Connect with us

    ಕೊರೊನಾ ಲಾಕ್ ಡೌನ್ ಹಿನ್ನಲೆ, ರಾಜಕೀಯ ಫೀಲ್ಡ್ ನಿಂದ ನೇರ ಭತ್ತದ ಫೀಲ್ಡ್‌ಗೆ ಇಳಿದ ಮಾಜಿ ಶಾಸಕಿ…..!

    Published

    on

    ಕೊರೊನಾ ಲಾಕ್ ಡೌನ್ ಹಿನ್ನಲೆ, ರಾಜಕೀಯ ಫೀಲ್ಡ್ ನಿಂದ ನೇರ ಭತ್ತದ ಫೀಲ್ಡ್‌ಗೆ ಇಳಿದ ಮಾಜಿ ಶಾಸಕಿ…..!

    ಮಂಗಳೂರು : ವಿಶ್ವದಾದ್ಯಂತ ಹಬ್ಬಿರುವ ಕೊರೊನಾ ಮಹಾಮಾರಿಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಎಲ್ಲೆಡೆ ಲಾಕ್ ಡೌನ್ ಜಾರಿಯಲ್ಲಿದೆ. ಲಾಕ್ ಡೌನ್ ಕೆಲವರ ಜೀವನ ವಿಧಾನದಲ್ಲೂ ಕೊಂಚ ಬದಲಾವಣೆಯನ್ನೂ ತಂದಿದೆ.

    ಸದಾ ಸಭೆ-ಸಮಾರಂಭಗಳಲ್ಲಿ ಬ್ಯುಸಿಯಾಗುತ್ತಿದ್ದ ರಾಜಕಾರಣಿಗಳನ್ನೂ ಮನೆಯಿಂದ ಹೊರ ನಡೆಯದಂತೆ ಪರಿಸ್ಥಿತಿಗೆ ಕೊರೊನಾ ತಂದಿದೆ. ಇದೇ ಪರಿಸ್ಥಿತಿಯನ್ನು ಸದುಪಯೋಗಪಡಿಸಿಕೊಳ್ಳಲು ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ರಾಜಕೀಯ ಫೀಲ್ಡ್ ಬಿಟ್ಟು ಇದೀಗ ಭತ್ತದ ಫೀಲ್ಡ್ ಗೆ ಇಳಿದಿದ್ದಾರೆ.

    ಸದಾ ಬ್ಯುಸಿಯಲ್ಲಿರುವ ಮುಖಂಡರನ್ನು ಕೊರೊನಾ ಮಹಾಮಾರಿ ಮನೆಯಲ್ಲೇ ಇರುವಂತೆ ಮಾಡಿದೆ. ಹೌದು ಕೊರೊನಾ ತಡೆ ಹಿನ್ನಲೆಯಲ್ಲಿ ದೇಶದಾದ್ಯಂತ ಲಾಕ್ ಡೌನ್ ಬಳಿಕ ಅನ್ ಲಾಕ್ ಪ್ರಕ್ರಿಯೆ ಜಾರಿಯಲ್ಲಿದ್ದರೂ, ರಾಜಕೀಯ ಸಭೆ, ಧಾರ್ಮಿಕ ಸಭೆಗಳಿಗೆ ನಿಷೇಧವಿದೆ.

    ಇದರಿಂದಾಗಿ ರಾಜಕೀಯ ಮುಖಂಡರು ಇದೀಗ ಫುಲ್ ಫ್ರೀಯಾಗಿದ್ದಾರೆ. ಹೌದು ಇಂಥಹ ಫ್ರೀ ಟೈಮನ್ನು ಒಳ್ಳೆಯ ಉದ್ಧೇಶಕ್ಕೆ ಬಳಸಿಕೊಳ್ಳಲು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಮುಂದಾಗಿದ್ದಾರೆ.

    ಲಾಕ್ ಡೌನ್ ಘೋಷಣೆಯಾದ ಬಳಿಕ ಮನೆಯಿಂದಲೇ ಫೋನ್ ಮೂಲಕ ರಾಜಕೀಯದಲ್ಲಿ ತೊಡಗಿಕೊಳ್ಳಬೇಕಾದ ಅನಿವಾರ್ಯತೆ ಶಕುಂತಲಾ ಶೆಟ್ಟಿಯವರಿಗೂ ಬಂದಿದೆ.

    ಮನೆಯಲ್ಲೇ ಇದ್ದು ಬೇಸರ ಮೂಡಿದಾಗ ತನ್ನ ತವರು ಮನೆಯಲ್ಲಿ ಗದ್ದೆಯ ಬೇಸಾಯಕ್ಕೆ ಅಣಿಯಾಗುತ್ತಿರುವ ವಿಚಾರ ಶಕುಂತಲಾ ಶೆಟ್ಟಿಯವರಿಗೆ ತಿಳಿಯಿತು.

    ತಕ್ಷಣ ತವರು ಮನೆಯಲ್ಲಿನ ಗದ್ದೆ ಬೇಸಾಯದಲ್ಲಿ ತನ್ನನ್ನು ತೊಡಗಿಸಿಕೊಳ್ಳುವ ಮೂಲಕ ಲಾಕ್ ಡೌನ್ ಸಮಯವನ್ನು ಬರುಪೂರವಾಗಿ ಉಪಯೋಗಿಸಿಕೊಂಡಿದ್ದಾರೆ. ನಾಟಿ ಮಾಡುವುದರಿಂದ ಹಿಡಿದು, ನಾಟಿ ಸಂಗ್ರಹಿಸುವ ಕಾರ್ಯದಲ್ಲೂ ತೊಡಗಿಸಿಕೊಂಡ ಶಕುಂತಲಾ ಶೆಟ್ಟಿ ಗದ್ದೆಯ ಕೆಲಸ ಖುಷಿ ತರುತ್ತದೆ ಎನ್ನುವ ಸಂತಸವನ್ನೂ ಹಂಚುತ್ತಾರೆ.

    ಎಲ್ಲಾ ಕೆಲಸಗಳಿಗಿಂತಲೂ ಶ್ರೇಷ್ಟವಾದುದು ಕೃಷಿ ಕೆಲಸ. ಭತ್ತ ಬೆಳೆದರೆ ಮಾತ್ರ ದೇಶದ ಪ್ರಧಾನಿಯಾದಿಯಾಗಿ ಎಲ್ಲಾ ಜನರಿಗೂ ಆಹಾರ ಪೂರೈಕೆಯಾಗುತ್ತದೆ.

    ಇದರಿಂದಾಗಿ ಭತ್ತದ ಗದ್ದೆಯಲ್ಲಿ ಕೆಲಸ ಮಾಡುತ್ತಾ, ಉಳಿದವರನ್ನೂ ಪ್ರೋತ್ಸಾಹಿಸುವ ಕಾರ್ಯದಲ್ಲೂ ಶಕುಂತಲಾ ಶೆಟ್ಟಿ ನಿರತರಾಗಿದ್ದಾರೆ.

    ಮಂಗಳೂರು ಹೊರವಲಯದ ಕುತ್ತಾರಿನ ಬೋಳ್ಯಗುತ್ತು ಎಂಬುವುದು ಮಾಜಿ ಶಾಸಕಿ ಶಕುಂತಲಾ ಶೆಟ್ಟಿಯವರ ತವರು ಮನೆಯಾಗಿದೆ. ಈ ಗುತ್ತಿನ ಮನೆಗೆ ಸೇರಿದ ಹದಿನೈದು ವರ್ಷ ಬೇಸಾಯ ಮಾಡದೇ ಉಳಿದಿದ್ದ ಗದ್ದೆಯಲ್ಲಿ ಈ ವರ್ಷ ಭತ್ತದ ನಾಟಿ ಮಾಡಲಾಗುತ್ತಿದೆ.

    ಲಾಕ್ ಡೌನ್ ಘೋಷಣೆಯಾಗುವುದಕ್ಕೂ ಮೊದಲು ಮುಂಬಯಿಯಿಂದ ಊರಿಗೆ ಬಂದಿದ್ದ ಶಕುಂತಲಾ ಶೆಟ್ಟಿಯವರ ತವರು ಮನೆಯ ಹಲವು ಸದಸ್ಯರೂ ಇದೀಗ ಊರಲ್ಲೇ ಉಳಿಯುವಂತಾಗಿದೆ.

    ಇದರಿಂದಾಗಿ ಆ ಸದಸ್ಯರೂ ಕೂಡಾ ಬೇಸಾಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಜೀವಮಾನದಲ್ಲಿ ಗದ್ದೆಗೆ ಇಳಿಯದಿದ್ದ ಜನ ಇದೀಗ ಗದ್ದೆಯಲ್ಲಿ ಮಣ್ಣು ಮೆತ್ತಿಸಿಕೊಂಡು ನಾಟಿಯಲ್ಲಿ ತೊಡಗಿಕೊಳ್ಳುತ್ತಿದ್ದಾರೆ.

    ಭತ್ತದ ನಾಟಿಯ ಅನುಭವವನ್ನು ಕೊರೊನಾ ಲಾಕ್ ಡೌನ್ ಕಲ್ಪಿಸಿದೆ ಎನ್ನುತ್ತಾರೆ ಮುಂಬಯಿಯಿಂದ ಊರಿಗೆ ಬಂದು ಲಾಕ್ ಡೌನ್ ನಲ್ಲಿ ಸಿಲುಕಿಕೊಂಡ ಮಹಿಳೆ ಗುಣವತಿ.

    ಸಾದ ಅಲ್ಲೊಂದು ಇಲ್ಲೊಂದು ರಾಜಕೀಯ ಸಭೆ, ಹೇಳಿಕೆ ನೀಡುತ್ತಾ ಸುದ್ಧಿಯಲ್ಲಿದ್ದ ಶಕುಂತಲಾ ಶೆಟ್ಟಿ ಇದೀಗ ಗದ್ದೆ ಬೇಸಾಯದಲ್ಲಿ ತೊಡಗಿಕೊಂಡು ಮತ್ತೆ ಸುದ್ಧಿಯಲ್ಲಿದ್ದಾರೆ.

    ಲಾಕ್ ಡೌನ ಸಮಯವನ್ನು ಈ ರೀತಿಯ ಒಳ್ಳೆಯ ಕೆಲಸಗಳಲ್ಲಿ ತೊಡಗಿಕೊಂಡ ತೃಪ್ತಿಯಲ್ಲಿ ಶಕುಂತಲಾ ಶೆಟ್ಟಿಯವರಿದ್ದಾರೆ.

    Click to comment

    Leave a Reply

    Your email address will not be published. Required fields are marked *

    LATEST NEWS

    WATCH : ಭೂಮಿ ಕುಸಿದು ಗುಂಡಿಯೊಳಗೆ ಬಿದ್ದ ಟ್ರಕ್; ಭಯಾನಕ ವೀಡಿಯೋ ವೈರಲ್

    Published

    on

    ಮಂಗಳೂರು/ ಮಹಾರಾಷ್ಟ್ರ: ಪೋಸ್ಟ್‌ ಆಫೀಸ್‌ ಕಾಂಪ್ಲೆಕ್ಸ್‌ನ ನೆಲ ಏಕಾ ಏಕಿ ಕುಸಿದು ಬಿದ್ದ ಕಾರಣ ಮುನ್ಸಿಪಲ್‌ ಕಾರ್ಪೋರೇಷನ್‌ಗೆ ಸೇರಿದ್ದ ಟ್ರಕ್‌ ಒಂದು ಗುಂಡಿಗೆ ಬಿದ್ದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮಹಾರಾಷ್ಟ್ರದ ಪುಣೆ ನಗರದ ಅಂಚೆ ಕಚೇರಿ ಆವರಣದಲ್ಲಿ ಈ ಘಟನೆ ನಡೆದಿದೆ.

    ಟ್ರಕ್‌ ಪುಣೆ ಮುನ್ಸಿಪಲ್ ಕಾರ್ಪೋರೆಷನ್‌ಗೆ ಸೇರಿದ್ದಾಗಿದ್ದು, ಚರಂಡಿ ಸ್ವಚ್ಚಗೊಳಿಸುವ ಕೆಲಸಕ್ಕೆ ಪೋಸ್ಟ್ ಆಫೀಸ್ ಬಳಿ ಬಂದಿತ್ತು. ಈ ವೇಳೆ ಟ್ರಕ್‌ ನಿಲ್ಲಿಸಿದ್ದ ಜಾಗದಲ್ಲೇ ಭೂಮಿ ಕುಸಿದು ಟ್ರಕ್‌ ಭೂಮಿಯ ಒಡಲಿಗೆ ಜಾರಿದೆ. ಈ ವೇಳೆ ಟ್ರಕ್‌ನಲ್ಲಿದ್ದ ಚಾಲಕ ಹಾರಿ ತಪ್ಪಿಸಿಕೊಂಡ ಕಾರಣ ಪ್ರಾ*ಣಾಪಾಯದಿಂದ ಪಾರಾಗಿದ್ದಾನೆ. ಭೂಮಿ ಕುಸಿದ ಕಾರಣ ಸುಮಾರು 40ರಿಂದ50 ಅಡಿ ಆಳದ ಗುಂಡಿ ನಿರ್ಮಾಣವಾಗಿದ್ದು, ಟ್ರಕ್‌ ಇದರಲ್ಲಿ ಸಿಲುಕಿಕೊಂಡಿದೆ.

    ಇದನ್ನೂ ಓದಿ : ವ್ಯಾಟ್ಸಾಪ್ ಸ್ಟೇಟಸ್ ಹಾಕಿ ಆತ್ಮಹ*ತ್ಯೆ ಮಾಡಿಕೊಂಡ ವ್ಯಕ್ತಿ

    ಅನಿರೀಕ್ಷಿತವಾಗಿ ಸಂಭವಿಸಿದ ಈ ಘಟನೆಯ ಬಗ್ಗೆ ಜನರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಪೋಸ್ಟ್ ಆಫೀಸ್ ಮುಂಬಾಗದಲ್ಲಿ ಈ ರೀತಿ ಕುಸಿತ ಆಗಲು ಕಾರಣ ಏನು ಅನ್ನೋ ಬಗ್ಗೆ ಚರ್ಚೆಗಳು ಆರಂಭವಾಗಿವೆ. ಕ್ರೇನ್‌ ಹಾಗೂ ಜೆಸಿಬಿ ಸಹಾಯದಿಂದ ಟ್ರಕ್‌ ಮೇಲೆತ್ತಲಾಗಿದೆ.

    Continue Reading

    DAKSHINA KANNADA

    ಕನ್ನಡದಲ್ಲಿ ಔಷಧ ಚೀಟಿ ಬರೆದು ಗಮನ ಸೆಳೆದ ಕಾಸರಗೋಡು ಜಿಲ್ಲೆಯ ದಂತ ವೈದ್ಯ..!

    Published

    on

    ಮಂಜೇಶ್ವರ/ಮಂಗಳೂರು: ಈ ಹಿಂದೆ ವೈದ್ಯರೊಬ್ಬರು ಕನ್ನಡದಲ್ಲಿ ಔಷಧ ಚೀಟಿಯನ್ನು ಬರೆಯುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಬಳಿಕ ಕರ್ನಾಟಕದಲ್ಲಿ ವೈದ್ಯರು ಕನ್ನಡದಲ್ಲೇ  ಔಷಧ ಚೀಟಿಯನ್ನು ಬರೆಯುವಂತೆ ಕನ್ನಡ ಪ್ರಾಧಿಕಾರ ಸೂಚನೆ ಕೂಡಾ ನೀಡಿತ್ತು. ಆದರೆ ಕರ್ನಾಟಕದಲ್ಲಿ ಈ ಸೂಚನೆ ಕಟ್ಟುನಿಟ್ಟಾಗಿ ಜಾರಿಯಾಗುವ ಮೊದಲೇ ಕೇರಳದ ಕಾಸರಗೋಡಿನಲ್ಲಿ ವೈದ್ಯರೊಬ್ಬರು ಕನ್ನಡದಲ್ಲಿ ಔಷಧ ಚೀಟಿ ಬರೆದು ಎಲ್ಲರ ಗಮನ ಸೆಳೆದಿದ್ದಾರೆ.

    ಹೌದು, ಕಾಸರಗೋಡಿನ ಮಂಜೇಶ್ವರದಲ್ಲಿರುವ ಸುರಕ್ಷಾ ದಂತ ಚಿಕಿತ್ಸಾಲಯದ ಡಾ.ಮುರಳೀ ಮೋಹನ ಚೂಂತೂರು ರವರು ಕನ್ನಡ ಪ್ರೇಮ ಮೆರೆದಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪುರುಷೋತ್ತಮ ಬಿಳಿನೆಲೆ ಅವರು ಇತ್ತೀಚೆಗೆ ಮಂಗಳೂರು ಭೇಟಿ ನೀಡಿದ ವೇಳೆ ವೈದ್ಯರು ಕೂಡಾ ಕನ್ನಡದಲ್ಲಿ ಔಷಧ ಚೀಟಿಯನ್ನು ಜನರಿಗೆ ಅರ್ಥವಾಗುವಂತೆ ಬರೆಯಬೇಕು ಎಂದು ಸೂಚನೆ ನೀಡಲಾಗಿದೆ ಎಂದು ಹೇಳಿದ್ದರು.

    ಹಾಗಾಗಿ ರಾಜ್ಯದಲ್ಲಿ ಒಬ್ಬ ವೈದ್ಯರು ಕನ್ನಡದಲ್ಲಿ ಔಷಧ ಚೀಟಿ ಬರೆಯುವ ಮೂಲಕ ಮೊದಲ ಸ್ಪಂದನ ನೀಡಿದ್ದರು. ಇದೀಗ ಕೇರಳ ರಾಜ್ಯದಲ್ಲಿ ವೈದ್ಯರೊಬ್ಬರು ಕನ್ನಡದಲ್ಲಿ  ಔಷಧ ಚೀಟಿ ಬರೆಯುವ ಮೂಲಕ ತನ್ನ ಕನ್ನಡ ಪ್ರೇಮವನ್ನು ತೋರಿಸಿದ್ದಾರೆ.

    ಸರ್ಕಾರಿ ವೈದ್ಯರು ಕನ್ನಡದಲ್ಲೇ ಔಷಧ ಚೀಟಿ ಬರೆಯಲು ಆದೇಶಿಸುವಂತೆ ಸಚಿವರಿಗೆ ಪ್ರಾಧಿಕಾರ ಪತ್ರ

    ಅದಾದ ಬಳಿಕ ಆರೋಗ್ಯ ಸಚಿವರು ಪತ್ರಿಕಾ ಹೇಳಿಕೆ ಹೊರಡಿಸಿ, ಈ ಬಗ್ಗೆ ಸಾರ್ವಜನಿಕವಾಗಿ ಚರ್ಚಿಸಿ, ಮುಖ್ಯಮಂತ್ರಿಗಳೊಂದಿಗೂ ಚರ್ಚೆ ನಡೆಸಿ ಬಳಿಕ ಸಾಧಕ ಬಾಧಕ ನೋಡಿಕೊಂಡು ಅನುಷ್ಠಾನಕ್ಕೆ ತರವಲಾಗುವುದು ಎಂದಿದ್ದರು. ಈಗ ಗಡಿನಾಡಿನ ಕನ್ನಡಿಗ ವೈದ್ಯರು ಔಷಧ ಚೀಟಿಯನ್ನು ಕನ್ನಡದಲ್ಲಿ ಬರೆಯುವ ಮೂಲಕ ಇತರರಿಗೆ ಮಾರ್ಗದರ್ಶಿಯಾಗಿರುವುದನ್ನು ಪ್ರಾಧಿಕಾರ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ಸಂತಸ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.

    Continue Reading

    LATEST NEWS

    ಲೋ ಬಿಪಿಯಿಂದ ಕುಸಿದು ಬಿದ್ದು 5ನೇ ತರಗತಿ ವಿದ್ಯಾರ್ಥಿ ಸಾ*ವು

    Published

    on

    ಬೆಂಗಳೂರು : ತರಗತಿಯಲ್ಲೇ ಏಕಾಏಕಿ ಲೋ ಬಿಪಿಯಿಂದ ಕುಸಿದು ಬಿದ್ದು ವಿದ್ಯಾರ್ಥಿ ಸಾ*ವನಪ್ಪಿದ ಘಟನೆ ರಾಯಚೂರು ಜಿಲ್ಲೆ ದೇವದುರ್ಗ  ಗಬ್ಯೂರು ಗ್ರಾಮದಲ್ಲಿ  ನಡೆದಿದೆ.

    5ನೇ ತರಗತಿ ವಿದ್ಯಾರ್ಥಿ ಶಿವಪ್ರಸಾದ್ ಮೃ*ತ ಬಾಲಕ. ಗಬ್ಯೂರ್‌ನಲ್ಲಿ ಸೈನಿಕ, ನವೋದಯ ಕೋಚಿಂಗ್ ಪಡೆಯುತ್ತಿದ್ದ. ಇನ್ನು ಕೋಚಿಂಗ್ ಸೆಂಟರ್‌ನಲ್ಲೇ ಏಕಾಏಕಿ ಲೋ ಬಿಪಿಯಾಗಿ ಬಾಲಕ ಶಿವಪ್ರಸಾದ್ ಸಾವನಪ್ಪಿದ್ದು, ಗಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

    Continue Reading

    LATEST NEWS

    Trending