Wednesday, August 12, 2020

ಕರಾವಳಿಯಲ್ಲಿ ಕೋವಿಡ್‌ ವಾರಿಯರ್‌ ಗಳ ಮೇಲೂ ಕೊರೊನಾ ದಾಳಿ : ಆನೇಕ ಠಾಣೆಗಳು ಸೀಲ್ ಡೌನ್..!

Array

ಶಾಸಕ ಅಖಂಡ ಶ್ರೀನಿವಾಸ್ ಸಂಬಂಧಿಯಿಂದ ಮುಸ್ಲಿಂ ವಿರೋಧಿ ಪೋಸ್ಟ್‌; ನಾಯಕನ ಮನೆ ಎದುರು ಬೆಂಕಿ ಹಚ್ಚಿ ದಾಂಧಲೆ..!

ಶಾಸಕ ಅಖಂಡ ಶ್ರೀನಿವಾಸ್ ಸಂಬಂಧಿಯಿಂದ ಮುಸ್ಲಿಂ ವಿರೋಧಿ ಪೋಸ್ಟ್‌; ನಾಯಕನ ಮನೆ ಎದುರು ಬೆಂಕಿ ಹಚ್ಚಿ ದಾಂಧಲೆ..! ಬೆಂಗಳೂರು : ಶಾಸಕ ಅಖಂಡ ಶ್ರೀನಿವಾಸ್‌ ಅವರ ಆಪ್ತರೂ ಆಗಿರುವಂತಹ ನವೀನ್‌ ಎಂಬುವವರು ಇತ್ತೀಚೆಗೆ ಫೇಸ್‌ಬುಕ್‌ನಲ್ಲಿ...

ಗಾಂಜಾದ ಬೃಹತ್ ಜಾಲ ಪತ್ತೆಹಚ್ಚಿದ ದಕ್ಷಿಣಕನ್ನಡ ಪೋಲೀಸರು,175 ಕೆಜಿ ಗಾಂಜಾ ವಶ

ಬಂಟ್ವಾಳ ಅಗಸ್ಟ್ 11: ಬೃಹತ್ ಅಂತರ್ ರಾಜ್ಯ ಗಾಂಜಾ ಸಾಗಾಟಗಾರರ ಬೃಹತ್ ಜಾಲವನ್ನು ದಕ್ಷಿಣಕನ್ನಡ ಜಿಲ್ಲಾ ಪೋಲೀಸರು ಪತ್ತೆಹಚ್ಚಿದ್ದು, ಲಕ್ಷಾಂತರ ಮೌಲ್ಯದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಸುಮಾರು 175 ಕೆ.ಜಿ ಗಾಂಜಾವನ್ನು ಬಂಟ್ವಾಳ ತಾಲೂಕಿನ ಕೇದಿಲ...

ದಕ್ಷಿಣಕನ್ನಡ ಜಿಲ್ಲೆ 243 ಕೊರೊನಾ ಪ್ರಕರಣ 8 ಸಾವು

ಮಂಗಳೂರು : ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಇಳಿಕೆ ಹಾದಿಯಲ್ಲಿದ್ದ ಕೊರೊನಾ ಪ್ರಕರಣಗಳು ಮತ್ತೆ ಏರಿಕೆಯಲ್ಲಿದ್ದು, ಇಂದು ಮತ್ತೆ 243 ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದೆ. ಆದರೆ ಕೊರೊನಾದಿಂದ ಸಾವನಪ್ಪುತ್ತಿರುವವರ ಸಂಖ್ಯೆ ಇನ್ನು ಏರಿಕೆಯಲ್ಲಿದೆ. ಜಿಲ್ಲೆಯಲ್ಲಿ...

ಮುಗಿಯದ ಗೋಳು – ಕಾಸರಗೋಡು ಮಂಗಳೂರು ಪ್ರಯಾಣಿಕರಿಗೆ ಸ್ವಾಬ್ ಟೆಸ್ಟ್ ಕಡ್ಡಾಯ….!!

ಮಂಗಳೂರು ಅಗಸ್ಟ್ 11: ಕಾಸರಗೋಡು ಹಾಗೂ ದಕ್ಷಿಣಕನ್ನಡ ಜಿಲ್ಲೆಯ ಜಿಲ್ಲಾಡಳಿತಗಳ ಒಣ ಪ್ರತಿಷ್ಠೆಯಿಂದಾಗಿ ಜನರು ಹೈರಾಣಾಗುವ ಪರಿಸ್ಥಿತಿ ಬಂದೊದಗಿದೆ. ಮಂಗಳೂರು ಕಾಸಗೋಡು ಮಂಗಳೂರು ಮಧ್ಯೆ ನಿತ್ಯ ಪ್ರಯಾಣಿಸುವವರಿಗೆ ಕಡ್ಡಾಯಗೊಳಿಸಿದರೂ ವಾರಕ್ಕೊಮ್ಮೆ ಸ್ವಾಬ್ ಟೆಸ್ಟ್...

ಉಡುಪಿ ಜಿಲ್ಲೆ ಇಂದು 219 ಕೊರೊನಾ ಪ್ರಕರಣ ದಾಖಲು

ಉಡುಪಿ ಅಗಸ್ಟ್ 11: ಉಡುಪಿ ಜಿಲ್ಲೆಯಲ್ಲಿ ಇಂದು 219 ಕೊರೊನಾ ಪ್ರಕರಣ ದಾಖಲಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಕೊರೊನಾ ಸೊಂಕಿತರ ಸಂಖ್ಯೆ 6510 ಕ್ಕೆ ಏರಿಕೆಯಾಗಿದೆ. ಉಡುಪಿಯಲ್ಲಿ ಇಂದು ಕೊರೊನಾದಿಂದಾಗಿ ಯಾವುದೇ ಸಾವು...

ಕರಾವಳಿಯಲ್ಲಿ ಕೋವಿಡ್‌ ವಾರಿಯರ್‌ ಗಳ ಮೇಲೂ ಕೊರೊನಾ ದಾಳಿ : ಆನೇಕ ಠಾಣೆಗಳು ಸೀಲ್ ಡೌನ್..!

ಮಂಗಳೂರು/ಉಡುಪಿ : ಕರಾವಳಿ ಜಿಲ್ಲೆಗಳಲ್ಲಿ ಕೊರೊನಾ ವ್ಯಾಪಕವಾಗಿ ಹರಡುತ್ತಿದೆ. ಕೊರೊನಾ ವಾರಿಯಾರ್ಸ್‌ಗಳ ಮೇಲೂ ಕೊರೊನಾ ವೈರಸ್ ದಾಳಿ ಸತತ ಮುಂದುವರೆದಿದೆ.

ಈಗಾಗಲೇ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಪೊಲೀಸ್‌ ಠಾಣೆಗಳಿಗೂ ಕೊರೊನಾ ದಾಳಿ ನಡೆದಿದಿದ್ದು, ಅನೇಕ ಪೊಲೀಸ್ ಅಧಿಕಾರಿಗಳು ಮತ್ತು ಸಿಬಂದಿ ಸೋಂಕಿಗೆ ತುತ್ತಾಗಿದ್ದಾರೆ.

ಇಗಾಗಲೇ ಮಂಗಳೂರಿನ ಉಳ್ಳಾಲ, ಪುತ್ತೂರು, ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಗಳ ಸಿಬಂದಿ ಮತ್ತು ಅಧಿಕಾರಿ ವರ್ಗದವರಿಗೂ ಕೊರೊನಾ ಸೋಂಕು ತಗುಲಿದೆ.

ಇದೀಗ ಮಂಗಳೂರಿನ ಮುಲ್ಕಿ ಪೊಲೀಸ್ ಠಾಣೆಗೂ ಕೊರೋನಾ ವಕ್ಕರಿಸಿದೆ. ಮುಲ್ಕಿ ಪೊಲೀಸ್ ಠಾಣೆಯ ಕಾನ್ಸ್ ಟೇಬಲ್ ಗೆ ಕೊರೋನಾ ಪಾಸಿಟಿವ್ ಬಂದಿದೆ.

ಸಿಬ್ಬಂದಿಗೆ ಪಾಸಿಟಿವ್ ಬಂದ ಹಿನ್ನೆಲೆ ಮುಲ್ಕಿ ಪೊಲೀಸ್ ಠಾಣೆಯನ್ನು ತಾತ್ಕಾಲಿಕವಾಗಿ ಸೀಲ್ ಡೌನ್ ಮಾಡಲಾಗಿದೆ. ಕಾನ್ಸ್‌ಟೇಬಲ್ ಜೊತೆ ಸಂಪರ್ಕವಿದ್ದ ಹಲವು ಪೊಲೀಸರಿಗೆ ಕ್ವಾರೆಂಟೈನ್ ಮಾಡಲಾಗಿದೆ.

ಸದ್ಯಕ್ಕೆ ಹಳೇ ಪೊಲೀಸ್ ಠಾಣೆ ಕಟ್ಟಡಕ್ಕೆ ಠಾಣೆ ಸ್ಥಳಾಂತರ ಮಾಡಲಾಗಿದೆ. ಅತ್ತ ಉಡುಪಿ ಜಿಲ್ಲೆಯ ಕಾಪು ಪೊಲೀಸ್ ಠಾಣೆಯ ಎಎಸ್ಸೈಯೊಬ್ಬರಿಗೆ ಕೊರೋನ ಪಾಸಿಟಿವ್ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಠಾಣೆಯನ್ನು ಎರಡು ದಿನಗಳ ಕಾಲ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.

ಇವರು ಕೋಟದಿಂದ ಕಾಪು ಠಾಣೆಗೆ ಬಸ್ಸಿನಲ್ಲಿ ಪ್ರತಿದಿನ ಸಂಚರಿಸುತ್ತಿದ್ದು, ಇದರಿಂದ ಇವರಿಗೆ ಪಾಸಿಟಿವ್ ಬಂದಿರಬಹುದೆಂದು ಶಂಕಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಠಾಣೆಯನ್ನು ಎರಡು ದಿನಗಳ ಕಾಲ ಸಮೀಪದ ವೀರಭದ್ರ ದೇವಸ್ಥಾನಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರ ಮಾಡಲಾಗಿದೆ.

ಕೊರೊನಾ ದಿಂದ ಒಟ್ಟಾರೆಯಾಗಿ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಪೊಲೀಸರಿಗೂ ನೆಮ್ಮದಿಯಿಲ್ಲವಾಗಿದೆ.

Hot Topics

ಕದ್ರಿ ಕಂಬ್ಳ ಜಂಕ್ಷನ್‌ ನಲ್ಲಿ ಭೀಕರ ರಸ್ತೆ ಅಪಘಾತ ಯುವತಿಯ ಮೈಮೇಲೆ ಹರಿದ ಕಾರು..! 

ಕದ್ರಿ ಕಂಬ್ಳ ಜಂಕ್ಷನ್‌ ನಲ್ಲಿ ಭೀಕರ ರಸ್ತೆ ಅಪಘಾತ ಯುವತಿಯ ಮೈಮೇಲೆ ಹರಿದ ಕಾರು..!  ಮಂಗಳೂರು : ಇಂದು ಬೆಳಿಗ್ಗೆ ಮಂಗಳೂರು ನಗರದ ಕದ್ರಿಯಲ್ಲಿ ನಡೆದಿದ್ದ ರಸ್ತೆ ಅಪಘಾತವೊಂದರಲ್ಲಿ ಯುವತಿಯೊಬ್ಬಳು ಗಂಭೀರ ಗಾಯಗೊಂಡಿದ್ದಾಳೆ. ನಗರದ ಕದ್ರಿ...

ಚಾರ್ಮಾಡಿ ಪರಿಸರದಲ್ಲಿ ಭಾರೀ ಮಳೆ :ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ ಮೃತ್ಯಂಜಯ ಹೊಳೆ..!

ಚಾರ್ಮಾಡಿ ಪರಿಸರದಲ್ಲಿ ಭಾರೀ ಮಳೆ :ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ ಮೃತ್ಯಂಜಯ ಹೊಳೆ..! ಬೆಳ್ತಂಗಡಿ : ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಘಾಟ್ ಪರಿಸರದಲ್ಲಿ ಭಾರೀ ಮಳೆಯಾಗುತ್ತಿದ್ದು, ಸನಿಹದ ಮೃತ್ಯಂಜಯ ಹೊಳೆ ಅಪಾಯದ ಮಟ್ಟದಲ್ಲಿ...

ಕೇರಳ ಮನ್ನಾರ್ ಭೂ ಕುಸಿತಕ್ಕೆ 13 ಬಲಿ..ಮಣ್ಣಿನಡಿ ಸಿಲುಕಿರುವ 80ಕ್ಕೂ ಅಧಿಕ ಮಂದಿ

ತಿರುವನಂತಪುರಂ : ಕೇರಳದ ಇಡುಕ್ಕಿಯಲ್ಲಿ ಇಂದು ಬೆಳಗ್ಗೆ ಭೂಕುಸಿತವಾಗಿ 13 ಜನರು ಸಾವನ್ನಪ್ಪಿದ್ದಾರೆ. ಕೇರಳದ ಪ್ರಸಿದ್ಧ ಪ್ರವಾಸಿತಾಣ ಮುನ್ನಾರ್​​ನಿಂದ 25 ಕಿ.ಮೀ ದೂರದಲ್ಲಿರೋ ರಾಜಮಲೈ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ....
Copy Protected by Chetans WP-Copyprotect.