Friday, July 1, 2022

ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖ..! ಸಾಯುವವರು ಕಡಿಮೆ..

ನವದೆಹಲಿ :ದೇಶದಲ್ಲಿ ಜನಜೀವನವನ್ನೇ ಅಲ್ಲೊಲ ಕಲ್ಲೊಲ್ಲ ಮಾಡಿದ್ದ ಕೊರೊನಾ 2 ನೇ ಅಲೆ ಇದೀಗ ನಿಧಾನವಾಗಿ ಶಾಂತವಾಗುತ್ತಿದೆ. ಕೊರೊನಾ ಸೋಂಕಿತರ ಸಂಖ್ಯೆಯಲ್ಲೂ ಕುಸಿತ ಕಂಡಿದ್ದು ಒಂದೂವರೆ ಲಕ್ಷಕ್ಕೆ ಕುಸಿದಿದೆ.

ಕಳೆದ 24 ಗಂಟೆಗಳಲ್ಲಿ 1,52,734 ಮಂದಿಗೆ ಸೋಂಕು ತಗುಲಿದೆ.ಇದರೊಂದಿಗೆ ದೇಶದ ಒಟ್ಟು ಕೊರೊನಾ ಪೀಡಿತರ ಸಂಖ್ಯೆ 2,80,47,534 ಕೋಟಿಗೆ ಏರಿಕೆಯಾಗಿದೆ.

ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಕುಸಿಯುತ್ತಿರುವುದರಿಂದ ಸಕ್ರಿಯ ಸೋಂಕು ಪ್ರಕರಣಗಳ ಸಂಖ್ಯೆ 20,26,092 ಲಕ್ಷಕ್ಕೆ ಇಳಿದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳಲ್ಲಿ ಉಲ್ಲೇಖಿಸಲಾಗಿದೆ.

ನಿನ್ನೆಯಿಂದ 3128 ಮಂದಿ ಮಹಾಮಾರಿಗೆ ಬಲಿಯಾಗಿರುವುದರಿಂದ ಸೋಂಕಿಗೆ ಬಲಿಯಾದವರ ಸಂಖ್ಯೆ 3,29,100 ಲಕ್ಷಕ್ಕೆ ಏರಿಕೆಯಾಗಿದೆ. ಸತತ ಏಳು ದಿನಗಳಿಂದ ಕೊರೊನಾ ಪಾಸಿಟಿವಿಟಿ ದರ ಶೇ.10ರೊಳಗೆ ದಾಖಲಾಗುತ್ತಿದೆ. ದಿನನಿತ್ಯದ ಪಾಸಿಟಿವಿಟಿ ಶೇ.9.07ಕ್ಕೆ ಕುಸಿದಿದ್ದರೆ, ವಾರದ ಪಾಸಿಟಿವಿಟಿ ರೇಟ್ ಶೇ.9.04ಕ್ಕೆ ಇಳಿಕೆಯಾಗಿದೆ.

ಭಾನುವಾರವಾದ ನಿನ್ನೆ ದೇಶದ್ಯಾಂತ 16 ಲಕ್ಷಕ್ಕೂ ಹೆಚ್ಚು ಮಂದಿಗೆ ಕೊರೊನಾ ತಪಾಸಣೆ ನಡೆಸಲಾಗಿದೆ. ಇದರೊಂದಿಗೆ ಇದುವರೆಗೂ 34 ಕೋಟಿಗೂ ಹೆಚ್ಚು ಮಂದಿಯ ಸ್ವಾಬ್ ಪರೀಕ್ಷೆ ನಡೆಸಿದಂತಾಗಿದೆ.

ರಾಷ್ಟ್ರೀಯ ಚೇತರಿಕೆ ಪ್ರಮಾಣ ಸೇ.91.60ಗೆ ಹೆಚ್ಚಳವಾಗಿರುವುದರಿಂದ ಸಕ್ರಿಯ ಸೋಂಕು ಪ್ರಕರಣಗಳ ಸಂಖ್ಯೆ 20 ಲಕ್ಷಕ್ಕೆ ಸೀಮಿತವಾಗಿದೆ.

2.80ಕೋಟಿ ಸೋಂಕಿತರ ಪೈಕಿ ಈಗಾಗಲೇ 2.56 ಕೋಟಿ ಮಂದಿ ಚೇತರಿಸಿಕೊಂಡಿದ್ದು ದೇಶದ್ಯಾಂತ ಕೊರೊನಾ ಸೋಂಕಿನ ಪ್ರಮಾಣ ಹಾಗೂ ಸಾವಿನ ಪ್ರಮಾಣ ಗಣನೀಯವಾಗಿ ಇಳಿಮುಖವಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಜೂನ್ 7ರ ಬಳಿಕ ಕಠಿಣ ಲಾಕ್ ಡೌನ್ ನಿಂದ ಕೊಂಚ ವಿನಾಯಿತಿ ನೀಡುವ ಸಾದ್ಯತೆಗಳು ಹೆಚ್ಚಾಗಿವೆ.

LEAVE A REPLY

Please enter your comment!
Please enter your name here

Hot Topics

ಮಹಾರಾಷ್ಟ್ರದಲ್ಲಿ ಬಿಜೆಪಿ ಮೈತ್ರಿ ಸರಕಾರ: ಪುತ್ತೂರಿನಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ

ಪುತ್ತೂರು: ಮಹಾರಾಷ್ಟ್ರದಲ್ಲಿ ಬಿಜೆಪಿ ಹಾಗೂ ಶಿವಸೇನೆಯ ಬಂಡಾಯ ಶಾಸಕರೊಂದಿಗೆ ಮೈತ್ರಿ ಸರಕಾರ ರಚನೆ ಮಾಡಿದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಬಿಜೆಪಿ ಕಛೇರಿಯಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ...

ನನಗೆ ಸುಚೇಂದ್ರ ಪ್ರಸಾದ್‌ ಜೊತೆ ಮದುವೆಯೇ ಆಗಿಲ್ಲ: ನಟಿ ಪವಿತ್ರ ಲೋಕೇಶ್‌

ಬೆಂಗಳೂರು: ನನಗೆ ಸುಚೇಂದ್ರ ಪ್ರಸಾದ್‌ ಜೊತೆ ಮದುವೆಯೇ ಆಗಿಲ್ಲ. ಮದುವೆಯೇ ಆಗದಿದ್ದರೆ ನಾನು ಯಾಕೆ ಡಿವೋರ್ಸ್‌ ಕೊಡಬೇಕು ಎಂದು ಕನ್ನಡ ಚಿತ್ರನಟಿ ಪವಿತ್ರ ಲೋಕೇಶ್‌ ಹೇಳಿಕೆ ನೀಡಿದ್ದಾರೆ.ಕೆಲದಿನಗಳಿಂದ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ...

ಉಳ್ಳಾಲ: ಮಳೆ ನೀರು ಬ್ಲಾಕ್‌ ಆಗಿದ್ದನ್ನು ತೆಗೆಯಲು ಹೋಗಿದ್ದ ವ್ಯಕ್ತಿ ಟೆರೇಸ್‌ನಿಂದ ಜಾರಿ ಬಿದ್ದು ಕೊನೆಯುಸಿರು

ಉಳ್ಳಾಲ: ಮನೆಯ ಟೆರೇಸ್‌ನಲ್ಲಿ ಮಳೆ ನೀರು ಬ್ಲಾಕ್‌ ಆಗಿದನ್ನು ತೆಗೆಯಲು ಹೋಗಿ‌ ಜಾರಿ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಕೊಣಾಜೆ‌ ಠಾಣಾ ವ್ಯಾಪ್ತಿಯ ದಾಸರಮೂಲೆ ಎಂಬಲ್ಲಿ ನಡೆದಿದೆ.ಮೃತ ವ್ಯಕ್ತಿಯನ್ನು...