ಉಡುಪಿ: ಜಿಲ್ಲೆಯಲ್ಲಿ ಭಾನುವಾರ ಹಠಾತ್ತನೇ ಶೇ.1,01ಕ್ಕೆ ಇಳಿದಿದ್ದ ಕೋವಿಡ್ ಸೋಂಕಿತರ ಸಂಖ್ಯೆ ನಿನ್ನೆ ಮತ್ತೆ 4.38 ಕ್ಕೆ ಹೆಚ್ಚಾಗಿದೆ. ನಿನ್ನೆ 2,420 ಜನರ ಪರೀಕ್ಷೆ ಮಾಡಿದ್ದು, 106) (ಶೇ.101) ಮಂದಿಗೆ ಸೋಂಕು ಪತ್ತೆಯಾಗಿದೆ. ಅವರಲ್ಲಿ 50 ಪುರುಷರು ಮತ್ತು 56 ಮಹಿಳೆಯರಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ 6,95,657 ಮಂದಿಯನ್ನು ಪರೀಕ್ಷೆ ಮಾಡಿದ್ದು, 66,911 (ಶೇ.9.61) ಮಂದಿಗೆ ಸೋಂಕು ಪತ್ತೆಯಾಗಿದೆ.
ಅವರಲ್ಲಿ 65,677 ಮಂದಿ ಗುಣಮುಖರಾಗಿದ್ದಾರೆ. ಈ ದಿನ 90 ಮಂದಿ ಗುಣಮುಖರಾಗಿದ್ದು, ಸದ್ಯ 837 ಸಕ್ರಿಯ ಸೋಂಕಿತರು. ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ 397 (ಶೇ.0.59) ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.