ಕರಾವಳಿಯಲ್ಲಿ ಕೈ ಮೀರುತ್ತಿರುವ ಕೊರೋನಾ ಪರಿಸ್ಥಿತಿ..!!? ದ.ಕ 352 -ಉಡುಪಿ 161 ಸೋಂಕಿತರು.
ದ.ಕ/ಉಡುಪಿ :ಕರಾವಳಿಯಲ್ಲಿ ಕೊರೊನಾ ಕೈ ಮೀರುತ್ತಿರುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಇಂದು ಮತ್ತೆ ಮಹಾಸ್ಪೋಟವಾಗಿದ್ದು 352 ಮಂದಿಗೆ ಕೊರೋನಾ ಪಾಸಿಟಿವ್ ಧೃಡಪಟ್ಟಿದೆ.
ಅದೇ ರೀತಿ ದಕ್ಷಿಣ ಕನ್ನಡದಲ್ಲಿಇಂದು 7 ಮಂದಿ ಕೊರೋನಾ ಮಹಾಮಾರಿಗೆ ಬಲಿಯಾಗಿದ್ದಾರೆ. ಈ ಮೂಲಕ ಕೊರೋನಾಗೆ ಜಿಲ್ಲೆಯಲ್ಲಿ ಬಲಿಯಾದವರ ಸಂಖ್ಯೆ 375ಕ್ಕೆ ಏರಿಕೆಯಾಗಿದೆ.
ಇಂದು ಮಂಗಳೂರಿನ 165, ಬಂಟ್ವಾಳದ 87,ಪುತ್ತೂರಿನ 42,ಬೆಳ್ತಂಗಡಿಯ 25,ಸುಳ್ಯದ 19 ಹಾಗೂ ಹೊರ ಜಿಲ್ಲೆಯ 14 ಮಂದಿಗೆ ಕೊರೋನಾ ಪಾಸಿಟಿವ್ ಧೃಡಪಟ್ಟಿದೆ.
ಸಂಪರ್ಕವೇ ಪತ್ತೆಯಾಗದ 148 ಮಂದಿ,ILI ಪ್ರಕರಣದಿಂದ 136 ಮಂದಿ,ಪ್ರಾಥಮಿಕ ಸಂಪರ್ಕದಿಂದ 51 ಮಂದಿ,SARI ಪ್ರಕರಣದಿಂದ 17 ಮಂದಿಗೆ ಕೊರೊನಾ ಸೋಂಕು ಬಾಧಿಸಿದೆ. ಅದೇ ರೀತಿ ಇಂದು ಜಿಲ್ಲೆಯಲ್ಲಿ 363 ಮಂದಿ ಗುಣಮುಖ ಆಗಿದ್ದು ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 13,065 ಪಾಸಿಟಿವ್ ಕೇಸ್ ಗಳು ದಾಖಲಾಗಿವೆ.
ಇನ್ನು ಜಿಲ್ಲೆಯಲ್ಲಿ ಒಟ್ಟು 2,538 ಆಕ್ವೀವ್ ಪ್ರಕರಣಗಳಿವೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಉಡುಪಿ ವರದಿ: ಉಡುಪಿ ಜಿಲ್ಲೆಯ ಕೊರೋನಾ ಬುಲೆಟಿನ್ ಕೂಡ ಇಂದು ಬಿಡುಗಡೆಯಾಗಿದ್ದು ಉಡುಪಿಯಲ್ಲಿ ಇಂದು 161 ಕೊರೋನ ಪಾಸಿಟಿವ್ ಪ್ರಕರಣ ದಾಖಲಾಗಿದೆ.
ಜಿಲ್ಲೆಯ ಒಟ್ಟು ಕೊರೋನಾ ಸೋಂಕಿತರ ಸಂಖ್ಯೆ 11,757ಕ್ಕೆ ಏರಿಕೆಯಾಗಿದ್ದು,ಲ್ಲಿ ಇಂದು ಕೊರೋನಾದಿಂದ ಇಬ್ಬರು ಸಾವನ್ನಪ್ಪಿದ್ದಾರೆ.
ಉಡುಪಿ ತಾಲೂಕಿನ 78ವರ್ಷದ ವೃದ್ಧೆ ಮತ್ತು 53ವರ್ಷದ ವ್ಯಕ್ತಿ ಕೋವಿಡ್ 19 ನಿಂದ ಸಾವನ್ನಪ್ಪಿದ್ದಾರೆ.ಈವರೆಗೆ ಕೊರೋನಾದಿಂದ ಜಿಲ್ಲೆಯಲ್ಲಿ 99ಮಂದಿ ಸಾವನ್ನಪ್ಪಿದ್ದಾರೆ.
,ಇಂದು ಜಿಲ್ಲೆಯಲ್ಲಿ 250 ಮಂದಿ ಡಿಸ್ಜಾರ್ಜ್ ಆಗಿದ್ದಾರೆ. ಈವರೆಗೆ ಜಿಲ್ಲೆಯಲ್ಲಿ 9,351ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಸದ್ಯ ಜಿಲ್ಲೆಯಲ್ಲಿ 2307 ಸಕ್ರೀಯ ಪ್ರಕರಣಗಳಿವೆ. ಅಲ್ಲದೆ 365 ವರದಿ ಬರಲು ಬಾಕಿ ಇದೆ ಎಂದು ಉಡಪಿ ಜಿಲ್ಲಾ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.