ಬಹು ನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 17ನೇ ಆವೃತ್ತಿ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಮಾರ್ಚ್ 22ರಂದು ಆರ್‌ಸಿಬಿ ಮತ್ತು ಸಿಎಸ್‌ಕೆ ತಂಡಗಳು ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.
ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುವ ಆರಂಭಿಕ ಪಂದ್ಯಕ್ಕೂ ಮೊದಲು 17ನೇ ಆವೃತ್ತಿಯ ಐಪಿಎಲ್‌ನ ಅದ್ಧೂರಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಈ ಮೂಲಕ ಪಂದ್ಯಾವಳಿಗೆ ಚಾಲನೆ ಸಿಗಲಿದೆ.
2024ರ ಐಪಿಎಲ್ ಅನ್ನು ಶುಕ್ರವಾರ ರಾತ್ರಿ ಭವ್ಯವಾದ ಉದ್ಘಾಟನಾ ಸಮಾರಂಭವನ್ನು ಆಯೋಜಿಸಲಾಗುವುದು ಎಂದು ಬಿಸಿಸಿಐ ಬುಧವಾರ ದೃಢಪಡಿಸಿದೆ.
ಆರಂಭಿಕ ಪಂದ್ಯವು ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ನಡುವೆ ನಡೆಯಲಿದೆ.
ಶುಕ್ರವಾರ ಸಂಜೆ ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇವಲ ಕ್ರಿಕೆಟ್ ತಾರೆಯರು ಮಿನುಗುವುದಲ್ಲ. ಜೊತೆಗೆ ಬಾಲಿವುಡ್ ಮತ್ತು ಭಾರತೀಯ ಚಲನಚಿತ್ರ ಸಂಗೀತ ಉದ್ಯಮದ ನಾಲ್ಕು ದೊಡ್ಡ ಸ್ಟಾರ್‌ಗಳು ಭಾಗಿಯಾಗಲಿರುವ ಬಗ್ಗೆ ಬಿಸಿಸಿಐ ಬಹಿರಂಗಪಡಿಸಿದೆ.
ಸ್ಟಾರ್ ನಟರೂ ಸಂಗೀತಗಾರರು ಭಾಗಿ :
ಉದ್ಘಾಟನಾ ಸಮಾರಂಭಕ್ಕೆ ಅದ್ದೂರಿ ಚಾಲನೆ ದೊರಕಲಿದೆ. ಇದರಲ್ಲಿ ಪ್ರದರ್ಶನ ನೀಡುವ ಇಬ್ಬರು ನಟರೆಂದರೆ, ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್ ಹಾಗೂ ಸಂಗೀತ ದಂತಕಥೆ ಎಆರ್ ರೆಹಮಾನ್ ಮತ್ತು ಖ್ಯಾತ ಗಾಯಕ ಸೋನು ನಿಗಮ್ ಮಿಂಚಲಿದ್ದಾರೆ.
ರೆಹಮಾನ್ ಮತ್ತು ಸೋನು ನಿಗಮ್ ಸಂಗೀತ ಮೋಡಿಗೂ ಮುನ್ನ, ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್ ಅನೇಕ ಜನಪ್ರಿಯ ಹಾಡುಗಳಿಗೆ ನೃತ್ಯ ಮಾಡಲಿದ್ದಾರೆ. ಐಪಿಎಲ್‌ನ ಆರಂಭಿಕ ಪಂದ್ಯಕ್ಕೆ ಟಿಕೆಟ್ ಪಡೆದ ಪ್ರೇಕ್ಷಕರಿಗೆ ಡಬಲ್ ಧಮಾಕ ಸಿಗಲಿದೆ.
ಉದ್ಘಾಟನಾ ಸಮಾರಂಭ ಯಾವಾಗ?
2024ರ ಐಪಿಎಲ್ ಉದ್ಘಾಟನಾ ಸಮಾರಂಭವು ಮಾರ್ಚ್ 22ರಂದು ಭಾರತೀಯ ಕಾಲಮಾನ 6:30 ಕ್ಕೆ ಪ್ರಾರಂಭವಾಗಲಿದೆ.
ಎಲ್ಲಿ ನಡೆಯಲಿದೆ?
ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ 2024ರ ಐಪಿಎಲ್ ಉದ್ಘಾಟನಾ ಸಮಾರಂಭ ನಡೆಯಲಿದೆ. ನಂತರ ಇದೇ ಮೈದಾನದಲ್ಲಿ ಸಿಎಸ್‌ಕೆ ಮತ್ತು ಆರ್‌ಸಿಬಿ ನಡುವೆ ಮೊದಲ ಪಂದ್ಯ ಆರಂಭವಾಗಲಿದೆ.
ಯಾವುದರಲ್ಲಿ ಲೈವ್ ಸ್ಟ್ರೀಮಿಂಗ್?
ಐಪಿಎಲ್ 2024ರ ಉದ್ಘಾಟನಾ ಸಮಾರಂಭವು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರಪ್ರಸಾರ ಇರಲಿದೆ. ಇನ್ನು ಜಿಯೋ ಸಿನಿಮಾ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಇರುತ್ತದೆ.
ಯಾವ ಸೆಲೆಬ್ರಿಟಿಗಳಿಂದ ಪ್ರದರ್ಶನ?
ಐಪಿಎಲ್ 2024ರ ಉದ್ಘಾಟನಾ ಸಮಾರಂಭದಲ್ಲಿ ಬಾಲಿವುಡ್ ನಟರಾದ ಅಕ್ಷಯ್ ಕುಮಾರ್, ಟೈಗರ್ ಶ್ರಾಫ್ ಮತ್ತು ಸಂಗೀತ ನಿರ್ದೇಶಕ ಎಆರ್ ರೆಹಮಾನ್ ಮತ್ತು ಹಿನ್ನೆಲೆ ಗಾಯಕ ಸೋನು ನಿಗಮ್ ಅವರಿಂದ ಕಾರ್ಯಕ್ರಮ ನಡೆಯಲಿದೆ ಎಂದು ಬಿಸಿಸಿಐ ದೃಢಪಡಿಸಿದೆ.
ಯಾರೆಲ್ಲ ಅತಿಥಿಗಳು ಭಾಗಿ?
ಐಪಿಎಲ್ 2024ರ ಉದ್ಘಾಟನಾ ಸಮಾರಂಭದಲ್ಲಿ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಕಾರ್ಯದರ್ಶಿ ಜಯ್ ಶಾ, ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ಜೊತೆಗೆ ಬಾಲಿವುಡ್ ತಾರೆಯರು ಮತ್ತು ತಮಿಳುನಾಡಿನ ಕೆಲವು ಪ್ರಮುಖ ರಾಜಕೀಯ ವ್ಯಕ್ತಿಗಳು ಭಾಗವಹಿಸಬಹುದು.
ಮೊದಲ ಪಂದ್ಯದ ಸಮಯ :
ಸಿಎಸ್‌ಕೆ ಮತ್ತು ಆರ್‌ಸಿಬಿ ನಡುವಿನ ಮೊದಲ 2024ರ ಐಪಿಎಲ್ ಪಂದ್ಯವು ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಆರಂಭವಾಗಲಿದೆ ಮತ್ತು ರಾತ್ರಿ 7.30ಕ್ಕೆ ಟಾಸ್ ನಡೆಯಲಿದೆ.
ಕಿಚ್ಚ ಸುದೀಪ್ ಅವರು ನಡೆಸಿಕೊಡುವ ಕನ್ನಡದ ಬಿಗ್ಬಾಸ್ ಸೀಸನ್ 11 ಯಶಸ್ವಿಯಾಗಿ ಸಾಗುತ್ತಿದ್ದು 14ನೇ ವಾರಕ್ಕೆ ಎಂಟ್ರಿಕೊಟ್ಟಿದೆ. ಬಿಗ್ಬಾಸ್ ಕೊನೆ ಹಂತಕ್ಕೆ ಬರುವುದರಿಂದ ಸ್ಪರ್ಧಿಗಳಲ್ಲಿ ಪೈಪೋಟಿ ಹೆಚ್ಚಾಗಿ ನಡೆದಿದೆ. ಒಬ್ಬರ ಮೇಲೆ ಒಬ್ಬರು ಕುದಿಯುತ್ತಿದ್ದು ತಮ್ಮನ್ನು ತಾವು ಎಚ್ಚರಿಸಿಕೊಳ್ಳಬೇಕಿದೆ. ಸೂಪರ್ ಸಂಡೇಯಲ್ಲಿ ಕಿಚ್ಚನಿಂದ ಭವ್ಯಗೌಡ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು. ಇದರ ಬೆನ್ನಲ್ಲೇ ಐಶ್ವರ್ಯ ಮುಖಕ್ಕೆ ಭವ್ಯ ಟೀ ಚೆಲ್ಲಿದ್ದಾರೆ.
ಬಿಗ್ಬಾಸ್ ಮನೆಯಲ್ಲಿ ಎಚ್ಚೆತ್ತಿಕೊಳ್ಳಿ ಎಂದು ಟಾಸ್ಕ್ ಶುರುವಾಗಿದ್ದು ಸ್ಪರ್ಧಿಗಳ ಮುಖಕ್ಕೆ ಟೀ ಅನ್ನು ಹಾಕಲಾಗಿದೆ. ಇದರಲ್ಲಿ ಕೇವಲ ಐಶ್ವರ್ಯ ಮುಖಕ್ಕೆ ಭವ್ಯ ಮಾತ್ರ ಟೀ ಚೆಲ್ಲಿಲ್ಲ. ಇದೇ ರೀತಿ ಎಚ್ಚೆತ್ತುಕೊಳ್ಳಿ ಎಂದು ಹನುಮಂತು ಮುಖಕ್ಕೆ ಧನರಾಜ್, ಗೌತಮಿ ಮುಖಕ್ಕೆ ರಜತ್, ಚೈತ್ರಾ ಮುಖಕ್ಕೆ ಮಂಜು, ಮಂಜು ಮುಖಕ್ಕೆ ಗೌತಮಿ, ಮೋಕ್ಷಿತಾ ಮುಖಕ್ಕೂ ಚಹಾ ಚೆಲ್ಲಲಾಗಿದೆ. ಅಂದರೆ ಇವರೆಲ್ಲಾ ಮನೆಯಲ್ಲಿ ಎಚ್ಚೆತ್ತುಕೊಳ್ಳಬೇಕಿದೆ ಎಂದು ಹೇಳಲಾಗಿದೆ.
ಮನೆಯಲ್ಲಿ ಸದಸ್ಯರ ಪೈಕಿ ಎಚ್ಚೆತ್ತುಕೊಳ್ಳಬೇಕಿರುವ ಸದಸ್ಯ ಯಾರು ಎಂದು ಘೋಷಿಸಬೇಕಿದೆ. ಇದು ಬಿಗ್ ಬಾಸ್ ಆರ್ಡರ್ ಆಗಿದೆ. ಈ ಹಿನ್ನೆಲೆಯಲ್ಲಿ ಗೌತಮಿ, ಹನುಮಂತು, ಚೈತ್ರಾ, ಮೋಕ್ಷಿತಾ, ಮಂಜು ಇವರು ಇನ್ನಷ್ಟು ಎಚ್ಚೆತ್ತುಕೊಂಡು ಸ್ಪರ್ಧೆ ಮಾಡಬೇಕಿದೆ. ನೀವು ಟಾಸ್ಕ್ನಲ್ಲಿ ಇನ್ನಷ್ಟು ಸುಧಾರಿಸಿಕೊಳ್ಳಬೇಕು ಎಂದು ಟೀ ಚೆಲ್ಲಲಾಗಿದೆ. ಗೌತಮಿಗೆ ಹೆದರಿಕೊಂಡು ಮಂಜು ಮಾತನಾಡಲ್ಲ ಎನ್ನಲಾಗಿದೆ.
ಚೈತ್ರಾ ಕುಂದಾಪುರ ಹಾಗೂ ಐಶ್ವರ್ಯ ನಡುವೆ ಮಾತಿನ ಸಮರ ನಡೆದಿದೆ. ನಿಮ್ಮ ಆಟಗಳಿಗೆ ಈ ವಾರ ನಾನು ಬಲಿಪಶು ಆದೆ ಎಂದು ಚೈತ್ರಾಗೆ, ಐಶ್ವರ್ಯ ಕೋಪದಲ್ಲಿ ಚೀರಿಕೊಂಡು ಹೇಳಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿನ ವಾಕ್ಸಮರ ನಡೆದಿದ್ದು ಕಿಚ್ಚು ಬಿದ್ದಂತೆ ಆಗಿದೆ. ನೀನು ಯಾವಳೇ ಎ.. ಅನ್ನೋಕೆ ಎಂದು ಚೈತ್ರಾ ಏಕವಚನದಲ್ಲೇ ಮಾತನಾಡಿದ್ದಾರೆ. ಬಾಯಿ ಮುಚ್ಚೆ ಸಾಕು ಎಂದು ಐಶ್ವರ್ಯ ತಿರುಗೇಟು ಕೊಟ್ಟಿದ್ದಾರೆ.
ಫ್ಲೋರಿಡಾ: ಕ್ರಿಸ್ಮಸ್ ಪ್ರದರ್ಶನದಲ್ಲಿ ಡ್ರೋನ್ಗಳು ಗಾಳಿಯಲ್ಲಿ ಡಿಕ್ಕಿ ಹೊಡೆದ ನಂತರ ಮತ್ತು ಹೆಚ್ಚಿನ ವೇಗದಲ್ಲಿ ಕೆಳಗಿರುವ ಜನಸಮೂಹಕ್ಕೆ ಡಿಕ್ಕಿ ಹೊಡೆದ ನಂತರ ಎವೆರಾಲ್ ಜನರು ಗಾಯಗೊಂಡಿದ್ದಾರೆ.
ಒಬ್ಬ ವ್ಯಕ್ತಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಒರ್ಲ್ಯಾಂಡೊ ಅಗ್ನಿಶಾಮಕ ಇಲಾಖೆ ನ್ಯೂಸ್ 6 ಗೆ ತಿಳಿಸಿದೆ. ಆದಾಗ್ಯೂ, ಇಬ್ಬರು ತಾಯಂದಿರು ತಮ್ಮ ಮಗ ರಾಕ್ಷಸ ಡ್ರೋನ್ನಿಂದ ಎದೆಗೆ ಹೊಡೆದ ನಂತರ “ಇಆರ್ನಲ್ಲಿ ತನ್ನ ಜೀವನಕ್ಕಾಗಿ ಹೋರಾಡುತ್ತಿದ್ದಾನೆ” ಎಂದು ಹೇಳಿದ್ದಾರೆ.
ಘಟನೆಯ ವೀಡಿಯೊವು ಅಪಘಾತವನ್ನು ತೋರಿಸುತ್ತದೆ, ಪ್ರೇಕ್ಷಕರು ಉಸಿರುಗಟ್ಟುತ್ತಾರೆ ಮತ್ತು ಭಯಭೀತರಾದ ಮಕ್ಕಳು ಕಿರುಚುತ್ತಾರೆ. ಒರ್ಲ್ಯಾಂಡೊ ನಗರದ ಸಹಭಾಗಿತ್ವದಲ್ಲಿ ಸ್ಕೈ ಎಲಿಮೆಂಟ್ಸ್ ಡ್ರೋನ್ಗಳು ನಡೆಸುತ್ತಿರುವ ಸಂಜೆ 6:30 ರ ಪ್ರದರ್ಶನದ ಸಮಯದಲ್ಲಿ ನೂರಾರು ಕೆಂಪು ಮತ್ತು ಹಸಿರು ಡ್ರೋನ್ಗಳು ರಾತ್ರಿ ಆಕಾಶವನ್ನು ಬೆಳಗಿಸಿದವು. ಆದಾಗ್ಯೂ, ಮಾನವರಹಿತ ವಿಮಾನಗಳ ಸಮೂಹಗಳು ಇದ್ದಕ್ಕಿದ್ದಂತೆ ಶ್ರೇಣಿಗಳನ್ನು ಮುರಿಯಲು ಪ್ರಾರಂಭಿಸಿದವು, ಯಾವುದೇ ಮುನ್ಸೂಚನೆಯಿಲ್ಲದೆ ಭೂಮಿಗೆ ಇಳಿಯಲು ಪ್ರಾರಂಭಿಸಿದವು.
ಟಿಕ್ಟಾಕ್ನಲ್ಲಿ ಪೋಸ್ಟ್ ಮಾಡಲಾದ ಒಂದು ವೀಡಿಯೊದಲ್ಲಿ ಡ್ರೋನ್ಗಳು ನೆಲದ ಕಡೆಗೆ ಚಲಿಸುತ್ತಿರುವುದನ್ನು ತೋರಿಸುತ್ತದೆ, ಏಕೆಂದರೆ ನೆಲದಿಂದ “ಓಹ್” ಎಂಬ ಕೋರಸ್ ಕೇಳಬಹುದು. “ಏನಾಗುತ್ತಿದೆ?” ಎಂದು ಮಗು ಕೇಳುತ್ತಿರುವುದು ಕೇಳಿಸುತ್ತದೆ.
ಅಪಘಾತದ ಹೊರತಾಗಿಯೂ ಪ್ರದರ್ಶನವು ಮುಂದುವರಿಯಿತು ಎಂದು ವರದಿಯಾಗಿದೆ. ಆದಾಗ್ಯೂ, ರಾತ್ರಿ 8 ಗಂಟೆಯ ಪ್ರದರ್ಶನವನ್ನು ರದ್ದುಪಡಿಸಲಾಗಿದೆ ಎಂದು ಒರ್ಲ್ಯಾಂಡೊ ನಗರವು ಎಕ್ಸ್ ನಲ್ಲಿ ಪ್ರಕಟಣೆಯಲ್ಲಿ ತಿಳಿಸಿದೆ.