Sunday, December 4, 2022

ಬಿಜೆಪಿ ಪಕ್ಷದ ಕಾರ್ಯಕರ್ತನಿಗೆ ಇರುವ ಗೌರವ ಕಾಂಗ್ರೆಸ್ ನಾಯಕರಿಗಿಲ್ಲ – “ಕೈ” ಕಾಲೇಳೆದ ಸಿಎಂ ಬೊಮ್ಮಾಯಿ..!

ಬಂಟ್ವಾಳ : ಶತಮಾನ ಕಂಡ ಕಾಂಗ್ರೇಸ್ ಪಕ್ಷ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ ಮತ್ತು ಜನರಿಂದ ಸಂಪೂರ್ಣ ನಿರ್ಲಕ್ಷ್ಯ ಕ್ಕೆ ಒಳಪಟ್ಟಿದೆ. ಬಿಜೆಪಿ ಪಕ್ಷದ ಕಾರ್ಯಕರ್ತನಿಗೆ ಇರುವ ಗೌರವ ಕಾಂಗ್ರೆಸ್ ನ ನಾಯಕರಿಗಿಲ್ಲ ಎಂದು ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ನಡೆದ ಜಿಲ್ಲಾ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮುಖ್ಯಮಂತ್ರಿಗಳು ಮಾತನಾಡಿದರು. ಕಾಂಗ್ರೆಸ್ ಪಕ್ಷಕ್ಕೆ ವಯಸ್ಸಾಗಿದೋ, ಆಂತರಿಕ ತೊಂದರೆ ಎದುರಿಸುತ್ತಿದೆಯೋ ಗೊತ್ತಿಲ್ಲ ಆದರೆ ಕಾಂಗ್ರೆಸ್ ಪಕ್ಷದ ರಾಜ್ಯ ಮತ್ತು ರಾಷ್ಟ್ರ ಮಟ್ಟದ ನಾಯಕರು ಮಾತನಾಡುವ ರೀತಿ, ಶೈಲಿ ಶತಮಾನದ ಪಕ್ಷಕ್ಕೆ ಶೋಭೆ ತರುವಂತಹುದಲ್ಲ. ರಾಜ್ಯದ ಜನ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದ ಸಿಎಂ ಬಿಜೆಪಿ ಪಕ್ಷದ ಕಾರ್ಯಕರ್ತನಿಗೆ ಇರುವ ಗೌರವ ಕಾಂಗ್ರೆಸ್ ನ ನಾಯಕರಿಗಿಲ್ಲ ಎಂದರು. ಸಮವಸ್ತ್ರ ಸೇರಿದಂತೆ ರಾಜ್ಯದ ಹಲವು ಸಂದಿಗ್ಧ ಪರಿಸ್ಥಿತಿಯನ್ನು ಸರಕಾರ ದಿಟ್ಟತನದಿಂದ ಎದುರಿಸಿದೆ. ಕೆಲವೊಂದು‌ ಕಡೆ ಸಣ್ಣಪುಟ್ಟ ಘಟನೆ ಹೊರತುಪಡಿಸಿ ಬೇರೆಲ್ಲೂ ಅತಿರೇಕಕ್ಕೆ ಹೋಗದಂತೆ ನೋಡಿಕೊಂಡಿದೆ . ಇದರಿಂದ ವಿರೋಧ ಪಕ್ಷಗಳು ಹತಾಶೆಯಲ್ಲಿದೆ, ಸಮಸ್ಯೆಗಳ ಪರಿಹಾರ ಅವುಗಳಿಗೆ ಬೇಕಾಗಿಲ್ಲ ಮತ್ತು ಸಮಸ್ಯೆಗಳನ್ನು ಇನ್ನಷ್ಟು ಉಲ್ಬಣಗೊಳಿಸಲು ಅವುಗಳು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.

ಆದ್ರೆ ಎಲ್ಲಾ ಸಮಸ್ಯೆಗಳನ್ನು ಎದುರಿಸುವ ಸಾಮರ್ಥ್ಯ ಸರಕಾರಕ್ಕೆ ಇದೆ ಎಂದು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

ಮಾಜಿ ಮುಖ್ಯಮಂತ್ರಿಗಳು ಸಂಸದರಾದ ಡಿ.ವಿ.ಸದಾನಂದ ಗೌಡ, ಸಚಿವರಾದ ಸಿ.ಎನ್.ಅಶ್ವತ್ಥನಾರಾಯಣ್, ಶ್ರೀ ರಾಮುಲು, ಕೋಟ ಶ್ರೀನಿವಾಸ ಪೂಜಾರಿ, ಸುನಿಲ್ ಕುಮಾರ್, ಶಾಸಕ ಮಿತ್ರರು ಹಾಗೂ ಪಕ್ಷದ ಪ್ರಮುಖ ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Hot Topics