ಕಾಸರಗೋಡು: ಕಡಿದು ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಕಾಂಗ್ರೆಸ್ ಮುಖಂಡರೋರ್ವರು ಮೃತಪಟ್ಟ ದಾರುಣ ಘಟನೆ ಕಾಞ೦ಗಾಡ್ ನ ಮಣಿಯಾಟ್‌ನಲ್ಲಿ ನಡೆದಿದೆ.
ಕಾಞ೦ಗಾಡ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ವಿ ಬಾಲಕೃಷ್ಣನ್ (64) ಮೃತಪಟ್ಟವರು.
ಸ್ಕೂಟರ್‌ನಲ್ಲಿ ತೆರಳುತ್ತಿದ್ದಾಗ ರಸ್ತೆಯಲ್ಲಿ ಕಡಿದು ಬಿದ್ದಿದ್ದ ತಂತಿ ತಗುಲಿ ದುರ್ಘಟನೆ ನಡೆದಿದೆ.
ಡಿ.ವಿ ಬಾಲಕೃಷ್ಣನ್ ಮಗಳ ಮನೆಗೆ ಬಂದು ಮರಳುತ್ತಿದ್ದಾಗ ಸಂಜೆ ಭಾರೀ ಗಾಳಿಗೆ ವಿದ್ಯುತ್ ತಂತಿ ಕಡಿದು ಬಿದ್ದಿತ್ತು. ಅದು ಈ ರಸ್ತೆಯಾಗಿ ಬರುತ್ತಿದ್ದ ಬಾಲಕೃಷ್ಣ ಅವರ ಸ್ಕೂಟರ್‌ಗೆ ತಗುಲಿ ಈ ಘಟನೆ ನಡೆದಿದೆ.
ಜೊತೆಗಿದ್ದ ಮೊಮ್ಮಗಳು ಅಪಾಯದಿಂದ ಪಾರಾಗಿದ್ದಾರೆ. ಬಾಲಕೃಷ್ಣನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಗಾರದಲ್ಲಿರಿಸಲಾಗಿದೆ.”