Connect with us

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಕೂಡ ಕೊರೋನಾ ಸ್ಪೋಟ :196 ಪಾಸಿಟಿವ್ ..!

    Published

    on

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಕೂಡ ಕೊರೋನಾ ಸ್ಪೋಟ :196 ಪಾಸಿಟಿವ್ ..!

    ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಕೂಡ ಕೊರೋನಾ ಸ್ಪೋಟಗೊಂಡಿದೆ. ಇಂದು 196 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ . ದಿನೇ ದಿನೇ ಕರಾವಳಿಯಲ್ಲಿ ಸೋಂಕಿತರು ಹೆಚ್ಚಾಗುತ್ತಿದ್ದಾರೆ.

    ಜಿಲ್ಲೆಯಲ್ಲಿ ಒಬ್ಬರಿಂದ ಒಬ್ಬರಿಗೆ ವೇಗವಾಗಿ ಸೊಂಕು ಹರಡುತ್ತಿರುವುದು ಜಿಲ್ಲಾಡಳಿತವನ್ನು ಚಿಂತೆಗೀಡು ಮಾಡಿದೆ. ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ ಎರಡು ಸಾವಿರದ ಗಡಿ ದಾಟಿದೆ.

    ಪ್ರಾಥಮಿಕ ಸಂಪರ್ಕದಿಂದಲೇ ಹಲವರಲ್ಲಿ ಸೋಂಕು ಪತ್ತೆಯಾಗಿದೆ. ಮತ್ತೊಂದೆಡೆ ಸಾವಿನ ಸಂಖ್ಯೆಯೂ ಹೆಚ್ಚಾಗುತ್ತಿದೆ,

    ಬೆಂಗಳೂರು ಹೊರತು ಪಡಿಸಿದ್ರೆ ರಾಜ್ಯದಲ್ಲಿ ದಿನೇ ದಿನೇ ಅತೀ ಹೆಚ್ಚು ಕೊರೊನಾ ಪಾಸಿಟಿವ್ ಪ್ರಕರಣಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಾಖಲಾಗುತ್ತಿವೆ. ಸೊಂಕಿನ ಭೀತಿಯಿಂದ ಜನ ಸ್ವಯಂ ಲಾಕ್‌ ಡೌನ್‌ ಗೆ ಇಳಿದಿದ್ದಾರೆ.

    Click to comment

    Leave a Reply

    Your email address will not be published. Required fields are marked *

    DAKSHINA KANNADA

    ಮನೆಯಲ್ಲಿ ಹಲ್ಲಿ ಕಾಟವೇ? ಈ ಸಿಂಪಲ್​ ಮನೆಮದ್ದು ಟ್ರೈ ಮಾಡಿ

    Published

    on

    ಮಂಗಳೂರು: ಹಲ್ಲಿಗಳು ಯಾವಾಗಲೂ ನಮಗಿಂತ ಹೆಚ್ಚಾಗಿ ನಮ್ಮ ಮನೆಯಲ್ಲಿ ಸುತ್ತಾಡುತ್ತಿರುತ್ತವೆ. ಕೆಲವರ ಮನೆಯಲ್ಲಿ ಹಲ್ಲಿಗಳಿದ್ದರೆ ಇನ್ನು ಹಲವರಿಗೆ ನಡುಕ, ಹಲ್ಲಿ ಹತ್ತಿರ ಬಂದರೆ ಬಹಳ ದೂರ ಓಡಿ ಹೋಗುತ್ತಾರೆ. ಹಲ್ಲಿಯಿಂದ ಓಡಿಹೋಗುವ ಭಯವನ್ನು ಹರ್ಪಿಟೋಫೋಬಿಯಾ ಎಂದು ಕರೆಯಲಾಗುತ್ತದೆ. ಮತ್ತೊಂದೆಡೆ, ಅಡುಗೆ ಮನೆಯಲ್ಲಿ ಹಲ್ಲಿ ಇದ್ದರೆ, ಅಡುಗೆ ಮಾಡುವಾಗ ಅದರೊಳಗೆ ಬೀಳುವ ಭಯವಿದೆ. ಆದ್ದರಿಂದ, ಮನೆಯಿಂದ ಹಲ್ಲಿಗಳನ್ನು ತೊಡೆದುಹಾಕುವ ಸಿಂಪಲ್​ ಮನೆಮದ್ದು ಇಲ್ಲಿ ತಿಳಿದುಕೊಳ್ಳಿ.

    ಈರುಳ್ಳಿ:

    ಈರುಳ್ಳಿಯನ್ನು ಅಡುಗೆಗೆ ಮಾತ್ರ ಬಳಸಲಾಗುವುದಿಲ್ಲ, ಬದಲಾಗಿ ಅಡಿಗೆಮನೆಗಳಿಂದ ಹಲ್ಲಿಗಳನ್ನು ಹಿಮ್ಮೆಟ್ಟಿಸಬಹುದು. ಈರುಳ್ಳಿಯಿಂದ ಹೊರಹೊಮ್ಮುವ ಕಟುವಾದ ವಾಸನೆಯು ಹಲ್ಲಿಗಳನ್ನು ಓಡಿಸುತ್ತದೆ. ಈರುಳ್ಳಿಯನ್ನು ಕತ್ತರಿಸಿ, ಹಲ್ಲಿ ಬರುವ ಸ್ಥಳದಲ್ಲಿ ತುಂಡರಿಸಿ ಇಡಿ. ಅದರಿಂದ ಬರುವ ವಾಸನೆಯಿಂದ ಹಲ್ಲಿ ಮನೆಯೊಳಗೆ ಬರುವುದಿಲ್ಲ. ಹಾಗೆಯೇ ಹಲ್ಲಿಗಳನ್ನು ಗೋಡೆಯಿಂದ ಓಡಿಸಲು ಈರುಳ್ಳಿಯನ್ನು ಸುಲಿದು ಅದರ ತುಂಡುಗಳನ್ನು ದಾರದಿಂದ ಕಟ್ಟಿ ಗೋಡೆಗೆ ನೇತು ಹಾಕಿ.

    ಬೆಳ್ಳುಳ್ಳಿ:

    ಮನೆಯಲ್ಲಿ ಹಲ್ಲಿಗಳನ್ನು ಬರದಂತೆ ತಡೆಯಲು ಬೆಳ್ಳುಳ್ಳಿಯನ್ನು ಬಳಸಬಹುದು. ಮನೆಯಲ್ಲಿ ಹಲ್ಲಿಗಳು ಓಡಾಡುವ ಕಿಟಕಿ, ಬಾಗಿಲು ಮುಂತಾದ ಸ್ಥಳಗಳಲ್ಲಿ ಬೆಳ್ಳುಳ್ಳಿಯನ್ನು ಕತ್ತರಿಸಿ ಇಡಿ. ಬೆಳ್ಳುಳ್ಳಿಯ ಬಲವಾದ ವಾಸನೆಯು ಹಲ್ಲಿಗಳನ್ನು ಹಿಮ್ಮೆಟ್ಟಿಸುತ್ತದೆ. ಇದಲ್ಲದೇ ಹಲ್ಲಿ ಬರುವ ಜಾಗದಲ್ಲಿ ಬೆಳ್ಳುಳ್ಳಿಯನ್ನು ಪುಡಿ ಮಾಡಿ ಸ್ವಲ್ಪ ನೀರು ಚಿಮುಕಿಸಿದರೆ ಮತ್ತೆ ಬರುವುದಿಲ್ಲ.

    ಪೆಪ್ಪರ್ ಸ್ಪ್ರೇ:

    ಪೆಪ್ಪರ್ ಸ್ಪ್ರೇ ಮತ್ತು ಚಿಲ್ಲಿ ಸ್ಪ್ರೇ ಬಳಸಿ ಮನೆಗಳ ಸುತ್ತ ತಿರುಗುವ ಹಲ್ಲಿಗಳನ್ನು ಸಹ ಹಿಮ್ಮೆಟ್ಟಿಸಬಹುದು. ಸ್ಪ್ರೇನಿಂದ ಬಲವಾದ ವಾಸನೆಯು ಹಲ್ಲಿಗಳನ್ನು ಪರಿಣಾಮಕಾರಿಯಾಗಿ ಹಿಮ್ಮೆಟ್ಟಿಸುತ್ತದೆ. ನೀವು ಮಾರುಕಟ್ಟೆಯಲ್ಲಿ ಪೆಪ್ಪರ್ ಸ್ಪ್ರೇ ಖರೀದಿಸಲು ಬಯಸದಿದ್ದರೆ, ನೀವು ಮನೆಯಲ್ಲಿಯೇ ಪೆಪ್ಪರ್ ಸ್ಪ್ರೇ ತಯಾರಿಸಬಹುದು. ಮೊದಲು ಸ್ವಲ್ಪ ಮೆಣಸು ತೆಗೆದುಕೊಂಡು ಪುಡಿ ಮಾಡಿ. ಈಗ ಅದನ್ನು ನೀರಿನೊಂದಿಗೆ ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಸ್ಪ್ರೇ ಬಾಟಲಿಯಲ್ಲಿ ತುಂಬಿಸಿ. ಈಗ ಹಲ್ಲಿಗಳು ಇರುವ ಸ್ಥಳಗಳಲ್ಲಿ ಸ್ಪ್ರೇ ಮಾಡಿದರೆ ಮತ್ತೆ ತೊಂದರೆ ಆಗುವುದಿಲ್ಲ.

    Continue Reading

    LATEST NEWS

    ಬೆಟ್ಟಿಂಗ್‌ನಿಂದಾಗಿ 96 ಲಕ್ಷ ಕಳೆದುಕೊಂಡ ಯುವಕ..! ಕಣ್ಣೀರಿಟ್ಟು ಯುವಕನ ಗೋಳಾಟ

    Published

    on

    ಮುಂಬೈ/ಮಂಗಳೂರು:  ಸುಲಭವಾಗಿ ದುಡ್ಡು ಮಾಡಬೇಕು ಅನ್ನೋ ನಿಟ್ಟಿನಲ್ಲಿ ಯುವಕರು ಅದೆಷ್ಟೋ ಅಡ್ಡ ದಾರಿಗಳನ್ನು ಹಿಡಿಯುತ್ತಾರೆ. ಅದರಲ್ಲೂ ಈ ಬೆಟ್ಟಿಂಗ್ ದಂಧೆಗಳು, ಆನಲೈನ್‌ ಬೆಟ್ಟಿಂಗ್‌ ಗೆ ಜನರು ಮಾರು ಹೋಗುತ್ತಾರೆ. ಒಮ್ಮೆ ಬೆಟ್ಟಿಂಗ್ ಚಟ ಹಿಡೀತು ಅಂದ್ರೆ ಸಾಕು ನಿಮ್ಮ ಜೀವನವನ್ನೇ ನಾಶ ಮಾಡಿ ಬಿಡುತ್ತದೆ. ಇನ್ನು ಇದರಲ್ಲಿ ಸಕ್ಸಸ್‌ನ್ನು ಪಡೆಯುವವರ ಸಂಖ್ಯೆ ಬಹಳ ವಿರಳ. ಇದರಲ್ಲಿ ನಿಮ್ಮ ಜೇಬು ತುಂಬುವುದಕ್ಕಿಂತ ಜೇಬು ಖಾಲಿಯಾಗುವುದೇ ಜಾಸ್ತಿ. ಈ ಬೆಟ್ಟಿಂಗ್‌ ಗೆ ಮಾರುಹೋದವರು ಸಂಕಷ್ಟಕ್ಕೆ ಸಿಲುಕುವುದಂತೂ ಅಕ್ಷರಶಃ ನಿಜ. ಹೀಗೆ ಇಲ್ಲೊಬ್ಬ ಯುವಕ ಆನ್ಲೈನ್‌ ಬೆಟ್ಟಿಂಗ್ ಆಡಲು ಹೋಗಿ ಬರೋಬ್ಬರಿ 96 ಲಕ್ಷ ರೂಪಾಯಿ ಹಣವನ್ನು ಕಳೆದುಕೊಂಡಿದ್ದಾನೆ. ಬಿಟೆಕ್‌ ಮಾಡಲೆಂದು ಕೂಡಿಟ್ಟಿದ್ದ ಹಣವನ್ನು ಬೆಟ್ಟಿಂಗ್‌ಗೆ ಸುರಿದಿದ್ದಾನೆ. ಬೆಟ್ಟಿಂಗ್‌ ನಲ್ಲಿ 96 ಲಕ್ಷ ಹಣವನ್ನು ಕಳೆದುಕೊಂಡ ಈತ ಇದೀಗ ಖಿನ್ನತೆಗೆ ಜಾರಿದ್ದಾನೆ.

    ಖಾಸಗಿ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ. ಯುವಕ ಆನ್‌ಲೈನ್ ಕ್ರಿಕೆಟ್ ಬೆಟ್ಟಿಂಗ್ ಆ್ಯಪ್‌ನಲ್ಲಿ ಹಣ ಹಾಕಿ 96 ಲಕ್ಷ ರೂಪಾಯಿಯನ್ನು ಕಳೆದುಕೊಂಡಿದ್ದಾಗಿ ಕಣ್ಣೀರಿಟ್ಟಿದ್ದಾನೆ. ಇದರಿಂದಾಗಿ ಮನೆಯವರೂ ಕೂಡಾ ಆತನ ಮುಖವನ್ನು ನೋಡಲು ಬಯುಸುತ್ತಿಲ್ಲವಂತೆ. ಇತ್ತ ವಿದ್ಯಾಭ್ಯಾಸವೂ ಮೊಟಕುಗೊಂಡು, ಕಟುಂಬದವರ ಜೊತೆ ಮಾತೂ ಕಳೆದುಕೊಂಡ ಯುವಕನ ಪರಿಸ್ಥಿತಿ ಹೇಳತೀರದು. ಇದರಿಂದ ಬೇಸೊತ್ತ ಯುವಕ ಆತ್ಮಹತ್ಯೆ ಯತ್ನಿಸಿದ್ದಾನೆ.

    ಜೈಲಿನಲ್ಲೇ ಮೊಬೈಲ್‌ ಬಳಕೆ !

    ಟಿವಿಯಲ್ಲಿ ಬಂದ ಬೆಟ್ಟಿಂಗ್ ಜಾಹೀರಾತನ್ನು ನೋಡಿದ ಬಳಿಕ ತಾನು ಬಿಟೆಕ್‌ ಮಾಡಲು ಇಟ್ಟಿದ್ದ ಹಣವನ್ನು ಜೂಜಾಟಕ್ಕೆ ಉಪಯೋಗ ಮಾಡಿದ್ದಾನಂತೆ. ಈ ಬೆಟ್ಟಿಂಗ್ ಚಟ ಹೆಚ್ಚಾದಂತೆ ಆತನ ಸಾಲ ಕೂಡಾ ಮಿತಿ ಮೀರಿ ಹೋಗಿದೆ. ಎಲ್ಲವನ್ನೂ ಕಳೆದುಕೊಂಡು ನಿರ್ಗತಿಕನಂತೆ ಆಗಿಬಿಟ್ಟಿದ್ದಾನೆ.

    ಟ್ವಿಟ್ಟರ್‌ನಲ್ಲಿ ಈ ವೀಡಿಯೋವನ್ನು @khurpenchh ಎಂಬ ಪೇಜ್‌ನಿಂದ ಪೋಸ್ಟ್‌ ಮಾಡಲಾಗಿದ್ದು, ಈ ವೀಡಿಯೋ ಕೆಲವೇ ಕ್ಷಣಗಳಲ್ಲಿ ಲಕ್ಷಾಂತರ ಜನರಿಂದ ವೀಕ್ಷಿಸಲ್ಪಟ್ಟಿದ್ದು ಜನರು ಬೆಟ್ಟಿಂಗ್ ಆ್ಯಪ್‌ ಬ್ಗಗೆ ಆಕ್ರೋಶ ಹೊರಹಾಕಿದ್ದಾರೆ.

    Continue Reading

    LATEST NEWS

    ಉಪ್ಪಳದಲ್ಲಿ 3.5 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್‌ ವಶ; ಓರ್ವ ಬಂಧನ

    Published

    on

    ಕೇರಳ: ಕಾಸರಗೋಡಿನ ಪೊಲೀಸರು ಉಪ್ಪಳದಲ್ಲಿ ಡ್ರಗ್ಸ್‌ವಿರುದ್ಧ ನಡೆಸಿದ ಕಾರ್ಯಾಚರಣೆಯಲ್ಲಿ 3.5 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್‌ವಶ ಪಡಿಸಿಕೊಂಡಿದ್ದು, ಈ ಕುರಿತಂತೆ ಓರ್ವನನ್ನು ಬಂಧಿಸಿದ್ದಾರೆ.

    ಉಪ್ಪಳದ ಪತ್ವಾಡಿ ನಿವಾಸಿ ಅಸ್ಕರ್‌ ಬಂಧಿತ ಆರೋಪಿ. ಕಾಸರಗೋಡಿನಲ್ಲಿ ಡ್ರಗ್ಸ್ ದಂಧೆ ವ್ಯಾಪಕವಾಗಿ ಹಬ್ಬಿರುವ ಹಿನ್ನೆಲೆಯಲ್ಲಿ ಪೊಲೀಸರು ಕಳೆದ ಕೆಲವು ಸಮಯದಿಂದ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕಳೆದ ಆಗಸ್ಟ್ 30 ರಂದು ಮೇಲ್ಪರಂಬ ಕೈನೋತ್ತ್ ರಸ್ತೆಯಲ್ಲಿ 49.33 ಗ್ರಾಂ ಎಂ.ಡಿ.ಎಂ.ಎ. ಸಹಿತ ಅಬ್ದುಲ್‌ರಹೀಂ ಯಾನೆ ರವಿ ಎಂಬಾತನನ್ನು ಪೊಲೀಸರು ಬಂಧಿಸಿದ್ದರು.

    ಈತನಿಗೆ ಇದು ಎಲ್ಲಿಂದ ಪೂರೈಕೆಯಾಗಿದೆ ಎಂಬ ಕುರಿತು ತೀವ್ರ ತನಿಖೆ ನಡೆಸಿದಾಗ ಪೊಲೀಸರಿಗೆ ಕೆಲವು ಮಾಹಿತಿ ಸಿಕ್ಕಿದ್ದು, ಅದರಂತೆ ಉಪ್ಪಳದ ಪತ್ವಾಡಿಯ ಮನೆಗೆ ದಾಳಿ ನಡೆಸಿ ಶೋಧ ನಡೆಸಿದಾಗ ಭಾರೀ ಪ್ರಮಾಣದ ಅಮಲು ಪದಾರ್ಥ ಪತ್ತೆಯಾಗಿದೆ. ಮನೆ ಮಾಲಿಕನನ್ನು ಕರೆಸಿ ಬೀಗ ತೆಗೆಸಿ ತಪಾಸಣೆ ನಡೆಸಿದಾಗ ಕಾರ್ಡ್‌ಬೋರ್ಡ್‌ ಪೆಟ್ಟಿಗೆಯಲ್ಲಿ ತುಂಬಿಸಿಟ್ಟಿದ್ದ ಸುಮಾರು ಮೂರು ಕಿಲೋ ಡ್ರಗ್ ಪತ್ತೆಯಾಗಿದೆ. ಕಾಸರಗೋಡಿನ ಪೊಲೀಸರು ಇತ್ತೀಚೆಗೆ ಇಷ್ಟೊಂದು ದೊಡ್ಡ ಪ್ರಮಾಣದ ಡ್ರಗ್ಸ್ ಬೇಟೆಯಾಡಿರುವುದು ಇದೇ ಮೊದಲು.

    Continue Reading

    LATEST NEWS

    Trending