Monday, August 15, 2022

ಕಾಪ್ಟರ್‌ ದುರಂತದಲ್ಲಿ ಬದುಕುಳಿದ ಗ್ರೂಪ್‌ ಕ್ಯಾಪ್ಟನ್‌ ವರುಣ್‌ ಸಿಂಗ್‌ ಬೆಂಗಳೂರಿಗೆ ಏರ್‌ಲಿಫ್ಟ್

ಚೆನ್ನೈ: ಕಾಪ್ಟರ್‌ ದುರಂತದಲ್ಲಿ ತೀವ್ರವಾಗಿ ಗಾಯಗೊಂಡು ಜೀವನ್ಮರಣ ಹೋರಾಟ ನಡೆಸುತ್ತಿರುವ ಗ್ರೂಪ್‌ ಕ್ಯಾಪ್ಟನ್‌ ವರುಣ್‌ ಸಿಂಗ್‌ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆತರುವ ಸಾಧ್ಯತೆ ಇದೆ.


‘ವರುಣ್‌ ಸಿಂಗ್‌ ಅವರ ಪರಿಸ್ಥಿತಿ ಗಂಭೀರವಾಗಿದೆ. ಆದರೂ ಸ್ಥಿರವಾಗಿದೆ. ಅವರ ಆರೋಗ್ಯದ ಮೇಲೆ ನಿಗಾ ವಹಿಸಲಾಗಿದೆ. ಅಗತ್ಯವಿದ್ದರೆ ವೆಲ್ಲಿಂಗ್ಟನ್‌ನ ಮಿಲಿಟರಿ ಆಸ್ಪತ್ರೆಯಿಂದ,

ಬೆಂಗಳೂರಿನ ಕಮಾಂಡ್‌ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳಾಂತರ ಮಾಡಲಾಗುವುದು,’ ಎಂದು ಮೂಲಗಳ ಮಾಹಿತಿ ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅವರು ವರುಣ್‌ ಸಿಂಗ್‌ ಅವರ ಸ್ಥಿತಿಯ ಬಗ್ಗೆ ರಾಜ್ಯಸಭೆಗೆ ಗುರುವಾರ ಮಾಹಿತಿ ಒದಗಿಸಿದರು. ವೆಲ್ಲಿಂಗ್ಟನ್‌ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವರುಣ್‌ ಸಿಂಗ್‌ ಅವರು ಜೀವ ರಕ್ಷಕ ವ್ಯವಸ್ಥೆಯಲ್ಲಿದ್ದಾರೆ.

ಅವರನ್ನು ಉಳಿಸಿಕೊಳ್ಳಲು ಸರ್ವ ಪ್ರಯತ್ನಗಳನ್ನೂ ಮಾಡಲಾಗುತ್ತಿದೆ,’ ಎಂದು ಅವರು ತಿಳಿಸಿದರು.
ದುರಂತದಲ್ಲಿ ಮಡಿದವರಿಗೆ ರಾಜ್ಯಸಭೆಯಲ್ಲಿ ಎರಡು ನಿಮಿಷಗಳ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಸೇನಾ ಪಡೆಗಳ ಮುಖ್ಯಸ್ಥ ಬಿಪಿನ್‌ ರಾವತ್‌ ಅಂತ್ಯಕ್ರಿಯೆಯನ್ನು ಸಕಲ ಮಿಲಿಟರಿ ಗೌರವಗಳೊಂದಿಗೆ ನಡೆಸಲಾಗುವುದು ಎಂದು ರಕ್ಷಣಾ ಸಚಿವರು ತಿಳಿಸಿದರು.

LEAVE A REPLY

Please enter your comment!
Please enter your name here

Hot Topics

ಕುದ್ರೋಳಿಯ ತ್ರಿವರ್ಣ ಚಿತ್ರಾಕೃತಿಗೆ ಮೆಚ್ಚುಗೆ ವ್ಯಕ್ತಪಡಿಸಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ

ಮಂಗಳೂರು: ನಗರದ ಕುದ್ರೋಳಿಯ ಶ್ರೀ ಗೋಕರ್ಣಾನಾಥ ಕ್ಷೇತ್ರದ ಮುಂಭಾಗ ಗುರುಬೆಳದಿಂಗಳು ಸಮಿತಿಯ ಮೂವತ್ತು ಸದಸ್ಯರು ಸೇರಿ 900 ಕೆ.ಜಿ ಧಾನ್ಯಗಳನ್ನು ಬಳಸಿ ರಚಿಸಿದ ತ್ರಿವರ್ಣ ಆಕಾರ ಎಲ್ಲರ ಗಮನ ಸೆಳೆದಿತ್ತು.ಇಂದು ದೇಗುಲಕ್ಕೆ ಭೇಟಿ...

ಮಂಗಳೂರು: ಕಂದಾವರ ನೂರುಲ್ ಇಸ್ಲಾಂ ಮಸ್ಜಿದ್‌- ಮದರಸದಲ್ಲಿ 75ರ ಸ್ವಾತಂತ್ರ್ಯ ಸಂಭ್ರಮ

ಮಂಗಳೂರು: ನೂರುಲ್ ಇಸ್ಲಾಂ ಮಸ್ಜಿದ್ ಮತ್ತು ಮದರಸ ಮೂಡುಕರೆ ಕಂದಾವರ ಇಲ್ಲಿ 75ನೇ ಸ್ವಾತಂತ್ರ್ಯವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.ಗೌರವಧ್ಯಕ್ಷರಾದ ಎಂ ಎಸ್ ಅಲಿಯಬ್ಬ ಅವರು ಸಬೀಹ್ ಅಲಿ ಅವರಿಂದ ಗೌರವವಂದನೆಯನ್ನು ಸ್ವೀಕರಿಸಿ ಧ್ವಜಾರೋಹಣ...

ದ.ಕ.ಜಿಲ್ಲಾ ಮಡಿವಾಳರ ಸಂಘ, ರಜಕ ಯೂತ್‌ : ಸ್ವಾತಂತ್ರ್ಯ ಸಂಭ್ರಮ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಮಡಿವಾಳರ ಸಂಘ (ರಿ) ಮಂಗಳೂರು ಮತ್ತು ರಜಕ ಯೂತ್ ಮಂಗಳೂರು ಸಹಭಾಗಿತ್ವದಲ್ಲಿ ಆಝಾದಿ ಕಾ ಅಮೃತ್ ಮಹೋತ್ಸವದ ಹಿನ್ನೆಲೆಯಲ್ಲಿ ಸಂಘದ ಜಿಲ್ಲಾ ಕಚೇರಿಯಲ್ಲಿ ಸ್ವಾತಂತ್ರ್ಯ ಸಂಭ್ರಮದ...