Connect with us

ದ.ಕ ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ: ಕೋವಿಡ್ ನಿಯಮ ಪಾಲಿಸದಿದ್ದಲ್ಲಿ ಬೀಳುತ್ತೆ ಕೇಸ್…

Published

on

ದ.ಕ ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ: ಕೋವಿಡ್‌ ನಿಯಮ ಪಾಲಿಸದಿದ್ದಲ್ಲಿ ಬೀಳುತ್ತೆ ಕೇಸ್…

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿನ್ನೆ (ಜೂನ್ 27) ಒಂದೇ ದಿನ 49 ಹೊಸ ಕೋವಿಡ್‌ ಪ್ರಕರಣಗಳು ದಾಖಲಾಗಿದ್ದು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 576ಕ್ಕೆ ಏರಿಕೆಯಾಗಿದೆ.

ಈ ಮೂಲಕ ಕೊರೊನಾ ಮಹಾಮಾರಿ ಜಿಲ್ಲೆಯ ಮಂದಿಗೆ ಇನ್ನಷ್ಟು ಆತಂಕವನ್ನು ತಂದಿಟ್ಟಿದೆ.

ನಿನ್ನೆ ಒಂದೇ ದಿನ 49 ಕೊರೋನಾ ಪ್ರಕರಣಗಳು ದಾಖಲಾಗಿದ್ದು, ಪ್ರಾಥಮಿಕ ಸಂಪರ್ಕದಲ್ಲೇ 22 ಜನರಿಗೆ ಸೋಂಕು ಕಂಡು ಬಂದಿದ್ದರೆ, ಅಂತರಾಷ್ಟ್ರೀಯ ಪ್ರಯಾಣದಿಂದ 14 ಜನರಿಗೆ ಕೊರೊನಾ ಪತ್ತೆಯಾಗಿದೆ.

ಇನ್ನು ಇದರಲ್ಲಿ ಸಂಪರ್ಕ ಸಿಗದ 3 ಕೇಸ್ ಪತ್ತೆಯಾಗಿದೆ. ಮಂಗಳೂರಿನ ಚಿನ್ನಾಭರಣ ಮಳಿಗೆಯೊಂದರ ಸಿಬ್ಬಂದಿಗೂ ಕೊರೊನಾ ಸೋಂಕು ಕಾಣಿಸಿಕೊಂಡು ಚಿನ್ನಾಭರಣ ಮಳಿಗೆಯನ್ನು ಸೀಲ್‌ ಡೌನ್‌ ಮಾಡಲಾಗಿದೆ.

ಇನ್ನು ಸಮೀಪದ ಉಳ್ಳಾಲದಲ್ಲಿ ಕೂಡಾ ಕೊರೊನಾ ಸೋಂಕಿತರ ಆತಂಕವನ್ನು ಹೆಚ್ಚಿಸಿದ್ದಾರೆ.

ಉಳ್ಳಾಲದಲ್ಲಿ ಒಂದೇ ಮನೆಯ 12 ಜನರಿಗೆ ಇಂದು ಪಾಸಿಟಿವ್ ಕಂಡು ಬಂದಿದೆ. ಇವರಲ್ಲಿ ಕೆಲ ದಿನಗಳ ಹಿಂದೆ ‌ಮನೆಯ ಓರ್ವ ಮಹಿಳೆಗೆ ಪಾಸಿಟಿವ್ ಆಗಿತ್ತು.

ಹೀಗಾಗಿ ಇಡೀ ಮನೆಯನ್ನು ಸೀಲ್ ಡೌನ್ ಮಾಡಿ ಮನೆಯವರನ್ನು ಕ್ವಾರೆಂಟೈನ್ ಮಾಡಲಾಗಿತ್ತು. ಒಟ್ಟು 17 ಜನರಿದ್ದ ತುಂಬು ಕುಟುಂಬಕ್ಕೆ ಕೊರೊನಾ ಸೋಂಕು ತಗುಲಿದೆ.

ಮೊದಲು ಪಾಸಿಟಿವ್ ಆದ ಮಹಿಳೆ ಸೇರಿ ಒಂದೇ ಮನೆಯ 13 ಜನರಿಗೆ ಕೊರೋನಾ ಪತ್ತೆಯಾಗಿದೆ. ಅಲ್ಲದೆ ಉಳ್ಳಾಲದಲ್ಲಿ ಇಂದು ಮತ್ತೆ ಇಬ್ಬರು ಪೊಲೀಸ್ ಸಿಬ್ಬಂದಿಗೆ ಪಾಸಿಟಿವ್ ಪತ್ತೆಯಾಗಿದೆ.

ಇನ್ನು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್‌ ಪ್ರಕರಣಗಳು ಭಾರೀ ಸಂಖ್ಯೆಯಲ್ಲಿ ಹೆಚ್ಚಾಗುತ್ತಿದ್ದು, ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಎಚ್ಚರಿಕೆಯಿಂದ ಇರುವಂತೆ ಜನರಲ್ಲಿ ಮನವಿ ಮಾಡಿದ್ದಾರೆ.

ಲಾಕ್‌ಡೌನ್‌ ಮುಗಿದು ಅನ್‌ ಲಾಕ್‌ ಆದ ಮೇಲೆ ಜನ ಕೊರೋನಾವೇ ಹೋಗಿದೆ ಅನ್ನೋ ರೀತಿ ವರ್ತಿಸುತ್ತಿದ್ದಾರೆ. ಮಾಸ್ಕ್‌ ಧರಿಸುವುದು, ಸಾಮಾಜಿಕ ಅಂತರ ಪಾಲನೆ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ.

ಹೋಮ್‌ ಕ್ವಾರಂಟೈನ್‌ಲಿ ಇರುವ ವ್ಯಕ್ತಿಗಳು ಕೋವಿಡ್‌ ನಿಯಮಗಳನ್ನು ಪಾಲಿಸುತ್ತಿಲ್ಲ. ಜಿಲ್ಲೆಯಲ್ಲಿ ಸುಮಾರು 100 ಕಂಟೈನ್ಮೆಂಟ್‌ ಝೋನ್‌ ಮತ್ತು ಸೀಲ್‌ಡೌನ್‌ ಪ್ರದೇಶಗಳು ಇವೆ.

ಆ ಮನೆ, ಪ್ರದೇಶದ ಜನರು ದಯವಿಟ್ಟು ಗೈಡ್‌ಲೈನ್ಸ್‌ನ ಕಡ್ಡಾಯವಾಗಿ ಪಾಲಿಸಿ, ಎಲ್ಲರೂ ಸಹಕರಿಸಿ, ತಪ್ಪಿದ್ದಲ್ಲಿ ಕೇಸ್‌ ದಾಖಲಿಸಲಾಗುತ್ತೆ.

ಇದು ಕೇವಲ ನಿಮ್ಮೊಬ್ಬರ ಆರೋಗ್ಯವಲ್ಲ, ಇಡೀ ಕುಟುಂಬ, ಸಮಾಜದ ಆರೋಗ್ಯ ಕಾಪಾಡುವುದು ನಿಮ್ಮ ಜವಾಬ್ದಾರಿ ಆಗಿರುತ್ತೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್‌ ಮನವಿ ಮಾಡಿದ್ದಾರೆ.

Click to comment

Leave a Reply

Your email address will not be published. Required fields are marked *

LATEST NEWS

ಪತ್ನಿಗೆ ಮೆಸೇಜ್ ಮಾಡಿದ್ದಕ್ಕೆ ಖಾದರ್‌ ಭಾಷಾನನ್ನು ಭೀಕರವಾಗಿ ಹ*ತ್ಯೆಗೈದ ಆಂಜನೇಯ ಗುಡಿಯ ಪೂಜಾರಿ..!

Published

on

ರಾಯಚೂರು : ಪತ್ನಿಗೆ ಮೆಸೇಜ್ ಮಾಡಿದ ಕಾರಣಕ್ಕೆ ಹನುಮ ಜಯಂತಿಯಂದು ಉಗ್ರ ರೂಪ ತಾಳಿದ ಆಂಜನೇಯ ಗುಡಿ ಪೂಜಾರಿ ಆ ಯುವಕನನ್ನು ಬರ್ಬರವಾಗಿ ಕೊ*ಲೆಗೈದಿರುವ ಘಟನೆ ರಾಯಚೂರಿನ ತುಗ್ಗಲದಿನ್ನಿ ಗ್ರಾಮದಲ್ಲಿ ನಡೆದಿದೆ.


ಖಾದರ್ ಭಾಷಾ (28) ಕೊ*ಲೆಯಾದ ವ್ಯಕ್ತಿ. ಮಾರುತಿ ಹ*ತ್ಯೆಗೈದ ಪೂಜಾರಿ. ಇಬ್ಬರೂ ಮಸ್ಕಿ ತಾಲೂಕಿನ ಬಳಗಾನೂರು ಗ್ರಾಮದ ನಿವಾಸಿಗಳು. ಆದರೆ, ಖಾದರ್ ಭಾಷಾ ಮಾರುತಿ ಪತ್ನಿ‌ ಮೇಲೆ ಕಣ್ಣು ಹಾಕಿದ್ದಾನೆ. ಹೀಗಾಗಿ ಮಾರುತಿ, ಖಾದರ್‌ ಭಾಷಾನ ಕಣ್ಣು ಕಿತ್ತು ಹಾಕಿ, ಮುಖದ ಗುರುತು ಸಿಗದಂತೆ ಕೊಚ್ಚಿ ಭೀ*ಭತ್ಸವಾಗಿ ಹ*ತ್ಯೆ ಮಾಡಿದ್ದಾನೆ.

ಕೊ*ಲೆಗೈದ ಮಾರುತಿ ಖುದ್ದಾಗಿ ಠಾಣೆಗೆ ಬಂದು ಶರಣಾಗಿದ್ದಾನೆ. ಈ ಕೊ*ಲೆಯಲ್ಲಿ ಇತರರೂ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಬಳಗಾನೂರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

ಇದನ್ನೂ ಓದಿ : ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನ ಬ್ಯಾಗ್ ಪರಿಶೀಲಿಸಿದ ಕಸ್ಟಮ್ಸ್ ಅಧಿಕಾರಿಗಳಿಗೆ ಶಾಕ್; ಅದರಲ್ಲಿತ್ತು 10 ಅನಕೊಂಡಾ!

Continue Reading

International news

4 ಸಾವಿರ ಕೋಟಿಯ ಮನೆ..8 ಖಾಸಗಿ ಜೆಟ್..700 ಹೈಎಂಡ್ ಕಾರುಗಳು..! ಯಾರು ಈ ಶ್ರೀಮಂತ..?

Published

on

ಮಂಗಳೂರು : ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳ ಸಾಲಿನಲ್ಲಿ ಎಲೋನ್ ಮಸ್ಕ್ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಎಲ್ಲರೂ ಹುಬ್ಬೇರುವಷ್ಟು ಆಸ್ತಿ, ಪಾಸ್ತಿ ಹೊಂದಿದ್ದಾರೆ. ಆದರೆ, ಅವರಿಗಿಂತಲೂ ಶ್ರೀಮಂತರಿದ್ದಾರೆ ಗೊತ್ತಾ!? ಅಬ್ಬಾ! ಹೌದಾ! ಹಾಗಾದರೆ ಅವರ ಬಳಿ ಎಷ್ಟು ಆಸ್ತಿ ಇದೆ ಎಂದು ನೀವು ಹುಬ್ಬೇರಿಸುತ್ತಿರಬಹುದು. ಇಲ್ಲಿದೆ ಆ ಕುಟುಂಬದ ಸಂಪೂರ್ಣ ವಿವರ.

ಬ್ಲೂಮ್‌ಬರ್ಗ್ ವರದಿ ಮಾಡಿರೋ ಶ್ರೀಮಂತರು

ಎಲೋನ್ ಮಸ್ಕ್ ಮನೆ ಬರೋಬ್ಬರಿ 4 ಸಾವಿರ ಕೋಟಿ ಬೆಲೆ ಬಾಳಿದ್ರೆ, ಈ ಕುಟುಂಬ 8 ಖಾಸಗಿ ಜೆಟ್ ಗಳನ್ನು ಹೊಂದಿದೆ. 700 ಹೈ ಎಂಡ್ ಕಾರುಗಳು ಇವರಲ್ಲಿದೆ. ಬ್ಲೂಮ್‌ ಬರ್ಗ್ ಇತ್ತೀಚಿಗೆ ಮಾಡಿದ ವರದಿಯಂತೆ ಜಗತ್ತಿನ ಶ್ರೀಮಂತ ವ್ಯಕ್ತಿ ಎಂದು ಕರೆಸಿಕೊಳ್ಳುವ ಎಲೋನ್ ಮಸ್ಕ್ ಆಸ್ತಿ 14,87,360 ಕೋಟಿ(ಹದಿನಾಲ್ಕು ಲಕ್ಷದ ಎಂಬತ್ತೇಳು ಸಾವಿರದ ಮುನ್ನೂರ ಅರುವತ್ತು ಕೋಟಿ)ಯಾಗಿದೆ.

ಆದ್ರೆ, ಆ ಕುಟುಂಬದ ಒಟ್ಟು ಆಸ್ತಿ ಕನಿಷ್ಟ ಅಂದ್ರೂ 25,33,113 ಕೋಟಿ (ಇಪ್ಪತೈದು ಲಕ್ಷದ ಮೂವತ್ತಮೂರು ಸಾವಿರದ ನೂರ ಹದಿಮೂರು ಕೋಟಿ) ಎಂದು ಅಂದಾಜಿಸಿದೆ. ಆದ್ರೆ, ಎಲೋನ್ ಮಸ್ಕ್ ಆಸ್ತಿ ವೈಯಕ್ತಿಕವಾಗಿದ್ದರೆ, ಇವರದ್ದು ಕುಟುಂಬದ ಆಸ್ತಿಯಾಗಿದೆ. ಆದ್ರೆ ಜಗತ್ತಿನಲ್ಲೇ ಅತ್ಯಂತ ಐಶಾರಾಮಿ ಜೀವನ ನಡೆಸ್ತಾ ಇದೆ ಈ ಕುಟುಂಬ.

ಯಾವುದು ಆ ಕುಟುಂಬ?


ಅಂದಹಾಗೆ ಅತ್ಯಂತ ಐಷಾರಾಮಿ ಜೀವನ ಸಾಗಿಸುತ್ತಿರುವ ಆ ಕುಟುಂಬ  ‘ಅಬುಧಾಬಿಯ ರಾಜಮನೆತನ‘. ಇದನ್ನು ಅಲ್‌-ನಯನ್ ಕುಟುಂಬ ಎಂದೂ ಕೂಡಾ ಕರೆಯಲಾಗುತ್ತದೆ. ಸದ್ಯದ ಮಟ್ಟಿಗೆ ಜಗತ್ತಿನಲ್ಲಿ ಇವರೇ ಅತ್ಯಂತ ಐಶಾರಾಮಿ ಜೀವನ ಸಾಗಿಸುತ್ತಿರುವ ಕುಟುಂಬ. ಇವರು ವಾಸವಾಗಿರುವ ಅರಮನೆಯ ಅಂದಾಜು ಮೌಲ್ಯ 4000 ಕೋಟಿಯದ್ದಾಗಿದೆ. ಇನ್ನು 700 ಐಶಾರಾಮಿ ಕಾರುಗಳು, ಗಾಲ್ಫ್ ಆಡಬಹುದಾದ ದೊಡ್ಡದಾದ ವಿಹಾರ ನೌಕೆ, ಇನ್ನು ತಿರುಗಾಡಲು 8 ಖಾಸಗಿ ಜೆಟ್‌ಗಳು ಇವರ ಬಳಿ ಇದೆ.

ಜಗತ್ತಿನಾದ್ಯಂತ ಸಾವಿರಾರು ಕೋಟಿ ಹೂಡಿಕೆ


ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಅಧ್ಯಕ್ಷ ಮತ್ತು ಮುಖ್ಯಸ್ಥ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಯಾನ್ ಅವರ ಕುಟುಂಬವು ಪ್ರಪಂಚದಾದ್ಯಂತ ಸಾವಿರಾರು ಹೂಡಿಕೆಗಳನ್ನು ಹೊಂದಿದೆ. ಅಲ್ಲದೇ, ಜಗತ್ತಿನಾದ್ಯಂತ ಸಾಕಷ್ಟು ಆಸ್ತಿಗಳನ್ನು ಈ ಕುಟುಂಬ ಖರೀದಿಸಿದೆ. ಪ್ಯಾರಿಸ್‌ನಲ್ಲಿರುವ ಚಟೌ ಡಿ ಬೈಲೊ ಮತ್ತು ಯುಕೆಯಲ್ಲಿನ ಅನೇಕ ಆಸ್ತಿಗಳ ಮಾಲೀಕತ್ವದ ಕಾರಣ ಶೇಖ್ ಖಲೀಫಾ ಅವರನ್ನು ಲಂಡನ್‌ನ ಜಮೀನುದಾರ ಎಂದು ಕರೆಯಲಾಗುತ್ತದೆ. ಈ ಕುಟುಂಬವು ಪ್ರಪಂಚದಾದ್ಯಂತ ಲೆಕ್ಕವಿಲ್ಲದಷ್ಟು ಹೂಡಿಕೆ ಮಾಡಿದೆ. ಇದು ಎಲೋನ್ ಮಸ್ಕ್ ಅವರ ಕಂಪನಿ ಸ್ಪೇಸ್‌ ಎಕ್ಸ್ ಮತ್ತು ರಿಹಾನ್ನಾ ಅವರ ಐಷಾರಾಮಿ ಕಂಪನಿ ಸ್ಯಾವೇಜ್ ಎಕ್ಸ್‌ನ ಹೆಸರುಗಳನ್ನು ಸಹ ಒಳಗೊಂಡಿದೆ.

ಇದನ್ನೂ ಓದಿ : ಅಂಬಾನಿ ಪುತ್ರನ ಮದುವೆ ಎಲ್ಲಿ ನಡೆಯುತ್ತೆ ಗೊತ್ತಾ…!! ಹೇಗಿದೆ ಅದ್ಧೂರಿ ತಯಾರಿ?

ರಾಯಲ್ ವಿಹಾರ ನೌಕೆ :


ರಾಯಲ್ ಫ್ಯಾಮಿಲಿ ಅಂದ್ರೆ ಕೇಳ್ಬೇಕಾ..! ಎಲ್ಲವೂ ರಾಯಲ್ ಆಗೇ ಇರುತ್ತದೆ. ಈ ಕುಟುಂಬ ಪ್ರಪಂಚದ ಅತಿದೊಡ್ಡ ವಿಹಾರ ನೌಕೆಯನ್ನು ಹೊಂದಿದೆ, ಅದರ ಮೇಲೆ ಗಾಲ್ಫ್ ಕೋರ್ಸ್ ಅನ್ನು ನಿರ್ಮಿಸಲಾಗಿದೆ. ನೀಲಿ ಸೂಪರ್‌ಯಾಚ್‌ನ ಉದ್ದವು ಸುಮಾರು 591 ಅಡಿಗಳು, ಇದರ ಬೆಲೆ ಸುಮಾರು 4,991 ಕೋಟಿ ರೂ. ಜೊತೆಗೆ ಹಲವು ಐಶಾರಾಮಿ ಕಾರುಗಳೂ ಇವೆ. ಬುಗಾಟಿ, ಫೆರಾರಿ, ಮೆಕ್ಲಾರೆನ್, ಮರ್ಸಿಡಿಸ್-ಬೆನ್ಜ್ ಮತ್ತು ಲಂಬೋರ್ಘಿನಿ ಸೇರಿದಂತೆ ಹಲವು ಕಾರುಗಳಿವೆ.

Continue Reading

LATEST NEWS

ಕೇರಳದಲ್ಲಿ ಬಹಿರಂಗವಾಗಿ ಕಾಣಿಸಿದ ನಕ್ಸಲರ ತಂಡ; ಚುನಾವಣೆ ಬಹಿಷ್ಕಾರಕ್ಕೆ ಕರೆ

Published

on

ಕೇರಳ : ವಯನಾಡು ಜಿಲ್ಲೆಯ ಕಂಬಮಲೆ ಅರಣ್ಯ ಹಾಗೂ ಮಕ್ಕಿಮಲೆ ಅರಣ್ಯದಲ್ಲಿ ನಕ್ಸಲರು ಇದ್ದಾರೆ ಅನ್ನೋ ಅನುಮಾನ ಬಲವಾಗಿತ್ತು. ಹೀಗಾಗಿ ಕೇರಳದ ನಕ್ಸಲ್ ನಿಗ್ರಹ ತಂಡ ನಿರಂತರ ಕೂಂಬಿಂಗ್ ನಡೆಸಿತ್ತು. ಆದ್ರೆ, ನಕ್ಸಲರ ಸುಳಿವು ಪತ್ತೆಯಾಗದ ಕಾರಣ ಕೂಂಬಿಂಗ್ ನಿಲ್ಲಿಸಲಾಗಿತ್ತು. ಆದ್ರೆ, ಇದೀಗ ಲೋಕಸಭಾ ಚುನಾವಣೆ ವೇಳೆ ಮತ್ತೆ ನಕ್ಸಲರು ಗ್ರಾಮದಲ್ಲಿ ಕಾಣಿಸಿಕೊಂಡಿದ್ದಾರೆ.


ಚುನಾವಣೆ ಬಹಿಷ್ಕರಿಸಲು ಸೂಚನೆ :

ಮಾವೋವಿಸ್ಟ್ ಜಿಂದಾಬಾದ್ ಎಂಬ ಘೋಷಣೆ ಕೂಗಿ ಗ್ರಾಮಕ್ಕೆ ಎಂಟ್ರಿ ಕೊಟ್ಟು ನಾಲ್ವರ ತಂಡ ಚುನಾವಣೆಗೆ ಬಹಿಷ್ಕಾರ ಮಾಡುವಂತೆ ಕರೆ ನೀಡಿದ್ದಾರೆ. ಗ್ರಾಮಸ್ಥರ ಜೊತೆ ಮಾತನಾಡಿ ಕಳೆದ ನಲುವತ್ತು ವರ್ಷದಿಂದ ಕಂಬಮಲೆ ಅರಣ್ಯ ತಪ್ಪಲಿನ ಜನರ ಸಮಸ್ಯೆಯನ್ನು ಸರ್ಕಾರ ಗಮನಿಸಿಲ್ಲ. ಇಲ್ಲಿ ವಾಸವಾಗಿರುವ ಕೂಲಿ ಕಾರ್ಮಿಕರ ಕಷ್ಟ ಸರ್ಕಾರ ಅರ್ಥ ಮಾಡಿಕೊಂಡಿಲ್ಲ. ಹೀಗಾಗಿ ಎಲ್ಲರೂ ಚುನಾವಣೆ ಬಹಿಷ್ಕಾರ ಮಾಡಿ ಎಂದು ಕರೆ ನೀಡಿದ್ದಾರೆ.

ಈ ತಂಡದಲ್ಲಿ ಕೇರಳ ರಾಜ್ಯಕ್ಕೆ ಬಹಳಷ್ಟು ವರ್ಷಗಳಿಂದ ತಲೆ ಮರೆಸಿಕೊಂಡಿರುವ ನಕ್ಸಲರು ಇದ್ದರು ಅನ್ನೋ ಮಾಹಿತಿಯನ್ನು ಸ್ಥಳೀಯರು ನೀಡಿದ್ದಾರೆ. ಕಂಬಮಲೆ ಎಂಬ ಪ್ರದೇಶದಲ್ಲಿ ಟೀ ಎಸ್ಟೇಟ್ ಇದ್ದು, ಇಲ್ಲಿನ ಕೂಲಿ ಕಾರ್ಮಿಕರ ಜೊತೆ ನಕ್ಸಲರು ಮಾತುಕತೆ ನಡಿಸಿದ ವಿಡಿಯೋ ಈಗ ಪೊಲೀಸರಿಗೆ ಲಭ್ಯವಾಗಿದೆ.

ಇದನ್ನೂ ಓದಿ : ಖತರ್ನಾಕ್ ಕಳ್ಳನನ್ನು ಬಂಧಿಸಿದ ಕೋಟ ಪೊಲೀಸರು; ‘ನನ್ನ ಬಗ್ಗೆ ಮಾಹಿತಿ ಬೇಕಾದ್ರೆ ಯೂಟ್ಯೂಬ್ ನೋಡಿ’ ಎಂದ ಖದೀಮ!

ವಿಡಿಯೋ ಮಾಡುತ್ತಿರುವುದು ಗಮನಕ್ಕೆ ಬಂದರೂ ಏನೂ ಮಾತನಾಡದೆ ಶಸಸ್ತ್ರರಾಗಿದ್ದ ನಕ್ಸಲರು ಮಕ್ಕಿಮಲೆ ಕಾಡಿನೊಳಗೆ ಹೋಗಿ ಕಣ್ಮರೆ ಆಗಿದ್ದಾರೆ.

 

Continue Reading

LATEST NEWS

Trending