Connect with us

    STATE

    ನಕ್ಸಲ್​ ಕೂಂಬಿಂಗ್ ಮುಂದುವರಿಕೆ ​​: ಶರಣಾಗತರಾಗಿ, ಪ್ಯಾಕೇಜ್​ ನೀಡುತ್ತೇವೆ ಎಂದ ಪರಮೇಶ್ವರ್​

    Published

    on

    ಚಿಕ್ಕಮಗಳೂರು, ನವೆಂಬರ್​ 30: ಪಶ್ಚಿಮಘಟ್ಟ ಪ್ರದೇಶಗಳಲ್ಲಿ ನಕ್ಸಲ್​​  ಚಟುವಟಿಕೆ ಕಂಡು ಬಂದ ಹಿನ್ನೆಲೆಯಲ್ಲಿ ನಕ್ಸಲ್ ನಿಗ್ರಹ ಪಡೆಯಿಂದ (ANF) ಕೂಂಬಿಂಗ್ ಮುಂದುವರೆದಿದೆ. ​ಕರ್ನಾಟಕದ‌ ಐವರು ನಕ್ಸಲರು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಸುತ್ತಿನಗುಡ್ಡ, ಕಿಗ್ಗಾ, ಕೆರೆಕಟ್ಟೆ ಅರಣ್ಯದಲ್ಲಿ ಓಡಾಡಿರುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ, ಹುಡಕಾಟ ನಡೆದಿದೆ. ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡ, ಕೊಡಗು ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ತೀವ್ರ ಶೋಧ ನಡೆಸಲಾಗುತ್ತಿದೆ.

    ಅರಣ್ಯದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಮುಂಡಗಾರು ಲತಾ, ಕಳಸ‌ ತಾಲೂಕಿನ ಬಾಳೆಹೊಳೆಯ ವನಜಾಕ್ಷಿ, ದಕ್ಷಿಣ ಕನ್ನಡ ಜಿಲ್ಲೆಯ ವೇಣೂರು ಗ್ರಾಮದ ಸುಂದರಿ, ರಾಯಚೂರು ಮೂಲದ ‌ಜಯಣ್ಣ ಮತ್ತು ಶೃಂಗೇರಿ ತಾಲೂಕಿನ ಹಿತ್ತಲಮನೆಯ ರವೀಂದ್ರ ಐವರು ನಕ್ಸಲರ ತಂಡ ಕಾಫಿನಾಡಿನ ಕಾಡಿನಲ್ಲಿ ಅಡಗಿರುವ ಸಾಧ್ಯತೆ ಇದೆ.

    ನಕ್ಸಲ್​ ವನಜಾಕ್ಷಿ (66 ವರ್ಷ) ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾಳೆ. ಈಕೆ ಮೋಸ್ಟ್ ವಾಂಟೆಡ್‌ ನಕ್ಸಲ್ ಅಂಗಡಿ ಸುರೇಶ್ ಪತ್ನಿಯಾಗಿದ್ದಾಳೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಅಂಗಡಿ ಗ್ರಾಮದ ಸುರೇಶ್ ಪತ್ನಿ ವನಜಾಕ್ಷಿ ಅನಾರೋಗ್ಯದಿಂದ ಬಳಲುತ್ತಿರುವ ಬಗ್ಗೆ ಕರ್ನಾಟಕದ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಹೀಗಾಗಿ, ಸರ್ಕಾರ ಶರಣಾಗುವಂತೆ ಹೇಳಿದೆ.

    ಎಎನ್​ಫ್​ ಅಧಿಕಾರಿಗಳು ಕಳೆದ 4 ದಿನಗಳಿಂದ ನಕ್ಸಲರಿಗಾಗಿ ಶೋಧ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಶರಣಾಗುವಂತೆ ಸರ್ಕಾರ ಸೂಚನೆಯಂತೆ ಎಎನ್​ಫ್​ ಶರಣಾಗತಿಗೆ ಮೊದಲ‌ ಆಧ್ಯತೆ ನೀಡಿದೆ. ಶರಣಾಗತಿ ಬಗ್ಗೆ ನಕ್ಸಲ್ ಸಂಬಂಧಿಕರು, ಮಾಜಿ ನಕ್ಸಲರು ಮತ್ತು ಸ್ಥಳೀಯರಿಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಶರಣಾದ ನಕ್ಸಲ್​ರಿಗೆ ಸರ್ಕಾರ ನೀಡುವುದಾಗಿಯೂ ಪೊಲೀಸರು ಮಾಹಿತಿ ನೀಡಿದ್ದಾರೆ. ನಕ್ಸಲ್ ಶರಣಾಗತಿ ಕಮಿಟಿಗೂ ಶರಣಾಗಿಸುವಂತೆ ಸರ್ಕಾರ ಸೂಚನೆ ನೀಡಿದೆ.

    ಅಂಗಡಿ ಸುರೇಶ್ ಸಿಕ್ಕಿದ್ದು ಹೇಗೆ?

    ಇದೇ ವರ್ಷ ಫೆಬ್ರವರಿಯಲ್ಲಿ ಕಣ್ಣೂರು ಅರಣ್ಯದ ನಕ್ಸಲ್ ಕ್ಯಾಂಪ್ ಮೇಲೆ ಕಾಡಾನೆ ದಾಳಿ ನಡೆಸಿತ್ತು. ಕಾಡಾನೆ ದಾಳಿಯಿಂದ ನಕ್ಸಲ್ ಸುರೇಶ್ ಗಾಯಗೊಂಡಿದ್ದನು. ಹೀಗಾಗಿ ಸುರೇಶ್​ಗೆ ಕೇರಳದ ಕಣ್ಣೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ವಿಚಾರ ಇಳಿದು ಆಸ್ಪತ್ರೆಗೆ ತೆರಳಿದ ಕೇರಳ ಪೊಲೀಸರು ಸುರೇಶ್​ನನ್ನು ಬಂಧಿಸಿದ್ದಾರೆ.

    ನಕ್ಸಲ್​​ರಿಗೆ ಪ್ಯಾಕೇಜ್​: ಪರಮೇಶ್ವರ್​

    ನಕ್ಸಲರಿಗೆ ಶರಣಾಗಲು ಕೇಳುತ್ತಿದ್ದೇವೆ. ಅವರ ಜೊತೆಯಲ್ಲಿ ಇರುವವರಿಗೆ ಶರಣಾಗಲು ಕೇಳುತ್ತಿದ್ದೇವೆ. ನಕ್ಸಲರು ಶರಣಾದರೆ ಪ್ಯಾಕೇಜ್ ನೀಡುತ್ತೇವೆ. ಸಾಮಾನ್ಯ ಜೀವನಕ್ಕೆ ಅನುಕೂಲ ಮಾಡುತ್ತೇವೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದರು.

    LATEST NEWS

    ಮನೆ ಮನೆಗೆ ತೆರಳಿ ಆರೋಗ್ಯ ತಪಾಸಣೆ: ಸರ್ಕಾರದ ಮಹತ್ವದ ಯೋಜನೆ

    Published

    on

    2025 ರ ಜನವರಿಯಿಂದ ಕರ್ನಾಟಕ ಆರೋಗ್ಯ ಇಲಾಖೆ ರಾಜ್ಯದ ಪ್ರತಿ ಮನೆಗೂ ಭೇಟಿ ನೀಡಿ ಮಾನಸಿಕ ಮತ್ತು ದೈಹಿಕ ಆರೋಗ್ಯ ತಪಾಸಣೆ ನಡೆಸುವ ಯೋಜನೆ ಹಮ್ಮಿಕೊಂಡಿದೆ. ಗೃಹ ಆರೋಗ್ಯ ಯೋಜನೆಯ ಭಾಗವಾಗಿ, ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಪತ್ತೆಹಚ್ಚಿ ಉಚಿತ ಚಿಕಿತ್ಸೆ ಮತ್ತು ಔಷಧಿಗಳನ್ನು ಒದಗಿಸಲಾಗುವುದು. ಗ್ರಾಮೀಣ ಪ್ರದೇಶಗಳಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ.

    ಮನೆ ಮನೆಗೆ ತೆರಳಿ ಚಿಕಿತ್ಸೆ ಜೊತೆ ಉಚಿತ ಔಷಧಿ ನೀಡುವ ‘ಗೃಹ ಆರೋಗ್ಯ’ ಯೋಜನೆ ಆರಂಭಿಸಿರುವ ಕರ್ನಾಟಕ ಆರೋಗ್ಯ ಇಲಾಖೆ ಇದೀಗ ಮತ್ತೊಂದು ಮಹತ್ವದ ಯೋಜನೆ ಹಮ್ಮಿಕೊಂಡಿದೆ. 2025ರ ಜನವರಿಯಿಂದ ರಾಜ್ಯದ ಪ್ರತಿ ಮನೆಯ ಸದಸ್ಯರ ಮಾನಸಿಕ ಆರೋಗ್ಯ ತಪಾಸಣೆ ಮಾಡಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಗೃಹ ಆರೋಗ್ಯ ಯೋಜನೆ ಅಂಗವಾಗಿ ಜನವರಿಯಿಂದ ಆರೋಗ್ಯ ಇಲಾಖೆ ಸಿಬ್ಬಂದಿ ರಾಜ್ಯದ ಪ್ರತಿ ಮನೆಗೂ ತೆರಳಿ ಮಾನಸಿಕ ಆರೋಗ್ಯ ಸಮಸ್ಯೆಗಳು, ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ತಪಾಸಣೆ ಮಾಡಲಿದ್ದಾರೆ ಎಂದು ಸಚಿವರು ಹೇಳಿದ್ದಾರೆ.

    ಡಿಮೆನ್ಶಿಯಾ ಇಂಡಿಯಾ ಅಲಯನ್ಸ್ (DIA) ನಡೆಸಿದ DemCon’24, ಎರಡು ದಿನಗಳ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದ ದಿನೇಶ್ ಗುಂಡೂರಾವ್, ತರಬೇತಿ ಪಡೆದ ಆರೋಗ್ಯ ಕಾರ್ಯಕರ್ತರು ರಾಜ್ಯದಾದ್ಯಂತ ಮನೆಗಳಿಗೆ ಭೇಟಿ ನೀಡಲಿದ್ದಾರೆ. ಅಧಿಕ ರಕ್ತದೊತ್ತಡ ಅಥವಾ ಮಧುಮೇಹದಿಂದ ಬಳಲುತ್ತಿರುವ ಜನರು ನಿರಂತರ ಔಷಧಿಗಳನ್ನು ಪಡೆಯುತ್ತಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ತಪಾಸಣೆ ನಡೆಸಲಿದ್ದಾರೆ. ಅನೇಕ ರೋಗಿಗಳು, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ, ಅಲ್ಪಾವಧಿಯ ನಂತರ ವೈದ್ಯರು ಸೂಚಿಸಿದ ಚಿಕಿತ್ಸೆ, ಔಷಧ ತೆಗೆದುಕೊಳ್ಳುವುದನ್ನು ನಿಲ್ಲಿಸುತ್ತಾರೆ. ಇದಕ್ಕಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ.

    ಗ್ರಾಮೀಣ ಪ್ರದೇಶಗಳ ಮೇಲೆ ಕಾಳಜಿ :

    ಅಧಿಕ ರಕ್ತದೊತ್ತಡ ಮತ್ತು ಮಧುಮೇಹದ ತಪಾಸಣೆಯ ಜೊತೆಗೆ, ಗೃಹ ಆರೋಗ್ಯ ಯೋಜನೆಯಡಿ ಮಾನಸಿಕ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಲಾಗುವುದು. ಖಿನ್ನತೆಯಂತಹ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಡೆಗಣಿಸಲಾಗುತ್ತದೆ. ಅಲ್ಲಿ ಮೆಮೊರಿ ನಷ್ಟದಂತಹ ಪರಿಸ್ಥಿತಿಗಳನ್ನು ಸಾಮಾನ್ಯವಾಗಿ ತಪ್ಪಾಗಿ ಅರ್ಥೈಸಲಾಗುತ್ತದೆ. ಇದರ ನಿವಾರಣೆಗೆ ಮಾನಸಿಕ ಆರೋಗ್ಯ ತಪಾಸಣೆ, ಚಿಕಿತ್ಸೆ ಯೋಜನೆ ಹಮ್ಮಿಕೊಳ್ಳಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.

    ಆರೋಗ್ಯ ಕಾರ್ಯಕರ್ತರಿಗೆ ವಿಶೇಷ ತರಬೇತಿ :

    ಯೋಜನೆಯ ಭಾಗವಾಗಿ, ಮಾನಸಿಕ ಆರೋಗ್ಯ ಸಮಸ್ಯೆಗಳ ಆರಂಭಿಕ ಚಿಹ್ನೆಗಳನ್ನು ಗುರುತಿಸಲು ಮತ್ತು ಅಗತ್ಯ ಬೆಂಬಲವನ್ನು ಒದಗಿಸಲು ಆರೋಗ್ಯ ಕಾರ್ಯಕರ್ತರಿಗೆ ತರಬೇತಿ ನೀಡಲಾಗುತ್ತಿದೆ. ತರಬೇತಿ ಪಡೆದ ಆರೋಗ್ಯ ಕಾರ್ಯಕರ್ತರಿಂದ ವ್ಯಕ್ತಿಗಳು ಅವರಿಗೆ ಅಗತ್ಯವಿರುವ ಆರೈಕೆಯನ್ನು ಪಡೆಯಲಿದ್ದಾರೆ ಎಂದು ಗುಂಡೂರಾವ್ ತಿಳಿಸಿದ್ದಾರೆ. ಆರೋಗ್ಯ ಯೋಜನೆಯನ್ನು ಮೊದಲಿಗೆ ಕೋಲಾರ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಗಿತ್ತು. ಇದೀಗ ರಾಜ್ಯದಾದ್ಯಂತ ಸುಮಾರು 30,000 ರೋಗಿಗಳನ್ನು ತಪಾಸಣೆ ನಡೆಸಲಾಗಿದೆ. ಗ್ರಾಮೀಣ ಪ್ರದೇಶಗಳಿಗೆ ನಿಯಮಿತವಾಗಿ ಭೇಟಿ ನೀಡುವ ಸ್ಥಳೀಯ ಆರೋಗ್ಯ ಕಾರ್ಯಕರ್ತರಿಗೆ ಜಾಗೃತಿ ಮತ್ತು ತರಬೇತಿ ನೀಡಲಾಗುತ್ತಿದೆ. ಅವರು ಆರಂಭಿಕ ಹಂತದಲ್ಲಿ ಆರೋಗ್ಯ ಸಮಸ್ಯೆಗಳನ್ನು ಗುರುತಿಸುತ್ತಾರೆ ಮತ್ತು ಪರಿಹರಿಸುತ್ತಾರೆ ಎಂದು ಸಚಿವರು ತಿಳಿಸಿದ್ದಾರೆ.

    Continue Reading

    BIG BOSS

    ಮಂಜು ವಿರುದ್ದ ಸಿಡಿದೆದ್ದ ರಜತ್; ಈ ವಾರ ಎಲಿಮಿನೇಟ್ ಆಗುವ ಸ್ಪರ್ಧಿ ಇವರೇ ?

    Published

    on

    ಮಂಗಳೂರು/ಬೆಂಗಳೂರು: ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಈ ವಾರ ಉಗ್ರಂ ಮಂಜು ರಾಜನಾಗಿ ದೊಡ್ಮನೆಯಲ್ಲಿ ಅಬ್ಬರಿಸಿದ್ದಾರೆ. ನನಗೆ ನಾನೇ ಸಾಟಿ ಎಂದು ಬೀಗುತ್ತಿದ್ದರು.
    ಮಂಜು ಘರ್ಜನೆಗೆ ರಜತ್ ಬ್ರೇಕ್ ಹಾಕಿದ್ದಾರೆ.

    ಮಾತಿಗೆ ಮಾತು ಕೊಡುವ ಮೂಲಕ ರಜತ್ ಕೌಂಟರ್ ಕೊಡುತ್ತಿದ್ದಾರೆ. ಆದರೆ ಮಂಜು ಕೂಡ ಬಿಗ್ ಬಾಸ್ ಮನೆಯಲ್ಲಿ ಉತ್ತಮ ಆಟ ಆಡುತ್ತಿದ್ದಾರೆ. ಇಡೀ ಮನೆಯಲ್ಲಿ ಕುತಂತ್ರ ರೂಪಿಸೋದರಲ್ಲಿ ಅವರೇ ಯಾವಾಗಲೂ ಮುಂದು. ರಜತ್ ಅವರ ಒಂದೊಂದು ಮಾತಿಗೂ ಮಂಜು ಸೈಲೆಂಟ್ ಆಗುತ್ತಾ ಬಂದರು. ಮಂಜು ಅವರ ಕುತಂತ್ರಕ್ಕೆ, ರಜತ್ ಪ್ರತಿತಂತ್ರ ರೂಪಿಸಲು ಒಬ್ಬರು ಬಂದರು ಎಂದು ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ.

    ಈ ಬಾರಿಯ ಕ್ಯಾಪ್ಟನ್ಸಿ ಟಾಸ್ಕ್ ನಲ್ಲಿ ಯಾರು ಗೆಲ್ಲಬೇಕು ಎಂಬುದನ್ನು ಉಳಿದ ಸ್ಪರ್ಧಿಗಳು ನಿರ್ಧರಿಸಬೇಕಿತ್ತು. ಆಗ ರಜತ್ ಮೊದಲು ಎಲಿಮಿನೇಟ್ ಮಾಡಿದ್ದೇ ಗೌತಮಿಯವರನ್ನು. ಅವರು ಮಂಜು ಅವರ ಆಪ್ತರು ಎಂಬುದು ರಜತ್ ಗೆ ಮೊದಲೇ ಗೊತ್ತಿತ್ತು. ಹೀಗಾಗಿ ಗೌತಮಿಯವರನ್ನು ಹೊರಕ್ಕೆ ಇಡಲಾಯಿತು. ಆ ಬಳಿಕ ಮಂಜುನ ಆಟದಿಂದ ಎಲಿಮಿನೇಟ್ ಮಾಡಿದರು.

    ಮಂಜುಗೆ ತಾವು ಆಟದಿಂದ ಹೊರಹೋಗೋದು ಗ್ಯಾರೆಂಟಿ ಆಗುತ್ತಿದ್ದಂತೆ, ಎಂದಿನಂತೆ ತನ್ನ ಕುತಂತ್ರ ಹೆಣೆಯಲು ಪ್ರಾರಂಭಿಸಿದರು. ‘ಧನರಾಜ್ ಹಾಗೂ ಸುರೇಶ್ ನೀವು ಇನ್ನೂ ಕ್ಯಾಪ್ಟನ್ ಆಗಿಲ್ಲ ಅಲ್ವಾ. ನೀವೇ ಈ ವಾರದ ಕ್ಯಾಪ್ಟನ್ ಆಗಿ’ ಎಂದು ಹೇಳುವ ಮೂಲಕ ವರಸೆ ಬದಲಿಸಿದರು. ಇದು ರಜತ್ ಗಮನಕ್ಕೆ ಬರುತ್ತಿದ್ದಂತೆ ಸರಿಯಾದ ಕೌಂಟರ್ ಕೊಟ್ಟಿದ್ದಾರೆ.

    ಇದನ್ನೂ ಓದಿ; ಫೆಂಗಲ್ ಚಂಡಮಾರುತ ಭೀತಿ; ಭಾರೀ ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ
    ‘ಐದು ಜನ ಸೇರಿ ನಿಮ್ಮನ್ನು ಸೋಲಿಸಿದೆವು. ನಮಗೆ ನೀವು ಕ್ಯಾಪ್ಟನ್ ಆಗೋದು ಇಷ್ಟವೇ ಇರಲಿಲ್ಲ. ನಿಮ್ಮ ಕ್ಯಾಪ್ಟನ್ಸಿ ನೋಡುವ ಅವಕಾಶ ನಮಗೆ ಬೇಡ . ನೀವು 60 ದಿನಗಳಿಂದ ಕಿಸಿದಿದ್ದು ನೋಡಿದ್ದೇನೆ. ನೀವು ಸೋತಿದ್ದಕ್ಕೆ ಸಖತ್ ಉರಿಯುತ್ತಿದೆ. ತುಪ್ಪ ಹಾಕಿ ಮತ್ತಷ್ಟು ಉರಿಸುತ್ತೇನೆ ಎಂದಿದ್ದಾರೆ ರಜತ್.

    ಈ ವಾರ ಎಲಿಮಿನೇಟ್ ಆಗುವವರು ಯಾರು ?
    ಈ ವಾರ ಬಿಗ್ ಬಾಸ್ ಮನೆಯಲ್ಲಿ ಗೋಲ್ಡ್ ಸುರೇಶ್, ಶೋಭಾ ಶೆಟ್ಟಿ, ಭವ್ಯಾ ಗೌಡ, ಐಶ್ವರ್ಯಾ, ಚೈತ್ರಾ ಕುಂದಾಪುರ ಹಾಗೂ ತ್ರಿವಿಕ್ರಮ್ ನಾಮಿನೇಟ್ ಆಗಿದ್ದಾರೆ. ಆಟದ ಪ್ರಕಾರ ನೋಡಿದರೆ ಐಶ್ವರ್ಯ ಸ್ವಲ್ಪ ವೀಕ್ ಸ್ಪರ್ಧಿ ಎನಿಸಿಕೊಂಡಿದ್ದು, ಅವರು ಈ ವಾರ ಎಲಿಮಿನೇಟ್ ಆಗುವ ಸಾಧ್ಯತೆ ಇದೆ.

    Continue Reading

    BELTHANGADY

    ಧರ್ಮವನ್ನು ಅಂಗಿಯಂತೆ ಧರಿಸಿ ಕಳಚಬೇಡಿ : ವೀರೇಂದ್ರ ಹೆಗ್ಗಡೆ

    Published

    on

    ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥ ಕ್ಷೇತ್ರದಲ್ಲಿ ಲಕ್ಷದೀಪೋತ್ಸವ ಸಂಭ್ರಮ ಜರುಗುತ್ತಿದ್ದು, ಲಕ್ಷಾಂತರ ಮಂದಿ ಭಕ್ತರು ಕ್ಷೇತ್ರಕ್ಕೆ ಆಗಮಿಸಿ ಶ್ರೀ ಮಂಜುನಾಥ ಸ್ವಾಮಿ ದೇವರ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ಶುಕ್ರವಾರ ಕ್ಷೇತ್ರದ ಅಮೃತವರ್ಷಿಣಿ ಸಭಾಭವನದಲ್ಲಿ 92ನೇ ವರ್ಷದ ಸರ್ವ ಧರ್ಮ ಸಮ್ಮೇಳನ ನಡೆಯಿತು. ಉದ್ಘಾಟನೆಯನ್ನು ನೆರವೇರಿಸಲು ಆಗಮಿಸಿದ್ದ ರಾಜ್ಯ ಗೃಹ ಸಚಿವ ಡಾ ಜಿ ಪರಮೇಶ್ವರ್, ಅಧ್ಯಕ್ಷತೆಯನ್ನು ವಹಿಸಿದ್ದ ರಾಜರಾಜೇಶ್ವರಿ  ನಗರದ ಶ್ರೀ ಕೈಲಾಸ ಆಶ್ರಮದ ಶ್ರೀ ಜಯೇಂದ್ರ ಪುರಿ ಸ್ವಾಮೀಜಿ ಮತ್ತು ಕ್ಷೇತ್ರದ ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆ ಸಹಿತ ಗಣ್ಯರನ್ನು ಮೆರವಣಿಗೆಯಲ್ಲಿ ಕರೆತರಲಾಯಿತು. ರಾಜ್ಯ ಗೃಹ ಸಚಿವ ಡಾ ಜಿ ಪರಮೇಶ್ವರ್‌ ದೀಪ ಬೆಳಗಿ ಉದ್ಘಾಟಿಸಿದರು. ಧರ್ಮಸ್ಥಳ ಮಂಜೂಷಾ ವಸ್ತು ಸಂಗ್ರಹಾಲಯಕ್ಕೆ ವಿಶ್ವಮಾನ್ಯತೆ ದೊರಕಿದ ಹಿನ್ನೆಲೆಯಲ್ಲಿ ಡಾ ವೀರೇಂದ್ರ ಹೆಗ್ಗಡೆ ಅವರಿಗೆ ಇಂಡಿಯಾ ಬುಕ್‌ ಆಫ್ ರೆಕಾರ್ಡ್‌ ಪ್ರಮಾಣ ಪತ್ರ ಪ್ರದಾನ ಮಾಡಲಾಯಿತು.

    ಡಾ ವೀರೇಂದ್ರ ಹೆಗ್ಗಡೆ ಅವರು ಸ್ವಾಗತಿಸಿದರು. ತನ್ನ ಅಜ್ಜ ಮಂಜಯ್ಯ ಹೆಗ್ಗಡೆ ಅವರು ಆರಂಭಿಸಿದ ಈ ಸಮ್ಮೇಳನವನ್ನು ತಂದೆ ರತ್ನವರ್ಮ ಹೆಗ್ಗಡೆ ಮುನ್ನಡೆಸಿದ್ದು, ಇದೀಗ 91 ವರ್ಷಗಳು ಸಂದು ಹೋದವು ಎಂದರು. ಈ ವೇದಿಕೆಯಲ್ಲಿ ಹಲವು ಮಂದಿ ಹಿರಿಯ ವಿದ್ವಾಂಸರು, ಮಾನವೀಯ, ಆದರ್ಶದ ಹಾದಿಯನ್ನು ನಾವು ಮುನ್ನಡೆಯಬೇಕೆಂದು ಹಿತವಚನ ನಿಡಿದರು. ಜನವರಿ 1ರಿಂದ ಉಜಿರೆ ಎಸ್‌ಡಿಎಂ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಸೇವೆ ಉಚಿತವಾಗಿ ಸಿಗಲಿದೆ. ವರ್ಷಕ್ಕೆ 10,000 ಬಡ ರೋಗಿಗಳಿಗೆ ನೆರವಾಗಲಿದೆ ಎಂದರು.

     

    ಗೃಹ ಮಂತ್ರಿ ಜಿ ಪರಮೇಶ್ವರ, ಸ್ವಾಮೀಜಿ ಮತ್ತು ಅತಿಥಿಗಳಿಗೆ ಹೆಗ್ಗಡೆ ಗೌರವಾಭಿನಂದನೆ ಸಲ್ಲಿಸಿದರು. ಡಾ ಪರಮೇಶ್ವರ ಮಾತನಾಡಿ, ಸರಕಾರಗಳು ಮಾಡದಿರುವ ಕೆಲಸಗಳನ್ನು ಇಂದು ಧರ್ಮಾಧಿಕಾರಿ ವಿರೇಂದ್ರ ಹೆಗ್ಡೆ ಮಾಡಿದ್ದಾರೆ. ಸರ್ವಧರ್ಮದ ಸಂದೇಶ ಇಂದಿನ ದಿನ ಬಹಳ ಅಗತ್ಯವಿದೆ. ದೇಶಕ್ಕೆ ಸಂವಿಧಾನ ಬರುವ ಮುಂಚೆಯೇ ಧರ್ಮಸ್ಥಳದಲ್ಲಿ ಸರ್ವಧರ್ಮ ಸಂದೇಶ ಸಾರುವ ಕಾರ್ಯ ನಡೆಯುತ್ತಿದೆ ಎಂದರು.

    ಶ್ರೀ ಕೈಲಾಸ ಆಶ್ರಮದ ಶ್ರೀ ಜಯೇಂದ್ರ ಪುರಿ ಸ್ವಾಮೀಜಿ ಆಶೀರ್ವಚನ ನೀಡಿ, ಇಡೀ ಜಗತ್ತೇ ಪರಮೇಶ್ವರ ಮಯ. ಈ ಜ್ಞಾನ ಇರುವವರು ಸಮಾನತೆ ಅನುಸರಿಸುತ್ತಾರೆ. ಇಲ್ಲದದವರು ದ್ವೇಷ ಸಾಧಿಸುತ್ತಾರೆ. ಸಹಬಾಳ್ವೆ ದೂರ ಮಾಡುವ ಯಾವುದಾದರೂ ಮತವಿದ್ದರೆ ಅದಕ್ಕೆ ಭೂಮಿಯಲ್ಲಿರುವಅಧಿಕಾರವೇ ಇಲ್ಲ. ಅಂತಹ ಮತವನ್ನು ಪರಿಷ್ಕರಿಸಬೇಕು ಎಂದರು.

    ಸಂಶೋಧಕ ಡಾ ಜಿ ಬಿ ಹರೀಶ್‌, ಮಾಜಿ ಪ್ರಾಂಶುಪಾಲ ಡಾ ಜೋಸೆಫ್‌ ಎನ್ ಎಂ, ವಿಜಯಪುರದ ಮೆಹತಾಬಾ ಇಬ್ರಾಹಿಂ ಸಾಬ ಕಾಗವಾಡ ಉಪನ್ಯಾಸ ನೀಡಿದರು. ಡಿ ಸುರೇಂದ್ರ ಕುಮಾರ್, ಡಿ. ಹರ್ಷೇoದ್ರ ಕುಮಾರ್, ಹೇಮಾವತಿ ವೀ. ಹೆಗ್ಗಡೆ, ಶ್ರದ್ದಾ ಅಮಿತ್, ಸುಪ್ರಿಯಾ ಹರ್ಷೇoದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಸುನೀಲ್ ಪಂಡಿತ್ ಮೊದಲಾದವರಿದ್ದರು. ರುಡ್ ಸೆಟ್ ನಿರ್ದೇಶಕ ಅಜಯ್ ವಂದಿಸಿದರು. ಪ್ರಾಧ್ಯಾಪಕ ಡಾ ಶ್ರೀಧರ್ ಭಟ್ ಕಾರ್ಯಕ್ರಮ ನಿರೂಪಿಸಿದರು.

    Continue Reading

    LATEST NEWS

    Trending