Home ಪ್ರಮುಖ ಸುದ್ದಿ ಭಾರತಕ್ಕೂ ಕಾಲಿಟ್ಟ ಕೊರೋನಾ: ಕೇರಳದ ಮೂವರಲ್ಲಿ ಶಂಕಿತ ವೈರಸ್‌

ಭಾರತಕ್ಕೂ ಕಾಲಿಟ್ಟ ಕೊರೋನಾ: ಕೇರಳದ ಮೂವರಲ್ಲಿ ಶಂಕಿತ ವೈರಸ್‌

ತಿರುವನಂತಪುರಂ: ವಿಶ್ವದಾದ್ಯಂತ ಮರಣ ಮೃದಂಗ ಬಾರಿಸುತ್ತಿರುವ ಕೊರೊನಾ ವೈರಸ್‌ ಭಾರತಕ್ಕೂ ಕಾಲಿಟ್ಟಿದ್ದು ಕೇರಳದಲ್ಲಿ ಮೂವರು ಕೊರೊನಾ ವೈರಸ್‌ ದಾಳಿಗೆ ತುತ್ತಾಗಿದ್ದಾರೆ. ಇದರಲ್ಲಿ ಮೂರನೇ ವ್ಯಕ್ತಿ ನೆರೆಯ ಕಾಸರಗೋಡಿನ ಜಿಲ್ಲೆಯವರಾಗಿದ್ದು, ಕೊರೊನಾ ಪೀಡಿತ ಚೀನಾದ ಹುವಾನ್‌ನಿಂದ ಬಂದವನಾಗಿದ್ದಾನೆ ಎಂದು ತಿಳಿದು ಬಂದಿದೆ.

ಈ ವ್ಯಕ್ತಿ ಕೊರಾನಾ ವೈರಸ್‌ ಪೀಡಿತ ಎಂದು ಕೇರಳದ ಆರೋಗ್ಯ ಇಲಾಖೆಯೂ ಧೃಡ ಪಡಿಸಿದೆ. ಪ್ರಸ್ತುತ ಅವರನ್ನು ಕಾಸರಗೋಡಿನ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ರೋಗಿಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಅರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. ರಾಜ್ಯದಲ್ಲಿ ಮೂವರು ಕೊರೊನಾ ವೈರಸ್ ಸೋಂಕಿಗೊಳಗಾಗಿರುವುದು ದೃಢಪಟ್ಟ ನಂತರ ಕೇರಳ ರಾಜ್ಯವು ಕೊರೊನಾವೈರಸ್ ಅನ್ನು ರಾಜ್ಯ ವಿಪತ್ತು ಎಂದು ಘೋಷಣೆ ಮಾಡಿದೆ.

ಘೋಷಣೆಯು ಜನರಲ್ಲಿ ಭೀತಿ ಹುಟ್ಟಿಸುವುದಕ್ಕಲ್ಲ. ಆದ್ದರಿಂದ ಯಾರು ಕೂಡ ಭಯಭೀತರಾಗಬಾರದು, ವೈರಸ್ ಹರಡದೆ ಇರದಂತೆ ತಡೆಯಲು ಇದು ಮುನ್ನೆಚ್ಚರಿಕಾ ಕ್ರಮವಾಗಿದೆ ಎಂದು ರಾಜ್ಯ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಸ್ಪಷ್ಟಪಡಿಸಿದ್ದಾರೆ. ಕೇರಳದಲ್ಲಿ ಒಟ್ಟು 104 ಮಂದಿಯ ಮಾದರಿಗಳನ್ನು ಪುಣೆಯ ರೋಗಸೂಕ್ಷ್ಮಾಣುಗಳ ವೈಜ್ಞಾನಿಕ ಅಧ್ಯಯನ ಕೇಂದ್ರಕ್ಕೆ ಪರೀಕ್ಷಾರ್ಥ ಕಳುಹಿಸಲಾಗಿತ್ತು. ಅದರಲ್ಲಿ ಮೂವರ ಮಾದರಿಗಳಲ್ಲಿ ಕೊರೊನಾ ವೈರಸ್‌ ಇರುವುದು ಧೃಡಪಟ್ಟಿದೆ.

ವಿಡಿಯೋಗಾಗಿ

 

- Advertisment -

RECENT NEWS

ಉಡುಪಿ ಕೊರೊನಾಘಾತ ಒಂದೇ ದಿನ 83 ಪ್ರದೇಶ ಸೀಲ್ ಡೌನ್

ಜಿಲ್ಲೆಯಲ್ಲಿ ಈವರೆಗೆ 201 ಪ್ರದೇಶಗಳು ಸೀಲ್ ಡೌನ್ ಉಡುಪಿ ಜೂ.5: ಉಡುಪಿಯಲ್ಲಿ ಇಂದು ದಾಖಲಾದ 204 ಕೊರೊನಾ ಪ್ರಕರಣಗಳಿಂದಾಗಿ ಉಡುಪಿ ಜಿಲ್ಲೆಯಲ್ಲಿ ಇಂದು ಒಂದೇ ದಿನ 83 ಪ್ರದೇಶಗಳನ್ನು ಸೀಲ್ ಡೌನ್ ಮಾಡಲಾಗಿದೆ. ರಾಜ್ಯದಲ್ಲೇ...

ಪ್ರಧಾನಿ ದೇಶದ ಜನರಿಗೆ ಬರೆದಿರೋ “ನೀವು ಪ್ರೇರಕರು ನಾನು ಸೇವಕ” ಪತ್ರದ ಸಾರಾಂಶ ಹಾಗು ಸಾಧನೆ ಹಂಚಿದ ಕಟೀಲ್

“ನೀವು ಪ್ರೇರಕರು ನಾನು ಸೇವಕ” ಪತ್ರದ ಸಾರಾಂಶ ಹಾಗು ಪ್ರಧಾನಿಗಳ ಸಾಧನೆಯ ಸಾರಾಂಶ ಮನೆಮನೆಗೆ ಹಂಚಿದ ಸಂಸದ ಕಟೀಲ್ ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಯಶಸ್ವಿಯಾಗಿ ಒಂದು ವರ್ಷ ಪೂರೈಸಿದ...

ಕಡಬಕ್ಕೂ ವಕ್ಕರಿಸಿದ ಮಹಾಮಾರಿ ಕೊರೊನಾ ವೈರಸ್.. ಶಿಕ್ಷಕನಿಗೆ ಪಾಸಿಟಿವ್

45 ವರ್ಷದ ಶಿಕ್ಷಕನಿಗೆ ಕೊರೊನಾ ಪಾಸಿಟಿವ್: ಆತಂಕದಲ್ಲಿ ಕಡಬ ಜನತೆ ಕಡಬ: ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಕೊರೊನಾ ಮಹಾಮಾರಿ ಇದೀಗ ಕಡಬಕ್ಕೂ ಕಾಲಿಟ್ಟಿದೆ. ಕಡಬದ 42 ವರ್ಷದ ಶಿಕ್ಷಕರೋರ್ವರಿಗೆ ಕೊರೋನಾ ಪಾಸಿಟಿವ್ ಬಂದಿದ್ದು ಈಗಾಗಲೇ...

ದೇಶದಲ್ಲಿ ಕೊರೊನಾ ಹಂಚಲು ತಬ್ಲಿಘಿಗಳಿಂದ ವ್ಯವಸ್ಥಿತ ಷಡ್ಯಂತ್ರ ನಡೆದಂತಿದೆ: ಸಂಸದೆ ಶೋಭಾ ಗಂಭೀರ ಆರೋಪ..!

ಬೆಂಗಳೂರು ಸ್ಲಂಗಳಿಗೆ ತಬ್ಲಿಘಿಗಳು ಸೋಂಕು ಪಸರಿಸಿದರು: ಸಂಸದೆ ಶೋಭಾ ಕರಂದ್ಲಾಜೆ ಕಿಡಿ ಉಡುಪಿ: ಶಾಂತವಾಗಿದ್ದ ಉಡುಪಿ ಜಿಲ್ಲೆಯಲ್ಲಿ ದೆಹಲಿ ಮತ್ತು ಮಹಾರಾಷ್ಟ್ರದಿಂದ ಕೊರೊನಾ ಹಬ್ಬಿದೆ. ಬೆಂಗಳೂರು ಸ್ಲಂಗಳಿಗೆ ತಬ್ಲಿಘಿಗಳು ಸೋಂಕು ಪಸರಿಸಿದರು ಎಂದು ಉಡುಪಿ-ಚಿಕ್ಕಮಗಳೂರು...