Saturday, July 2, 2022

ರೀಲ್ಸ್‌ನಲ್ಲಿ ಪರಿಚಯವಾಗಿ ಮದುವೆಯಾದ ಜೋಡಿ: ಪತ್ನಿಗೆ ಮೂರು ನಾಮ ಇಕ್ಕಿ ಗಂಡ ಗಾಯಬ್

ಬೆಂಗಳೂರು: ಟಿಕ್‌ಟಾಕ್‌ನಲ್ಲಿ ಪರಿಚಯವಾಗಿ ರೀಲ್ಸ್ ಮಾಡಿ ಆಕರ್ಷಿಸುತ್ತಾ ಯುವತಿಯನ್ನು ಪ್ರೀತಿಯ ಬಲೆಗೆ ಬೀಳಿಸಿ ಯುವಕನೋರ್ವ ಮದುವೆಯಾದ ನಂತರ ಬಿಟ್ಟು ಹೋದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.


ರಮೇಶ್ ಎಂಬಾತ ಹುಬ್ಬಳ್ಳಿ ಮೂಲದ ಯುವತಿಯ ಜಿತೆ ಟಿಕ್‌ಟಾಕ್‌ನ ಮೂಲದಿಂದ ಪರಿಚಯ ಮಾಡಿಕೊಂಡಿದ್ದ. ಹೀಗೆ ಇನ್ಸ್ಟ್ರಾ ರೀಲ್ಸ್‌ನಲ್ಲೂ ಯುವತಿಗೆ ಅಟ್ರಾಕ್ ಆಗುವಂತೆ ವೀಡಿಯೋ ಮಾಡುತ್ತಿದ್ದ.


ಈ ಸಂದರ್ಭ ನನಗೆ ನೀನೇ ಬೇಕು ಎಂದು ಪುಸಲಾಯಿಸಿ ಮದುವೆ ಕೂಡಾ ಆಗಿದ್ದಾನೆ. ಈತನ ಮಾತಿಗೆ, ಆತನ ಪ್ರೀತಿಗೆ ಸಂಪೂರ್ಣ ಮರುಳಾಗಿ ಯುವತಿ ಮನೆ , ಪೋಷಕರನ್ನು ಬಿಟ್ಟು ಚಿನ್ನಾಭರಣ, ಹಣ ಸಮೇತ ಬೆಂಗಳೂರಿಗೆ ಬಂದಿದ್ದಳು.


ನಗರದಲ್ಲೇ ಬಾಡಿಗೆ ಮನೆಯಲ್ಲಿ ಸ್ವಲ್ಪ ಸಮಯ ಅವಳ ಜೊತೆ ಬಾಡಿಗೆ ಮನೆಯಲ್ಲಿದ್ದ ಈತ ಬ್ಯುಸಿನೆಸ್ ನೆಪದಲ್ಲಿ ಆಕೆಯ ಬಳಿಯಿದ್ದ ಚಿನ್ನಾಭರಣಗಳೆಲ್ಲವನ್ನೂ ಮಾರಾಟ ಮಾಡಿದ್ದು, ಅವಳ ಹೆಸರಿನಲ್ಲಿ ಬ್ಯಾಂಕ್‌ನಲ್ಲಿ ಸಾಲ ಕೂಡ ಪಡೆದು ಖರ್ಚು ಮಾಡಿದ್ದ.


ಹಣವೆಲ್ಲ ಖಾಲಿಯಾದ ನಂತರ ಮನೆ ಬಿಟ್ಟು ಎಸ್ಕೇಪ್ ಆಗಿದ್ದಾನೆ. ಸದ್ಯ ಗಂಡನನ್ನು ಹುಡುಕಿಕೊಡುವಂತೆ ಹುಡುಗಿ ಕೆ.ಆರ್ ಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.

LEAVE A REPLY

Please enter your comment!
Please enter your name here

Hot Topics

ವಿಟ್ಲ: ಉದ್ಯಮಿ ಮನೆಗೆ ನುಗ್ಗಿ ಕುಡುಕನ ದರ್ಬಾರ್…

ವಿಟ್ಲ: ಉದ್ಯಮಿಯೊಬ್ಬರ ಮನೆಗೆ ನುಗ್ಗಿ ಕುಡುಕನೋರ್ವ ಮಹಿಳೆ ಮೇಲೆ ಹಲ್ಲೆ ನಡೆಸಲು ಯತ್ನಿಸಿದ ಘಟನೆ ವಿಟ್ಲ ಚಂದಳಿಕೆಯಲ್ಲಿ ನಡೆದಿದೆ.ಚಂದಳಿಕೆ ನಿವಾಸಿ ಉದ್ಯಮಿ ನವೀನ್ ಶೆಟ್ಟಿ ಎಂಬವರ ಮನೆಗೆ ಚಂದಳಿಕೆ ಸಮೀಪದ ರಿಕ್ಷಾ ಡ್ರೈವರ್...

ರೈತ ಪರ ಹೋರಾಟಗಾರ ಬಿ.ವಿ.ಪೂಜಾರಿ ಪೆರ್ಡೂರು ವಿಧಿವಶ

ಉಡುಪಿ: ಪ್ರಗತಿಪರ ರೈತ, ರೈತರ ಪರವಾಗಿ ಹಲವು ಹೋರಾಟಗಳನ್ನು ನಡೆಸಿದ್ದ, ಭಾರತೀಯ ಕಿಸಾನ್ ಸಂಘದ ಉಡುಪಿ ಜಿಲ್ಲಾ ಅಧ್ಯಕ್ಷರಾಗಿದ್ದ ಬಿ.ವಿ. ಪೂಜಾರಿ ಪೆರ್ಡೂರು ಅವರು ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ.ಅವರಿಗೆ 78 ವರ್ಷ ವಯಸ್ಸಾಗಿತ್ತು.ಉಡುಪಿ...

3ನೇ ಸೌತ್ ಇಂಡಿಯಾ ಪ್ರಾಜೆಕ್ಟ್ ಎಕ್ಸಿಬಿಷನ್‌ನಲ್ಲಿ ಉಜಿರೆ SDM ಇಂಜಿನಿಯರಿಂಗ್ ವಿಭಾಗಕ್ಕೆ ಪ್ರಶಸ್ತಿ

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಾಲಿಟೆಕ್ನಿಕ್ ಕಾಲೇಜಿನ ಸಿವಿಲ್ ವಿಭಾಗದ, ಕಲ್ಪತರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ತಿಪಟೂರು ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗವು ದಕ್ಷಿಣ ಭಾರತದ ಸುಮಾರು ಹದಿಮೂರು ಎಂಜಿನಿಯರಿಂಗ್ ವಿಭಾಗಗಳಲ್ಲಿ 3ನೇ ಸೌತ್...