Home ಕರ್ನಾಟಕ ವಾರ್ತೆ ಕೇರಳ ಗಡಿ ದಾಟಿ ಬಂದ ಮಹಿಳೆಯಲ್ಲಿ ಕೊರೋನಾ ಸೋಂಕು : ಆತಂಂಕದಲ್ಲಿ ಮಂಗಳೂರು ಜನತೆ..!!?

ಕೇರಳ ಗಡಿ ದಾಟಿ ಬಂದ ಮಹಿಳೆಯಲ್ಲಿ ಕೊರೋನಾ ಸೋಂಕು : ಆತಂಂಕದಲ್ಲಿ ಮಂಗಳೂರು ಜನತೆ..!!?

ಕೇರಳ ಗಡಿ ದಾಟಿ ಬಂದ ಮಹಿಳೆಯಲ್ಲಿ ಕೊರೋನಾ ಸೋಂಕು : ಆತಂಂಕದಲ್ಲಿ ಮಂಗಳೂರು ಜನತೆ..!!?

ಮಂಗಳೂರು : ಕೇರಳ ಗಡಿ ತೆರವಿನಿಂದ ಮಂಗಳೂರಿಗರಿಗೆ ಮತ್ತೆ ಆತಂಕ ಶುರುವಾಗಿದೆ. ಕಾಸರಗೋಡಿನಿಂದ ಚಿಕಿತ್ಸೆಗಾಗಿ ಬಂದಿದ್ದ ಮಹಿಳೆಯಲ್ಲಿ ಕೊರೋನಾ ಸೋಂಕು ಪತ್ತೆಯಾದ ಅಘಾತಕಾರಿ ವಿಷಯ ಬೆಳಕಿಗೆ ಬಂದಿದೆ.

ಕಾಸರಗೋಡಿನಿಂದ ಚಿಕಿತ್ಸೆಗಾಗಿ ಮಹಿಳೆ ಸಹಿತ ಮೂವರು ರೋಗಿಗಳು ಉಳ್ಳಾಲ ದೇರಳಕಟ್ಟೆಯಲ್ಲಿರುವ ಖಾಸಾಗಿ ಆಸ್ಪತ್ರೆ ಬಂದಿದ್ದರು. ಇದರಲ್ಲಿ ಇಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಭ್ಯವಿಲ್ಲ ಅಂತ ಆರೋಪಿಸಿ ವಾಪಸ್‌ ಕಣ್ಣೂರಿಗೆ ತೆರಳಿದ್ದರು.

ಈ ವೇಳೆ ಉಳಿದ ಮಹಿಳೆಯನ್ನು ತಪಾಸಣೆ ನಡೆಸಿದಾಗ ಕೊರೋನಾ ಲಕ್ಷಣಗಳು ಪತ್ತೆಯಾಗಿದೆ. ಹೀಗಾಗಿ ಕೂಡಲೇ ಜಿಲ್ಲಾ ವೆನ್ ಲಾಕ್ ಕೋವಿಡ್ ಆಸ್ಪತ್ರೆಗೆ ಮಹಿಳೆಯನ್ನು ರವಾನೆ ಮಾಡಲಾಗಿದೆ.

ಸದ್ಯ ಮಹಿಳೆಯ ಗಂಟಲು ದ್ರವದ ಮಾದರಿ ಸಂಗ್ರಹಿಸಿ ವೈದ್ಯರು ಲ್ಯಾಬ್ ಗೆ ಕಳುಹಿಸಿದ್ದಾರೆ. ಇಂದು ಸಂಜೆಯೊಳಗೆ ಪರೀಕ್ಷಾ ವರದಿಯನ್ನು ನಿರೀಕ್ಷಿಸಲಾಗಿದೆ.
ಕೇರಳದಿಂದ ಕೊರೋನ ರಹಿತ ರೋಗಿಗಳಿಗೆ ಮಾತ್ರ ಮಂಗಳೂರಿನ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಅವಕಾಶವನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತ ಮಾಡಿದೆ.ಇದಕ್ಕಾಗಿ ಕಟ್ಟುನಿಟ್ಟಿನ ಆನೇಕ ಮಾನದಂಡಗಳನ್ನು ಜಿಲ್ಲಾಡಳಿತ ವಿಧಿಸಿದೆ.

ಗಡಿಯಲ್ಲಿ ಜಿಲ್ಲೆ ಪ್ರವೇಶ ಮಾಡುವ ರೋಗಿಯನ್ನು ಕೂಲಂಕೂಶವಾಗಿ ಪರೀಕ್ಷೆ ಮಾಡಿ ಅವರಲ್ಲಿ ಕೊರೊನಾ ಸೋಂಕು ಇಲ್ಲ ವೆಂಬುವುದನ್ನು ಖಾತರಿ ಪಡಿಸಿದ ಬಳಿಕವೇ ದೇರಳ ಕಟ್ಟೆಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಅವಕಾಶ ನೀಡಲಾಗುತ್ತೆ.

ಇಷ್ಟೆಲ್ಲಾ ಬಿಗು ಕ್ರಮಗಳಿದ್ದರೂ ಕೇರಳದ ಕೊರೋನಾ ಸೋಂಕಿತರು ಜಿಲ್ಲೆ ಪ್ರವೇಶಿಸಿರುವ ಬಗ್ಗೆ ಹಲವು ಅನುಮಾನಗಳು ಕಾಡುತ್ತಿವೆ.

- Advertisment -

RECENT NEWS

ಉಡುಪಿ ಕೊರೊನಾಘಾತ ಒಂದೇ ದಿನ 83 ಪ್ರದೇಶ ಸೀಲ್ ಡೌನ್

ಜಿಲ್ಲೆಯಲ್ಲಿ ಈವರೆಗೆ 201 ಪ್ರದೇಶಗಳು ಸೀಲ್ ಡೌನ್ ಉಡುಪಿ ಜೂ.5: ಉಡುಪಿಯಲ್ಲಿ ಇಂದು ದಾಖಲಾದ 204 ಕೊರೊನಾ ಪ್ರಕರಣಗಳಿಂದಾಗಿ ಉಡುಪಿ ಜಿಲ್ಲೆಯಲ್ಲಿ ಇಂದು ಒಂದೇ ದಿನ 83 ಪ್ರದೇಶಗಳನ್ನು ಸೀಲ್ ಡೌನ್ ಮಾಡಲಾಗಿದೆ. ರಾಜ್ಯದಲ್ಲೇ...

ಪ್ರಧಾನಿ ದೇಶದ ಜನರಿಗೆ ಬರೆದಿರೋ “ನೀವು ಪ್ರೇರಕರು ನಾನು ಸೇವಕ” ಪತ್ರದ ಸಾರಾಂಶ ಹಾಗು ಸಾಧನೆ ಹಂಚಿದ ಕಟೀಲ್

“ನೀವು ಪ್ರೇರಕರು ನಾನು ಸೇವಕ” ಪತ್ರದ ಸಾರಾಂಶ ಹಾಗು ಪ್ರಧಾನಿಗಳ ಸಾಧನೆಯ ಸಾರಾಂಶ ಮನೆಮನೆಗೆ ಹಂಚಿದ ಸಂಸದ ಕಟೀಲ್ ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಯಶಸ್ವಿಯಾಗಿ ಒಂದು ವರ್ಷ ಪೂರೈಸಿದ...

ಕಡಬಕ್ಕೂ ವಕ್ಕರಿಸಿದ ಮಹಾಮಾರಿ ಕೊರೊನಾ ವೈರಸ್.. ಶಿಕ್ಷಕನಿಗೆ ಪಾಸಿಟಿವ್

45 ವರ್ಷದ ಶಿಕ್ಷಕನಿಗೆ ಕೊರೊನಾ ಪಾಸಿಟಿವ್: ಆತಂಕದಲ್ಲಿ ಕಡಬ ಜನತೆ ಕಡಬ: ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಕೊರೊನಾ ಮಹಾಮಾರಿ ಇದೀಗ ಕಡಬಕ್ಕೂ ಕಾಲಿಟ್ಟಿದೆ. ಕಡಬದ 42 ವರ್ಷದ ಶಿಕ್ಷಕರೋರ್ವರಿಗೆ ಕೊರೋನಾ ಪಾಸಿಟಿವ್ ಬಂದಿದ್ದು ಈಗಾಗಲೇ...

ದೇಶದಲ್ಲಿ ಕೊರೊನಾ ಹಂಚಲು ತಬ್ಲಿಘಿಗಳಿಂದ ವ್ಯವಸ್ಥಿತ ಷಡ್ಯಂತ್ರ ನಡೆದಂತಿದೆ: ಸಂಸದೆ ಶೋಭಾ ಗಂಭೀರ ಆರೋಪ..!

ಬೆಂಗಳೂರು ಸ್ಲಂಗಳಿಗೆ ತಬ್ಲಿಘಿಗಳು ಸೋಂಕು ಪಸರಿಸಿದರು: ಸಂಸದೆ ಶೋಭಾ ಕರಂದ್ಲಾಜೆ ಕಿಡಿ ಉಡುಪಿ: ಶಾಂತವಾಗಿದ್ದ ಉಡುಪಿ ಜಿಲ್ಲೆಯಲ್ಲಿ ದೆಹಲಿ ಮತ್ತು ಮಹಾರಾಷ್ಟ್ರದಿಂದ ಕೊರೊನಾ ಹಬ್ಬಿದೆ. ಬೆಂಗಳೂರು ಸ್ಲಂಗಳಿಗೆ ತಬ್ಲಿಘಿಗಳು ಸೋಂಕು ಪಸರಿಸಿದರು ಎಂದು ಉಡುಪಿ-ಚಿಕ್ಕಮಗಳೂರು...