Home ಕರ್ನಾಟಕ ವಾರ್ತೆ ದೇಶದಲ್ಲಿ ಮಹಾಮಾರಿ ತಾಂಡವ: ಒಂದೇ ದಿನದಲ್ಲಿ 19,906 ಮಂದಿಯಲ್ಲಿ ಕೋವಿಡ್ ಸೋಂಕು

ದೇಶದಲ್ಲಿ ಮಹಾಮಾರಿ ತಾಂಡವ: ಒಂದೇ ದಿನದಲ್ಲಿ 19,906 ಮಂದಿಯಲ್ಲಿ ಕೋವಿಡ್ ಸೋಂಕು

ದೇಶದಲ್ಲಿ ಮಹಾಮಾರಿ ತಾಂಡವ: ಒಂದೇ ದಿನದಲ್ಲಿ 19,906 ಮಂದಿಯಲ್ಲಿ ಕೋವಿಡ್ ಸೋಂಕು…

ನವದೆಹಲಿ: ದೇಶಕ್ಕೆ ಮಹಾಮಾರಿ ಕೊರೋನಾ ಬೆಂಬಿಡದ ಭೂತದಂತೆ ಕಾಡುತ್ತಿದೆ. ದಿನೇ ದಿನೇ ಸೊಂಕಿತರ ಸಂಖ್ಯೆ ಶರವೇಗದಲ್ಲಿ ಹರಡುತ್ತಿದೆ.

ಕಳೆದ 24 ಗಂಟೆಗಳ ಅವಧಿಯಲ್ಲಿ ಮಾರಣಾಂತಿಕ ಸೋಂಕು ದೇಶದಲ್ಲಿ ದಾಖಲೆಯನ್ನೇ ಸೃಷ್ಟಿಸಿದೆ.

ಒಂದೇ ದಿನದಲ್ಲಿ 19,906 ಮಂದಿಯಲ್ಲಿ ಕೋವಿಡ್ ಕಾಣಿಸಿಕೊಂಡಿದ್ದು, ಜನರನ್ನು ಆತಂಕಕ್ಕೆ ತಳ್ಳಿದೆ. ದೇಶದಲ್ಲಿ ಒಟ್ಟಾರೆ ಕೋವಿಡ್‌ ಪ್ರಕರಣಗಳ ಸಂಖ್ಯೆ ಐದುವರೆ ಲಕ್ಷದ ಗಡಿ ಸಮೀಪಿಸುತ್ತಿದೆ.

ಈ ಕುರಿತಂತೆ ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದ್ದು, ದೇಶದಲ್ಲಿ ಒಂದೇ ದಿನ 19,906 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ ಎಂದು ತಿಳಿಸಿದೆ.

ಅಲ್ಲದೇ 24 ಗಂಟೆಗಳ ಅವಧಿಯಲ್ಲಿ 410 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ.

ಇನ್ನು ದೇಶದಲ್ಲಿ ಈವರೆಗೆ 5,28,859 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಈ ಪೈಕಿ 3,09,713 ಮಂದಿ ಚಿಕಿತ್ಸೆ ಪಡೆದು ಗುಣುಮಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.

ಇನ್ನು 2,03,051 ಮಂದಿ ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ದೇಶದಲ್ಲಿ ಈವರೆಗೆ ಡೆಡ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ 16,095ಕ್ಕೆ ಏರಿಕೆಯಾಗಿದೆ.

RECENT NEWS

ಅತ್ಯಾಚಾರ ಪ್ರಕರಣ: ಕೇರಳ ಬಿಷಪ್‌ ಮುಲಾಕ್ಕಲ್​​​ ವಿರುದ್ಧ ಜಾಮೀನು ರಹಿತ ವಾರೆಂಟ್​​ ಹೊರಡಿಸಿದ ಕೋರ್ಟ್​..!

ಅತ್ಯಾಚಾರ ಪ್ರಕರಣ: ಕೇರಳ ಬಿಷಪ್‌ ಮುಲಾಕ್ಕಲ್​​​ ವಿರುದ್ಧ ಜಾಮೀನು ರಹಿತ ವಾರೆಂಟ್​​ ಹೊರಡಿಸಿದ ಕೋರ್ಟ್​..! ತಿರುವಂತನಪುರ : ಸಾಲುಸಾಲು ಲೈಂಗಿಕ ದೌರ್ಜನ್ಯ ಆರೋಪಗಳನ್ನು ಎದುರಿಸುತ್ತಿರುವ ಜಲಂಧರ್​ನ ಮಾಜಿ ಬಿಷಪ್ ಫ್ರಾಂಕೊ ಮುಲಾಕ್ಕಲ್ ಜಾಮೀನು ಅರ್ಜಿಯನ್ನು...

9 ವರ್ಷಗಳ ಅನಂತಪದ್ಮನಾಭ ಸ್ವಾಮಿ ದೇಗುಲ ವಿವಾದ ಇತ್ಯರ್ಥ ಮಾಡಿದ ಸುಪ್ರೀಂ ಕೋರ್ಟ್..!

9 ವರ್ಷಗಳ ಅನಂತಪದ್ಮನಾಭ ಸ್ವಾಮಿ ದೇಗುಲ ವಿವಾದ ಇತ್ಯರ್ಥ ಮಾಡಿದ ಸುಪ್ರೀಂ ಕೋರ್ಟ್..! ನವದೆಹಲಿ : ಕೇರಳದ ತಿರುವನಂತಪುರದಲ್ಲಿರುವ ಪ್ರಸಿದ್ಧ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಆಡಳಿತ ಮತ್ತು ಪೂಜೆ ನಡೆಸುವ ಅಧಿಕಾರವನ್ನು ರಾಜಮನೆತನಕ್ಕೆ ವಹಿಸಿ...

ದ.ಕ‌ ಜಿಲ್ಲೆಯಲ್ಲಿ ಅರ್ಧಶತಕ ದಾಖಲಿಸಿದ ಕೊರೊನಾ ಸಾವಿನ ಸಂಖ್ಯೆ: ಇಂದು ಕೂಡ ಸ್ಪೋಟ 131 ಪ್ರಕರಣ ಪತ್ತೆ..!

ದ.ಕ‌ ಜಿಲ್ಲೆಯಲ್ಲಿ ಅರ್ಧಶತಕ ದಾಖಲಿಸಿದ ಕೊರೊನಾ ಸಾವಿನ ಸಂಖ್ಯೆ: ಇಂದು ಕೂಡ ಸ್ಪೋಟ 131 ಪ್ರಕರಣ ಪತ್ತೆ..! ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಮತ್ತೆ ನಾಲ್ವರು ಸಾವನ್ನಪ್ಪಿದ್ದಾರೆ. ಈ ಮೂಲಕ ಕೊರೊನಾ...

ನಾಳೆ ಮಂಗಳವಾರ 11:30ಕ್ಕೆ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ..!

ನಾಳೆ ಮಂಗಳವಾರ 11:30ಕ್ಕೆ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ..! ಬೆಂಗಳೂರು : ರಾಜ್ಯ ದ್ವಿತೀಯ ಪಿಯುಸಿ ಪರೀಕ್ಷೆಗಳ ಫಲಿತಾಂಶ  ನಾಳೆ ಮಂಗಳವಾರ  ಪ್ರಕಟವಾಗಲಿದೆ. ಈ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್...
error: Content is protected !!