Saturday, August 20, 2022

ಏರ್‌ಪೋರ್ಟ್‌ ಅದಾನಿಗೆ ಕೊಟ್ಟಿರೋದಿಕ್ಕೆ ತೊಡೆತಟ್ಟಿದ ಕಾಂಗ್ರೆಸ್‌ : ವಾರಕ್ಕೊಂದು ಪ್ರತಿಭಟನೆ – ಅಭಯಚಂದ್ರ..!

ಏರ್‌ಪೋರ್ಟ್‌ ಅದಾನಿಗೆ ಕೊಟ್ಟಿರೋದಿಕ್ಕೆ ತೊಡೆತಟ್ಟಿದ ಕಾಂಗ್ರೆಸ್‌ : ವಾರಕ್ಕೊಂದು ಪ್ರತಿಭಟನೆ – ಅಭಯಚಂದ್ರ..!

ಮಂಗಳೂರು : ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಅದಾನಿ ಕಂಪೆನಿಗೆ ಹಸ್ತಾಂತರ ಮಾಡಿರುವುದನ್ನು ಖಂಡಿಸಿ ಇದೀಗ ಬಿಜೆಪಿ ವಿರುದ್ಧ ಕಾಂಗ್ರೆಸ್ ತೊಡೆತಟ್ಟಿದ್ದು, ವಾರಕ್ಕೊಂದು ಬಾರಿಯಂತೆ ಕೆಂಜಾರಿನಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.

ಈ ಹಿನ್ನೆಲೆಯಲ್ಲಿ ಮಂಗಳೂರು ಅದಾನಿ ಏಪೋಟ್‌ರ್ಗೆ ಪ್ರವೇಶಿಸುವ ಕೆಂಜಾರಿನಲ್ಲಿ ಪ್ರತಿಭಟನೆ ನಡೆಸುವುದಾಗಿ ಮೂಲ್ಕಿ ಮೂಡುಬಿದಿರೆ ಕ್ಷೇತ್ರದ ಮಾಜಿ ಶಾಸಕ, ಕಾಂಗ್ರೆಸ್‌ನ ಹಿರಿಯ ಶಾಸಕರೂ ಆಗಿರುವ ಅಭಯಚಂದ್ರ ಜೈನ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

1954ನೇ ಇಸವಿಯಲ್ಲಿ ಅಂದಿನ ಶಾಸಕ ಶ್ರೀನಿವಾಸ್ ಮಲ್ಯ ಪ್ರಯತ್ನದಿಂದ ಜವಾಹರ ಲಾಲ್ ನೆಹರೂ ವಿಮಾನ ನಿಲ್ದಾಣ ಕೊಡುಗೆಯಾಗಿ ನೀಡಿದ್ರು. ಜವಾಹರ್ ಲಾಲ್ ಅವರ ಕಾರ್ಯದರ್ಶಿ ಆಗಿದ್ದ ಕಾರಣ ಇದೆಲ್ಲ ಸಾಧ್ಯವಾಯ್ತು. ಅಂದು ಎನ್ ಐ ಟಿಕೆ ಕೂಡ ಜಿಲ್ಲೆಗೆ ಬರಲು ಸಾಧ್ಯವಾಯ್ತು. ಬಂದರು ಸ್ಥಾಪನೆಯಲ್ಲೂ ಶ್ರೀನಿವಾಸ್ ಮಲ್ಯ ಅವರು ಬಜ್ಪೆ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕಾರಣರಾದರು. ಅಂದು ಬಂದರು ಮತ್ತು ವಿಮಾನ ನಿಲ್ದಾಣದಿಂದ ನಿರ್ವಸಿತರಾದವರಿಗೆ ಬಂಟ್ವಾಳ ಸಿದ್ದಕಟ್ಟೆಯಲ್ಲಿ ನಿವೇಶನ ನೀಡಲಾಯಿತು. ಶೆಟ್ಟಿಗಾರ್ ಸಮುದಾಯದ ದೇವಸ್ಥಾನ ಕೂಡ ಸ್ಥಳಾಂತರಗೊಂಡು ನಿರ್ಮಾಣ ಆಯ್ತು. ಈ ವೇಳೆ ರಾಜ್ಯದ ಮುಖ್ಯಮಂತ್ರಿ ವೀರಪ್ಪ ಮೊಯಿಲಿ, ಜನಾರ್ಧನ ಪೂಜಾರಿ, ಆಸ್ಕರ್ ಫೆರ್ನಾಂಡಿಸ್ ಅವರ ತ್ಯಾಗವು ಕೂಡ ಇದೆ ಎಂದರು.

ಅಂದು ವಿಮಾನ ನಿಲ್ದಾಣ ಆಗುವಾಗ ಅಲ್ಲಿದ್ದ ದಲಿತರ ಭೂಮಿ ಹೋಯಿತು, ಅವರಲ್ಲಿ ಎಷ್ಟು ಜನರಿಗೆ ಕೆಲಸ ಸಿಕ್ಕಿತು ಗೊತ್ತಿಲ್ಲ. ರಮಾನಾಥ್ ರೈ ಅವರು ಸೀ ಬರ್ಡ್ ನಿರ್ವಸಿತರಿಗೆ ಪರಿಹಾರ ನೀಡಿದ ರೀತಿ ನೀಡಲು ಶ್ರಮಿಸಿದರು. ಆದರೆ ಇಷ್ಟೆಲ್ಲ ಹೋರಾಟ ಪರಿಶ್ರಮದ ವಿಮಾನ ನಿಲ್ದಾಣ ಅದಾನಿ ಪಾಲಾಗಿದೆ. ನಾವು ಹಿಂದೆ ಅದೆಷ್ಟೋ ಬಾರಿ ಶ್ರೀನಿವಾಸ್ ಮಲ್ಯ ಅವರ ಹೆಸರು ವಿಮಾನ ನಿಲ್ದಾಣಕ್ಕೆ ಇಡಲು ಮನವಿ ಮಾಡಿದ್ದೆವು. ಆದರೆ ಈಗ ನಿಲ್ದಾಣವನ್ನು ಗುಜರಾತಿನ ಅದಾನಿ ಹೆಸರಿಟ್ಟು 50 ವರ್ಷಕ್ಕೆ ಮಾರಲಾಗಿದೆ. ನಾಳೆ ಇದರ ಬಗ್ಗೆ ಪ್ರತಿಭಟನೆ ನಡೆಯಲಿದೆ. ಮುಂದಿನ ದಿನಗಳಲ್ಲಿ ಕೆಂಜಾರಿನಲ್ಲಿ ವಾರಕ್ಕೊಂದು ದಿನ ಪ್ರತಿಭಟನೆ ನಡೆಸಲಿದ್ದೇವೆ ಎಂದರು.

ಬಂದರು, ಎನ್ ಐಟಿಕೆ, ವಿಮಾನ ನಿಲ್ದಾಣ ವನ್ನು ಕೊಡುಗೆಯಾಗಿ ನೀಡಿದ ಶ್ರೀನಿವಾಸ ಮಲ್ಯರ ಹೆಸರಿಡದೆ ಅದಾನಿ ಹೆಸರಿಟ್ಟಿರುವ ಬಗ್ಗೆ ಪ್ರತಿಭಟಿಸಲಿದ್ದೇವೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಭಾಗವಹಿಸುವ ಸಾಧ್ಯತೆಯಿದೆ ಎಂದರು.

LEAVE A REPLY

Please enter your comment!
Please enter your name here

Hot Topics