ಏಕಲವ್ಯ ಪ್ರಶಸ್ತಿ ವಿಜೇತ ಕಬಡ್ಡಿ ಆಟಗಾರ, ಉದಯ್ ಚೌಟ ಅನಾರೋಗ್ಯದಿಂದ ಇಂದು ನಿಧನರಾಗಿದ್ದಾರೆ.ಬಂಟ್ವಾಳ ತಾಲೂಕು ಮಾಣಿಯ ಬದಿಗುಡ್ಡೆ ನಿವಾಸಿಯಾಗಿರುವ ಉದಯ್ ಚೌಟ ಕಬಡ್ಡಿ ಕ್ಷೇತ್ರದಲ್ಲಿ ತಮ್ಮದೇ ಆದ ಹೆಸರು ಮಾಡಿದ್ದರು.ಅಲ್ಲದೇ ದ.ಕ...

ವಿಶ್ವದ 11 ರಾಷ್ಟ್ರಗಳಿಗೆ ಹರಡಿದ ‘ಮಂಕಿಪಾಕ್ಸ್‌’: ಭಾರತದಲ್ಲಿ ಹೈ ಅಲರ್ಟ್‌

ನವದೆಹಲಿ: ಮಂಕಿ ಪಾಕ್ಸ್ ಕಾಯಿಲೆ ಹಲವು ದೇಶಗಳಲ್ಲಿ ತನ್ನ ಪಾದ ಚಾಚುತ್ತಿದೆ. ಭಾರತದಲ್ಲಿ ಇದುವರೆಗೆ ಈ ಕಾಯಿಲೆಯ ಯಾವುದೇ ಪ್ರಕರಣ ಕಂಡುಬಂದಿಲ್ಲವಾದರೂ ಕೇಂದ್ರ ಸರ್ಕಾರ ಸಂಪೂರ್ಣ ಕಟ್ಟೆಚ್ಚರ ವಹಿಸಿದೆ.ವಿಶ್ವದ ಸುಮಾರು 11 ದೇಶಗಳಲ್ಲಿ...

ಪುತ್ತೂರು: ಕಾರು ಹಾಗೂ ಕೆಎಸ್‌ಆರ್‌ಟಿಸಿ ಬಸ್‌ ಮುಖಾಮುಖಿ ಢಿಕ್ಕಿ

ಪುತ್ತೂರು: ಕಾರು ಹಾಗೂ ಕೆಎಸ್‌ಆರ್‌ಟಿಸಿ ಬಸ್‌ ಮುಖಾಮುಖಿ ಢಿಕ್ಕಿಯಾಗಿ ಕಾರು ಹಾಗೂ ಬಸ್ಸು ಜಖಂಗೊಂಡ ಘಟನೆ ಪುತ್ತೂರು–ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಕೋಡಿಂಬಾಡಿಯಲ್ಲಿ ಇಂದು ಬೆಳಗ್ಗೆ ನಡೆದಿದೆ.ಇಂದು ಬೆಳಿಗ್ಗೆ 7.30ರ ಸುಮಾರಿಗೆ ಕೋಡಿಂಬಾಡಿಯ ವಿನಾಯಕ ನಗರದ...