ತನ್ನ ವಿವಾಹಕ್ಕಾಗಿ ಭಾರತಕ್ಕೆ ಬರಲು ಟರ್ಕಿಯಲ್ಲಿರುವ ವರನಿಗೆ ಆತನ ಬಾಸ್ ರಜೆ ನಿರಾಕರಿಸಿದ ನಂತರ ಹಿಮಾಚಲ ಪ್ರದೇಶದ ಜೋಡಿಯೊಂದು ತಮ್ಮ ವಿವಾಹವನ್ನು ಆನ್‌ಲೈನ್‌ನಲ್ಲಿ ನೆರವೇರಿಸಿಕೊಂಡಿದೆ.
ಹಿಮಾಚಲ ಪ್ರದೇಶದ ಮಂಡಿಯಲ್ಲಿರುವ ವಧುವಿಗೆ ಟರ್ಕಿಯಲ್ಲಿರುವ ವರನೊಂದಿಗೆ ವಿವಾಹ ನಿಶ್ಚಯವಾಗಿತ್ತು. ಆದರೆ ಅನಾರೋಗ್ಯದಿಂದ ಬಳಲುತ್ತಿರುವ ವಧುವಿನ ಅಜ್ಜನ ಆಸೆ ಪೂರೈಸಲು ಕುಟುಂಬ ಸದಸ್ಯರು ಸೋಮವಾರ ವರ್ಚುವಲ್ ವಿವಾಹ ನೆರವೇರಿಸಿದ್ದಾರೆ.
ಬಿಲಾಸ್‌ಪುರ ಮೂಲದ ಅಮ್ಮಾನ್ ಮುಹಮ್ಮದ್ ತನ್ನ ಮದುವೆಗಾಗಿ ಭಾರತಕ್ಕೆ ಬರಲು ಆರಂಭದಲ್ಲಿ ಯೋಜಿಸಿದ್ದರು. ಆದರೆ ಅವರ ಬಾಸ್ ರಜೆ ನೀಡಲು ನಿರಾಕರಿಸಿದ್ದರು. ಅದಕ್ಕಾಗಿ ವಧುವಿನ ಅಜ್ಞನ ಕೊನೆಯಾಸೆಯನ್ನು ಪೂರೈಸುವ ತುರ್ತಿದ್ದ ಕಾರಣ ಅಂತಿಮವಾಗಿ ಆನ್ ಲೈನ್ ಮೂಲಕ ವಿವಾಹ ಮಾಡಲಾಗಿದೆ.
ಭಾನುವಾರ, ಅಫ್ಘಾನ್ ಕುಟುಂಬ ಸದಸ್ಯರು ಬಿಲಾಸ್‌ಪುರದಿಂದ ಮಂಡಿಗೆ ಪ್ರಯಾಣ ಬೆಳೆಸಿದ್ದು, ವಿವಾಹವು ಸೋಮವಾರ ವೀಡಿಯೊ ಕರೆಯಲ್ಲಿ ನಡೆಯಿತು. ಅಲ್ಲಿ ದಂಪತಿಗಳು ಖಾಜಿಯವರ ಸಮ್ಮುಖದಲ್ಲಿ ಪ್ರತಿಜ್ಞೆ ವಿನಿಮಯ ಮಾಡಿಕೊಂಡರು.
ಮದುವೆ ಸಮಾರಂಭಗಳಲ್ಲಿ ತಂತ್ರಜ್ಞಾನವು ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಇದೇ ಮೊದಲಲ್ಲ. ಕಳೆದ ಜುಲೈನಲ್ಲಿ, ತೀವ್ರವಾದ ಭೂಕುಸಿತ ಮತ್ತು ಹಠಾತ್ ಪ್ರವಾಹದಿಂದ ವರನ ದಿಬ್ಬಣ ದಾರಿ ಮಧ್ಯ ಸಿಲುಕಿಕೊಂಡಾಗ ಆ ಜೋಡಿಯು ವೀಡಿಯೊ ಕಾನ್ಸರನ್ಸಿಂಗ್ ಮೂಲಕ ವಿವಾಹವಾಗಬೇಕಾಯಿತು.
ಮಂಗಳೂರು/ ಹಾಸನ : ಇಂಜಿನಿಯರ್ ವಧು ಶಿವಕುಮಾರ್ ಮತ್ತು ಮಂಡ್ಯ ನಿವಾಸಿ ಸಂಗೀತಾ ಅವರು ನವೆಂಬರ್ 11 ರಂದು ಸರಳ ವಿವಾಹವಾಗುವ ಮೂಲಕ ರೂ. 5 ಲಕ್ಷಕ್ಕೂ ಹೆಚ್ಚು ಹಣವನ್ನು ಉಳಿಸಿದ ಗಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಹೊನ್ನವಳ್ಳಿ ಗ್ರಾಮದಲ್ಲಿ ನಡೆದಿದೆ.
ಅತ್ಯಂತ ಅದ್ದೂರಿ
ಮತ್ತು ಆಡಂಭವಾಗಿ ಮದುವೆಯಾಗುವ ಈ ಕಾಲದಲ್ಲಿ, ಇಲ್ಲೊಂದು ಜೋಡಿ ಸರಳ ಮದುವೆಯಾಗಿದ್ದಾರೆ. ಜೊತೆಗೆ ತಮಗೆ ಬಂದ ಹಣದಿಂದ ವಿಶೇಷ ಕೊಡುಗೆ ಕೂಡ ನೀಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಈ ನವಜೋಡಿ ಉಳಿಸಿದ 5 ಲಕ್ಷಕ್ಕೂ ಹೆಚ್ಚಿನ ಹಣದಿಂದ 26 ಶಾಲೆಗೆ ಶುದ್ಧ ನೀರಿನ ಯಂತ್ರ ನಿಡುವ ಮೂಲಕ ಸಮಾಜ ಸೇವೆ ಗೈದಿದ್ದಾರೆ. ಈ ಸತ್ಕಾರ್ಯಕ್ಕೆ ನವಜೋಡಿಗೆ ರೈತಪರ ಹೋರಾಟಗಾರರಾದ ತಾತ ಹೊ.ತಿ.ಹುಚ್ಚಪ್ಪ ಪ್ರೇರಣೆ ಎಂದು ಹೇಳಿದ್ದಾರೆ.
ಹೊನ್ನವಳ್ಳಿ ಗ್ರಾಮದಲ್ಲಿ ಹೊ.ತಿ.ಹುಚ್ಚಪ್ಪ ತಾತ ದತ್ತು ಪಡೆದಿದ್ದ ಶಾಲೆ ಸೇರಿದಂತೆ ತಾಲೂಕಿನ ಕಸಬ ಹೋಬಳಿಯ 26 ಶಾಲೆಗಳಿಗೆ ಉಚಿತವಾಗಿ ಶುದ್ಧ ನೀರಿನ ಯಂತ್ರವನ್ನು ನೀಡಿದ್ದಾರೆ.
ಮಂಗಳೂರು : ‘ಪರಸಂಗದ ಗೆಂಡೆತಿಮ್ಮ’ ಸಿನಿಮಾದಲ್ಲಿ ಮರಕಣಿ ಪಾತ್ರದಲ್ಲಿ ನಟಿಸಿ ಜನಮನ ಗೆದ್ದಿದ್ದ ರೀಟಾ ರಾಧಾಕೃಷ್ಣ ಆಂಚನ್ ಬುಧವಾರ ನಿ*ಧನರಾದರು. ಅವರಿಗೆ 68 ವರ್ಷ ವಯಸ್ಸಾಗಿತ್ತು. ಕನ್ನಡ ಜೊತೆಗೆ ಅವರು ಹಿಂದಿ, ಪಂಜಾಬಿ ಹಾಗೂ ಗುಜರಾತಿ ಭಾಷೆಗಳ ಸಿನಿಮಾಗಳಲ್ಲಿ ನಟಿಸಿ ಖ್ಯಾತರಾಗಿದ್ದರು. ರೀಟಾ ಅಂಚನ್ ಕಳೆದ ಹಲವು ದಿನಗಳಿಂದ ಅ*ನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ.
ಮರಕಣಿಯಾಗಿ ಫೇಮಸ್ :
ನೋಟದಾಗೆ ನಗೆಯ ಮೀಟಿ…ಈ ಹಾಡು ಯಾರಿಗೆ ತಾನೆ ಗೊತ್ತಿಲ್ಲ. 1978ರಲ್ಲಿ ಲೋಕೇಶ್ ಮುಖ್ಯಭೂಮಿಕೆಯಲ್ಲಿದ್ದ ‘ಪರಸಂಗದ ಗೆಂಡೆತಿಮ್ಮ’ ಸಿನಿಮಾದ ಈ ಹಾಡು ಇಂದಿಗೂ ಜೀ*ವಂತ. ಈ ಚಿತ್ರದಲ್ಲಿ ಮರಕಣಿಯಾಗಿ ನಟಿಸಿದ್ದವರು ಬೇರ್ಯಾರೂ ಅಲ್ಲ. ರೀಟಾ ರಾಧಾಕೃಷ್ಣ ಅಂಚನ್ ಅವರು. ಈ ಸಿನಿಮಾದ ನಟನೆಗಾಗಿ ಅವರು ಸಾಕಷ್ಟು ಪ್ರಶಸ್ತಿಗಳನ್ನೂ ಪಡೆದುಕೊಂಡಿದ್ದರು
ಬಟ್ಟಲು ಕಂಗಳ ಚೆಲುವೆ ರೀಟಾ ಈ ಸಿನಿಮಾ ಮೂಲಕ ಜನಮನಸೂರೆಗೊಂಡಿದ್ದಾರೆ. ಪರಭಾಷಾ ಚಿತ್ರಗಳಲ್ಲೂ ಕಂಗೊಳಿಸಿದ್ದ ನಟಿ, ಏನ್ ಎನಾದರ್, ಬದ್ನಾಂ, ಗರ್ಲ್ ಜವಾನ್ ಹೋಗಯಾ, ಆತ್ಮ, ಫರ್ಜ್ ಊರ್ ಪ್ಯಾರ್ ಮತ್ತು ವಿಶು ಕುಮಾರ್ ಅವರ ಕೋಸ್ಟಲ್, ಗಿರೀಶ್ ಕಾರ್ನಾಡ್ ಅವರ ಕನಕಾಂಬರ ಮುಂತಾದ ಅನೇಕ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.
ಬಿಲ್ಲವರ ಸಂಘದ ಮಾಜಿ ಅಧ್ಯಕ್ಷ ಮತ್ತು ಟಾಟಾ ಕಂಪನಿಯಲ್ಲಿ ಹಿರಿಯ ಅಧಿಕಾರಿ. ಟಿ.ಆಂಚನ್ ಅವರ ಪುತ್ರಿಯಾಗಿರುವ ರೀಟಾ ಅಂಚನ್ ವಿವಾಹವಾದ ಬಳಿಕ ರಾಧಾಕೃಷ್ಣ ಮಂಚಿಗಯ್ಯ ಅವರೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದರು. ಮದುವೆಯ ಬಳಿಕ ಸಿನಿಮಾರಂಗದಿಂದ ದೂರ ಉಳಿದಿದ್ದ ಅವರು ಪತಿ, ಪುತ್ರ, ಪುತ್ರಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
ರಘುರಾಮ್ ಪೋಸ್ಟ್ :
‘ ನಿಮ್ಮೆಲ್ಲರಿಗೂ ಇವರ ಜೀವನದ ಕಥೆಯನ್ನು ಪರಿಚಯಿಸಬೇಕೆಂಬ ನನ್ನ ಕನಸು ನನಸಾಗಲಿಲ್ಲ. ‘ಪರಸಂಗದ ಗೆಂಡೆತಿಮ್ಮ’ ಖ್ಯಾತಿಯ ಶ್ರೀಮತಿ ರೀಟಾ ಅಂಚನ್ ರಾಧಾಕೃಷ್ಣ ಅವರು ನೆನ್ನೆ (13/11/2024) ರಂದು ನಮ್ಮನ್ನು ದೈಹಿಕವಾಗಿ ಅ*ಗಲಿದ್ದಾರೆ. ಈ ದುಃಖವನ್ನು ಭರಿಸುವ ಶಕ್ತಿ ಭಗವಂತ ಅವರ ಕುಟುಂಬಕ್ಕೆ ಕೊಡಲಿ’ ಎಂದು ನಿರ್ದೇಶಕ ಹಾಗೂ ಕನಸುಗಳ ಕಾರ್ಖಾನೆ ಯೂಟ್ಯೂಬ್‌ನ ರಘುರಾಮ್ ತಿಳಿಸಿದ್ದಾರೆ.
ಜ್ಯೂಸ್ ಹೆಸರಿನಲ್ಲಿ ಮಾರುಕಟ್ಟೆಗೆ ಈಗ ಸ್ಲೋ ಪಾಯಿಸನ್ ಅಂದ್ರೆ ವಿಷ ಎಂಟ್ರಿ ಆಗುತ್ತಿದೆ, ಇದು ನಿಮ್ಮ ಮಕ್ಕಳು ಮತ್ತು ನಿಮ್ಮ ದೇಹಕ್ಕೆ ಸೇರಿದರೆ ಅದರಿಂದ ದೊಡ್ಡ ಸಮಸ್ಯೆ ಗ್ಯಾರಂಟಿ. ಹೀಗೆ ಆಹಾರ ತಜ್ಞರು & ವೈದ್ಯರು ಮಾರುಕಟ್ಟೆಗಳಲ್ಲಿ ಸಿಗುತ್ತಿರುವ ಜ್ಯೂಸ್ ಬಗ್ಗೆ ವಾರ್ನಿಂಗ್ ಕೊಡುತ್ತಿದ್ದಾರೆ.
ಅದರಲ್ಲೂ ಜ್ಯೂಸ್‌ಗೆ ಆಯುರ್ವೇದದ ಹೆಸರು ಕೊಟ್ಟು ದಾರಿ ತಪ್ಪಿಸುವ ಜನರು ಕೂಡ ಇದೀಗ ಮಾರುಕಟ್ಟೆಗೆ ಬಂದಿದ್ದು, ಸಾಕಷ್ಟು ದೊಡ್ಡ ಸಮಸ್ಯೆಗಳು ಎದುರಾಗಿ ಒದ್ದಾಡುವ ಪರಿಸ್ಥಿತಿ ಬಂದುಬಿಟ್ಟಿದೆ.
ಹೌದು, ಗ್ರಾಹಕರಿಗೆ ಮೋಸ ಮಾಡಲು ಅಂತಾನೇ ಹಲವು ಕಂಪನಿಗಳು ಹುಟ್ಟಿಕೊಂಡಿವೆ. ಅದರಲ್ಲೂ ನಿಮ್ಮ ಆರೋಗ್ಯ ಸರಿಯಾಗುತ್ತೆ, ನಿಮ್ಮ ಆರೋಗ್ಯಕ್ಕೆ ಇದು ಉತ್ತಮ ಎನ್ನುತ್ತ ವಿಷವನ್ನೇ ತಿನ್ನಿಸುವ ವಸ್ತುಗಳು ಹೆಚ್ಚಾಗುತ್ತಿವೆ. ಈ ಪೈಕಿ ಜ್ಯೂಸ್‌ಗಳು ಕೂಡ ಆರೋಗಕ್ಕೆ ಭಾರಿ ಡೇಂಜರ್ ಎಂಬ ಆರೋಪವನ್ನ ವೈದ್ಯರು ಮಾಡುತ್ತಾರೆ. ಅದರಲ್ಲೂ ಕೆಲವರು ಈ ನಿಮ್ಮ ಆರೋಗ್ಯದ ಹೆಸರನ್ನೇ ಬಂಡವಾಳ ಮಾಡಿಕೊಂಡು, ವಿಷಕಾರಿ ಜ್ಯೂಸ್ ಮಾರಾಟ ಮಾಡುತ್ತಾರೆ ಹುಷಾರ್ ಅಂತಿದ್ದಾರೆ ವೈದ್ಯರು!
ವಿಷಕಾರಿ ಜ್ಯೂಸ್ ಮಾರಾಟ?
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಒಂದು ಇದೀಗ ಸಂಚಲನ ಸೃಷ್ಟಿ ಮಾಡಿದೆ. ಯಾಕಂದ್ರೆ ರೆಡಿಮೇಡ್ ಜ್ಯೂಸ್ ಲೆಕ್ಕದಲ್ಲಿ, ನಿಮ್ಮ ಆರೋಗ್ಯ ಕಾಪಾಡುವ ಸುಳ್ಳು ಭರವಸೆ ನೀಡುತ್ತಾ ಸ್ಲೋ ಪಾಯಿಸನ್ ಜ್ಯೂಸ್‌ಗಳನ್ನ ಮಾರಾಟ ಮಾಡುತ್ತಿರುವ ಭಾರಿ ಗಂಭೀರ ಆರೋಪ ಮಾಡಲಾಗುತ್ತಿದೆ. ಈ ವಿಡಿಯೋ ನೋಡಿ ಜನರು ಕೂಡ ಆಘಾತಕಾರಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಜನರ ಬಳಿ ದುಡ್ಡು ಪಡೆಯುವ ಕೆಲವು ಸಂಸ್ಥೆಗಳು, ಜನಗಳಿಗೇ ಮೋಸ ಮಾಡುತ್ತಿರುವ ಆರೋಪ ಕೂಡ ಕೇಳಿ ಬರುತ್ತಿದೆ.
ಜ್ಯೂಸ್ ಕುಡಿಯಬೇಡಿ ಅಂತಾರೆ ವೈದ್ಯರು!
ವೈದ್ಯರು ಹೇಳುವ ಪ್ರಕಾರ ಮನುಷ್ಯನ ದೇಹಕ್ಕೆ ಉತ್ತಮವಾದ ಆಹಾರ ಸಾಕು. ಆದರೆ ಈ ರೀತಿ ಮಾರುಕಟ್ಟೆಯಲ್ಲಿ ಸಿಗುವ ಜ್ಯೂಸ್‌ಗಳು ಮನುಷ್ಯರ ದೇಹಕ್ಕೆ ಉತ್ತಮ ಅಲ್ಲ. ಇದರಿಂದ ಮನುಷ್ಯರಿಗೆ ದೊಡ್ಡ ಸಮಸ್ಯೆ ಎದುರಾಗುತ್ತದೆ. ಭವಿಷ್ಯದಲ್ಲಿ ದೊಡ್ಡ ದೊಡ್ಡ ರೋಗಗಳು ಕೂಡ ಬರುತ್ತವೆ. ಹೀಗಾಗಿ ವೈದ್ಯರ ಸಲಹೆ ಇಲ್ಲದೆ ಯಾವುದೇ ರೀತಿಯ ಜ್ಯೂಸ್ ಕುಡಿಯಲು ಹೋಗಬಾರದು ಅಂತಾರೆ ಡಾಕ್ಟರ್ಸ್.
ಒಟ್ನಲ್ಲಿ ಜ್ಯೂಸ್ ಹೆಸರಲ್ಲಿ ಏನೇನೋ ಸೇಲ್ ಮಾಡುವವರ ವಿರುದ್ಧ ಕೂಡ ಸರ್ಕಾರ ಈಗ ಕ್ರಮ ಕೈಗೊಳ್ಳಬೇಕು. ಗೋಬಿ, ಪಾನಿಪುರಿ ರೀತಿ ಜ್ಯೂಸ್‌ಗಳನ್ನ ಕೂಡ ಸರ್ಕಾರ ಲ್ಯಾಬ್‌ನ ಒಳಗೆ ಪರೀಕ್ಷೆ ಮಾಡಿ, ಮನುಷ್ಯರ ಲಿವರ್, ಕಿಡ್ನಿ ಮೇಲೆ ಪ್ರಭಾವ ಬೀರುವ ವಸ್ತುಗಳನ್ನ ಬ್ಯಾನ್ ಮಾಡಬೇಕು ಎಂಬ ಆಗ್ರಹ ಜನರಿಂದ ಕೇಳಿ ಬರುತ್ತಿದೆ. ಹೀಗಾಗಿ ವೈದ್ಯರು ಜ್ಯೂಸ್ ಕುಡಿಯಬೇಡಿ ಅಂತಾ ಹೇಳಿರುವ ವಿಡಿಯೋ ಫುಲ್ ವೈರಲ್ ಆಗುತ್ತಿದೆ. ಅಲ್ಲದೆ ಆಯುರ್ವೇದ ಮತ್ತಿತರ ಹೆಸರಲ್ಲಿ ಜ್ಯೂಸ್ ಮಾರುವ ಸಂಸ್ಥೆಗಳ ವಿರುದ್ಧ ಕೂಡ ಆಕ್ರೋಶ ವ್ಯಕ್ತವಾಗುತ್ತಿದೆ.