ಕೊರೋನಾ ವೈರಸ್ : ಉಡುಪಿಯ ಮೂವರು ಶಂಕಿತರಲ್ಲಿ ಯಾವುದೇ ಸೋಂಕು ಇಲ್ಲವೆಂದ ವೈದ್ಯರ ವರದಿ
ಉಡುಪಿ :ಸದ್ಯಕ್ಕೆ ಕರಾವಳಿಯ ಜನ ನಿರಾಳರಾಗಿದ್ದಾರೆ. ಕಾರಣ ಉಡುಪಿಯಲ್ಲಿ ಶಂಕಿತ ಕೊರೋನಾ ವೈರಸ್ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಮೂವರ ವೈದ್ಯಕೀಯ ವರದಿ ಜಿಲ್ಲಾ ವೈದ್ಯಾಧಿಕಾರಿಗಳ ಕೈ ಸೇರಿದ್ದು ಇದರಲ್ಲಿ ಯಾವುದೇ ಕೊರೋನಾ ವೈರಸ್ ಪತ್ತೆಯಾಗಿಲ್ಲ ಎಂದು ನಮೂದಿಸಲಾಗಿದೆ.
ಬೆಂಗಳೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ವೈರಲ್ ಪತ್ತೆ ಪ್ರಯೋಗಾಲಯ ಈ ವರದಿಯನ್ನು ನೀಡಿದೆ.ಈ ಮೂವರಲ್ಲಿ ಯಾವುದೇ ಸೋಂಕು ಇಲ್ಲ ಎಂದು ಅದು ಸ್ಪಷ್ಟಪಡಿಸಿದೆ.
ಮೂರು ವಾರಗಳ ಹಿಂದೆ ಚೀನಾ ಪ್ರವಾಸಕ್ಕೆ ಹೋಗಿ ಮರಳಿ ಬಂದಿದ್ದ ನಾಲ್ವರು ಅಸ್ವಸ್ತರಾಗಿದ್ದು, ಶಂಕಿತ ಕೊರೊನಾ ವೈರಸ್ ಪರೀಕ್ಷೆಗಾಗಿ ಫೆ.7ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ರೋಗದ ಲಕ್ಷಣ ಗಳು ಕಾಣಿಸಿಕೊಳ್ಳದ ಹಿನ್ನೆಲೆಯಲ್ಲಿ ಕುಟುಂಬದ ಸದಸ್ಯೆಯಾಗಿದ್ದ ಮಹಿಳೆಯನ್ನು 2 ದಿನಗಳ ಹಿಂದೆ ಮನೆಗೆ ಕಳುಹಿಸಲಾಗಿತ್ತು.
ಉಳಿದ ಮೂವರ ರಕ್ತ ಹಾಗೂ ಗಂಟಲ ಸ್ರಾವವನ್ನು ಫೆ.7ರಂದು ಕೊರೊನಾ ವೈರಸ್ ಪರೀಕ್ಷೆಗಾಗಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ‘ಬೆಂಗಳೂರಿನ ಪ್ರಯೋಗಾಲಯದಿಂದ ಈ ಮೂವರ ವೈದ್ಯಕೀಯ ವರದಿ ಇಂದು ಬಂದಿದ್ದು, ಇದರಲ್ಲಿ ನೆಗೆಟಿವ್ ಎಂಬುದು ತಿಳಿಸಲಾಗಿದೆ.
ಆದುದರಿಂದ ಜಿಲ್ಲೆಯಲ್ಲಿ ಯಾವುದೇ ಕೊರೊನಾ ವೈರಸ್ ಪ್ರಕರಣಗಳು ಇಲ್ಲ. ಈ ಬಗ್ಗೆ ಸಾರ್ವಜನಿಕರು ಯಾವುದೇ ಆತಂಕ ಪಡಬೇಕಾದ ಅಗತ್ಯ ಇಲ್ಲ’ ಎಂದು ಉಡುಪಿ ಜಿಲ್ಲಾಡಳಿತ ಹೇಳಿದೆ. ಈ ಮೂವರು ನಾಳೆ ಆಸ್ಪತ್ರೆಯಿಂದ ಬಿಡುಗಡೆಗೊಳ್ಳುವ ಸಾಧ್ಯತೆಗಳಿವೆ.
ಬೆಂಗಳೂರು: ಕನ್ನಡದ ಖ್ಯಾತ ನಿರೂಪಕಿ ದಿವಂಗತ ಅಪರ್ಣಾ ಸಹೋದರ ಚೈತನ್ಯ ಇಂದು ನಿಧನರಾಗಿದ್ದಾರೆ ಎಂದು ಅಪರ್ಣಾ ಪತಿ ನಾಗರಾಜ್ ರಾಮಸ್ವಾಮಿ ವಸ್ತಾರೆ ತಿಳಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಅಪರ್ಣೆಯ ಅಣ್ಣ ಚೈತನ್ಯ ನಿನ್ನೆ ನಡುರಾತ್ರಿಯಲ್ಲಿ ಈ ಇಹತೊರೆದು ಸರಿದಿದ್ದಾರೆ. ತೀವ್ರತಮ ವಿಷಾದ. ಕೆಲವು ಹೂವುಗಳು ಅರಳದೆ ಮೊಗ್ಗಾಗಿಯೇ ಉದುರಿಹೋಗುತ್ತವೆ. ಇನ್ನು ಕೆಲವು ಅರಳಿ ಹಣ್ಣಾಗದೆ ಕಮರುತ್ತವೆ. ಇನ್ನೂ ಕೆಲವನ್ನು ಒತ್ತಾಯದಿಂದ ಕೊಯ್ದು ಕತ್ತರಿಸಲಾಗುತ್ತದೆ. ಯಾರು ಯಾವುದೆಂದು ನಾನು ಈವರೆಗೂ ಅರಿತಿಲ್ಲ. ಅರಿಯುವ ಜಿಜ್ಞಾಸೆಯೂ ಈ ಹೊತ್ತಿನದಲ್ಲ. ದಿನದಿಂದ ದಿನಕ್ಕೂ ನಾನು ಹೆಚ್ಚು ಹೆಚ್ಚು ಒಬ್ಬನಾಗುತ್ತಿರುವುದು ಯಾವೊತ್ತಿನ ಸತ್ಯ. ಬಹುಶಃ ಎಲ್ಲರದೂನು ಎಂದು ಹೇಳಿದ್ದಾರೆ.
ಮಂಗಳೂರು/ನವದೆಹಲಿ : ತಿರುಪತಿಯಲ್ಲಿ ದುರಂ*ತವೊಂದು ಸಂಭವಿಸಿದೆ. ವೈಕುಂಠದ್ವಾರ ಸರ್ವದರ್ಶನದ ಟಿಕೆಟ್ ವಿತರಣಾ ಕೇಂದ್ರಗಳಲ್ಲಿ ಉಂಟಾದ ನೂಕುನುಗ್ಗಲಿನಿಂದಾಗಿ 7 ಮಂದಿ ಪ್ರಾ*ಣ ಕಳೆದುಕೊಂಡಿದ್ದಾರೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂ*ತಾಪ ಸೂಚಿಸಿದ್ದಾರೆ.
ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ಆಂಧ್ರಪ್ರದೇಶದ ತಿರುಪತಿಯಲ್ಲಿ ಸಂಭವಿಸಿದ ಕಾ*ಲ್ತುಳಿತ ಘಟನೆಯಿಂದ ನೋ*ವಾಗಿದೆ. ಘಟನೆಯಲ್ಲಿ ಗಾ*ಯಗೊಂಡವರು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ಸಂತ್ರಸ್ತರಿಗೆ ಆಂಧ್ರ ಪ್ರದೇಶ ಸರ್ಕಾರ ಎಲ್ಲ ರೀತಿಯ ನೆರವು ನೀಡುತ್ತಿದೆ ಎಂದು ಹೇಳಿದ್ದಾರೆ.
ರಾಷ್ಟ್ರಪತಿ ಸಂತಾಪ :
ಘಟನೆಯ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು, ದು*ರ್ಘಟನೆಯಲ್ಲಿ ಮೃ*ತಪಟ್ಟವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ದೇವರು ಕುಟುಂಬಸ್ಥರಿಗೆ ತಮ್ಮ ಆಪ್ತರನ್ನು ಕಳೆದುಕೊಂಡ ದು:ಖವನ್ನು ಭರಿಸುವ ಶಕ್ತಿ ಕೊಡಲಿ ಎಂದು ಪ್ರಾರ್ಥಿಸುವುದಾಗಿ ಹೇಳಿದ್ದಾರೆ.
ಗುರುವಾರ(ಜ.9) ಬೆಳಗ್ಗೆ 5 ಗಂಟೆಯಿಂದ ಶ್ರೀನಿವಾಸಂ, ಸತ್ಯನಾರಾಯಣಪುರಂ ಮತ್ತು ಬೈರಾಗಿಪಟ್ಟೆಡ ಸೇರಿದಂತೆ 9 ಪ್ರದೇಶಗಳಲ್ಲಿ ಸ್ಥಾಪಿಸಲಾಗಿರುವ 94 ಕೌಂಟರ್‌ಗಳ ಮೂಲಕ ವೈಕುಂಠ ದ್ವಾರ ದರ್ಶನ ಟಿಕೆಟ್ ನೀಡಲು ಟಿಟಿಡಿ ನಿರ್ಧರಿಸಿತ್ತು. ಆದರೆ, ಟೋಕನ್‌ಗಳಿಗಾಗಿ ಬುಧವಾರ ಸಂಜೆಯೇ ಭಾರಿ ಜನರು ಜಮಾಯಿಸಿದ್ದರು.
ಈ ನಡುವೆ ಟಿಕೆಟ್ ಕೌಂಟರ್ ಸಿಬ್ಬಂದಿಯೊಬ್ಬರು ಅಸ್ವಸ್ಥಗೊಂಡ ಕಾರಣ ಅವರನ್ನು ಹೊರಕ್ಕೆ ಕರೆದೊಯ್ಯಲು ಗೇಟ್ ತೆರೆದಾಗ ಹೊರಗಿದ್ದವರೆಲ್ಲರೂ ಗುಂಪು ಗುಂಪಾಗಿಒಳನುಗ್ಗುವ ಪ್ರಯತ್ನ ಮಾಡಿದ್ದಾರೆ. ಈ ವೇಳೆ ಕೆಲವರು ಕೆಳಗೆ ಬಿದ್ದಿದ್ದು ಕಾಲ್ತುಳಿತದಿಂದ ಅಸ್ವಸ್ಥಗೊಂಡಿದ್ದರು. ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಯಿತು. ಆದರೆ, ಅವರಲ್ಲಿ 7 ಭಕ್ತರು ಸಾವನ್ನಪ್ಪಿದ್ದು, ಉಳಿದವರಿಗೆ ಚಿಕಿತ್ಸೆ ಮುಂದುವರಿದಿದೆ.
ವಿಜಯನಗರ: ಕೆಲಸದ ಒತ್ತಡದಿಂದ ಬೇಸತ್ತ ನಗರ ಸಭೆಯ ಬಿಲ್ ಕಲೆಕ್ಟರ್ ಒಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ನಡೆದಿದೆ.
ಮೃತರನ್ನು ಮಂಜುನಾಥ್ ಎಂದು ತಿಳಿದುಬಂದಿದೆ. ಮಂಜುನಾಥ್ ಅವರು ಹೊಸ ವರ್ಷದ ಆರಂಭದ ದಿನವೇ ತಮಗೆ ಕೆಲಸದ ಒತ್ತಡದ ಇದೆ ಎಂದು ಹೇಳಿ ಪ್ಲಂಬಿಂಗ್‌ಗೆ ಬಳಸುವ ಗಮ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಯಿಂದ ಗುಣಮುಖರಾಗಿ ಡಿಸ್ಮಾರ್ಜ್ ಆದ ಬಳಿಕ ಅವರು ಇಂದು ಮತ್ತೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದಕ್ಕೂ ಮೊದಲು ಆತ್ಮಹತ್ಯೆಗೆ ಯತ್ನಿಸಿದ್ದ ಮಂಜುನಾಥ್ ಮೊಬೈಲ್ ನಲ್ಲಿ ಡೆತ್ ನೋಟ್ ಕುರಿತು ಉಲ್ಲೇಖಿಸಿದ್ದರು.
“ನನ್ನ ಸಾವಿಗೆ ನಗರಸಭೆಯ ಆಯುಕ್ತ ಚಂದ್ರಪ್ಪ ಮತ್ತು ಕಂದಾಯ ಅಧಿಕಾರಿ ನಾಗರಾಜ್ ಕಾರಣ. ಕೆಲಸದಿಂದ ಬೇರೆಡೆ ನಿಯೋಜಿಸಲು ಒಂದು ತಿಂಗಳಿಂದ ಹೇಳುತ್ತಿದ್ದರೂ ತೆಗೆಯುತ್ತಿಲ್ಲ. ರಾತ್ರಿ ನಿದ್ದೆ ಬರುತ್ತಿಲ್ಲ, ಅಧಿಕ ಒತ್ತಡ ಇರುವುದರಿಂದ ನಾನು ಸಾವಿಗೆ ಶರಣಾಗಿದ್ದೀನಿ” ಎಂಬ ಸಂದೇಶವನ್ನು ತಮ್ಮ ಮೊಬೈಲ್ ಫೋನ್‌ನಲ್ಲಿ ಕಳುಹಿಸಿ ಮಂಜುನಾಥ ಬುಧವಾರ ಬೆಳಿಗ್ಗೆ ನಾಪತ್ತೆಯಾಗಿದ್ದರು. ಹಂಪಿ ರಸ್ತೆಯಲ್ಲಿ ಅವರನ್ನು ಪತ್ತೆ ಮಾಡಿ, ಆಸ್ಪತ್ರೆಗೆ ದಾಖಲಿಸಲಾಯಿತು.
ಆದರೆ ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಮಂಜುನಾಥ್ ಇಂದು ಮತ್ತೆ ಹೊಸಪೇಟೆ ತಾಲೂಕಿನ ಕಡ್ಡಿರಾಂಪುರದಲ್ಲಿ ಖಾಸಗಿ ಹೋಂ ಸ್ಟೇ ನಲ್ಲಿ ಮಂಜುನಾಥ್ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೇಲಾಧಿಕಾರಿಗಳ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೀಗ ವ್ಯಕ್ತವಾಗುತ್ತಿದೆ. ಘಟನಾ ಸ್ಥಳಕ್ಕೆ ಹಂಪಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.