ವೆನ್ಲಾಕ್ ಆಸ್ಪತ್ರೆಯಿಂದ ಪರಾರಿಯಾಗಿದ್ದ ಕೊರೋನಾ ಶಂಕಿತ ವ್ಯಕ್ತಿ ಬಂಟ್ವಾಳದಲ್ಲಿ ಪತ್ತೆ..!
Published
5 years agoon
By
Adminವೆನ್ಲಾಕ್ ಆಸ್ಪತ್ರೆಯಿಂದ ಪರಾರಿಯಾಗಿದ್ದ ಕೊರೋನಾ ಶಂಕಿತ ವ್ಯಕ್ತಿ ಬಂಟ್ವಾಳದಲ್ಲಿ ಪತ್ತೆ..!
ಬಂಟ್ವಾಳ : ವಿಮಾನ ನಿಲ್ದಾಣದಿಂದ ವೆಲ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದ ವ್ಯಕ್ತಿಯೊಬ್ಬ ವಿಟ್ಲದ ಪಳಿಕೆ ಸಮೀಪದ ರಂಗರಮಜಲು ಎಂಬಲ್ಲಿ ಕಾಣಿಸಿಕೊಂಡಿದ್ದು ಜನರಲ್ಲಿ ಆತಂಕ ಮೂಡಿಸಿದ್ದು, ಸೋಮವಾರ ರಾತ್ರಿ ಆರೋಗ್ಯ ಇಲಾಖೆ ಹಾಗೂ ತಾಲೂಕು ದಂಡಾಧಿಕಾರಿಗಳು ಸ್ಥಳಕ್ಕಾಗಮಿಸಿ ಬಂಟ್ವಾಳ ಆಸ್ಪತ್ರೆಗೆ ವರ್ಗಾವಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ದುಬೈನಿಂದ ಆಗಮಿಸಿದ ಉಳ್ಳಾಲ ಮೂಲದ ಮಹಮ್ಮದ್ ಅಜರುದ್ದೀನ್ (33) ಅವರನ್ನು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆರೋಗ್ಯ ತಪಾಸಣೆ ನಡೆಸಿ ಜ್ವರದ ಹಿನ್ನಲೆಯಲ್ಲಿ ಮಂಗಳೂರು ಕೊರೊನಾ ಶಂಕೆಯ ಮೇಲೆ ಮಂಗಳೂರು ವೆಲ್ಲಾಕ್ ಆಸ್ಪತ್ರೆಗೆ ವರ್ಗಾವಣೆ ಮಾಡಲಾಗಿತ್ತು.
ಇಂದು ಬೆಳಗ್ಗಿನ ಜಾವ ಅಲ್ಲಿಂದ ಹೊರ ಬಂದ ವ್ಯಕ್ತಿ ಮಧ್ಯಾಹ್ನದ ಸಮಯ ಬಂಟ್ವಾಳ ತಾಲೂಕು ವಿಟ್ಲದ ಪಳಿಕೆ ರಂಗರಮಜಲು ಎಂಬಲ್ಲಿರುವ ಪತ್ನಿಯ ಮನೆಗೆ ಆಗಮಿಸಿದ್ದಾರೆ. ಇದು ಸ್ಥಳೀಯರಲ್ಲಿ ಆತಂಕ ಮೂಡಿಸುವಂತೆ ಮಾಡಿತು.
ಈ ಬಗ್ಗೆ ಸ್ಥಳೀಯರು ಸಂಬಂಧಪಟ್ಟವರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ವಿಟ್ಲ ಪೊಲೀಸ್ ಉಪನಿರೀಕ್ಷಕ ವಿನೋದ್ ಎಸ್. ಕೆ. ತೆರಳಿ ಮನೆಯಿಂದ ಹೊರ ಬಾರದಂತೆ ಎಚ್ಚರಿಕೆ ಕೊಟ್ಟಿದ್ದು, ಸ್ಥಳದಲ್ಲಿ ಸಿಬ್ಬಂದಿ ಹೇಮಾ ಅವರನ್ನು ನಿಯೋಜಿಸಿದರು.
ಬಂಟ್ವಾಳ ದಂಡಾಧಿಕಾರಿಗಳಾದ ರಶ್ಮಿ ಎಸ್. ಆರ್., ತಾಲೂಕು ವೈದ್ಯಾಧಿಕಾರಿ ದೀಪಾ ಪ್ರಭು ಬೇಟಿ ನೀಡಿ ಸೂಕ್ತ ಕ್ರಮಗಳನ್ನು ಕೈಗೊಂಡರು.
ವಿಡಿಯೋಗಾಗಿ..
You may like
International news
9/11 ದಾಳಿ: ಆರೋಪಿಗಳಿಗೆ ಗಲ್ಲು ಶಿಕ್ಷೆಯಿಂದ ಪಾರಾಗುವ ಅವಕಾಶ ?
Published
3 minutes agoon
09/01/2025By
NEWS DESK3ಮಂಗಳೂರು/ವಾಷಿಂಗ್ಟನ್ : ಸುಮಾರು 3,000 ಜನರನ್ನು ಬಲಿಪಡೆದ 2001ರಲ್ಲಿ ನಡೆದ 9/11 ಭಯೋತ್ಪಾದಕ ದಾಳಿಯ ಆರೋಪಿಗಳ ಜತೆ ಮಾಡಿಕೊಂಡಿರುವ ವಿಚಾರಣಾಪೂರ್ವ ಒಪ್ಪಂದವನ್ನು ರದ್ದುಗೊಳಿಸುವಂತೆ ಸರ್ಕಾರವು ಫೆಡರಲ್ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದೆ.
ದಾಳಿಯ ಪ್ರಮುಖ ಸಂಚುಕೋರ ಖಾಲಿದ್ ಶೈಖ್ ಮೊಹಮ್ಮದ್ ಮತ್ತು ಇತರ ಇಬ್ಬರು ಆರೋಪಿಗಳು ಹಾಗೂ ಪ್ರಾಸಿಕ್ಯೂಟರ್ ಗಳ ನಡುವೆ ಈಚೆಗೆ ವಿಚಾರಣಾಪೂರ್ವ ಒಪ್ಪಂದ ಏರ್ಪಟ್ಟಿತ್ತು. ಇದರಿಂದ ಶೈಖ್ ಹಾಗೂ ಇತರರಿಗೆ ಗಲ್ಲು ಶಿಕ್ಷೆಯಿಂದ ಪಾರಾಗುವ ಅವಕಾಶ ದೊರೆತಿದೆ.
‘ಶೈಖ್ ಹಾಗೂ ಇತರ ಇಬ್ಬರು ಸಹ ಆರೋಪಿಗಳ ತಪ್ಪೊಪ್ಪಿಗೆ ಸ್ವೀಕರಿಸಿದರೆ, ಅವರನ್ನು ಬಹಿರಂಗವಾಗಿ ವಿಚಾರಣೆಗೆ ಒಳಪಡಿಸುವ ಅವಕಾಶವನ್ನು ಸರ್ಕಾರ ಕಳೆದುಕೊಳ್ಳಲಿದೆ. ಸಾವಿರಾರು ಮಂದಿಯ ಸಾವಿಗೆ ಕಾರಣವಾದ ಮತ್ತು ಇಡೀ ಜಗತ್ತನ್ನು ಬೆಚ್ಚಿ ಬೀಳಿಸಿದ ಘೋರ ಕೃತ್ಯದ ಆರೋಪ ಹೊತ್ತಿರುವ ಮೂವರಿಗೆ ಗಲ್ಲು ಶಿಕ್ಷೆ ವಿಧಿಸುವ ಅವಕಾಶವೂ ತಪ್ಪಲಿದೆ’ ಎಂದು ಕೊಲಂಬಿಯಾ ಜಿಲ್ಲಾ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿ ನ್ಯಾಯಾಂಗ ಇಲಾಖೆಯು ಮಂಗಳವಾರ ವಾದಿಸಿದೆ.
ಇದನ್ನೂ ಓದಿ: ತಿರುಪತಿ ದುರಂ*ತಕ್ಕೆ ರಾಷ್ಟ್ರಪತಿ ಮುರ್ಮು, ಪ್ರಧಾನಿ ಮೋದಿ ಸಂ*ತಾಪ
ಈ ಮೂವರು ಆರೋಪಿಗಳು ಕಳೆದ ಎರಡು ದಶಕಗಳಿಂದ ಕ್ಯೂಬಾದ ಗ್ವಾಂಟನಾಮೊದಲ್ಲಿರುವ ಅಮೆರಿಕ ಸೇನೆಯ ಜೈಲಿನಲ್ಲಿದ್ದಾರೆ. ಈಗಾಗಲೇ ನಿಗದಿಯಾಗಿರುವಂತೆ ಖಾಲಿದ್ ಶೈಖ್ ತಪ್ಪೊಪ್ಪಿಗೆ ಹೇಳಿಕೆಯನ್ನು ಶುಕ್ರವಾರ ನೀಡಲಿದ್ದಾನೆ. ಇದರ ನಡುವೆಯೇ ಸರ್ಕಾರವು ಮೇಲ್ಮನವಿ ನ್ಯಾಯಾಲಯದ ಮೊರೆ ಹೋಗಿದೆ.
2001ರ ಸೆಪ್ಟೆಂಬರ್ 11ರಂದು ಭಯೋತ್ಪಾದಕರಿಂದ ಅಪಹರಿಸಲಾದ ಎರಡು ಪ್ರಯಾಣಿಕ ವಿಮಾನಗಳು ನ್ಯೂಯಾರ್ಕ್ ನಗರದ ವಿಶ್ವ ವ್ಯಾಪಾರ ಕೇಂದ್ರದ ಅವಳಿ ಕಟ್ಟಡಗಳಿಗೆ ಡಿಕ್ಕಿ ಹೊಡೆದಿದ್ದವು. ಮೂರನೇ ವಿಮಾನವು ವಾಷಿಂಗ್ಟನ್ ನಲ್ಲಿರುವ ಪೆಂಟಗನ್ ಗೆ ಅಪ್ಪಳಿಸಿತ್ತು. ನಾಲ್ಕನೇ ವಿಮಾನದಲ್ಲಿದ್ದ ಪ್ರಯಾಣಿಕರು ಅಪಹರಣಕಾರರೊಂದಿಗೆ ಹೋರಾಡಿದ್ದರಿಂದ ಅದು ಪೆನ್ಸಿಲ್ವೇನಿಯಾದಲ್ಲಿ ಪತನಗೊಂಡಿತ್ತು.
LATEST NEWS
ಕನ್ನಡದ ಖ್ಯಾತ ನಿರೂಪಕಿ ಅಪರ್ಣಾ ಸಹೋದರ ‘ಚೈತನ್ಯ’ ವಿಧಿವಶ.!
Published
25 minutes agoon
09/01/2025By
NEWS DESK2ಬೆಂಗಳೂರು: ಕನ್ನಡದ ಖ್ಯಾತ ನಿರೂಪಕಿ ದಿವಂಗತ ಅಪರ್ಣಾ ಸಹೋದರ ಚೈತನ್ಯ ಇಂದು ನಿಧನರಾಗಿದ್ದಾರೆ ಎಂದು ಅಪರ್ಣಾ ಪತಿ ನಾಗರಾಜ್ ರಾಮಸ್ವಾಮಿ ವಸ್ತಾರೆ ತಿಳಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಅಪರ್ಣೆಯ ಅಣ್ಣ ಚೈತನ್ಯ ನಿನ್ನೆ ನಡುರಾತ್ರಿಯಲ್ಲಿ ಈ ಇಹತೊರೆದು ಸರಿದಿದ್ದಾರೆ. ತೀವ್ರತಮ ವಿಷಾದ. ಕೆಲವು ಹೂವುಗಳು ಅರಳದೆ ಮೊಗ್ಗಾಗಿಯೇ ಉದುರಿಹೋಗುತ್ತವೆ. ಇನ್ನು ಕೆಲವು ಅರಳಿ ಹಣ್ಣಾಗದೆ ಕಮರುತ್ತವೆ. ಇನ್ನೂ ಕೆಲವನ್ನು ಒತ್ತಾಯದಿಂದ ಕೊಯ್ದು ಕತ್ತರಿಸಲಾಗುತ್ತದೆ. ಯಾರು ಯಾವುದೆಂದು ನಾನು ಈವರೆಗೂ ಅರಿತಿಲ್ಲ. ಅರಿಯುವ ಜಿಜ್ಞಾಸೆಯೂ ಈ ಹೊತ್ತಿನದಲ್ಲ. ದಿನದಿಂದ ದಿನಕ್ಕೂ ನಾನು ಹೆಚ್ಚು ಹೆಚ್ಚು ಒಬ್ಬನಾಗುತ್ತಿರುವುದು ಯಾವೊತ್ತಿನ ಸತ್ಯ. ಬಹುಶಃ ಎಲ್ಲರದೂನು ಎಂದು ಹೇಳಿದ್ದಾರೆ.
LATEST NEWS
ತಿರುಪತಿ ದುರಂ*ತಕ್ಕೆ ರಾಷ್ಟ್ರಪತಿ ಮುರ್ಮು, ಪ್ರಧಾನಿ ಮೋದಿ ಸಂ*ತಾಪ
Published
36 minutes agoon
09/01/2025By
NEWS DESK4ಮಂಗಳೂರು/ನವದೆಹಲಿ : ತಿರುಪತಿಯಲ್ಲಿ ದುರಂ*ತವೊಂದು ಸಂಭವಿಸಿದೆ. ವೈಕುಂಠದ್ವಾರ ಸರ್ವದರ್ಶನದ ಟಿಕೆಟ್ ವಿತರಣಾ ಕೇಂದ್ರಗಳಲ್ಲಿ ಉಂಟಾದ ನೂಕುನುಗ್ಗಲಿನಿಂದಾಗಿ 7 ಮಂದಿ ಪ್ರಾ*ಣ ಕಳೆದುಕೊಂಡಿದ್ದಾರೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂ*ತಾಪ ಸೂಚಿಸಿದ್ದಾರೆ.
ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ಆಂಧ್ರಪ್ರದೇಶದ ತಿರುಪತಿಯಲ್ಲಿ ಸಂಭವಿಸಿದ ಕಾ*ಲ್ತುಳಿತ ಘಟನೆಯಿಂದ ನೋ*ವಾಗಿದೆ. ಘಟನೆಯಲ್ಲಿ ಗಾ*ಯಗೊಂಡವರು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ಸಂತ್ರಸ್ತರಿಗೆ ಆಂಧ್ರ ಪ್ರದೇಶ ಸರ್ಕಾರ ಎಲ್ಲ ರೀತಿಯ ನೆರವು ನೀಡುತ್ತಿದೆ ಎಂದು ಹೇಳಿದ್ದಾರೆ.
ರಾಷ್ಟ್ರಪತಿ ಸಂತಾಪ :
ಘಟನೆಯ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು, ದು*ರ್ಘಟನೆಯಲ್ಲಿ ಮೃ*ತಪಟ್ಟವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ದೇವರು ಕುಟುಂಬಸ್ಥರಿಗೆ ತಮ್ಮ ಆಪ್ತರನ್ನು ಕಳೆದುಕೊಂಡ ದು:ಖವನ್ನು ಭರಿಸುವ ಶಕ್ತಿ ಕೊಡಲಿ ಎಂದು ಪ್ರಾರ್ಥಿಸುವುದಾಗಿ ಹೇಳಿದ್ದಾರೆ.
ಗುರುವಾರ(ಜ.9) ಬೆಳಗ್ಗೆ 5 ಗಂಟೆಯಿಂದ ಶ್ರೀನಿವಾಸಂ, ಸತ್ಯನಾರಾಯಣಪುರಂ ಮತ್ತು ಬೈರಾಗಿಪಟ್ಟೆಡ ಸೇರಿದಂತೆ 9 ಪ್ರದೇಶಗಳಲ್ಲಿ ಸ್ಥಾಪಿಸಲಾಗಿರುವ 94 ಕೌಂಟರ್ಗಳ ಮೂಲಕ ವೈಕುಂಠ ದ್ವಾರ ದರ್ಶನ ಟಿಕೆಟ್ ನೀಡಲು ಟಿಟಿಡಿ ನಿರ್ಧರಿಸಿತ್ತು. ಆದರೆ, ಟೋಕನ್ಗಳಿಗಾಗಿ ಬುಧವಾರ ಸಂಜೆಯೇ ಭಾರಿ ಜನರು ಜಮಾಯಿಸಿದ್ದರು.
ಇದನ್ನೂ ಓದಿ : ಸೈಬರ್ ವಂಚನೆಯ ನಷ್ಟಕ್ಕೆ ಬ್ಯಾಂಕುಗಳೇ ಹೊಣೆ ಎಂದ ಸುಪ್ರೀಂ ಕೋರ್ಟ್
ಈ ನಡುವೆ ಟಿಕೆಟ್ ಕೌಂಟರ್ ಸಿಬ್ಬಂದಿಯೊಬ್ಬರು ಅಸ್ವಸ್ಥಗೊಂಡ ಕಾರಣ ಅವರನ್ನು ಹೊರಕ್ಕೆ ಕರೆದೊಯ್ಯಲು ಗೇಟ್ ತೆರೆದಾಗ ಹೊರಗಿದ್ದವರೆಲ್ಲರೂ ಗುಂಪು ಗುಂಪಾಗಿಒಳನುಗ್ಗುವ ಪ್ರಯತ್ನ ಮಾಡಿದ್ದಾರೆ. ಈ ವೇಳೆ ಕೆಲವರು ಕೆಳಗೆ ಬಿದ್ದಿದ್ದು ಕಾಲ್ತುಳಿತದಿಂದ ಅಸ್ವಸ್ಥಗೊಂಡಿದ್ದರು. ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಯಿತು. ಆದರೆ, ಅವರಲ್ಲಿ 7 ಭಕ್ತರು ಸಾವನ್ನಪ್ಪಿದ್ದು, ಉಳಿದವರಿಗೆ ಚಿಕಿತ್ಸೆ ಮುಂದುವರಿದಿದೆ.
LATEST NEWS
ಕೆಲಸದ ಒತ್ತಡಕ್ಕೆ ಬೇಸತ್ತು ಬಿಲ್ ಕಲೆಕ್ಟರ್ ಆತ್ಮಹತ್ಯೆ
ಸೈಬರ್ ವಂಚನೆಯ ನಷ್ಟಕ್ಕೆ ಬ್ಯಾಂಕುಗಳೇ ಹೊಣೆ ಎಂದ ಸುಪ್ರೀಂ ಕೋರ್ಟ್
ಓಂ ಶಕ್ತಿ ದರ್ಶನ ಪಡೆದು ವಾಪಾಸಾಗುತ್ತಿದ್ದಾಗ ದುರಂ*ತ; ಐವರು ಸಾ*ವು
KSRTC ಗುತ್ತಿಗೆ ಬಸ್ ದರದಲ್ಲೂ ಏರಿಕೆ: ಪ್ರತಿ ಕಿ.ಮೀ.ಗೆ 7 ರೂ. ಹೆಚ್ಚಳ
ಬಂಟ್ವಾಳ: ಇಡಿ ಅಧಿಕಾರಿಗಳ ಸೋಗಿನಲ್ಲಿ ಹಣ ದೋಚಿದ ಮನೆಗೆ ಸ್ಪೀಕರ್ ಯು.ಟಿ. ಖಾದರ್ ಭೇಟಿ
ತಿರುಪತಿ ಕಾಲ್ತುಳಿತದಲ್ಲಿ ಜೀವ ಬಿಟ್ಟ ಕರ್ನಾಟಕದ ಓರ್ವ ಮಹಿಳೆ
Trending
- DAKSHINA KANNADA6 days ago
ಜಮೀನು ಮಾಲೀಕರಿಗೆ ಸಿಹಿ ಸುದ್ದಿ ನೀಡಿದ ಸುಪ್ರೀಂ ಕೋರ್ಟ್..!
- FILM1 day ago
ಗೋವಾದಲ್ಲಿ ಕೇಕ್ ಕತ್ತರಿಸಿ ಯಶ್ ಬರ್ತ್ಡೇ ಸಂಭ್ರಮ
- FILM3 days ago
ಯಶ್ ಫ್ಯಾನ್ಸ್ಗೆ ಸರ್ಪ್ರೈಸ್- ‘ಟಾಕ್ಸಿಕ್’ ಟೀಮ್ನಿಂದ ಸಿಕ್ತು ಸಿಹಿ ಸುದ್ದಿ
- BIG BOSS5 days ago
2ನೇ ಮದುವೆಗೆ ಸಜ್ಜಾದ ಬಿಗ್ ಬಾಸ್ ಮಾಜಿ ಸ್ಪರ್ಧಿ ವರ್ತೂರು ಸಂತೋಷ್; ಹುಡುಗಿ ಯಾರು ಗೊತ್ತಾ..?