ಮಂಗಳೂರು: ಮಂಗಳೂರಿನಲ್ಲಿ ಸ್ಪೋಟಗೊಂಡ ಕುಕ್ಕರ್ ಬಾಂಬ್ ಇದೀಗ ಯಕ್ಷಗಾನದಲ್ಲೂ ಹಾಸ್ಯ ರೂಪದಲ್ಲಿ ಸುದ್ದಿಯಾಗಿದೆ. ಅಲ್ಲದೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಬಪ್ಪನಾಡು ಮೇಳದ ಈ ವರ್ಷದ ಭಂಡಾರದ ಚಾವಡಿ ಪ್ರಸಂಗದಲ್ಲಿ ಕೋಡಪದವು ದಿನೇಶ್ ಮತ್ತು ನಂದಿಕೂರು ರಾಮ ಕೃಷ್ಣ ಅವರ ಸಂಭಾಷಣೆಯಲ್ಲಿ ಪ್ರೇಕ್ಷಕರು ನಕ್ಕೂ ನಕ್ಕೂ ಸುಸ್ತಾಗಿದ್ದಾರೆ.
ಕೊಡಪದವು ದಿನೇಶ್ ಅವರು ತನ್ನ ಚೀಲದಿಂದ ಒಂದೊಂದೇ ಬಟ್ಟೆಗಳನ್ನು ಹೊರ ತೆಗೆದು ನಂತರ ಕುಕ್ಕರ್ ತೆಗೆಯುವಾಗ ನಂದಿಕೂರು ರಾಮಕೃಷ್ಣ ಹೆದರಿ ತೆಗೆದುಕೊಂಡು ಹೋಗು ಈಗ ಒಡೆಯುತ್ತೆ. ಒಮ್ಮೆ ತೆಗೆದುಕೊಂಡು ಹೋಗು ಎಂದು ಚೀರಾಡಿ ಓಡುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆಗ ಕೋಡಪದವು ‘ನಾನು ಗಂಜಿ ಬೇಯಿಸ್ಲಿಕ್ಕೆ ಅಂತ ಹೊಸತ್ತು ತೆಗೆದುಕೊಂಡಿದ್ದು ಮರ್ರೆ. ಇವ ನೋಡಿದ್ರೆ ಓಡ್ತಿದ್ದಾನೆ ಅಂತ ಹೇಳುವಾಗ ನಂದಿಕೂರು ರಾಮಕೃಷ್ಣ ಅವರು ‘ಈಗ ಇದನ್ನು ನೋಡಿದ್ರೆ ಯಾರೂ ಕೂಡಾ ಓಡಿಯೇ ಓಡುತ್ತಾರೆ.
ಮೊನ್ನೆ ತಾನೇ ಇದು ಎಲ್ಲೋ ಒಡೆದುಹೋಗಿದೆಯಂತೆ ಮಾರಾಯ..ಎಂದಾಗ ದಿನೇಶ್ ಕೋಡಪದವು ‘ಈ ಕುಕ್ಕರ್‌ಡ್ ಬಲ್ಲಿಯಪ್ಪಾ……ಅತ್ತತ್ತು ಈ ಮಕ್ಕರ್ಡ್ ಬಲ್ಲಿಯಪ್ಪ, ಗೆತೊನ್ಲೆ’ ಎಂದು ಕುಕ್ಕರ್ ಪ್ರಯೋಗದ ಬಗ್ಗೆ ಸಂಪೂರ್ಣವಾಗಿ ತುಳು ಭಾಷೆಯಲ್ಲಿ ರಂಜಿಸಿದ್ದಾರೆ.
ಕೊಡಪದವು ದಿನೇಶ್ ಖ್ಯಾತ ಹಾಸ್ಯಗಾರರಲ್ಲಿ ಒಬ್ಬರಾಗಿದ್ದು, ಪ್ರತೀ ವರ್ಷ ವಿಭಿನ್ನ ಹಾಸ್ಯಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.