Home ಪ್ರಮುಖ ಸುದ್ದಿ ಸಕ್ಸಸ್.. ವರ್ಕೌಟ್ ಆಯ್ತು ಕೇರಳ-ಜೈಪುರದ ಕೊರೊನಾ ಪೀಡಿತನಿಗೆ ನೀಡಿದ Anti-HIV ಡ್ರಗ್ಸ್.. !

ಸಕ್ಸಸ್.. ವರ್ಕೌಟ್ ಆಯ್ತು ಕೇರಳ-ಜೈಪುರದ ಕೊರೊನಾ ಪೀಡಿತನಿಗೆ ನೀಡಿದ Anti-HIV ಡ್ರಗ್ಸ್.. !

ಸಕ್ಸಸ್.. ವರ್ಕೌಟ್ ಆಯ್ತು ಕೇರಳ-ಜೈಪುರದ ಕೊರೊನಾ ಪೀಡಿತನಿಗೆ ನೀಡಿದ Anti-HIV ಡ್ರಗ್ಸ್.. !

ಕೊಚ್ಚಿ: ಕೇರಳದಲ್ಲಿ ಕೋವಿಡ್-19 ಪಾಸಿಟಿವ್ ನಿಂದ ಬಳಲುತ್ತಿದ್ದ ಬ್ರಿಟನ್ ಪ್ರಜೆಗೆ ಚಿಕಿತ್ಸೆಗಾಗಿ  Anti-HIV ಡ್ರಗ್ಸ್ ನೀಡಲಾಗಿತ್ತು.

ಬ್ರಿಟನ್ ಪ್ರಜೆ ಮೇಲೆ Anti-HIV ಡ್ರಗ್ಸ್ ಪರಿಣಾಮಕಾರಿಯಾಗಿದ್ದು, ಇದೀಗ ರಿಪೋರ್ಟ್ ನಲ್ಲಿ ಕೋವಿಡ್-19 ನೆಗೆಟಿವ್ ಬಂದಿದೆ ಎಂದು ಎರ್ನಾಕುಲಂನ ಮೆಡಿಕಲ್ ಕಾಲೇಜ್, ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

Ritonavir ಮತ್ತು Lopinavir ಕಾಂಬಿನೇಶನ್ ಒಳಗೊಂಡ Anti-HIV ಡ್ರಗ್ಸ್ ಗೆ ರೋಗಿ ಉತ್ತಮವಾಗಿ ಸ್ಪಂದಿಸಿದ್ದಾರೆ.

ಏಳು ದಿನಗಳ ಕಾಲ ಬ್ರಿಟನ್ ಪ್ರಜೆ ಚಿಕಿತ್ಸೆ ಪಡೆದಿದ್ದು, Anti-HIV ಡ್ರಗ್ಸ್ ನೀಡಿದ ಮೂರು ದಿನಗಳ ಬಳಿಕ ಟೆಸ್ಟ್ ಗಾಗಿ ಸ್ಯಾಂಪಲ್ ಕಲೆಕ್ಟ್ ಮಾಡಲಾಗಿತ್ತು.

ಟೆಸ್ಟ್ ರಿಸಲ್ಟ್ ಈಗ ಲಭ್ಯವಾಗಿದ್ದು, ಕೋವಿಡ್-19 ನೆಗೆಟಿವ್ ಎಂದಾಗಿದೆ.

ಅಸಲಿಗೆ, ಕೇರಳದಲ್ಲಿ ಕೊರೊನಾ ಪೀಡಿತರ ಮೇಲೆ Anti-HIV ಡ್ರಗ್ಸ್ ಪ್ರಯೋಗ ಮಾಡಿದ್ದು ಇದೇ ಮೊದಲು.

ಡಾ.ಥಾಮಸ್ ಮ್ಯಾಥ್ಯೂ, ಡಾ.ಜೇಕಬ್, ಡಾ.ಗಣೇಶ್ ಮೋಹನ್, ಡಾ.ಗೀತಾ ನಾಯರ್ ನೇತೃತ್ವದ ವೈದ್ಯರ ತಂಡ ಎರ್ನಾಕುಲಂನ ಮೆಡಿಕಲ್ ಕಾಲೇಜ್, ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದಾರೆ.

ಬ್ರಿಟನ್ ಪ್ರಜೆ ಜೊತೆ ಆತನ ಪತ್ನಿಗೂ Anti-HIV ಡ್ರಗ್ಸ್ ನೀಡಲಾಗಿದ್ದು, ಆಕೆಗೂ ಟೆಸ್ಟ್ ರಿಪೋರ್ಟ್ ನಲ್ಲೂ ಇದೀಗ ಕೋವಿಡ್-19 ನೆಗೆಟಿವ್ ಬಂದಿದೆ.

ಕೊರೊನಾ ವೈರಸ್ ಸೋಂಕಿನಿಂದ ಬಳಲುತ್ತಿರುವ ರೋಗಿಗಳ ಅನಾರೋಗ್ಯ ಸ್ಥಿತಿಯ ತೀವ್ರತೆಯನ್ನು ಗಮನದಲ್ಲಿಟ್ಟುಕೊಂಡು,

ಕೇಸ್ ಟು ಕೇಸ್ ಆಧಾರದ ಮೇಲೆ Lopinavir ಮತ್ತು Ritonavir ಒಳಗೊಂಡ Anti-HIV ಡ್ರಗ್ ಕಾಂಬಿನೇಶನ್ ಬಳಸುವಂತೆ ಕೇಂದ್ರ ಆರೋಗ್ಯ ಸಚಿವಾಲಯ ಶಿಫಾರಸ್ಸು ಮಾಡಿತ್ತು.

ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಭಾರತದಲ್ಲಿರುವ ಇಟಲಿಯ ದಂಪತಿ ಮೇಲೂ Anti-HIV ಡ್ರಗ್ಸ್ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ.

ಕೊರೊನಾ ವೈರಸ್ ಸೋಂಕಿನಿಂದ ಕಂಗೆಟ್ಟಿದ್ದ ಇಟಲಿಯ ದಂಪತಿ Anti-HIV ಡ್ರಗ್ಸ್ ನಿಂದಾಗಿ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.

ಇಟಲಿಯ ದಂಪತಿಯ ಜೊತೆಗೆ ದುಬೈನಿಂದ ವಾಪಸ್ ಆಗಿ ಕೊರೊನಾ ಸೋಂಕಿನಿಂದ ಬಳಲುತ್ತಿದ್ದ 85 ವರ್ಷ ವಯಸ್ಸಿನ ವ್ಯಕ್ತಿಯ ಮೇಲೂ Anti-HIV ಡ್ರಗ್ಸ್ ಪ್ರಯೋಗಿಸಲಾಗಿದೆ.

ಅಚ್ಚರಿ ಅಂದ್ರೆ, ಈ ವ್ಯಕ್ತಿಯೂ ಇದೀಗ ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾಗಿದ್ದಾರೆ.

- Advertisment -

RECENT NEWS

ಕೇರಳ-ಕರ್ನಾಟಕ ಬಾರ್ಡರ್ ಸಮಸ್ಯೆ ಪರಿಹಾರಕ್ಕೆ ಪತ್ರದ ಮೂಲಕ ದೇವೇಗೌಡ ಮನವಿ

ಕೇರಳ-ಕರ್ನಾಟಕ ಬಾರ್ಡರ್ ಸಮಸ್ಯೆ ಪರಿಹಾರಕ್ಕೆ ಪತ್ರದ ಮೂಲಕ ದೇವೇಗೌಡ ಮನವಿ ಮಂಗಳೂರು: ಸದ್ಯ ಕೊರೊನಾ ವೈರಸ್ ಹಿನ್ನಲೆ ಕೇರಳ ಹಾಗೂ ಕರ್ನಾಟಕ ಗಡಿ ಸಮಸ್ಯೆ ತಾರಕಕ್ಕೇರಿದ್ದು, ಇದೀಗ ಈ ಸಮಸ್ಯೆ ಪರಿಹರಿಸಲು ಮಾಜಿ ಪ್ರಧಾನಿ...

ಎಂಅರ್ ಜಿ ಗ್ರೂಪ್ ನ‌ ಕೆ.ಪ್ರಕಾಶ್ ಶೆಟ್ಟಿಯರಿಂದ 1 ಕೋಟಿ.ರೂ.ವೆಚ್ಚದ ದಿನಸಿ ಕಿಟ್ ವಿತರಣೆ

ಎಂಅರ್ ಜಿ ಗ್ರೂಪ್ ನ‌ ಕೆ.ಪ್ರಕಾಶ್ ಶೆಟ್ಟಿಯರಿಂದ 1 ಕೋಟಿ.ರೂ.ವೆಚ್ಚದ ದಿನಸಿ ಕಿಟ್ ವಿತರಣೆ ಮಂಗಳೂರು: ಎಮ್ ರ್ ಜಿ ಗ್ರೂಪ್ ನ ಆಡಳಿತ ನಿರ್ದೇಶಕ ಕೊರಂಗ್ರಪಾಡಿ ಪ್ರಕಾಶ್ ಶೆಟ್ಟಿ ಅವರ ಉದಾರ ದಾನವಾಗಿ...

ಕೊರೊನಾ ವಿರುದ್ದದ ಸಮರಕ್ಕೆ ತನ್ನ ಪಾಕೆಟ್‌ ಮನಿಯನ್ನೇ ದೇಣಿಗೆ ನೀಡಿದ 5 ವರ್ಷದ ಬಾಲಕ..!

ಕೊರೊನಾ ವಿರುದ್ದದ ಸಮರಕ್ಕೆ ತನ್ನ ಪಾಕೆಟ್‌ ಮನಿಯನ್ನೇ ದೇಣಿಗೆ ನೀಡಿದ 5 ವರ್ಷದ ಬಾಲಕ..! ಮಂಗಳೂರು : ಇಂದು ಐದು ವರ್ಷದ ಬಾಲಕನೊಬ್ಬ ಸಿಎಂ ಪರಿಹಾರ ನಿಧಿಗೆ ತನ್ನ ಪಾಕೆಟ್ ಮನಿಯನ್ನೇ ದೇಣಿಗೆ ನೀಡಿ...

ದೆಹಲಿ ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ 11 ಮಂದಿಗೆ ಕೊರೊನಾ ಪಾಸಿಟಿವ್

ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ 11 ಮಂದಿಗೆ ಕೊರೊನಾ ಪಾಸಿಟಿವ್ ಬೀದರ್: ಬೀದರ್‌ನಲ್ಲಿ 11 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ 11 ಮಂದಿಯೂ ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರಾಗಿದ್ದಾರೆ. ಬೀದರ್‌ನಿಂದ ದೆಹಲಿಗೆ ತೆರಳಿದ್ದ...