Sunday, December 4, 2022

ಹಣ ಮಾಡಲು ಬಳಸಿದ ಕಾಂಡೋಮ್ ನ್ನೇ ಮತ್ತೆ ಮರು ಮಾರಾಟ….

ವಿಯೆಟ್ನಾಂ : ಹಣ ಗಳಿಸಲು ಜನ ಏನೆಲ್ಲಾ ಮಾಡುತ್ತಾರೆ ಎನ್ನುವುದಕ್ಕೆ ಇದೊಂದು ಒಳ್ಳೆ ಉದಾಹರಣೆ. ಹಣ ಮಾಡಲು ಕಳ್ಳದಾರಿ ಹಿಡಿದ ದುಷ್ಕರ್ಮಿಗಳ ಕತೆ ಕೇಳಿದರೆ ಒಂದು ಸಲ ಶಾಕ್ ಆಗುತ್ತದೆ. ಸದ್ಯ ಇಂತಹದ್ದೇ ಶಾಕಿಂಗ್ ನ್ಯೂಸ್ ಹೊರಬಿದ್ದಿದೆ. ವಿಯೆಟ್ನಾಂನಲ್ಲಿ ಖತರ್ನಾಕ್ ಗ್ಯಾಂಗ್‌ನ ಬಣ್ಣ ಬಯಲಾಗಿದೆ. ಇದು ಬಳಸಿದ್ದ ಕಾಂಡೋಮ್‌ಗಳನ್ನು ಮತ್ತೆ ಮಾರುಕಟ್ಟೆಗೆ ಮಾರಾಟ ಮಾಡುತ್ತಿದ್ದ ಗ್ಯಾಂಗ್‌ನ ಕತೆ.

ಉಪಯೋಗಿಸಿ ಬಿಸಾಡಿದ್ದ ಬರೋಬ್ಬರಿ ಮೂರು ಲಕ್ಷಕ್ಕೂ ಅಧಿಕ ಕಾಂಡೋಮ್‍ಗಳನ್ನು ಮರುಬಳಕೆ ಮಾಡಲು ಸಂಗ್ರಹಿಸಿಟ್ಟಿದ್ದ ಗೋದಾಮಿನ ಮೇಲೆ ವಿಯೆಟ್ನಾ ಪೊಲೀಸರು ದಾಳಿ ಮಾಡಿದ್ದಾರೆ. ಅಲ್ಲದೇ ಕಾಂಡೋಮ್‍ಗಳನ್ನು ವಶಪಡಿಸಿಕೊಂಡಿದ್ದಾರೆ.


ಮರುಬಳಕೆ ಮಾಡಲಾಗುತ್ತಿದ್ದ 3,24,000 ಉಪಯೋಗಿಸಿದ ಕಾಂಡೋಮ್‍ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮೊದಲಿಗೆ ಉಪಯೋಗಿಸಿದ್ದ ಕಾಂಡೋಮ್‍ಗಳನ್ನು ಸಂಗ್ರಹಿಸಿ ರಾಸಾಯನಿಕಯುಕ್ತ ನೀರಿನಿಂದ ಶುಚಿಗೊಳಿಸಲಾಗುತ್ತಿತ್ತು. ನಂತರ ಅದನ್ನು ಮರದ ಕೋಲಿನಿಂದ ಮರು ರೂಪಿಸಲಾಗುತ್ತಿತ್ತು. ಈ ಕೆಲಸವನ್ನು ಮಾಡಲು ದಿನಗೂಲಿ ಕಾರ್ಮಿಕರನ್ನು ನೇಮಿಸಿಕೊಳ್ಳಲಾಗಿತ್ತು.


ಈ ದಾಳಿ ವೇಳೆ ಗೋದಾಮಿನಲ್ಲಿದ್ದ ಮಹಿಳೆಯನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಳಸಿದ್ದ ಈ ಕಾಂಡೋಮ್‌ಗಳನ್ನು ನೀರಿನಲ್ಲಿ ಕುದಿಸಿ ಒಣಗಿಸಿ ಮಾರಾಟ ಮಾಡಲಾಗುತ್ತಿತ್ತು ಎಂದು ಈ ಮಹಿಳೆ ಕಾಂಡೋಮ್‌ಗಳನ್ನು ಸ್ವಚ್ಛಗೊಳಿಸುವ ಪ್ರಕ್ರಿಯೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾಗಿ ಗೊತ್ತಾಗಿದೆ.


ಹೀಗೆ ಬಳಸಿದ್ದ ಕಾಂಡೋಮ್‌ಗಳನ್ನು ಸ್ವಚ್ಛಗೊಳಿಸಿ ಮರುಮಾರಾಟಕ್ಕೆ ಸಿದ್ಧಪಡಿಸಿದರೆ ತನಗೆ ಒಂದು ಕೆಜಿಗೆ 0.17 ಡಾಲರ್ ಅಂದರೆ ಭಾರತದ ಸುಮಾರು 12.52 ರೂಪಾಯಿ ಸಿಗುತ್ತಿತ್ತು ಎಂದು ಈಕೆ ಹೇಳಿಕೊಂಡಿದ್ದಾಳೆ. ಅಲ್ಲದೆ, ತಿಂಗಳಿಗೊಮ್ಮೆ ಅಪರಿಚಿತ ವ್ಯಕ್ತಿಯಿಂದ ಈ ಕಾಂಡೋಮ್‌ಗಳನ್ನು ಪಡೆಯಲಾಗುತ್ತಿತ್ತು ಎಂದೂ ಈಕೆ ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾಳೆ. ಆದರೆ, ಇದುವರೆಗೆ ಎಷ್ಟು ಪ್ರಮಾಣದಲ್ಲಿ ಬಳಸಿದ್ದ ಕಾಂಡೋಮ್‌ಗಳ ಮರು ಮಾರಾಟವಾಗಿದೆ ಎಂಬುದರ ಬಗ್ಗೆ ಪೊಲೀಸರು ನಿಖರವಾಗಿ ತಿಳಿಸಿಲ್ಲ.


ಈಗಾಗಲೇ ಎಷ್ಟು ಕಾಂಡೋಮ್‍ಗಳನ್ನು ಮಾರಾಟ ಮಾಡಲಾಗಿದೆ ಎಂದು ತಿಳಿದಿಲ್ಲ. ಆದರೆ ಪೊಲೀಸರು 360 ಕೆ.ಜಿ. ಕಾಂಡೋಮ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಅವುಗಳನ್ನು ಗೋದಾಮಿನ ಸಮೀಪವಿರುವ ಹೋಟೆಲ್‍ಗಳು ಮತ್ತು ಮಾರುಕಟ್ಟೆ ಮಳಿಗೆಗಳಿಗೆ ಸರಬರಾಜು ಮಾಡಲಾಗುತ್ತಿದೆ ಎಂದು ಸ್ಥಳೀಯ ವರದಿಗಳು ಹೇಳಿವೆ.

LEAVE A REPLY

Please enter your comment!
Please enter your name here

Hot Topics