ಕೊರೊನಾ ಶಂಕಿತನಿಂದ ಪೊಲೀಸರ ಮೇಲೆ ಜೀವ ಬೆದರಿಕೆ: ಎಫ್.ಐ.ಆರ್ ದಾಖಲು
ಬೆಳ್ತಂಗಡಿ: ಕೊರೊನಾ ವೈರಸ್ ಕಪಿಮುಷ್ಠಿಯಿಂದ ಪಾರಾಗಲು ದೇಶವನ್ನೇ ಲಾಕ್ ಡೌನ್ ಮಾಡಲಾಗಿದೆ. ಜೊತೆಗೆ ಒಬ್ಬರಿಂದ ಮತ್ತೊಬ್ಬರಿಗೆ ಹರಡಬಾರದೆಂಬ ಉದ್ದೇಶದಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾಗಿದೆ.
ವಿಶೇಷವಾಗಿ ವಿದೇಶದಿಂದ ಬಂದಿರುವ ಶಂಕಿತರಿಗೆ ಕೈ ಮೇಲೊಂದು ಸೀಲ್ ಹೊಡೆದು, ಇತರರ ಸೇಫ್ಟಿ ದೃಷ್ಟಿಯಿಂದ ಅವರನ್ನು ಹೋಮ್ ಕ್ವಾರೆಂಟೈನ್ ನಲ್ಲಿ ಇಡಲಾಗುತ್ತದೆ.
ಆದರೆ ಕೆಲವರು ಇದಕ್ಕೆಲ್ಲಾ ಸೊಪ್ಪು ಹಾಕದೆ ತಮಗೆ ಬೇಕಾದ ಹಾಗೆ ಬೇಕಾಬಿಟ್ಟಿ ಹೊರಗೆಲ್ಲ ಸುತ್ತಾಡುತ್ತಾರೆ. ಇಷ್ಟೇ ಅಲ್ಲದೇ ಈ ಬಗ್ಗೆ ವಿಚಾರಿಸಿದವರಿಗೆ ಬಾಯಿಗೆ ಬಂದಂತೆ ಬೈದು ಕೈ ಮಾಡಲು ಹೇಸೋದಿಲ್ಲ.
ಇದೀಗ ಹೋಮ್ ಕ್ವಾರಂಟೈನ್ ನಲ್ಲಿರಬೇಕಾದವರು ಪೊಲೀಸರ ಮೇಲೆ ಕೈ ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದೆ.
ಇತ್ತೀಚೆಗೆ ವಿದೇಶದಿಂದ ಊರಿಗೆ ಮರಳಿದ್ದ ತಾಲೂಕಿನ ನ್ಯಾಯತರ್ಪು ಗ್ರಾಮದ ನಾಳ ದೇವಸ್ಥಾನದ ಹತ್ತಿರ ವಾಸಿಸುತ್ತಿರುವ ವ್ಯಕ್ತಿ ಹಂಝತ್ ಅಲಿಯನ್ನು ಕೊರೊನಾ ಶಂಕೆ ಮೇರೆಗೆ ಹೋಮ್ ಕ್ವಾರಂಟೈನ್ ನಲ್ಲಿ ಇರಿಸಲಾಗಿತ್ತು.
ಆದರೆ ಈತ ಮನೆಯೊಳಗೆ ಪ್ರತ್ಯೇಕವಾಗಿ ಇರುವುದನ್ನು ಬಿಟ್ಟು ಯಾವುದೇ ಸುರಕ್ಷತಾ ಕ್ರಮಗಳನ್ನು ಪಾಲಿಸದೆ, ಮಾಸ್ಕ್ ಧರಿಸಿದೆ ಹೊರಗಡೆ ತಿರುಗಾಡುತ್ತಿದ್ದ.
ಇದೇ ಸಂದರ್ಭದಲ್ಲಿ ನಿಗಾದಲ್ಲಿರುವ ವ್ಯಕ್ತಿಗಳ ತಪಾಸಣೆ ಕರ್ತವ್ಯಕ್ಕೆ ತೆರಳಿದ್ದ ಪೊಲೀಸ್ ಸಿಬ್ಬಂದಿ ಗಂಗಾಧರ್ ಎಚ್.ಸಿ, ಮಹಿಳಾ ಸಿಬ್ಬಂದಿ ಚೈತ್ರ
ಹಾಗೂ ತಾಲೂಕು ಆಸ್ಪತ್ರೆಯ ಕಮಲ ಅವರಿಗೆ ಶಂಕಿತ ವ್ಯಕ್ತಿ ಹಾಗೂ ತನ್ನ ಮನೆಯವರಾದ ಮಸೂದ್ ಅಲಿ, ಬಾತಿಷ್ ಅಲಿ, ಅಕ್ಬರ್ ಅಲಿ ಎಂಬವರ ಕರ್ತವ್ಯಕ್ಕೆ ಅಡ್ಡಿಪಡಿಸಿ ಜೀವ ಬೆದರಿಕೆ ಹಾಕಿದ್ದಾರೆ.
ಈ ಹಿನ್ನಲೆಯಲ್ಲಿ ಪೊಲೀಸರು ಹಂಝತ್ ಅಲಿ ಮತ್ತು ಸಹಚರರ ವಿರುದ್ದ ಐಪಿಸಿ 269, 270, 353, 504, 506ರ ಅಡಿಯಲ್ಲಿ ಕೇಸು ದಾಖಲಾಗಿದೆ.
ಸುರಕ್ಷತಾ ಕ್ರಮ ಪಾಲಿಸುವಂತೆ ಸೂಚಿಸಿದ್ದರೂ ಏಕೆ ಪಾಲಿಸದೆ ನಿರ್ಲಕ್ಷ್ಯ ವಹಿಸಿದ್ದೇಕೆ ಎಂದು ಪೊಲೀಸರು ಪ್ರಶ್ನಿಸಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ.
ಇದರನ್ವಯ ಇದೀಗ ಎಫ್.ಐ.ಆರ್ ದಾಖಲಾಗಿಸಲಾಗಿದೆ.