Connect with us

    ಉಡುಪಿಯಲ್ಲಿ ಮತ್ತೆ ಮೂರು ಬಲಿ ಪಡೆದ ಕೊರೊನಾ : ಎಂಟಕ್ಕೇರಿಕೆಯಾದ ಬಲಿ ಸಂಖ್ಯೆ..!

    Published

    on

    ಉಡುಪಿಯಲ್ಲಿ ಮತ್ತೆ ಮೂರು ಬಲಿ ಪಡೆದ ಕೊರೊನಾ : ಎಂಟಕ್ಕೇರಿಕೆಯಾದ ಬಲಿ ಸಂಖ್ಯೆ..!

    ಉಡುಪಿ : ಕೃಷ್ಣ ನಗರಿ ಉಡುಪಿಯಲ್ಲಿ ಇಂದು ಮೂವರನ್ನು ಮಹಾಮಾರಿ ಕೊರೊನಾ ಬಲಿ ಪಡೆದಿದೆ. ಈ ಮೂಲಕ ಜಿಲ್ಲೆಯಲ್ಲಿ ಇದುವರೆಗೆ ಕೊರೊನಾಕ್ಕೆ ಬಲಿಯಾದವರ ಸಂಖ್ಯೆ 8 ಕ್ಕೇರಿಕೆಯಾಗಿದೆ.

    ಉಡುಪಿಯಲ್ಲಿ ಒಬ್ಬರು ಮತ್ತು ಕುಂದಾಪುರದಲ್ಲಿ ಇಬ್ಬರು ಕೊರೊನಾಕ್ಕೆ ಬಲಿಯಾಗಿದ್ದಾರೆ.ಉ.ಕ ಜಿಲ್ಲೆಯ ಅಂಕೋಲದ ಸೋಂಕಿತ ಉಡುಪಿಯಲ್ಲಿ ಸಾವನ್ನಪಿದರೆ, ಕುಂದಾಪುರದ ಮರವಂತೆಯ 58 ವರ್ಷ ಪ್ರಾಯದ ತೀವ್ರತರ ಅಸ್ತಮಾದಿಂದ ನರಳುತಿದ್ದ ವ್ಯಕ್ತಿ ಸಾವನ್ನಪ್ಪಿದ್ದಾರೆ.

    ಈ ವ್ಯಕ್ತಿಯ ಗಂಟಲು ದ್ರವ ಕೋವಿಡ್ ಪರೀಕ್ಷೆಗೊಳಪಡಿಸಿದಾಗ ಪಾಸಿಟಿವ್ ಕಂಡು ಬಂದಿತ್ತು. ಆದರೆ ಚಿಕಿತ್ಸೆ ಪ್ರಾರಂಭಿಸುವ ವೇಳೆಗಾಗಲೇ ಮೃತಪಟ್ಟಿದ್ದಾರೆ.

    . ಮತ್ತೊಬ್ಬ ಉತ್ತರ ಕನ್ನಡ ಅಂಕೋಲದ ವ್ಯಕ್ತಿಯೊಬ್ಬರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿತ್ತು, ಈ ಹಿನ್ನಲೆಯಲ್ಲಿ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರು.

    ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಉಡುಪಿ ಬೀಡಿನಗುಡ್ಡೆಯಲ್ಲಿ ಅಂಕೋಲದ ಮೃತ ವ್ಯಕ್ತಿಯ ಅಂತಿಮ ಸಂಸ್ಕಾರ ಮಾಡಲಾಗಿದೆ.

    ಇನ್ನು ಹರಡುತ್ತಿರು ಕೊರೊನಾ ಸೊಂಕಿನ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಗಡಿಗಳು ಸೀಲ್ ಡೌನ್ ಮಾಡಲಾಗಿದೆ. ಜಿಲ್ಲೆಯಲ್ಲಿನ ಬಸ್ ಸಂಚಾರಕ್ಕೆ ಜಿಲ್ಲಾಡಳಿತ ಬ್ರೇಕ್ ಹಾಕಿದೆ.

    ಲಾಕ್‌ ಡೌನ್ ಇಲ್ಲದ್ದರಿಂದ ನಗರದಲ್ಲಿ ಜನಜೀವನ ಸಹಜ ಸ್ಥಿತಿಯಲ್ಲಿದೆ.ಆದ್ರೆ ಗ್ರಾಮೀಣ ಭಾಗದಲ್ಲಿ ಬಸ್ ಸಂಚಾರ ಇಲ್ಲದೇ ಜನ ಪರದಾಡಿದ್ದಾರೆ. ಜಿಲ್ಲಾ ಗಡಿ ಭಾಗದ ಹತ್ತು ಕಡೆ ಚೆಕ್ ಪೋಸ್ಟ್ ನಿರ್ಮಿಸಲಾಗಿದೆ.

    ಜಿಲ್ಲೆಗೆ ಬರುತ್ತಿರುವ ಎಲ್ಲಾ ವಾಹನಗಳ ತೀವ್ರ‌ ತಪಾಸಣೆನಡೆಸಲಾಗುತ್ತಿದೆ. ಅಗತ್ಯ ವಸ್ತುಗಳ ಸಾಗಾಟಕ್ಕೆ, ರಿಕ್ಷಾ, ಟ್ಯಾಕ್ಸಿ ‌ಮತ್ತು‌ ಇತರ ಖಾಸಗಿ ವಾಹನಗಳ ಸಂಚಾರಕ್ಕೆ ನಿರ್ಬಂಧ ಇಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.

    ಜಿಲ್ಲಾಸ್ಪತ್ರೆಯ ಇಬ್ಬರು ವ್ಯದ್ಯರು ಹಾಗೂ ನಾಲ್ವರು ಸಿಬ್ಬಂದಿಗಳಿಗೆ ಕೋವಿಡ್ ಸೋಂಕು ದೃಢ ಪಟ್ಟ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಉಡುಪಿ ಜಿಲ್ಲಾಸ್ಪತ್ರೆಯನ್ನು ಮೂರು ದಿನಗಳ ಕಾಲ ಸೀಲ್ ಡೌನ್ ಮಾಡಲಾಡಿದೆ.

    ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುತ್ತಿದ್ದು ಜಿಲ್ಲಾ ಆಸ್ಪತ್ರೆಯ ವ್ಯದ್ಯರಿಗೂ ಸೋಂಕು ದೃಢಪಟ್ಟಿರುವ ನಿಟ್ಟಿನಲ್ಲಿ ಮೂರು ದಿನಗಳ ತುರ್ತು ಸೇವೆ, ಫೀವರ್ ಕ್ಲಿನಿಕ್ ಹೊರತುಪಡಿಸಿ ಉಳಿದೆಲ್ಲಾ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.

    ಆಸ್ಪತ್ರೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸ್ಯಾನಿಟೈಸ್ ಮಾಡಲಾಗುವುದು ಎಂದು ಜಿಲ್ಲಾ ಸರ್ಜನ್ ತಿಳಿಸಿದ್ದಾರೆ.

    ಆಸ್ಪತ್ರೆಯ ಇಬ್ಬರು ವೈದ್ಯರು ಹಾಗೂ ನಾಲ್ವರು ಸಿಬ್ಬಂದಿಗಳಲ್ಲಿ ಕೋವಿಡ್ ಸೋಂಕು ದೃಢ ಪಟ್ಟಿದ್ದು ಆದುದರಿಂದ ಸೋಂಕು ಹರಡುವುದನ್ನು ನಿಯಂತ್ರಿಸುವ ಸಲುವಾಗಿ ಆಸ್ಪತ್ರೆಯನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಲಾಗುವುದು ಜೊತೆಗೆ ಆಸ್ಪತ್ರೆಯಲ್ಲಿ ಹೊರರೋಗಿಗಳ ವಿಭಾಗವನ್ನು ಮೂರು ದಿನಗಳ ಕಾಲ ಬಂದ್ ಮಾಡಲಾಗಿದೆ.

    ಕೇವಲ ತುರ್ತು ಚಿಕಿತ್ಸೆ, ಐಸೋಲೇಷನ್ ವಿಭಾಗ ಹಾಗೂ ಫೀವರ್ ಕ್ಲಿನಿಕ್ ಗಳು ಮಾತ್ರ ಕಾರ್ಯಾಚರಿಸಲಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

    ಅತ್ತ ಕಡೆ ಮೂವರು ಪೊಲೀಸರಿಗೆ ಕೊರೋನ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಬೈಂದೂರು ಪೊಲೀಸ್ ಠಾಣೆ  ಎರಡನೇ ಬಾರಿ ಸೀಲ್ ಡೌನ್ ಮಾಡಲಾಗಿದೆ. ಇಲ್ಲಿನ ಮಹಿಳಾ ಸಿಬ್ಬಂದಿ, ಎಎಸ್ ಐ, ಗೃಹರಕ್ಷಕ ಸಿಬ್ಬಂದಿ ಗೆ ಕೊರೊನಾ ಸೋಂಕು ಇರುವುದು ಧೃಡಪಟ್ಟಿದೆ.

    Click to comment

    Leave a Reply

    Your email address will not be published. Required fields are marked *

    DAKSHINA KANNADA

    ತಡೆಬೇಲಿಗೆ ಡಿಕ್ಕಿ ಹೊಡೆದು ಅಂಡರ್‌ಪಾಸ್‌ ಗೆ ಉರುಳಿದ ವಾಹನ; ಹಲವರಿಗೆ ಗಾಯ

    Published

    on

    ಮಂಗಳೂರು : ರಾಷ್ಟ್ರೀಯ ಹೆದ್ದಾರಿ 66ರ ಸುರತ್ಕಲ್ ಎನ್ ಐ ಟಿ ಕೆ ಅಂಡರ್ ಪಾಸ್ ಬಳಿ ಬೈಕ್ ಗೆ ಬೋಲೇರೋ ಪಿಕಪ್ ಡಿಕ್ಕಿಯಾಗಿ ಬೈಕ್ ಸವಾರ ಸಹಿತ ನಾಲ್ವರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ.

    ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಬೈಕ್ ಗೆ ಸುರತ್ಕಲ್ ಎನ್ಐಟಿಕೆ ಅಂಡರ್ ಪಾಸ್ ಬಳಿ ಬೊಲೆರೋ ಪಿಕಪ್ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಬೈಕ್ ಹಾಗೂ ಪಿಕಪ್ ಹೆದ್ದಾರಿ ಬದಿಯ ಅಪಘಾತ ತಡೆಗೆ ಹಾಕಿದ್ದ ತಡೆ ಬೇಲಿಗೆ ಡಿಕ್ಕಿ ಹೊಡೆದು ಸುಮಾರು 12 ಅಡಿ ಆಳದ ಅಂಡರ್ ಪಾಸ್ ಕೆಳಗಡೆ ಬಿದ್ದಿದೆ.

    ಇದನ್ನೂ ಓದಿ: ಕೊಣಾಜೆ : ಸ್ಕೂಟರ್ – ಟೆಂಪೋ ನಡುವೆ ಅಪ*ಘಾತ; ಸವಾರ ಸಾವು

    ಅಪಘಾತದಿಂದ ಬೈಕ್ ಸವಾರ ಸಹಿತ ಬೊಲೆರೋ ಪಿಕಪ್ ನಲ್ಲಿದ್ದ ವಾಹನದ ಚಾಲಕ ಹಾಗೂ ಪ್ರಯಾಣಿಕರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ಕ್ರೇನ್ ಮೂಲಕ ಎರಡು ವಾಹನಗಳನ್ನು ತೆರವುಗೊಳಿಸಲಾಯಿತು. ಅಪಘಾತದ ಗಾಯಾಳುಗಳ ಮಾಹಿತಿ ಇನ್ನಷ್ಟೇ ಬರಬೇಕಾಗಿದೆ.

    Continue Reading

    DAKSHINA KANNADA

    ಮಂಗಳೂರು : ರಾಜೀವ್ ಗಾಂಧಿ ವಿವಿ ಪ್ರಾದೇಶಿಕ ಕೇಂದ್ರಕ್ಕೆ ಸಿಎಂ ಶಿಲಾನ್ಯಾಸ

    Published

    on

    ಮಂಗಳೂರು : ಸುಮಾರು 50 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಅತ್ಯಾಧುನಿಕ ಸೌಲಭ್ಯ ಹೊಂದಿರುವ ರಾಜೀವ್ ಗಾಂಧಿ ವಿಶ್ವವಿದ್ಯಾನಿಲಯ ಪ್ರಾದೇಶಿಕ ಕೇಂದ್ರಕ್ಕೆ ಸಿಎಂ ಸಿದ್ಧರಾಮಯ್ಯ ಶಿಲಾನ್ಯಾಸ ನೆರವೇರಿಸಿದ್ದಾರೆ. ಮೇರಿ ಹಿಲ್‌ನಲ್ಲಿ ನಿರ್ಮಾಣವಾಗಲಿರುವ ಈ ಪ್ರಾದೇಶಿಕ ಕೇಂದ್ರ ವೈದ್ಯಕೀಯ ಶಿಕ್ಷಣ ಸಂಬಂಧಿತ ವಿಚಾರಗಳಿಗೆ ಪೂರಕವಾಗಲಿರುವ ವ್ಯವಸ್ಥೆಗಳು ಈ ಕೇಂದ್ರದಲ್ಲಿ ಇರಲಿದೆ. ಇದು ವಿದ್ಯಾರ್ಥಿಗಳಿಂದ ಹಿಡಿದು ಸಂಶೋಧನೆ ನಡೆಸುವ ವೈದ್ಯಕೀಯ ಕಾಲೇಜುಗಳ ವಿದ್ಯಾರ್ಥಿಗಳಿಗೂ ಅನುಕೂಲವಾಗಲಿದೆ.

    ರಾಜೀವ್ ಗಾಂಧಿ ವಿಶ್ವವಿದ್ಯಾನಿಲಯ ಏಷ್ಯಾದಲ್ಲೇ ಅತೀ ದೊಡ್ಡ ಸಂಸ್ಥೆಯಾಗಿದ್ದು, ಮಂಗಳೂರಿನಲ್ಲಿ ನಿರ್ಮಾಣವಾಗುವ ಪ್ರಾದೇಶಿಕ ಕೇಂದ್ರ ದೇಶದಲ್ಲೇ ದೊಡ್ಡ ಕೇಂದ್ರವಾಗಲಿದೆ. ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಸಿಎಂ ಸಿದ್ಧರಾಮಯ್ಯ, ಈ ಕೇಂದ್ರ ಸ್ಥಾಪನೆಗೆ 2024-25ರ ಬಜೆಟ್‌ನಲ್ಲಿ ಅನುದಾನ ನೀಡಲಾಗಿದ್ದು, ಈಗ ಚಾಲನೆ ನೀಡಲಾಗುತ್ತಿದೆ. ಈ ಕೇಂದ್ರ ಸ್ಥಾಪನೆ ಬಳಿಕ ಕರಾವಳಿ ಭಾಗದ ಜನರಿಗೆ ವೈದ್ಯಕೀಯ ಶಿಕ್ಷಣ ಸಂಬಂಧಿತ ವಿಚಾರವಾಗಿ ಬೆಂಗಳೂರಿಗೆ ಹೋಗುವುದು ತಪ್ಪಲಿದೆ ಎಂದು ಹೇಳಿದ್ದಾರೆ.

    ಬಡವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಸಿಗುವಂತಹ ಸೌಲಭ್ಯಗಳನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ನೀಡಬೇಕು ಎಂಬ ಚಿಂತನೆ ಸರ್ಕಾರಕ್ಕೆ ಇದೆ. ಇದಕ್ಕೆ ಬೇಕಾದ ಎಲ್ಲಾ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

    ಇದನ್ನೂ ಓದಿ : ಆ ನಟ ಕಿಸ್ ಮಾಡಿದಕ್ಕೆ ವಾಂತಿ ಮಾಡಿಕೊಂಡಿದ್ದರಂತೆ ಸ್ಟಾರ್ ನಟಿ

    ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಸ್ಪೀಕರ್ ಯು.ಟಿ.ಖಾದರ್, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್‌, ಸಚಿವ ದಿನೇಶ್ ಗುಂಡೂರಾವ್, ಸಂಸದ ಬ್ರಿಜೇಶ್ ಚೌಟ ಸೇರಿದಂತೆ ಶಾಸಕರು ಹಾಗೂ ಪರಿಷತ್ ಸದಸ್ಯರು ಭಾಗಿಯಾಗಿದ್ದರು.

    Continue Reading

    FILM

    ಆ ನಟ ಕಿಸ್ ಮಾಡಿದಕ್ಕೆ ವಾಂತಿ ಮಾಡಿಕೊಂಡಿದ್ದರಂತೆ ಸ್ಟಾರ್ ನಟಿ

    Published

    on

    ಮಂಗಳೂರು/ಮುಂಬೈ : ಕೆಲವು ನಟಿಯರು ನೋ ಕಿಸ್ಸಿಂಗ್ ನೀತಿಯನ್ನು ಅನುಸರಿಸುತ್ತಾರೆ. ಈ ಬಗ್ಗೆ ಸಿನಿಮಾ ಒಪ್ಪಿಕೊಳ್ಳುವ ಮೊದಲೇ ಮಾತುಕತೆ ನಡೆಸಿರುತ್ತಾರೆ. ಇದನ್ನು ಬಾಲಿವುಡ್‌ನ ಈ ಸ್ಟಾರ್ ನಟಿ ಕೂಡ ಅನುಸರಿಸುತ್ತಿದ್ದರು.

    ಆದರೆ ಆ ಒಬ್ಬ ನಟ ಬಲವಂತವಾಗಿ ಕಿಸ್ ಮಾಡಿದಕ್ಕೆ ವಾಂತಿ ಮಾಡಿ 100 ಸಲ ಮುಖ ತೊಳೆದಿದ್ದೆ ಎಂದು ಸ್ಟಾರ್ ನಟಿ ಹೇಳಿದ್ದಾರೆ.

    ಬಾಲಿವುಡ್ ನಟಿ ರವೀನಾ ಟಂಡನ್ ಮೂರು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿದ್ದಾರೆ. ರವಿನಾ ಟಂಡನ್ ನೋ ಕಿಸ್ಸಿಂಗ್ ನೀತಿಯನ್ನು ಅನುಸರಿಸಿದ ನಟಿಯರಲ್ಲಿ ರವೀನಾ ಟಂಡನ್ ಕೂಡ ಒಬ್ಬರು.

    ಆದರೆ ಸಿನಿಮಾವೊಂದರ ಶೂಟಿಂಗ್ ವೇಳೆ ಸಹ ನಟರೊಬ್ಬರು ಆಕಸ್ಮಿಕವಾಗಿ ರವೀನಾ ಟಂಡನ್ ತುಟಿಗಳಿಗೆ ಮುತ್ತಿಟ್ಟ ಘಟನೆ ನಡೆದಿತ್ತು. ಆ ನಂತರ ಏನಾಯಿತು ಎಂಬುದನ್ನು ಸ್ವತಃ ರವೀನಾ ಅವರೇ ಹೇಳಿದ್ದಾರೆ.

    ಇದನ್ನೂ ಓದಿ: ಎಲಿಮಿನೇಟ್ ಆದ ಸ್ಪರ್ಧಿಗಳ ರೀ ಎಂಟ್ರಿ; ಕುತೂಹಲ ಕೆರಳಿಸಿದ ಎಲಿಮಿನೇಷನ್

    ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಈ ಬಗ್ಗೆ ರವೀನಾ ಮಾತನಾಡಿದ್ದಾರೆ. ರವೀನಾ ಟಂಡನ್ ಅವರೊಂದಿಗೆ ಒಂದು ಘಟನೆ ನಡೆದಿತ್ತಂತೆ. ಅವರ ಸಹ ನಟರೊಬ್ಬರು ತಪ್ಪಾಗಿ ಅವರನ್ನು ಚುಂಬಿಸಿದ್ದರಂತೆ. ಈ ದೃಶ್ಯವು ಸ್ಕ್ರಿಪ್ಟ್ ನ ಭಾಗವೂ ಆಗಿರಲಿಲ್ಲ. ಇದಾದ ನಂತರ ರವೀನಾ ಟಂಡನ್ ತುಂಬಾ ಅನ್‌ಕಂಫರ್ಟ್ ಫೀಲ್ ಮಾಡಿಕೊಂಡರಂತೆ.

    ಆ ಬಳಿಕ ವಾಂತಿ ಕೂಡ ಮಾಡಿದರಂತೆ. 100 ಸಲ ತಮ್ಮ ಬಾಯಿ ತೊಳೆದುಕೊಂಡಿದ್ದಾರಂತೆ. ನಂತರ ಆ ನಟ ರವೀನಾ ಟಂಡನ್ ಅವರ ಬಳಿಕ ಕ್ಷಮೆಯಾಚಿಸಿದರಂತೆ. ಸಂದರ್ಶನ ಸಮಯದಲ್ಲಿ ರವೀನಾ ಟಂಡನ್ ಈ ವಿಚಾರ ಹೇಳಿದ್ದಾರೆ. ಸಿನಿಮಾಗಳಲ್ಲಿ ಕಿಸ್ ಮಾಡದಿರುವುದು ನನ್ನ ಆಯ್ಕೆ ಎಂದು ರವೀನಾ ಟಂಡನ್ ಹೇಳಿದ್ದಾರೆ.

     

    Continue Reading

    LATEST NEWS

    Trending