ಬೆಂಗಳೂರು : ಭಾರಿ ಮಳೆಯ ಕಾರಣ ಮನೆ ಮೇಲೆ ಕಾಂಪೌಂಡ್ ಕುಸಿದು ಬಿದ್ದ ಪರಿಣಾಮ ಇಬ್ಬರು ಸಾವನ್ನಪ್ಪಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದ ಬಿನ್ನಮಂಗಲದಲ್ಲಿ ನಡೆದಿದೆ.
ವೇಣುಗೋಪಾಲ(22) ಮತ್ತು ಕಾವ್ಯ(20) ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಮನೆಯಲ್ಲಿದ್ದ ಮತ್ತೋರ್ವರು ತೀವ್ರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ವ್ಯಾಸಂಗ ಸಲುವಾಗಿ ಈ ಮೂವರು ಮನೆಯಲ್ಲಿ ಉಳಿದುಕೊಂಡಿದ್ದರು.
ತಗ್ಗು ಪ್ರದೇಶದಲ್ಲಿದ್ದ ಶೀಟ್ ಮನೆ ಮೇಲೆ ಕಾಂಪೌಂಡ್ ಬಿದ್ದು ಈ ದುರಂತ ಸಂಭವಿಸಿದ್ದು ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಇಬ್ಬರ ಶವ ಹೊರಕ್ಕೆ ತೆಗೆಯಲಾಗಿದ್ದು, ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.