Monday, January 24, 2022

ಕೊರೊನಾ ಎಫೆಕ್ಟ್ – ಶವಸಂಸ್ಕಾರಕ್ಕೆ ನೀಡಿದ ಶವ ಅದಲು ಬದಲು

ಉಡುಪಿ : ಕೊರೊನಾ ಸಂಕಷ್ಟ ಎಲ್ಲಿಯವರೆಗೆ ತಂದು ಬಿಟ್ಟಿದೆ ಅಂದರೆ ಮೃತ ವ್ಯಕ್ತಿಯ ಶವ ಕೂಡ ಈಗ ಅದಲು ಬದಲಾಗುವ ಸನ್ನಿವೇಶ ನಿರ್ಮಾಣವಾಗಿದೆ. ಇದೇ ರೀತಿಯ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದ್ದು, ಕೊರೊನಾ ಸೊಂಕಿನಿಂದ ಮೃತಪಟ್ಟ ವ್ಯಕ್ತಿಯ ಶವ ಅದಲು ಬದಲಾಗಿರುವ ಘಟನೆ ನಡೆದಿದೆ.


ಕೋಟೇಶ್ವರ ನೇರಂಬಳ್ಳಿಯ ಗಂಗಾಧರ ಆಚಾರ್ಯ ಅವರು ಕೊರೊನಾದಿಂದ ಮೃತಪಟ್ಟಿದ್ದರು. ಕೊರೊನಾ ಮಾರ್ಗದರ್ಶಿ ಪ್ರಕಾರ ಕೊರೊನಾದಿಂದ ಮೃತಪಟ್ಟವರನ್ನು ಸಂಪೂರ್ಣ ಸುರಕ್ಷತಾ ಕ್ರಮಗಳೊಂದಿಗೆ ಪ್ಯಾಕ್ ಮಾಡಿ ಸಂಬಂಧಿಕರಿಗೆ ನೀಡಲಾಗಿತ್ತು. ಆದರೆ ಮೃತರ ಸಂಬಂಧಿಕರು ಆಸ್ಪತ್ರೆಯಿಂದ ಶವ ಪಡೆದ ಸಂಸ್ಕಾರ ಕ್ಕೆ ಮುಂದಾದಾಗ ಶವ ಬದಲಾಗಿರುವುದು ಪತ್ತೆಯಾಗಿದೆ. ಆಸ್ಪತ್ರೆಯವರು ಬದಲಿ ಶವ ಪ್ಯಾಕ್ ಮಾಡಿ ನೀಡಿ ಯಡವಟ್ಟು ಮಾಡಿದ್ದಾರೆ. 65 ವರ್ಷದ ಗಂಗಾಧರ ಆಚಾರ್ಯ ಅವರ ಶವದ ಬದಲು ಯುವಕನೊಬ್ಬನ ಶವ ನೀಡಿದ್ದಾರೆ.


ಸ್ಮಶಾನದಲ್ಲಿ ಮೃತದೇಹದ ಅಂತಿಮ ದರ್ಶನ ಪಡೆಯಲು ಮನೆಯವರು ಒತ್ತಾಯಿಸಿದಾಗ ಆರಂಭದಲ್ಲಿ ಅನುಮತಿ ನೀಡಿರಲಿಲ್ಲ. ಆದರೆ ಐವರಿಗೆ ಅವಕಾಶ ನೀಡಲಾಗಿತ್ತು. ಈ ವೇಳೆ ಮೃತದೇಹ ಅದಲು ಬದಲಾಗಿರುವುದು ಬೆಳಕಿಗೆ ಬಂದಿದೆ. ಆರೋಗ್ಯ ಸಿಬ್ಬಂದಿಯ ನಿರ್ಲ್ಯಕ್ಷ್ಯದ ಕುರಿತು ವ್ಯಕ್ತಿಯ ಮನೆಯವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಮಶಾನದಲ್ಲಿ ನೂರಾರು ಮಂದಿ ಆಗಮಿಸಿದ್ದು, ಅಸಮಧಾನ ವ್ಯಕ್ತಪಡಿಸಿದ್ದಾರೆ. ತಾಲೂಕು ಅರೋಗ್ಯಾಧಿಕಾರಿ ನಾಗಭೂಷಣ್, ಸಹಾಯಕ ಆಯುಕ್ತ ರಾಜು ಸ್ಥಳಕ್ಕೆ ಭೇಟಿ ನೀಡಿದ್ದಾರೆ.


ಘಟನೆಯ ನಂತರ ನೇರಂಬಳ್ಳಿ ನಿವಾಸಿಯ ಮೃತದೇಹವನ್ನು ಸ್ಮಶಾನಕ್ಕೆ ತರಲಾಯಿತು. ಸ್ಮಶಾನದಲ್ಲಿ ಮನೆಯವರ ಎದುರಿಗೆ ಪರೀಕ್ಷೆ ನಡೆಸಿದ ನಂತರ ಅಂತ್ಯಸಂಸ್ಕಾರ ನಡೆಸಲಾಯಿತು.

Hot Topics

ಸುಳ್ಯ: ಅಂಗಡಿಗೆ ಬಂದ ಗ್ರಾಹಕನಿಗೆ ಮಾಲಕನಿಂದ ಹಲ್ಲೆ- ದೂರು ದಾಖಲು

ಸುಳ್ಯ: ಬೆಳ್ಳಿಯ ಚೈನಿಗೆ ಲೇಪನ ಮಾಡಲು ಬಂದ ಗ್ರಾಹಕನೊಬ್ಬನಿಗೆ ಅಂಗಡಿ ಮಾಲಕನೇ ಕಬ್ಬಿಣದ ಪೈಪಿನಿಂದ ಹೊಡೆದು ಗಾಯಗೊಳಿಸಿದ ಘಟನೆ ಸುಳ್ಯದಲ್ಲಿ ನಿನ್ನೆ ನಡೆದಿದೆ.ಗಾಯಗೊಂಡ ಗ್ರಾಹಕರನ್ನು ಗೋಪಾಲ ಶೇಟ್ ಕೆ (47) ಎಂದು ಗುರುತಿಸಲಾಗಿದೆ. ಗೋಪಾಲ...

‘ಸುಳ್ಳುಗಳ ಮೂಲಕ ನಾರಾಯಣಗುರುವಿಗೆ ಮಾಡಿದ ಅಪಚಾರವನ್ನು ಮುಚ್ಚಿಟ್ಟುಕೊಳ್ಳಲಾಗದು’

ಮಂಗಳೂರು: ಸುಳ್ಳುಗಳ ಮೂಲಕ ಸಾಮಾಜಿಕ ಸುಧಾರಣೆಯ ಹರಿಕಾರ  ನಾರಾಯಣ ಗುರು ಅವರಿಗೆ ಮಾಡಿದ ಅಪಚಾರವನ್ನು ಬಿಜೆಪಿ ಮುಚ್ಚಿಟ್ಟುಕೊಳ್ಳಲಾಗದು ಎಂದು ಸಿಪಿಐಎಂ ಹೇಳಿದೆ.ಕೇರಳ ರಾಜ್ಯ ಸರಕಾರ ಸೂಚಿಸಿದ ನಾರಾಯಣಗುರು ಇರುವ ಸ್ಥಬ್ದ ಚಿತ್ರವನ್ನು ಪರಿಗಣಿಸದೇ...

ಮೂಡುಬಿದಿರೆ: ಕಾರು ಢಿಕ್ಕಿ- ಪಾದಾಚಾರಿ ಸ್ಥಳದಲ್ಲೇ ಮೃತ್ಯು

ಮೂಡುಬಿದಿರೆ: ಇಲ್ಲಿನ ಕಲ್ಲಮುಂಡ್ಕೂರು ಪೇಟೆಯ ರಸ್ತೆಯಲ್ಲಿ ಪಾದಾಚಾರಿಯೋರ್ವರು ಹೋಗುತ್ತಿದ್ದಾಗ ರಿಡ್ಸ್ ಕಾರೊಂದು ಢಿಕ್ಕಿ ಹೊಡೆದ ಪರಿಣಾಮವಾಗಿ ಪಾದಾಚಾರಿ ಮೃತಪಟ್ಟ ಘಟನೆ ನಿನ್ನೆ ರಾತ್ರಿ ವೇಳೆ ನಡೆದಿದೆ.ಸಂಪಿಗೆಯ ಇಡ್ಡಬೆಟ್ಟು ನಿವಾಸಿ 53 ವರ್ಷದ ಹರೀಶ್...