MANGALORE
ಕಾಂಕ್ರೀಟಿಕರಣ ರಸ್ತೆಗೆ ಶಾಸಕ ಭರತ್ ಶೆಟ್ಟಿ ಗುದ್ದಲಿ ಪೂಜೆ
ಮಂಗಳೂರು: ನಗರದ ಸುರತ್ಕಲ್‌ನ ಎರಡು ಕಡೆಗಳಲ್ಲಿ ನಡೆಯುವ ಕಾಂಕ್ರೀಟೀಕರಣ ಯೋಜನೆಗೆ ಮಂಗಳೂರು ಉತ್ತರ ಶಾಸಕರಾದ ಡಾ.ವೈ. ಭರತ್‌ಶೆಟ್ಟಿ ಗುದ್ದಲಿ ಪೂಜೆ ನಡೆಸಿದರು.
ರಾಜ್ಯ ಸರಕಾರದ ವಿಶೇಷ ಅನುದಾನದ ಮೂಲಕ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಪಾಲಿಕೆ ವ್ಯಾಪ್ತಿಯಲ್ಲಿರುವ ವಾರ್ಡ್ 2 ರ ಸುರತ್ಕಲ್ ತಡಂಬೈಲ್ ವೆಂಕಟರಮಣ ಕಾಲೋನಿ ರಸ್ತೆಯನ್ನು 25 ಲಕ್ಷ ರೂಪಾಯಿ ಅನುದಾನದಲ್ಲಿ ಕಾಂಕ್ರೀಟಿಕರಣ ಮತ್ತು ಸುರತ್ಕಲ್ ಮಧ್ಯ ಅಂಬೇಡ್ಕರ್ ಕಾಲನಿ ರಸ್ತೆಯನ್ನು 22.25 ಲಕ್ಷ ಅನುದಾನದಲ್ಲಿ ಕಾಂಕ್ರೀಟಿಕರಣ ಇದರ ಗುದ್ದಲಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಭಾಜಪಾ ಉತ್ತರ ಮಂಡಲ ಅಧ್ಯಕ್ಷ ತಿಲಕರಾಜ್ ಕೃಷ್ಣಾಪುರ, ಮನಪಾ ಸ್ಥಳೀಯ ಸದಸ್ಯೆ ಶ್ವೇತಾ ಪೂಜಾರಿ, ಶಕ್ತಿ ಕೇಂದ್ರ ಪ್ರಮುಖ್ ಸುರೇಂದ್ರ ಸುವರ್ಣ, ಸಹಪ್ರಮುಖ್ ರಾಕೇಶ್ ಬಂಗೇರ, ಬೂತ್ ಅಧ್ಯಕ್ಷ ಸಂತೋಷ್ ತಡಂಬೈಲ್, ಪ್ರಮುಖರಾದ ಪದ್ಮಾವತಿ ಕೋಡಿಪಾಡಿ, ಜಯೇಶ್ ಗೋವಿಂದ, ಲಕ್ಷ್ಮಣ್ ಶೆಟ್ಟಿಗಾರ್, ಪ್ರಶಾಂತ್ ಶೆಟ್ಟಿ, ಜಯಂತ್, ರವಿ, ನವೀನ್, ಶಶಿ, ರವಿ ಶೆಟ್ಟಿ, ಪ್ರವೀಣ ಇದ್ದರು.
BELTHANGADY
ದ.ಕ ದಲ್ಲಿ ಭಾರಿ ಮಳೆ: ಧರ್ಮಸ್ಥಳ ಲಕ್ಷ ದೀಪೋತ್ಸವದಲ್ಲಿದ್ದ ಅಂಗಡಿಗಳಿಗೆ ಹಾನಿ..!!
ಧರ್ಮಸ್ಥಳ: ಧರ್ಮಸ್ಥಳದಲ್ಲಿ 3ನೇ ದಿನದ ಲಕ್ಷ ದೀಪೋತ್ಸವದ ವೈಭವ ಒಂದು ಕಡೆಯಾದರೆ, ಇನ್ನೊಂದೆಡೆ ಗುಡುಗು ಸಹಿತ ಬಾರಿ ಮಳೆ ಅವಾಂತರ ತಂದಿದೆ.
ಕೆಲವು ಅಂಗಡಿಗಳಿಗೆ ಬಹಳ ಹಾನಿ ಆಗಿದೆ. ಮಳೆ ಅಂಗಡಿ ಮಾಲೀಕರಿಗೆ ನಷ್ಟವನ್ನುಂಟು ಮಾಡಿದೆ. ಮಳೆಗೆ ಅಂಗಡಿಯೊಳಗಿದ್ದ ಕೆಲವು ವಸ್ತುಗಳು ಮಳೆಗೆ ಕೊಚ್ಚಿಕೊಂಡು ಹೋಗಿದೆ.
ಧರ್ಮಸ್ಥಳ ಶಾಲಾ ಮೈದಾನದಲ್ಲಿ ನಡೆಯುತ್ತಿದ್ದ ವಸ್ತು ಪ್ರದರ್ಶನಕ್ಕೆ ಬಹಳ ಸಮಸ್ಯೆ ಆಗಿದೆ. ಸಭಾಂಗಣದ ಬಳಿ ಹಾಕಿದ್ದ ಕುರ್ಚಿಗಳು ಒದ್ದೆಯಾಗಿದೆ.
DAKSHINA KANNADA
Surathkal: ಎನ್ಐಟಿಕೆ ಅವಶೇಷಕ್ಕೆ ಲಾರಿ ಢಿಕ್ಕಿ- ಓರ್ವ ಗಂಭೀರ..!
ಸುರತ್ಕಲ್: ಇಲ್ಲಿನ ಎನ್‌ಐಟಿಕೆ ಟೋಲ್ ಗೆಟ್ ನ ಅವಶೇಶಗಳಿಗೆ ಲಾರಿಯೊಂದು ಢಿಕ್ಕಿ ಹೊಡೆದು ಚಾಲಕ ಗಂಭೀರ ಗಾಯಗೊಂಡಿರುವ ಘಟನೆ ಶನಿವಾರ ಮಧ್ಯರಾತ್ರಿ 2.30ರ ಸುಮಾರಿಗೆ ವರದಿಯಾಗಿದೆ.
ಲಾರಿಯು ಮಂಗಳೂರು ಕಡೆಯಿಂದ ಉಡುಪಿಯತ್ತ ಸಂಚರಿಸುತ್ತಿತ್ತು ಎನ್ನಲಾಗಿದೆ.
ಲಾರಿ ಢಿಕ್ಕಿ ಹೊಡೆದ ಪರಿಣಾಮ ಟೋಲ್ ಗೇಟ್ ನ ಕಂಬವೊಂದು ಬುಡ ಸಮೇತ ಕಿತ್ತು ಬಂದಿದ್ದು, ಘಟನೆಯಿಂದ ಲಾರಿ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.ಗಾಯಾಳುವನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು ಪರಿಶೀಲನೆ ನಡೆಸಿದ್ದಾರೆ.
DAKSHINA KANNADA
Mangaluru: ಸಮುದ್ರಪಾಲಾದ ಇಬ್ಬರು ವಿದ್ಯಾರ್ಥಿಗಳ ಮೃತದೇಹ ಪತ್ತೆ..!
ಮಂಗಳೂರು: ಸಮುದ್ರ ವಿಹಾರಕ್ಕೆಂದು ತೆರಳಿ ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳ ಮೃತದೇಹ ಪತ್ತೆಯಾದ ಘಟನೆ ಸೋಮೇಶ್ವರ ಅಲಿಮಕಲ್ಲು ಸಮುದ್ರ ತೀರದ ಬಳಿ ನಡೆದಿದೆ.
ಮಂಜೇಶ್ವರದ ಕುಂಜತ್ತೂರು ಅಡ್ಕ ನಿವಾಸಿ ಶೇಖರ ಅವರ ಪುತ್ರ ಯಶ್ವಿತ್ (18) ಮತ್ತು ಕುಂಜತ್ತೂರು ಮಜಲ್ ನಿವಾಸಿ ಜಯೇಂದ್ರ ಅವರ ಪುತ್ರ ಯುವರಾಜ್ (18) ನೀರುಪಾಲದ ವಿದ್ಯಾರ್ಥಿಗಳು.
ಶನಿವಾರದಂದು 6 ಮಂದಿ ವಿದ್ಯಾರ್ಥಿಗಳು ಕಾಲೇಜು ಮುಗಿಸಿ ಸೋಮೇಶ್ವರ ದೇವಾಸ್ಥಾನಕ್ಕೆ ತೆರಳಿದ್ದರು. ಅಲ್ಲಿ ಊಟ ಮುಗಿಸಿ ಉಚ್ಚಿಲದ ಕಡೆಗೆ ಸುಮಾರು ಒಂದು ಕಿ. ಮೀ ಒಂದು ಕಿ. ಮೀ.ಸಮುದ್ರದ ಬದಿಯಲ್ಲೇ ನಡೆದು ಕೊಂಡು ಹೋಗಿದ್ದು, ಸೋಮೇಶ್ವರ ಅಲಿಮಕಲ್ಲು ಬಳಿ ಸಮುದ್ರಕ್ಕೆ ಇಳಿದಿದ್ದರು. ಈ ಸಂದರ್ಭದಲ್ಲಿ ನಾಲ್ವರು ಸಮುದ್ರ ಬದಿಯಲ್ಲಿ ಕುಳಿತಿದ್ದರೆ, ಯುವರಾಜ್ ಮತ್ತು ಯಶ್ವಿತ್ ಸಮುದ್ರದ ನೀರಿಗಿಳಿದು, ಕಲ್ಲಿನ ಬಳಿ ತೆರಳಿದ್ದರು. ಈ ಸಂದರ್ಭದಲ್ಲಿ ಸಮುದ್ರದ ಅಲೆಯೊಂದಕ್ಕೆ ಯುವರಾಜ್ ಜಾರಿ ಬಿದ್ದು ಸಮುದ್ರ ಪಾಲಾದಾಗ ಯಶ್ವಿತ್ ಆತನನ್ನು ರಕ್ಷಿಸಲು ಹೋಗಿ ಸಮುದ್ರ ಪಾಲಾಗಿದ್ದಾರೆ. ಈ ವೇಳೆ ಅವರು ಮುಳುಗಿತ್ತಿದ್ದನ್ನು ಕಂಡ ಸ್ನೇಹಿತರು ಅಲ್ಲೇ ಪಕ್ಕದ ಶೆಡ್‍ನಲ್ಲಿಟ್ಟಿದ್ದ ಟಯರ್ ಟ್ಯೂಬ್ ಬಳಸಿ ಅವರನ್ನು ರಕ್ಷಿಸಲು ಎಂದು ಸಮುದ್ರಕ್ಕೆ ಇಳಿದಿದ್ದಾರೆ. ಆದರೆ ಅವರಿಗೆ ಸಾಧ್ಯವಾಗದ ಕಾರಣ ಬೊಬ್ಬೆ ಹಾಕಿದ್ದಾರೆ. ಈ ವೇಳೆ ಸ್ಥಳೀಯ ಈಜುಗಾರರು ಹುಡುಕಾಟ ನಡೆಸಿದ್ದಾರೆ. ವಿದ್ಯಾರ್ಥಿಗಳ ಪತ್ತೆಗಾಗಿ ಸ್ಥಳೀಯ ಈಜುಗಾರರು, ಅಗ್ನಿಶಾಮಕ ದಳದ ಸಿಬ್ಬಂದಿ ಸೇರಿದಂತೆ ಉಳ್ಳಾಲ ಪೋಲಿಸರು ಕಾರ್ಯಚಾರಣೆ ನಡೆಸಿದ್ದು, ರಾತ್ರಿವರೆಗೂ ಪತ್ತೆಯಾಗಿರಲಿಲ್ಲ. ಬಳಿಕ ಇಂದು ಬೆಳಗ್ಗೆ ಹುಡುಕಾಡಿದಾಗ ಅದೇ ಸ್ಥಳದಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿದೆ. ಈ ಕುರಿತು ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
- FILM5 days ago
ರಾತ್ರಿ 12.30ಕ್ಕೆ ಆಡಿಷನ್..2.30ಕ್ಕೆ ಆಯ್ಕೆ-ಬೃಂದಾವನ ಸೀರಿಯಲ್ ಹೀರೋ ಕ್ಲಾರಿಟಿ
- FILM4 days ago
ನಮೃತಾ ಗೌಡ ಆವಾಜ್ ಗೆ ಸಂಗೀತಾ ಕಣ್ಣೀರು
- bengaluru7 days ago
Film: ಕಾಂತಾರ ಖ್ಯಾತಿಯ ಸಪ್ತಮಿ ಗೌಡ ಟಾಲಿವುಡ್ ಗೆ ಎಂಟ್ರಿ
- bengaluru5 days ago
ಹೈಕೋರ್ಟ್ ಕಲಾಪವನ್ನೂ ಬಿಡದ ಸೈಬರ್ ಹ್ಯಾಕರ್ಸ್-ವಿಡಿಯೋ ಕಾನ್ಫರೆನ್ಸ್ ಆ್ಯಪ್ನಲ್ಲಿ ಅಶ್ಲೀಲ ದೃಶ್ಯ ಅಪ್ಲೋಡ್